ಪರೀಕ್ಷೆಯಲ್ಲಿ ಕಾಪಿ ಮಾಡಿಲ್ಲ ಎಂದು ವಾದಿಸಲು ಕೋರ್ಟ್ ಮೆಟ್ಟಿಲೇರಿದ್ದರಂತೆ ಈ ಬಿಗ್ ಬಾಸ್ ಸ್ಪರ್ಧಿ!

Bigg Boss Kannada 8: ಸಾಮಾಜಿಕ ಕಾರ್ಯಕರ್ತನಾಗಿ ಗುರುತಿಸಿಕೊಂಡು ಬಿಗ್​ ಬಾಸ್​ ಮನೆಯೊಳಕ್ಕೆ ಬಂದಿದ್ದ ಪ್ರಶಾಂತ್​ ಸಂಬರಗಿ ಕಾಲೇಜು ದಿನಗಳಲ್ಲಿ ಪರೀಕ್ಷೆ ಕಾಪಿ ಮಾಡಿದ್ದರು ಇಲ್ಲ ಎಂದು ವಾದಿಸಲು ಕೋರ್ಟ್​ ಮೆಟ್ಟಿಲೇರಿದ ಪ್ರಸಂಗವನ್ನು ತೆರೆದಿಟ್ಟರು.

ಬಿಗ್​ ಬಾಸ್​

ಬಿಗ್​ ಬಾಸ್​

 • Share this:
  ಬಿಗ್​​ ಬಾಸ್​ ತನ್ನ ಸ್ಪರ್ಧಿಗಳಿಗೆ ಯಾರಿಗೂ ಹೇಳಿರದ ಗುಟ್ಟೊಂದನ್ನು ಹೇಳಲು ಅವಕಾಶ ಮಾಡಿಕೊಟ್ಟಿದ್ದರು. ಆದರೆ ಸಹ ಸ್ಪರ್ಧಿಗಳ ಎದುರು ಈ ವಿಚಾರವನ್ನು ಬಹಿರಂಗವಾಗಿ ಹೇಳಬೇಕಾಗಿತ್ತು. ಕೆಲವು ಸ್ಪರ್ಧಿಗಳು ತಮ್ಮ ನೋವಿನ ಅನುಭವವನ್ನು ಹೇಳಿದರೆ, ಇನ್ನು ಕೆಲವರು ತುಂಟಾಟದ ಪ್ರಸಂಗ ವಿವರಿಸಿದ್ದಾರೆ. ಅದರಂತೆ ಸಾಮಾಜಿಕ ಕಾರ್ಯಕರ್ತನಾಗಿ ಗುರುತಿಸಿಕೊಂಡು ಬಿಗ್​ ಬಾಸ್​ ಮನೆಯೊಳಕ್ಕೆ ಬಂದಿದ್ದ ಪ್ರಶಾಂತ್​ ಸಂಬರಗಿ ಕಾಲೇಜು ದಿನಗಳಲ್ಲಿ ಪರೀಕ್ಷೆ ಕಾಪಿ ಮಾಡಿದ್ದರು ಇಲ್ಲ ಎಂದು ವಾದಿಸಲು ಕೋರ್ಟ್​ ಮೆಟ್ಟಿಲೇರಿದ ಪ್ರಸಂಗವನ್ನು ತೆರೆದಿಟ್ಟರು.

  ಪ್ರಶಾಂತ್​ ಸಂಬರಗಿಗೆ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆಯಬೇಕೆಂದಿತ್ತು. ಹಾಗಾಗಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸುವ ಕಾರಣಕ್ಕೆ ಕಾಪಿ ಮಾಡುತ್ತಾರೆ. ಅಷ್ಟೇ ಏಕೆ ಸಿಕ್ಕಿ ಬೀಳುತ್ತಾರೆ ಕೂಡ. ಆದರೆ ಪ್ರಶಾಂತ್​ ಕಾಪಿ ಮಾಡಿದ್ದದರು, ಮಾಡಿಲ್ಲ ಎಂದು ವಾದಿಸಲು ಕೋರ್ಟ್​ ಮೆಟ್ಟಿಲೇರುತ್ತಾರೆ.

  ಈ ವಿಚಾರವನ್ನು ಪ್ರಶಾಂತ್​ ಹೇಳುತ್ತಿದ್ದಂತೆ ಸಹ ಸ್ಪರ್ಧಿಗಳು ನಗುತ್ತಾರೆ. ಎಲ್ಲರೂ ಪ್ರಶಾಂತ್​ಗೆ ಎದ್ದು ನಿಂತು ಚಪ್ಪಾಳೆ ಹೊಡೆದರು. ಇನ್ನು ಕೆಲವರು ಮಾವ ಎಂದು ಹೇಳುತ್ತಾ ತಮಾಷೆ ಮಾಡಿದರು.

  ಇದೇ ವೇದಿಕೆಯಲ್ಲಿ ದಿವ್ಯಾ ಸುರೇಶ್​​ ತಮ್ಮ ಬಾಲ್ಯದ ಆದ ಕಹಿ ಅನುಭವವನ್ನು ಹಂಚಿಕೊಂಡರು. ಆಕೆಯ ತಂದೆ ಕುಡಿದು ಬಂದು ವಿಷ ಬೆರೆಸಿದ ಊಟವನ್ನು ನಮಗೆ ನೀಡಿದ್ದರು ಎಂದು ಹೇಳಿಕೊಂಡರು. ಈ ವಿಚಾರ ಅಲ್ಲಿದ್ದವರ ಕಣ್ಣಲ್ಲಿ ನೀರು ತರಿಸುವಂತೆ ಮಾಡಿತು.
  Published by:Harshith AS
  First published: