• Home
  • »
  • News
  • »
  • entertainment
  • »
  • Bigg Boss Guruji: ಆರ್ಯವರ್ಧನ್ ಈಗ ಕ್ಯಾಪ್ಟನ್; ನೇಹಾ, ಅನುಪಮಾ ಗೌಡಗೆ ಉರಿ ಉರಿ!

Bigg Boss Guruji: ಆರ್ಯವರ್ಧನ್ ಈಗ ಕ್ಯಾಪ್ಟನ್; ನೇಹಾ, ಅನುಪಮಾ ಗೌಡಗೆ ಉರಿ ಉರಿ!

ಗುರೂಜಿ ಗೆಲುವು?

ಗುರೂಜಿ ಗೆಲುವು?

ಗುರೂಜಿ ಗೆಲವು ಗೆಲುವಲ್ಲ. ರೂಪೇಶ್-ರಾಕೇಶ್ ಅವರಿಗೆ ಹೆಲ್ಪ್ ಮಾಡಿದ್ದಾರೆ. ಹೀಗೇ ಮಾಡು, ಹಾಗೆ ಮಾಡು ಅಂತ ಹೇಳಿ ಗುರೂಜಿಯನ್ನ ಗೆಲ್ಲಿಸಿದರು ಎಂದು ನೇಹಾ ಗೌಡ, ಪ್ರಶಾಂತ್ ಸಂಬರ್ಗಿ ಮುಂದೆ ಹೇಳಿಕೊಂಡರು.

  • Share this:

ಬಿಗ್ ಬಾಸ್ (Bigg Boss) ಮನೆಯ ಹಿರಿಯ ಸದಸ್ಯ ಆರ್ಯವರ್ಧನ್ ಗುರೂಜಿ (Aryavardhan) ಅಂದುಕೊಂಡಂತೇನೆ ಆಗಿದೆ. ನಾನೂ ಕ್ಯಾಪ್ಟನ್ ಆಗಬೇಕು ಅಂತಲೇ ಓಡಾಡಿಕೊಡಿದ್ದ ಗುರೂಜಿ ಕೊನೆಗೂ ಕ್ಯಾಪ್ಟನ್ ಆಗಿದ್ದಾರೆ. ಕ್ಯಾಪ್ಟನ್ ಆಗಲು ಬೇಕಾಗೋ ಟಾಸ್ಕ್​ ಗೆ (Anupama Gowda) ಅನುಪಮಾ ಗೌಡ, ಗುರೂಜಿಯನ್ನ ಆಯ್ಕೆ ಮಾಡಿರೋದೇನೆ ಸತ್ಯ. ಆದರೆ ಅದೇ ಗುರೂಜಿಯ ಗೆಲುವನ್ನ ಡೌಟ್ ನಿಂದಲೇ ನೋಡುತ್ತಿದ್ದಾರೆ. ಗುರೂಜಿ ಗೆಲುವಿಗೆ ರಾಕೇಶ್ ಅಡಿಗ (Rakesh Adiga) ಮತ್ತು ರೂಪೇಶ್ ಶೆಟ್ಟಿ (Roopesh Shetty) ಹೆಲ್ಪ್ ಮಾಡಿದ್ರು ಅನ್ನೋದೇ ವಾದ. ಇದಕ್ಕೆ ಸಪೋರ್ಟೀವ್ ಆಗಿ ಅನ್ನೋ ರೀತಿಯಲ್ಲಿ ನೇಹಾ ಗೌಡ ಕೂಡ ಅನುಪಮಾ ರೀತಿಯಲ್ಲಿಯೇ ಮಾತನಾಡಿದ್ದಾರೆ. ಆದರೆ ಇದರ ಪರಿವೇ ಇಲ್ಲದೇ ಗುರೂಜಿ ಆರ್ಯವರ್ಧನ್ ಕ್ಯಾಪ್ಟನ್ ಆದ ಖುಷಿಯನ್ನ ಎಂಜಾಯ್ ಮಾಡುತ್ತಿದ್ದಾರೆ.


ಕ್ಯಾಪ್ಟನ್ ಗುರೂಜಿ ಗೆಲುವಿನ ಬಗ್ಗೇನೆ ಭಾರೀ ಡೌಟು
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಬೇಕು ಅಂದ್ರೆ ಟಾಸ್ಕ್ ಆಡಲೇಬೇಕು. ಅದಕ್ಕಾಗಿಯೇ ನಾಲ್ಕು ಜನರ ಆಯ್ಕೆನೂ ಮಾಡಬೇಕು. ಆಯ್ಕೆಯ ಆ ಅಧಿಕಾರವನ್ನ ಬಿಗ್ ಬಾಸ್ ಈ ಸಲ ವಜ್ರಕಾಯ ತಂಡದ ನಾಯಕಿ ಅನುಪಮಾ ಗೌಡರಿಗೆ ನೀಡಿದ್ದರು.


ಅದರಂತೆ ಅನುಪಮಾ ಗೌಡ ನಾಲ್ಕು ಹೆಸರನ್ನ ಕ್ಯಾಪ್ಟನ್ಸಿ ಟಾಸ್ಕ್​ಗೆ ತೆಗೆದುಕೊಂಡರು. ಮೊದಲ ಹೆಸರು ಗುರೂಜಿ ಆರ್ಯವರ್ಧನ್, ಎರಡನೇ ಹೆಸರು ಅಮೂಲ್ಯ ಗೌಡ, ಮೂರನೇ ಹೆಸರು ದಿವ್ಯಾ ಉರುಡುಗ ನಾಲ್ಕನೆ ಹೆಸರು ದರ್ಶ್ ಚಂದ್ರಪ್ಪದ್ದೇ ಆಗಿತ್ತು.


ಬಿಗ್ ಬಾಸ್ ಕ್ಯಾಪ್ಟನ್ಸಿ ಆಟ ಹೇಗಿತ್ತು ಗೊತ್ತೇ?
ಹೌದು,ಗುರೂಜಿ ಗೆದ್ದು ಬೀಗಿದ್ದ ಈ ಆಟದಲ್ಲಿ ನಂಬರ್ ಜೋಡಿಸಬೇಕಿತ್ತು. ಕಪ್ಪು ಬಣ್ಣದ ತೆಂಗಿನ ಕಾಯಿ, ಬಿಳಿ ಬಣ್ಣದ ತೆಂಗಿನ ಕಾಯಿಗಳೇ ಇಲ್ಲಿದ್ದವು. ಎಲ್ಲರೂ ಇವುಗಳನ್ನ ನಂಬರ್ ರೂಪದಲ್ಲಿ ಕೂಡಿಸಿ ಗೆಲ್ಲಬೇಕಾಗಿತ್ತು. ಅದರಂತೆ ಇಲ್ಲಿ ನಾಲ್ಕು ಜನ ಮಗ್ನರಾಗಿದ್ದರು.


Big Boss Contestant Aryavardhan Guruji now Captain of this week
ಗುರೂಜಿ ಗೆಲುವಿನ ಬಗ್ಗೆ ಇವರಿಗೆ ಭಾರಿ ಡೌಟ್ ಇದೆ


ಆದರೆ ಎಲ್ಲರದೂ ಒಂದು ರೀತಿ ಇದ್ದರೇ. ಗುರೂಜಿ ಆರ್ಯವರ್ಧನ್ ಕಥೆ ಬೇರೆ ಇತ್ತು. ಅವರಿಗೆ ನಂಬರ್ ಜೋಡಿಸೋಕೆ ಆಗ್ತಾನೇ ಇರಲಿಲ್ಲ. ಡೌಟ್ ಅಲ್ಲಿಯೇ ಆಡ್ತಾ ಇದ್ದರು. ಈ ಸಮಯದಲ್ಲಿ ರೂಪೇಶ್ ಶೆಟ್ಟಿ ಹೆಲ್ಪ್ ಮಾಡಿದರು. ರಾಕೇಶ್ ಅಡಿಗ ಕೂಡ ಸಪೋರ್ಟ್ ಮಾಡಿದರು.


ಗೆಲುವು ಗುರೂಜಿಯದ್ದೇ ಆಯಿತು-ಡೌಟು ಶುರು ಆಯಿತು
ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಗುರೂಜಿ ಆರ್ಯವರ್ಧನ್ ಗೆದ್ದರು. ಆ ವಿಷಯವನ್ನ ಸ್ವತಃ ಬಿಗ್ ಬಾಸ್ ಅನೌನ್ಸ್ ಮಾಡಿದರು. ಇದರಿಂದ ಅನೇಕರು ಖುಷ್ ಆಗಿರೋದು ಅಷ್ಟೇ ಸತ್ಯ. ಆದರೆ ಎಲ್ಲವೂ ಮುಗಿದ ಮೇಲೆ ನೇಹಾ ಗೌಡ ತಮ್ಮ ಬೇಸರವನ್ನ ವ್ಯಕ್ತಪಡಿಸಿದರು.
ಗುರೂಜಿ ಗೆಲುವಿಗೆ ರೂಪೇಶ್-ರಾಕೇಶ್ ಹೆಲ್ಪ್-ನೇಹಾ ಗೌಡ


ಇದನ್ನೂ ಓದಿ: Kantara Collection: ಇದು ದೈವದಾಟದ ಮೋಡಿ; 50 ಕೋಟಿ ಮೀರಿದೆ ಕಾಂತಾರ ಕಲೆಕ್ಷನ್! ರಿಷಬ್ ಸೆಲೆಬ್ರೇಷನ್


ಗುರೂಜಿ ಗೆಲವು ಗೆಲುವಲ್ಲ. ರೂಪೇಶ್-ರಾಕೇಶ್ ಅವರಿಗೆ ಹೆಲ್ಪ್ ಮಾಡಿದ್ದಾರೆ. ಸಪೋರ್ಟ್ ಮಾಡೋದು ಬೇರೆ. Encourage ಮಾಡೋದು ಬೇರೆ ಮಾತು. ಹೀಗೇ ಮಾಡು ಹಾಗೆ ಮಾಡು ಅಂತ ಹೇಳಿ ಗುರೂಜಿಯನ್ನ ಗೆಲ್ಲಿಸಿದರು ಅಂತಲೇ ನೇಹಾ ಗೌಡ, ಪ್ರಶಾಂತ್ ಸಂಬರ್ಗಿ ಮುಂದೆ ಹೇಳಿಕೊಂಡರು.


ಆಗ ಪ್ರಶಾಂತ್ ಸುಮ್ಮನೆ ಇದ್ದರೂ ತಮಗೆ ಏನು ಅನಿಸಿತೋ ಅದನ್ನ ಹೇಳಿದರು. ಇದೇ ಸಮಯದಲ್ಲಿ ರಾಕೇಶ್ ಬಂದು ಏನಮ್ಮ ನಿನ್ನದು ಅಂತಲೂ ಕೇಳಿದ್ದು ಇದೆ.


ಗೆಲುವಿನ ಖುಷಿಯಲ್ಲಿ ಗುರೂಜಿಗೆ ಬಿಗ್ ಬಾಸ್ ಸರ್ಪ್ರೈಜ್
ಗುರೂಜಿ ಆರ್ಯವರ್ಧನ್ ಗೆಲುವಿನ ಹಿಂದೆ ಇದೆಲ್ಲ ನಡೆಯುತ್ತಿತ್ತು. ಆದರೆ ಗೆಲುವಿನ ಖುಷಿಯಲ್ಲಿದ್ದ ಗುರೂಜಿಗೆ ಬಿಗ್ ಬಾಸ್ ಒಂದು ಸರ್ಪ್ರೈಜ್ ಕೂಡ ಕೊಟ್ಟರು. ಆರ್ಯವರ್ಧನ್ ಪುತ್ರಿಯ ವಾಯ್ಸ್ ನೋಟ್ ಕೂಡ ಕಳಿಸಿದ್ದರು.ಇದನ್ನ ಕೇಳಿ ಗುರೂಜಿ ಫುಲ್ ಖುಷ್ ಆಗಿಯೇ ಬಿಟ್ಟರು.


ಇದನ್ನೂ ಓದಿ: Katrina Kaif: ಕತ್ರಿನಾ ಕೈಫ್ ತಮಿಳುನಾಡಿನಲ್ಲಿ ಶಾಲೆ ಆರಂಭಿಸಿದ್ದಾರೆ, ಹೇಗಿದೆ ನೋಡಿ ಈ ಸ್ಕೂಲ್


ಗುರೂಜಿ ಕ್ಯಾಪ್ಟನ್ ಆಗಬೇಕು ಅನ್ನೋ ಆಸೆ ಈಡೇರಿದೆ. ಮನೆಯ ಸದಸ್ಯರು ಇವರ ಗೆಲುವನ್ನೇ ಡೌಟ್​ ನಿಂದ ನೋಡುತ್ತಿದ್ದಾರೆ. ಇದೆಲ್ಲದರ ಮಧ್ಯೆ ಗುರೂಜಿ ಅದು ಹೇಗೆ ಕ್ಯಾಪ್ಟನ್ಸಿ ಮಾಡ್ತಾರೋ ಏನೋ ನೋಡಬೇಕು.

First published: