Bigg Boss: ಬೇಸರ ತೋಡಿಕೊಂಡ ಬಿಗ್ ​ಬಾಸ್​ ಸ್ಫರ್ಧಿ! ಈ ಕಾರಣಕ್ಕೆ ಜನರಿಂದ ‘ನೀಲಿ ಚಿತ್ರ ತಾರೆ’ ಎಂದು ಕರೆಸಿಕೊಂಡಿದ್ದರಂತೆ!

Urfi Javed: ನನ್ನ ಖಾತೆಯಲ್ಲಿ ಕೋಟಿಗಟ್ಟಲೆ ಹಣವಿದೆ ಎಂಬ ನಿರೀಕ್ಷೆಯಲ್ಲಿ, ನನ್ನ ಬ್ಯಾಂಕ್ ಖಾತೆಯನ್ನೂ ಪರಿಶೀಲಿಸಲು ಬಯಸಿದ್ದರು. ನನ್ನ ತಂದೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸುತ್ತಿದ್ದರು. ಆ ಹಿಂಸೆ ಸುಮಾರು 2 ವರ್ಷಗಳವರೆಗೆ ನಡೆಯಿತು.

ಉರ್ಫಿ ಜಾವೇದ್

ಉರ್ಫಿ ಜಾವೇದ್

  • Share this:

ಬಿಗ್‍ಬಾಸ್ ಒಟಿಟಿಯಿಂದ ಇತ್ತೀಚೆಗೆ ಹೊರ ಬಂದಿರುವ ನಟಿ ಉರ್ಫಿ ಜಾವೇದ್, ನನ್ನ ಚಿತ್ರ ಅಡಲ್ಟ್ ಸೈಟ್ ಒಂದರಲ್ಲಿ ಅಪ್‍ಲೋಡ್ ಆದಾಗ, ಕುಟುಂಬದಿಂದ ಯಾವುದೇ ಬೆಂಬಲ ಸಿಕ್ಕಿರಲಿಲ್ಲ ಎಂದು ಹೇಳಿದ್ದಾರೆ. ತಾನು ದೂಷಣೆಗೆ ಒಳಗಾದ ಬಲಿಪಶು ಆಗಿದ್ದೆ ಮತ್ತು ಜನರು ನಾನು ರಹಸ್ಯವಾಗಿ ನೀಲಿ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಭಾವಿಸಿದ್ದರು ಎಂದು ಆಕೆ ಹಿಂದಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಈ ಘಟನೆಯ ನಂತರ ತನ್ನ ತಂದೆ ತನ್ನನ್ನು ‘ಮಾನಸಿಕವಾಗಿ ಮತ್ತು ದೈಹಿಕವಾಗಿ’ ನಿಂದಿಸಿದರು ಹಾಗೂ ಬಚ್ಚಿಟ್ಟ ಹಣದ ನಿರೀಕ್ಷೆಯಲ್ಲಿ ಸಂಬಂಧಿಗಳು ತನ್ನ ಬ್ಯಾಂಕ್ ಖಾತೆ ಪರಿಶೀಲಿಸಲು ಬಯಸಿದ್ದರು ಎಂದು ಉರ್ಫಿ ಜಾವೇದ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.


“ನಾನು ಆಗ ಕಾಲೇಜು ವಿದ್ಯಾರ್ಥಿನಿಯೂ ಆಗಿರಲಿಲ್ಲ, 11ನೇ ತರಗತಿಯಲ್ಲಿ ಕಲಿಯುತ್ತಿದ್ದೆ” ಎಂದು ಆಕೆ ಆರ್‌ಜೆ ಸಿದ್ದಾರ್ಥ್ ಕಣ್ಣನ್‍ಗೆ ತಿಳಿಸಿದ್ದಾರೆ. ಅದು ಕಷ್ಟಕರ ಸಂಗತಿಯಾಗಿತ್ತು. ಏಕೆಂದರೆ ನನಗೆ ಕುಟುಂಬದವರ ಬೆಂಬಲ ಇರಲಿಲ್ಲ. ನನ್ನ ಕುಟುಂಬದವರು ನನ್ನನ್ನು ದೂಷಿಸಿದರು, ನಾನು ದೂಷಣೆಗೆ ಒಳಗಾದ ಬಲಿಪಶುವಾಗಿದ್ದೆ. ನನ್ನ ಸಂಬಂಧಿಗಳು ನನ್ನನ್ನು ನೀಲಿ ಚಿತ್ರ ತಾರೆ ಎಂದು ಕರೆಯುವ ಮಟ್ಟಿಗೆ ಹೋದರು.


ನನ್ನ ಖಾತೆಯಲ್ಲಿ ಕೋಟಿಗಟ್ಟಲೆ ಹಣವಿದೆ ಎಂಬ ನಿರೀಕ್ಷೆಯಲ್ಲಿ, ನನ್ನ ಬ್ಯಾಂಕ್ ಖಾತೆಯನ್ನೂ ಪರಿಶೀಲಿಸಲು ಬಯಸಿದ್ದರು. ನನ್ನ ತಂದೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸುತ್ತಿದ್ದರು. ಆ ಹಿಂಸೆ ಸುಮಾರು 2 ವರ್ಷಗಳವರೆಗೆ ನಡೆಯಿತು. ಜನ ನನ್ನ ಬಗ್ಗೆ ಎಷ್ಟು ಕೆಟ್ಟ ಕೆಟ್ಟ ಮಾತುಗಳನ್ನಾಡಿದರು ಎಂದರೆ, ನನಗೆ ನನ್ನ ಹೆಸರೇ ಮರೆತು ಹೋದಂತಾಗಿತ್ತು. ನನಗಾದ ಸ್ಥಿತಿ ಬೇರೆ ಯಾವ ಹೆಣ್ಣಿಗೂ ಬರಬಾರದು” ಎಂದು ಆಕೆ ಹೇಳಿದ್ದಾರೆ.




ಉರ್ಫಿ ಜಾವೇದ್

ಆ ಅನುಭವದ ಬಳಿಕ, ತನಗೆ ಸ್ವಂತವಾದ ಧ್ವನಿ ಇದೆ ಎಂಬುದನ್ನು ಅರಿತುಕೊಂಡಿದ್ದಾಗಿ ಆಕೆ ಹೇಳಿದ್ದಾರೆ. “ನನ್ನ ತಂದೆ ನನ್ನನ್ನು ಎಷ್ಟೇ ದೂಷಿಸಿದರೂ ನಾನೇನೂ ಹೇಳುವ ಹಾಗಿರಲಿಲ್ಲ, ಕೇವಲ ಆ ಹಿಂಸೆಯನ್ನು ತಡೆದುಕೊಳ್ಳಬೇಕಿತ್ತು. ಹೆಣ್ಣು ಮಕ್ಕಳಿಗೆ ಧ್ವನಿ ಇರುವುದಿಲ್ಲ, ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕು ಕೇವಲ ಗಂಡಸರಿಗೆ ಮಾತ್ರ ಇರುತ್ತದೆ ಎಂಬುದನ್ನು ಮೊದಲಿನಿಂದಲೂ ನನಗೆ ಹೇಳಿ ಕೊಡಲಾಗಿತ್ತು. ನನಗೂ ಒಂದು ಧ್ವನಿ ಇದೆ ಎಂಬುವುದೂ ಸ್ವತಃ ನನಗೇ ತಿಳಿದಿರಲಿಲ್ಲ. ನಾನು ಮನೆಯನ್ನು ತೊರೆದ ಬಳಿಕ ಬದುಕಲು ನನಗೆ ತುಂಬಾ ಸಮಯ ಹಿಡಿಯಿತು. ಈಗ ನನ್ನ ವ್ಯಕ್ತಿತ್ವ ಹೊರ ಹೊಮ್ಮುತ್ತಿದೆ ಮತ್ತು ನಾನಿನ್ನು ನಿಲ್ಲುವವಳಲ್ಲ” ಎಂದಿದ್ದಾರೆ ಉರ್ಫಿ.


ಈ ಮೊದಲು 2020ರಲ್ಲಿ, ಪ್ರಮುಖ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ತಾನು ಮನೆಯಿಂದ ಓಡಿ ಬಂದ ಬಳಿಕ ಏನೆಲ್ಲಾ ಆಯಿತು ಎಂಬುದನ್ನು ಹೇಳಿಕೊಂಡಿದ್ದರು ಅವರು. “ಅಮ್ಮ ಹಾಗೂ ಇಬ್ಬರು ಒಡಹುಟ್ಟಿದವರನ್ನು ಬಿಟ್ಟು, ನಾನು ನನ್ನ ಇಬ್ಬರು ಸಹೋದರಿಯರೊಂದಿಗೆ ಮನೆ ಬಿಟ್ಟು ಓಡಿ ಬಂದೆ. ದೆಹಲಿಯ ಉದ್ಯಾನವನ ಒಂದರಲ್ಲಿ ನಾವು ಒಂದು ವಾರ ವಾಸವಿದ್ದೆವು. ನಂತರ ಮೂರೂ ಜನ ಕೆಲಸ ಹುಡುಕತೊಡಗಿದೆವು. ಪುಣ್ಯಕ್ಕೆ, ಕಾಲ್‍ಸೆಂಟರ್ ಒಂದರಲ್ಲಿ ನನಗೆ ಕೆಲಸ ಸಿಕ್ಕಿತು. ಆದಾದ ಬಳಿಕ ನನ್ನ ತಂದೆ ಮರು ಮದುವೆ ಆದರು. ಆ ನಂತರ ಇಡೀ ಕುಟುಂಬದ ಜವಾಬ್ದಾರಿ ನನ್ನ ಹಾಗೂ ಸೋದರಿಯರ ಹೆಗಲ ಮೇಲೆ ಬಿತ್ತು” ಎಂದಿದ್ದಾರೆ.


ಬಿಗ್‍ಬಾಸ್ ಒಟಿಟಿಯ ಉದ್ಘಾಟನಾ ಸೀಸನ್‍ನಲ್ಲಿ ಮನೆಯಿಂದ ಹೊರ ಬಂದ ಮೊದಲ ಸ್ಪರ್ಧಿ ಉರ್ಫಿ. ಮತ್ತು ತನ್ನ ನಂಬಿಕೆಗೆ ಮೋಸ ಮಾಡಿದ್ದಕ್ಕಾಗಿ ಆಕೆ ತನ್ನ ಸ್ನೇಹಿತ ಜೀಶಾನ್ ಖಾನ್‌ರನ್ನು ದೂಷಿಸಿದ್ದಾರೆ.

First published: