ದಿವ್ಯಾ ಉರುಡುಗ (Divya Uruduga) ಅಂದಾಕ್ಷಣ ನೆನಪಾಗೋದ ಬಿಗ್ ಬಾಸ್ (Bigg Boss) ಕನ್ನಡ. ಅದರಲ್ಲೂ 2 ಸೀಸನ್ ಗಳು ನೆನಪಾಗ್ತವೆ. ಬಿಗ್ ಬಾಸ್ ಸೀಸನ್ 8 ಮತ್ತು 09ರಲ್ಲಿ ಉರುಡುಗ ಭಾಗವಹಿಸಿದ್ದರು. ಸೀಸನ್ 8 ರಲ್ಲಿ ಅರವಿಂದ್ ಕೆ.ಪಿ (Aravind K.P) ಜೊತೆ ಸದಾ ಇರುತ್ತಿದ್ರು. ಇಬ್ಬರು ಒಳ್ಳೆಯ ಆತ್ಮೀಯರು. ಮದುವೆ ಆಗ್ತಾರೆ ಅನ್ನುವ ಸುದ್ದಿಗಳು ಹಬ್ಬಿವೆ. ಬಿಗ್ ಬಾಸ್ ಸೀಸನ್ 8 ರ ಟಾಪ್ 5 ಸ್ಪರ್ಧಿಗಳಲ್ಲಿ ಇವರು ಇಬ್ಬರು ಇದ್ದರು. ಬಿಗ್ ಬಾಸ್ಗೆ ಹೋದಾಗಿನಿಂದ ದಿವ್ಯಾ ಉರುಡುಗ ಹೆಚ್ಚು ಜನ ಪ್ರಿಯತೆಯನ್ನು ಹೊಂದಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಇವರನ್ನು ಫಾಲೋ ಮಾಡ್ತಾ ಇದ್ದಾರೆ. ದಿವ್ಯಾ ಉರುಡುಗ ಮತ್ತು ಅರವಿಂದ್ ಕೆ.ಪಿ ಒಟ್ಟಿಗೆ ಅಭಿನಯಿಸಿರುವ ಸಿನಿಮಾದ ಜಿಂಗಲಕಾ ಲಕಾ ಲಕಾ ಹಾಡಿಗೆ (Song) ಡ್ಯಾನ್ಸ್ (Dance) ಮಾಡಿದ್ದಾರೆ. ಜನರಿಗೂ ಆ ರೀಲ್ಸ್ (Reels) ಮಾಡಲು ಚಾಲೆಂಜ್ (Challenge) ನೀಡಿದ್ದಾರೆ.
ಅರವಿಯಾ ಜೋಡಿಯ ಸಿನಿಮಾದ ಹಾಡು
ಬಿಗ್ ಬಾಸ್ ಸೀಸನ್ 8 ರಲ್ಲಿ ಆತ್ಮೀಯರಾಗಿದ್ದ ಅರವಿಂದ್ ಕೆ.ಪಿ ಮತ್ತು ದಿವ್ಯಾ ಉರುಡುಗ ಒಟ್ಟಿಗೆ ಸಿನಿಮಾ ಮಾಡ್ತಾ ಇದ್ದಾರೆ. ಆ ಸಿನಿಮಾದ ಹಾಡೇ ಜಿಂಗಲಕಾ ಲಕಾ ಲಕಾ. ಆ ಹಾಡಿಗೆ ಇಬ್ಬರು ಡ್ಯಾನ್ಸ್ ಮಾಡಿದ್ದಾರೆ. ನೀವು ಈ ಹಾಡಿಗೆ ಡ್ಯಾನ್ಸ್ ಮಾಡಿ ರೀಲ್ಸ್ ಮಾಡಿದ ಬಳಿಕ @ardhambardhapremakathe ಪೇಜ್ಗೆ ಟ್ಯಾಗ್ ಮಾಡಿ, #jingalakaapk ಹ್ಯಾಶ್ಟ್ಯಾಗ್ ಹಾಕಿ ರೀಲ್ಸ್ ಅಪ್ಲೋಡ್ ಮಾಡಬೇಕು.
ಅತ್ಯುತ್ತಮವಾಗಿ ರೀಲ್ಸ್ ಮಾಡಿದರೆ ಅಂತರವರ ರೀಲ್ಸ್ ಅನ್ನು ಸಿನಿಮಾದ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
View this post on Instagram
ಬಿಗ್ ಮನೆಯಲ್ಲಿ ಅರ್ಧಂಬರ್ಧ ಪ್ರೇಮ ಕಥೆ ಹಾಡು ರಿಲೀಸ್
ಅರ್ಧಂಬರ್ಧ ಪ್ರೇಮ ಕಥೆ ಸಿನಿಮಾದ ಜಿಂಗಲಕಾ ಲಕಾ ಲಕಾ ಹಾಡು ಬಿಗ್ ಬಾಸ್ ಮನೆಯಲ್ಲಿಯೇ ರಿಲೀಸ್ ಆಗಿತ್ತು. ಈ ಒಂದು ಗೀತೆಗೆ ಮನೆಯಲ್ಲಿದ್ದ ದಿವ್ಯ ಉರುಡುಗ ಮತ್ತು ಸಪ್ರ್ರೈಸ್ ಆಗಿಯೇ ಮನೆಯೊಳಗೆ ಹೋದ ಅರವಿಂದ್ ಕೆ.ಪಿ. ಮತ್ತು ರೂಪೇಶ್ ಶೆಟ್ಟಿ ಸೇರಿದಂತೆ ಇತರರು ಡ್ಯಾನ್ಸ್ ಮಾಡಿದ್ದರು.
ಇದನ್ನೂ ಓದಿ: Sudha Narsimha Raju: ಸುಧಾ ನರಸಿಂಹರಾಜು ಅವರನ್ನು ತಡೆದಿದ್ದ ಪೊಲೀಸರು, ಬೇಸರಗೊಂಡಿದ್ಯಾಕೆ ನಟಿ?
ಅರ್ಧಂಬರ್ಧ ಪ್ರೇಮ ಕಥೆಗೆ ಅರ್ಜುನ್ ಜನ್ಯ ಸಂಗೀತ ಕೊಟ್ಟಿದ್ದಾರೆ. ಈ ವಿಶೇಷ ಹಾಡನ್ನ ಸ್ವತಃ ಅರ್ಜುನ್ ಜನ್ಯ ಅವರೆ ಹಾಡಿದ್ದಾರೆ. ಚಿತ್ರದ ನಿರ್ದೇಶಕ ಅರವಿಂದ್ ಕೌಶಿಕ್ ಸಾಹಿತ್ಯ ಬರೆದಿದ್ದಾರೆ.
ಅರವಿಂದ್ ಕೆ.ಪಿ ಅವರು ಹುಟ್ಟುಹಬ್ಬ
ಡಿಸೆಂಬರ್ 8ಕ್ಕೆ ಬಿಗ್ ಬಾಸ್ ಸೀಸನ್ 8 ರ ರನ್ನರ್ ಅಪ್, ಬೈಕ್ ರೇಸರ್ ಅರವಿಂದ್ ಕೆ.ಪಿ ಅವರು ತಮ್ಮ ಬರ್ತ್ಡೇ ಆಚರಿಸಿಕೊಂಡಿದ್ದರು. ಆಗ ದಿವ್ಯಾ ಉರುಡುಗ ಬಿಗ್ ಬಾಸ್ ಮನೆಯಲ್ಲಿ ಇದ್ದರು. ಅದಕ್ಕೆ ಬಿಗ್ ಬಾಸ್ ನಿಂದ ಬಂದು ವಿಶೇಷವಾಗಿ ಅವಿ ಬರ್ತ್ಡೇ ಆಚರಿಸಿದ್ದಾರೆ. ಅಲ್ಲದೇ ಅವರಿಗಾಗಿ ಪ್ರೀತಿಯಿಂದ ಕವಿತೆ ಬರೆದಿದ್ದರು.
ದಿವ್ಯಾ ಉರುಡುಗ ಕವಿತೆ
ಕಡಲ ಅಲೆಯು ತನ್ನ ಕಾಂತಿ ತೈದು ಸುರಿದು
ಬೀಸೋ ಗಾಳಿ ತನ್ನ ವೇಗ ಧಾರೆ ಎರೆದು
ಪ್ರಕೃತಿಯೆ ಪ್ರೀತಿಸುವ ಪುಣ್ಯದ ಸಿರಿ ನೀ
ದೇಶವೆ ಬೆನ್ ತಟ್ಟೋ ಭಾಗ್ಯದ ನಿಧಿ ನೀ
ನೀ ನಗುವಿಗೆ ನಾಯಕ
ಪ್ರೀತಿ ನಗರದ ಮಾಂತ್ರಿಕ
ಹೆತ್ತ ತಾಯಿ ಪುಣ್ಯ
ಜನ್ಮ ಭೂಮಿ ಧನ್ಯ
ನೀ ಕೋಟಿ ಮನಸಿಗೆ ಸ್ಫೂರ್ತಿ
ನೀ ಅರವಿಂದ್ ಕೆಪಿ
ಇದನ್ನೂ ಓದಿ: Rupesh Shetty-Koragajja: ಬಿಗ್ ಬಾಸ್ ಗೆಲುವಿನ ಹಿಂದಿದೆಯಾ ಕೊರಗಜ್ಜನ ಕೃಪೆ? ದೈವದ ಮಹಿಮೆ ತೆರೆದಿಟ್ಟ ರೂಪೇಶ್ ಶೆಟ್ಟಿ!
ಈ ಕವಿತೆ ನಾನೇ ಬರೆದಿದ್ದು
ಬಿಗ್ ಬಾಸ್ ಸೀಸನ್ 09 ರಲ್ಲಿ ಕವಿತೆ ವಿಚಾರವಾಗಿ ರೂಪೇಶ್ ರಾಜಣ್ಣ ಮತ್ತು ದಿವ್ಯಾ ಉರುಡುಗ ಮಧ್ಯೆ ಜಗಳ ಆಗಿತ್ತು. ಆಗ ರಾಜಣ್ಣ ಸಾಂಗ್ ಬರೆಯಲು ನಾನು ಸಹಾಯ ಮಾಡಿದ್ದೆ, ಕ್ರೆಡಿಟ್ ಕೊಡಲಿಲ್ಲ ಎಂದಿದ್ದರು. ಆಗ ದಿವ್ಯಾಗೆ ಬೇಸರ ಆಗಿ ಕಣ್ಣೀರು ಹಾಕಿದ್ದರು. ಅದಕ್ಕೆ ಈಗ ಈ ಕವಿತೆಯನ್ನು ಅವವಿಂದ್ ಗಾಗಿ ನಾನೇ ಬರೆದಿದ್ದು. ಇದರ ಕ್ರೆಡಿಟ್ ನನಗೆ ಮಾತ್ರ ಸಲ್ಲಬೇಕು ಎಂದು ಬರೆದುಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ