ಕನ್ನಡಕ ಕಿರುತೆರೆ ನಟಿ ದಿವ್ಯಾ ಉರುಡುಗ (Divya Uruduga) ಅವರು ಇತ್ತೀಚೆಗೆ ಸೀರೆ (Saree) ಉಟ್ಟಿರುವ ಒಂದು ವಿಡಿಯೋವನ್ನು ಶೇರ್ ಮಾಡಿದ್ದರು. ಈ ಸೀರೆ ಎಲ್ಲಕ್ಕಿಂತ ಸ್ಪೆಷಲ್. ದಿವ್ಯಾ ಹಾಗೂ ಅವರ ಗೆಳೆಯ ಕೆಪಿ ಅರವಿಂದ್ (KP Aravind) ಅವರ ಅಭಿಮಾನಿಗಳಿಗೆ (Fans) ವಿವರಿಸುವ ಅಗತ್ಯವೇ ಇಲ್ಲ. ಕೆಲವು ಜನರಿಗೆ ಇದನ್ನು ನೆನಪಿಸುವ ಅಗತ್ಯವೂ ಇಲ್ಲ. ಕಾರಣ ಎಲ್ಲರಿಗೂ ಈ ಸೀರೆ ಸ್ಟೋರಿ ಗೊತ್ತಿದೆ. ನಟಿ ರೆಡ್ ಕಲರ್ ಬ್ಲೌಸ್ ಹಾಗೂ ವೈಟ್ ಕಲರ್ ಸಿಂಪಲ್ ಸೀರೆ ಉಟ್ಟು ವಿಡಿಯೋವನ್ನು (Video) ತಮ್ಮ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಏನ್ ಹೇಳಿದ್ದಾರೆ ಗೊತ್ತೇ?
ಸಿಂಪಲ್ ಆಗಿರುವ ಸೀರೆ
ದಿವ್ಯಾ ಉರುಡುಗ ಉಟ್ಟ ಸೀರೆ ತುಂಬಾ ಸಿಂಪಲ್ ಆಗಿದೆ. ಹೈನೆಕ್ ರೆಡ್ ಕಲರ್ ಬ್ಲೌಸ್ ಹಾಗೂ ಬಿಳಿ ಬಣ್ಣದ ಟ್ರಾನ್ಸ್ಪರೆಂಟ್ ಸೀರೆ. ಇದಕ್ಕೆ ಸಿಂಪಲ್ ಆಗಿರುವ ಇಯರಿಂಗ್ಸ್ ಧರಿಸಿದ್ದಾರೆ. ಸಿಂಪಲ್ ಆಗಿರುವ ಮೇಕಪ್. ಇಷ್ಟು ಬಿಟ್ಟು ಬೇರೇನಿಲ್ಲ. ಆದರೂ ನಟಿ ಕ್ಯೂಟ್ ಕಾಣಿಸಿದ್ದಾರೆ.
ವಿಡಿಯೋ ಜೊತೆ ಏನಂತ ಬರೆದಿದ್ದಾರೆ?
ಪ್ರತಿ ಸೀರೆಯೂ ಒಂದು ಕಥೆ ಹೇಳುತ್ತದೆ ಎನ್ನುತ್ತಾರೆ. ಅದರಲ್ಲಿ ಮುಂದಿರುವ ಸೀರೆ ಇದು. ನನ್ನ ವಾರ್ಡ್ರೋಬ್ನ ರಾಜಕುಮಾರಿ ಈ ಸೀರೆ. ಅಂದ ಹಾಗೆ ಈ ಸ್ಪೆಷಲ್ ಸೀರೆಯ ಹಿಂದಿನ ಕಥೆ ನಿಮಗೆಲ್ಲರಿಗೂ ಗೊತ್ತು. ನೆನಪಿಸಿಕೊಳ್ಳಿ.
ಈ ಸಲ ಈ ಸೀರೆ ಉಟ್ಟಾಗ ನಾಚಿಗೆ ಆಗುತ್ತಿದೆ ಎಂದು ನಾನು ಹೇಳಿಲ್ಲ. ಹಾಗೆಯೇ ಯಾರು ನನ್ನ ಬಳಿ ಜಸ್ಟ್ ಚೋಕರ್ ಮಾತ್ರ ಹಾಕು ಎಂದು ಹೇಳಿಲ್ಲ ಎಂದಿದ್ದಾರೆ ದಿವ್ಯಾ ಉರುಡುಗ.
View this post on Instagram
ಬಿಗ್ಬಾಸ್ ಸೀಸನ್ 8ರ ಫೇಮಸ್ ಜೋಡಿ ದಿವ್ಯಾ ಉರುಡುಗ ಹಾಗೂ ಕೆಪಿ ಅರವಿಂದ್. ಸೀರಿಯಲ್ ನಟಿ ಹಾಗೂ ಬೈಕ್ ರೇಸರ್ ಮಧ್ಯೆ ಪ್ರೀತಿ ಬೆಳೆದ ಈ ಎಪಿಸೋಡ್ ಬಿಗ್ಬಾಸ್ ಪ್ರೇಮಿಗಳಿಗೆ ಫೇವರಿಟ್. ಆ ಶೋ ಹಾಗೂ ಈ ಸೀರೆಗೆ ಸಂಬಂಧ ಇದೆ.
ದಿವ್ಯಾ ಉರುಡುಗ ಬಿಗ್ಬಾಸ್ ಸೀಸನ್ 8ರಲ್ಲಿ ಈ ಸೀರೆಯನ್ನು ಉಟ್ಟಿದ್ದರು. ಸೀರೆ ಉಟ್ಟು ಬಂದಾಗ ದಿವ್ಯಾ ಅವರನ್ನು ನೋಡಿದ ಕೆಪಿ ಅರವಿಂದ್ ಚೈನ್ ತೆಗೆ, ಚೋಕರ್ ಮಾತ್ರ ಸಾಕು ಎಂದಿದ್ದರು. ಇನ್ನು ದಿವ್ಯಾ ಉರುಡುಗ ಅವರು ನಾಚಿಗೆ ಆಗ್ತಿದೆ ಎಂದು ಮುದ್ದಾಗಿ ನಾಚಿಕೊಂಡಿದ್ದರು. ಈ ಸೀನ್ ಇಂದಿಗೂ ಬಿಗ್ಬಾಸ್ ಫ್ಯಾನ್ಸ್ಗೆ ಫೇವರಿಟ್.
ವೈರಲ್ ಆಯ್ತು ಸೀರೆ ವಿಡಿಯೋ
ದಿವ್ಯಾ ಅವರ ಈ ಸೀರೆ ವಿಡಿಯೋಗೆ 98 ಸಾವಿರ ಲೈಕ್ಸ್ ಬಂದಿದೆ. 560ಕ್ಕೂ ಹೆಚ್ಚು ಜನರು ವಿಡಿಯೋಗೆ ಕಮೆಂಟ್ ಮಾಡಿದ್ದಾರೆ.
ಏನಂದಿದ್ದಾರೆ ನೆಟ್ಟಿಗರು?
ಅವನು: ಚಂದ.. ಚೈನ್ ತೆಗಿ, chocker ಮಾತ್ರ ಸಾಕು. ಅವಳು: ಅಯ್ಯೋ ನಂಗೆ ನಾಚಿಕೆ ಆಗ್ತಿದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಈ ಮೂಲಕ ಅರವಿಂದ ಹಾಗೂ ದಿವ್ಯಾ ಸಂಭಾಷಣೆ ನೆನಪಿಸಿಕೊಂಡಿದ್ದಾರೆ.
ಇನ್ನೊಬ್ಬರು ಕಮೆಂಟ್ ಮಾಡಿ, ಚೆನ್ನಾಗಿ ನೆನಪಿದೆ ದಿವಿ. ಮರೆತೂ ಮರೆಯಲಾರದ ಸವಿ ನೆನಪುಗಳ ಗುಚ್ಛದಲ್ಲಿ ಈ ನೆನಪು ಒಂದು ಸುಂದರ ಬಾಡದ ಹೂವು. ಆ ದಿನ, ಕ್ಷಣ, ಮಾತು, ನಿಮ್ಮ ಪ್ರತಿಕ್ರಿಯೆ ಎಲ್ಲವೂ ನಮ್ಮ ಮುಖದಲ್ಲಿ ನಸು ನಾಚಿಕೆ ಮೂಡಿಸುತ್ತದೆ. ಬಿಬಿಕೆ8 ರ ನಮ್ಮ ಮುದ್ದು ಅರ್ವಿಯಾ ಮಧುರ ಕ್ಷಣಗಳನ್ನು ಇವತ್ತಿಗೂ ನೋಡಿದರೆ ನಮಗೆ ಸಮಾಧಾನ. ಜಗತ್ತಿಗೇ ಅದ್ಭುತ ಪ್ರೇಮಿಗಳು ದೊರಕಿದ್ದು ಆಗಲೇ ಅಲ್ಲವೇ. ಪ್ರೀತಿಯ ಸಂಭ್ರಮ ಮತ್ತು ಮಧುರತೆಯನ್ನು ಕಣ್ಣಾರೆ ಕಾಣಿಸಿದ್ದೇ ನೀವು ಅರ್ವಿಯಾ. ಈ ಸೀರೆ ಆ ಕ್ಷಣವನ್ನು ಮತ್ತಷ್ಟು ಮೆರೆಸಿತು. ಯಾಕೆಂದರೆ ಭಾವನೆಗಳನ್ನು ಜೋಪಾನ ಮಾಡಿದ ನಿಮ್ಮ ಮೇಲೆ ಅದಕ್ಕೆ ವಿಶೇಷ ಕೃತಜ್ಞತೆ ಇರಬಹುದು ಅಲ್ವೇ. ನಿಮ್ಮ ಪ್ರತೀ ಕ್ಷಣವೂ ಅಕ್ಷಯ ಸಂಭ್ರಮವಾಗಲಿ ದಿವಿ ಎಂದು ಬರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ