ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 9 (Bigg Boss Season 9) ಮುಕ್ತಾಯಗೊಂಡಿದ್ದು, ರೂಪೇಶ್ ಶೆಟ್ಟಿ (Roopesh Shetty) ಬಿಗ್ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಗ್ರ್ಯಾಂಡ್ ಫಿನಾಲೆಯಲ್ಲಿ ರಾಕೇಶ್ ಹಾಗೂ ರೂಪೇಶ್ ನಡುವೆ ಬಿಗ್ ಫೈಟ್ ಏರ್ಪಟ್ಟಿತ್ತು ಈ ವೇಳೆ ಕಿಚ್ಚ ಸುದೀಪ್ (Sudeep) ಇಬ್ಬರ ಕೈ ಹಿಡಿದು ಸ್ಪರ್ಧಿಗಳಿಗೆ ಟೆನ್ಷನ್ ಕೊಟ್ಟು ಬಳಿಕ ರೂಪೇಶ್ ಶೆಟ್ಟಿಯನ್ನು ಬಿಗ್ ಬಾಸ್ ಸೀಸನ್ 9 ವಿನ್ನರ್ ಎಂದು ಘೋಷಣೆ ಮಾಡಿದ್ದಾರೆ. ಬಿಗ್ ಬಾಸ್ ಸೀಸನ್ 9 ವಿನ್ನರ್ ಕಿರೀಟ ರೂಪೇಶ್ ಶೆಟ್ಟಿ ಪಾಲಾಗಿದೆ.
ರೂಪೇಶ್ ಶೆಟ್ಟಿ ಬಿಗ್ ಬಾಸ್ ವಿನ್ನರ್
ತುಳು ಮತ್ತು ಕನ್ನಡ ಸಿನಿಮಾಗಳಲ್ಲಿ ರೂಪೇಶ್ ಶೆಟ್ಟಿ ಅಭಿನಯಿಸಿದ್ದಾರೆ. 'ಗಿರಿಗಿಟ್' ಚಿತ್ರದ ಮೂಲಕ ಸೂಪರ್ ಸಕ್ಸಸನ್ನು ಕಂಡಿದ್ದರು. ಈ ಮೂಲಕ ರೂಪೇಶ್ ಶೆಟ್ಟಿಗೆ ಬಿಗ್ ಬಾಸ್ಗೆ ಬರಲು ಅವಕಾಶ ಕೂಡ ಸಿಕ್ಕಿತ್ತು. ಒಟಿಟಿ ಮತ್ತು ಟಿವಿ ಬಿಗ್ಬಾಸ್ ಎರಡರಲ್ಲೂ ಸ್ಟ್ರಾಂಗ್ ಸ್ಪರ್ಧಿಯಾಗಿ ರೂಪೇಶ್ ಶೆಟ್ಟಿ ಗುರುತಿಸಿಕೊಂಡಿದ್ದರು. ಇನ್ನು ಟಾಪ್ 5 ಫೈನಲ್ ಲಿಸ್ಟ್ಗಳಲ್ಲಿ ರೂಪೇಶ್ ಶೆಟ್ಟಿ ಕೂಡ ಒಬ್ಬರಾಗಿದ್ದರು. ರಾಕೇಶ್ ಅಡಿಗ, ದೀಪಿಕಾ ದಾಸ್, ರಾಜಣ್ಣಗೆ ಭಾರೀ ಪೈಪೋಟಿ ಕೊಟ್ಟು ಇದೀಗ ರೂಪೇಶ್ ಬಿಗ್ಬಾಸ್ ಸೀಸನ್ 9ರ ವಿನ್ನರ್ ಆಗಿದ್ದಾರೆ.
ರಾಕೇಶ್ಗೆ ರನ್ನರ್ ಅಪ್ ಪಟ್ಟ
ಬಿಗ್ ಬಾಸ್ ಮನೆಯಲ್ಲಿ ಕೂಲ್ ಆಗಿ ಆಟವಾಡಿಕೊಂಡು ಬಂದಿದ್ದ ರಾಕೇಶ್ಗೆ ರನ್ನರ್ ಅಪ್ ಪಟ್ಟ ಸಿಕ್ಕಿದೆ. ನಟ ರಾಕೇಶ್ ಹಾಗೂ ರೂಪೇಶ್ ಇಬ್ಬರು ಓಟಿಟಿಯಿಂದ ಬಿಗ್ ಬಾಸ್ ಸೀಸನ್ 9ಗೆ ಪ್ರವೇಶ ಪಡೆದಿದ್ದರು. ರಾಕೇಶ್ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿ ಜನಪ್ರಿಯರಾಗಿದ್ದಾರೆ.
ನಟ ಮತ್ತು ಗಾಯಕರಾಗರಿರು ರಾಕೇಶ್, ಜೋಶ್ ಚಿತ್ರದಿಂದ ನಟನಾಗಿ ಎಂಟ್ರಿ ಕೊಟ್ಟರು ನಂತರ ಮನಸಾಲಜಿ, ಮಂದಹಾಸ ಮುಂತಾದ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಕೆಲ ಚಿತ್ರಗಳಲ್ಲಿ ಖಳನಾಯಕನಾಗಿಯೂ ನಟಿಸಿರುವ ರಾಕೇಶ್ ಕೋಟಿಗೊಂದು ಲವ್ ಸ್ಟೋರಿ ಚಿತ್ರದಲ್ಲಿ ಹಿನ್ನಲೆ ಗಾಯಕನಾಗಿ ಒಂದು ಗೀತೆಯನ್ನು ಹಾಡಿದ್ದರು. ರ್ಯಾಪ್ ಗೀತೆಗಳನ್ನು ಹಾಡಿ ಗಮನ ಸೆಳೆದಿದ್ದಾರೆ.
ಸೆಕೆಂಡ್ ರನ್ನರ್ ಅಪ್ ದೀಪಿಕಾ ದಾಸ್
ಕೊನೆತನಕ ಫೈಟ್ ನೀಡಿದ್ದ ದೀಪಿಕಾ ದಾಸ್ ಅವರು ಎಲಿಮಿನೇಟ್ ಆಗಿದ್ರು. ಟ್ರೋಫಿ ಪಡೆಯಬೇಕು ಎಂಬ ಅವರ ಆಸೆ ಈಡೇರಿಲ್ಲ. ನಾನು ಎರಡನೆಯವಳು ನಾನಾಗಬೇಕು’ ಎಂದು ದೀಪಿಕಾ ದಾಸ್ ಹೇಳಿದ್ದರು. ಆದರೆ ಈ ಕನಸು ಭಗ್ನ ಆಗಿದೆ ಎಂದು ದೀಪಿಕಾ ದಾಸ್ ಹೇಳಿಕೊಂಡಿದ್ದಾರೆ.
ಈ ಬಾರಿ ದಿವ್ಯಾ ಉರುಡುಗ, ದೀಪಿಕಾ ದಾಸ್ ಇಬ್ಬರು ಫಿನಾಲೆ ತನಕ ಬಂದರು. ಇಬ್ಬರಲ್ಲಿ ಒಬ್ಬರಾದರೂ ಟ್ರೋಫಿ ಗೆಲ್ಲಲಿ ಎಂದು ಅನೇಕ ಅಭಿಮಾನಿಗಳು ಬಯಸಿದ್ದುಂಟು. ಆದರೆ ಅದು ಸಾಧ್ಯವಾಗಲಿಲ್ಲ. ದೀಪಿಕಾ ದಾಸ್ ಅವರು 2ನೇ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಬಿಗ್ ಬಾಸ್ ಮನೆಯನ್ನು ಹೋದರು.
ಇದನ್ನೂ ಓದಿ: BBK Grand Finale: ದಿವ್ಯಾ ಉರುಡುಗ ಮೇಲೆ ಗುರೂಜಿ, ಪ್ರಶಾಂತ್ ಮಾಡಿದ ಆರೋಪ ಏನು?
ಸೀರಿಯಲ್ ಮೂಲಕ ದೀಪಿಕಾ ಫೇಮಸ್
ದೀಪಿಕಾ ದಾಸ್ ಅವರು ಕಿರುತೆರೆ ಧಾರಾವಾಹಿಗಳ ಜಗತ್ತಿನಲ್ಲಿ ಜನಪ್ರಿಯರಾದ್ರು. ಹಾಗಾಗಿ ಅವರಿಗೆ ಫ್ಯಾನ್ ಫಾಲೋಯಿಂಗ್ ಜಾಸ್ತಿ ಇದೆ. ಬಿಗ್ ಬಾಸ್ನಲ್ಲಿ ಹೆಚ್ಚಿನ ವೋಟ್ ಪಡೆಯಲು ಇದು ಸಾಧ್ಯವಾಯ್ತು. ಆದರೆ ಅವರು ಒಮ್ಮೆ ಎಲಿಮಿನೇಟ್ ಆಗಿ, ನಂತರ ಮತ್ತೆ ವೈಲ್ಡ್ ಕಾರ್ಡ್ ಮೂಲಕ ರೀ-ಎಂಟ್ರಿ ಪಡೆದಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ