ಬಿಗ್​ ಬಾಸ್​ 8ರ ಸ್ಪರ್ಧಿ ಬರೆದ ಈ ಪುಸ್ತಕ 1 ಲಕ್ಷ ಪ್ರತಿ ಮಾರಾಟ ಆಗಿದೆಯಂತೆ!

Bigg Boss Kannada Season 8: ಪ್ರಶಾಂತ್​ ಸಂಬರಗಿ ತುಪ್ಪಾ ತಿಂದಿದ್ದೇ ತಪ್ಪಾ? ಎಂಬ ಪುಸ್ತಕ ಬರೆದಿದ್ದಾರಂತೆ!. ಈ ಪುಸ್ತಕದ ಪ್ರತಿ 1 ಲಕ್ಷ ಸೇಲ್​ ಆಗಿದೆ ಎಂದು ಅವರೇ ಬಿಗ್​ ಬಾಸ್ ಮನೆಯಲ್ಲಿ ಸಹ ಸ್ಪರ್ಧಿಗಳೊಂದಿಗೆ​ ಹೇಳಿದ್ದಾರೆ.

bigg boss kannada season 8

bigg boss kannada season 8

 • Share this:
  ಕನ್ನಡದ ಅತಿದೊಡ್ಡ​ ರಿಯಾಲಿಟಿ ಶೋ ಬಿಗ್​ಬಾಸ್​ ನಾಲ್ಕನೇ ವಾರಂತ್ಯದತ್ತ ಸಾಗುತ್ತಿದೆ. ಈಗಾಗಲೇ ಧನುಶ್ರೀ, ನಿರ್ಮಲಾ ಚೆನ್ನಪ್ಪಾ, ಗೀತಾ ಮೂವರು ಸ್ಪರ್ಧಿಗಳು ಎಲಿಮಿನೆಟ್​ ಆಗಿ ಮನೆಯಿಂದ ಹೊರಹೋಗಿದ್ದಾರೆ. ಇನ್ನುಳಿದ ಸ್ಪರ್ಧಿಗಳು ಹೊರ ಹೋಗದಂತೆ ಮತ್ತು ಎಲಿಮಿನೆಟ್​ ಆಗದಂತೆ ಪೈಪೋಟಿ ನೀಡುತ್ತಿದ್ದಾರೆ. ಬಿಗ್​ ಬಾಸ್​ ಕೊಟ್ಟ ಟಾಸ್ಕ್​ನಲ್ಲಿ ಚೆನ್ನಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

  ದೊಡ್ಡನೆಯಲ್ಲಿ ನಡೆದ ಘಟನೆಗಳು ಆಗಾಗ ಸುದ್ದಿಯಾಗುತ್ತಿರುತ್ತದೆ. ಅದರಂತೆ ಸಾಮಾಜಿಕ ಕಾರ್ಯಕರ್ತನಾಗಿ ಮನೆಯೊಳಕ್ಕೆ ಬಂದಿದ್ದ ಪ್ರಶಾಂತ್​ ಸಂಬರಗಿ ಹೇಳಿರುವ ಪುಸ್ತಕ ವಿಚಾರವು ಈಗ ಸುದ್ದಿಯಾಗಿದೆ.

  ಪ್ರಶಾಂತ್​ ಸಂಬರಗಿ ತುಪ್ಪಾ ತಿಂದಿದ್ದೇ ತಪ್ಪಾ? ಎಂಬ ಪುಸ್ತಕ ಬರೆದಿದ್ದಾರಂತೆ!. ಈ ಪುಸ್ತಕದ ಪ್ರತಿ 1 ಲಕ್ಷ ಸೇಲ್​ ಆಗಿದೆ ಎಂದು ಅವರೇ ಬಿಗ್​ ಬಾಸ್ ಮನೆಯಲ್ಲಿ ಸಹ ಸ್ಪರ್ಧಿಗಳೊಂದಿಗೆ​ ಹೇಳಿದ್ದಾರೆ.

  ಪ್ರಶಾಂತ್​ ಸಂಬರಗಿ ಇತ್ತೀಚೆಗೆ ಅಡುಗೆಯೊಂದನ್ನು ಮಾಡಿದ್ದರು. ಈ ವೇಳೆ ದೊಡ್ಮನೆಯಲ್ಲಿದ್ದ ತುಪ್ಪ ಬಳಸಿಕೊಂಡು ಖಾಲಿ ಮಾಡಿದ್ದರು ಎಂದು ಸಹ ಸ್ಪರ್ಧಿಗಳು ದೂರಿದರು. ಅಡುಗೆ ವಿಭಾಗದವರು ಪ್ರಶಾಂತ್​ ಸಂಬರಗಿ ಅವರನ್ನು ತುಪ್ಪಾ ಅಷ್ಟೊಂದು ಬಳಸಬೇಡಿ. ಮನೆಯವರೆಲ್ಲರಿಗೂ ತುಪ್ಪಾ ಸಿಗುತ್ತಿಲ್ಲ ಎಂದು ಹೇಳಿದರು. ಈ ವಿಚಾರ ಎರಡು ದಿನಗಳಿಂದ ಭಾರೀ ಚರ್ಚೆಗೆ ಕಾರಣವಾಗಿತ್ತು. ಪ್ರಶಾಂತ್​ ಕೂಡ ನಾನು ತುಪ್ಪಾ ಬಳಸಿಲ್ಲ ಎಂದು ವಾದಿಸುತ್ತಾ ಬಂದರು.  ಹೀಗೆ ತುಪ್ಪದ ವಿಚಾರಕ್ಕೆ ಪ್ರಶಾಂತ್​ ತುಪ್ಪಾ ತಿಂದಿದ್ದೇ ತಪ್ಪಾ? ಎಂಬ ಟೈಟಲ್​ ಇಟ್ಟುಕೊಂಡು ಪುಸ್ತಕ ಬರೆಯುವುದಾಗಿ ಹೇಳಿದ್ದಾರೆ. ಅದರಲ್ಲಿ ಎಲ್ಲವನ್ನು ವಿವರವಾಗಿ ಬರೆದಿದ್ದೇನೆ. ಎರಡು ಗ್ರಾಂ ತುಪ್ಪಕ್ಕೆ ಎರಡು ದಿನ ಮನೆಯಲ್ಲಿ ಮನಸ್ತಾಪ ಉಂಟಾಗಿದೆ ಎಂಬುದನ್ನು ಅದರಲ್ಲಿ ಹೇಳಿದ್ದಾರಂತೆ. ಈ ಪುಸ್ತಕ ಒಂದು ಲಕ್ಷ ಪ್ರತಿ ಮಾರಾಟವಾಗಿದೆಯಂತೆ.

  ಪ್ರಶಾಂತ್​ ಸಂಬರಗಿ ಹೇಳಿದ ಈ ವಿಚಾರಕ್ಕೆ ಮನೆಯವರು ನಕ್ಕಿದ್ದಾರೆ. ಅನೇಕರಲ್ಲು ಪ್ರಶಾಂತ್​ ಸಂಬರಗಿ ತುಪ್ಪ ಖಾಲಿ ಮಾಡಿದ್ದಾರೆ ಎಂಬ ಅನುಮಾನವು ಹಾಗೆಯೇ ಉಳಿದುಕೊಂಡಿದೆ.
  Published by:Harshith AS
  First published: