Niveditha Gowda: ರಾಮಾಚಾರಿ ಹಾಡಿಗೆ ಹೆಜ್ಜೆ ಹಾಕಿದ ನಿವೇದಿತಾ ಗೌಡ, ಲಂಗ-ದಾವಣಿಯಲ್ಲಿ ಸೂಪರ್

Niveditha Gowda Reels: ರಾಮಾಚಾರಿ ಹಾಡಿಗೆ ಬಿಗ್​ಬಾಸ್ ಖ್ಯಾತಿಯ ನಿವೇದಿತಾ ಗೌಡ ಹೆಜ್ಜೆ ಹಾಕಿದ್ದಾರೆ. ಲಂಗ-ದಾವಣಿಯಲ್ಲಿ ಮಿಂಚಿದ್ದ ಚೆಲುವೆಗೆ ಮನಸೋತಿದ್ದಾರೆ ನೆಟ್ಟಿಗರು.

ನಿವೇದಿತಾ ಗೌಡ

ನಿವೇದಿತಾ ಗೌಡ

  • Share this:
ಬಿಗ್​ಬಾಸ್ ಕನ್ನಡದಲ್ಲಿ ಮಿಂಚಿದ ಟಿಕ್​ಟಾಕ್ ಸ್ಟಾರ್ (TikTok Star) ನಿವೇದಿತಾ ಗೌಡ (Niveditha Gowda) ಅಭಿಮಾನಿಗಳೊಂದಿಗೆ ಯಾವಾಗಲೂ ಸಂಪರ್ಕದಲ್ಲಿರುತ್ತಾರೆ. ಸೋಷಿಯಲ್ ಮೀಡಿಯಾ (Social Media) ಮೂಲಕ ಯಾವಾಗಲೂ ಅಭಿಮಾನಿಗಳೊಂದಿಗೆ ಟಚ್​​ನಲ್ಲಿ ಇರುವ ನಟಿ ಅವರ ಫಾಲೋವರ್ಸ್​ಗಳನ್ನು ಎಂದೂ ನಿರಾಸೆಗೊಳಿಸಿಲ್ಲ. ಅವರ ವಾಲ್ ತುಂಬಾ ಚಂದದ ವಿಡಿಯೋ, ರೀಲ್ಸ್, ಫೋಟೋಸ್ (Photos) ತುಂಬಿವೆ. ಅಭಿಮಾನಿಗಳು ನಿವೇದಿತಾ ಪೋಸ್ಟ್ ಮಾಡುವ ಕಂಟೆಂಟ್​ಗಳನ್ನು (Content) ಇಷ್ಟಪಟ್ಟು ನೋಡುತ್ತಾರೆ. ಅವರ ವಿಡಿಯೋ, ರೀಲ್ಸ್​ಗಳನ್ನು (Reels) ಲೈಕ್ ಮಾಡಿ, ಕಮೆಂಟ್ ಮಾಡಿ ಶೇರ್ ಮಾಡುತ್ತಾರೆ. ನಿವೇದಿತಾ ಅವರು ಫನ್ನಿ ವಿಡಿಯೋ, ಚಂದದ ಸಿನಿಮಾ ಹಾಡುಗಳಿಗೆ ಹೆಜ್ಜೆ ಹಾಕುತ್ತಾರೆ. ಇದೀಗ ಹಳೆಯ ಸಿನಿಮಾ ರಾಮಾಚಾರಿ (Ramachari) ಹಾಡಿಗೆ ದೇಸಿ ಗರ್ಲ್​ ಲುಕ್​ನಲ್ಲಿ (Desi Girl) ಹೆಜ್ಜೆ ಹಾಕಿದ್ದು ಇದನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ಹಸಿರು ದಾವಣಿ

ಪ್ರಿಂಟೆಡ್ ಲಂಗದ ಜೊತೆ ಹಸಿರು ದಾವಣಿಯನ್ನು ಮ್ಯಾಚ್ ಮಾಡಿಕೊಂಡ ನಿವೇದಿತಾ ಗೌಡ ಸುಂದರವಾಗಿ ಹಳ್ಳಿ ಹುಡುಗಿಯಂತೆ ಜಡೆ ಹೆಣೆದು ಕೈ ತುಂಬಾ ಬಳೆಗಳನ್ನು ಕೂಡಾ ಧರಿಸಿದ್ದರು. ಹಣೆಗೊಂದು ಬೊಟ್ಟು ಇಟ್ಟು ತುಂಬಾ ಸಿಂಪಲ್ ಲುಕ್​ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮನಸು ಗೆದ್ದಿದ್ದಾರೆ.

ಹಚ್ಚ ಹಸಿರಿನ ಪರಿಸರ

ನಿವೇದಿತಾ ಗೌಡ ಅವರು ಸುತ್ತ ತೆಂಗಿನ ತೋಟ, ಸುತ್ತಲೂ ಹಸಿರು ಗದ್ದೆ ಆವರಿಸಿಕೊಂಡಿರುವ ಸ್ಥಳದ ಮಧ್ಯೆ ನಿಂತು ರೀಲ್ಸ್ ಮಾಡಿದ್ದು ಇದರಲ್ಲಿ ನಿವೇದಿತಾ ಅವರ ಜೊತೆ ಜೊತೆಗೆ ಅವರು ಇದ್ದಂತಹ ಸ್ಥಳ ಕೂಡಾ ಗಮನ ಸೆಳೆಯುತ್ತದೆ.

ಆಕಾಶದಾಗೆ ಯಾರೊ ಮಾಯಗಾರನು ಹಾಡು

ಆಕಾಶದಾಗೆ ಯಾರೋ ಮಾಯಗಾರನು ರಾಮಚಾರಿ ಸಿನಿಮಾದ ಎವರ್​ಗ್ರೀನ್ ಸೂಪರ್​ ಹಿಟ್ ಹಾಡು. ಅಂದೂ ಇಂದು ಈ ಹಾಡು ತುಂಬಾ ಫೇಮಸ್. ಬಹಳಷ್ಟು ಜನರಿಗೆ ತುಂಬಾ ಫೇವರೇಟ್ ಹಾಡು ಇದು. ವಿ. ರವಿಚಂದ್ರನ್ ಹಾಗೂ ಮಾಲಾಶ್ರೀ ಅಭಿನಯಿಸಿದ ರಾಮಚಾರಿ ಸಿನಿಮಾ 1991ರಲ್ಲಿ ರಿಲೀಸ್ ಆಗಿತ್ತು. ಆಕಾಶದಾಗೆ ಯಾರೋ ಹಾಡನ್ನು ಮನೋ ಹಾಗೂ ಎಸ್ ಜಾನಕಿ ಹಾಡಿದ್ದಾರೆ.


ನೆಟ್ಟಿಗರ ಪ್ರತಿಕ್ರಿಯೆ

ಅಭಿಮಾನಿಗಳು ನಿವೇದಿತಾ ಅವರ ವಿಡಿಯೋ ನೋಡಿ ಕ್ಯೂಟ್, ವಿಲೇಜ್ ಬ್ಯೂಟಿ ಕ್ವೀನ್ ನಿವಿ ಎಂದು ಕಮೆಂಟ್ ಮಾಡಿದ್ದಾರೆ. ಬ್ಯೂಟಿಫುಲ್ ಲುಕ್ಕಿಂಗ್, ಸೂಪರ್ ಎಂದು ನೆಟ್ಟಿಗರು ನಿವೇದಿತಾ ಅವರ ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ: Niveditha Gowda: ಮಿಸೆಸ್​ ಇಂಡಿಯಾ ಆಗೋಕೆ ನಿವೇದಿತಾ ಗೌಡ ಏನೆಲ್ಲಾ ಮಾಡ್ತಿದ್ದಾರೆ ಗೊತ್ತಾ? ಡಯೆಟ್​ ರಹಸ್ಯ ಬಿಚ್ಚಿಟ್ಟ ಗೊಂಬೆ1.5 ಮಿಲಿಯನ್ ಫಾಲೋವರ್ಸ್

ಸದ್ಯ ನಿವೇದಿತಾ ಗೌಡ ಅವರು ಸದ್ಯ ಇನ್ಸ್ಟಾಗ್ರಾಮ್​ನಲ್ಲಿ ಸುಮಾರು 1.5 ಮಿಲಿಯನ್ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ನಿವೇದಿತಾ ಅವರು ಈವರೆಗೂ 1428 ಪೋಸ್ಟ್​​ಗಳನ್ನು ಮಾಡಿದ್ದಾರೆ. ಬಹುತೇಕ ಎಲ್ಲ ದಿನವೂ ನಿವೇದಿತಾ ವಿಡಿಯೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವುದರಿಂದ ಅವರ ಫಾಲೋವರ್ಸ್ ಸಂಖ್ಯೆ ಹೆಚ್ಚುತ್ತಲೇ ಇದೆ.

ಇದನ್ನೂ ಓದಿ: Niveditha Gowda: ಮಿಸೆಸ್​ ಇಂಡಿಯಾ ಆಗೋಕೆ ನಿವೇದಿತಾ ಗೌಡ ಏನೆಲ್ಲಾ ಮಾಡ್ತಿದ್ದಾರೆ ಗೊತ್ತಾ? ಡಯೆಟ್​ ರಹಸ್ಯ ಬಿಚ್ಚಿಟ್ಟ ಗೊಂಬೆ

ನಿವೇದಿತಾ ಡಯಟ್ ಏನು?

ವಿಡಿಯೋದಲ್ಲಿ ಬೆಳಗ್ಗೆ ತಿಂಡಿಗೆ ಎರಡು ಬ್ರೌನ್ ಬ್ರೆಡ್, ಡ್ರೈ ಫ್ರೂಟ್ಸ್, ಹಣ್ಣು, ಪೀನಟ್ ಬಟರ್ ತಿನ್ನುತ್ತೀನಿ ಎಂಬುದನ್ನ ಹೇಳಿದ್ದಾರೆ. ಬ್ರೆಡ್​ ಅನ್ನು ರೋಸ್ಟ್​ ಮಾಡಿಕೊಂಡು ಅದಕ್ಕೆ ಪೀನಟ್​ ಬಟರ್ ಹಾಕಿ ತಿನ್ನುತ್ತಾರಂತೆ. ಅಲ್ಲದೇ, ತಿಂಡಿಯ ನಂತರ ಬಿಸಿ ನೀರಿಗೆ ನಿಂಬೆ ಹಣ್ಣಿನ ರಸ ಮತ್ತು ಹಸಿ ಶುಠಿ ಹಾಕಿ ಮಿಶ್ರಣ ಮಾಡಿ ಅದರ ಜ್ಯೂಸ್ ಕುಡಿಯುತ್ತಾರಂತೆ.
Published by:Divya D
First published: