Bigg Boss 8: ವಾರದ ಕತೆ ಕಿಚ್ಚನ ಜೊತೆ: 38 ಗಂಟೆಯ ಕಾದಾಟದಲ್ಲಿ ಗೆದ್ದಿದ್ದು ಯಾರು..?

ಮೊದಲಿಗೆ ಚೆಂಡಿನಾಟ ಆಡಿದ್ದ ಸ್ಪರ್ಧಿಗಳಿಗೆ ನಂತರದಲ್ಲಿ ಬಿಗ್ ಬಾಸ್​ ಮನೆಯಲ್ಲಿ ಒಂದು ಕಡೆ ತಳ್ಳು ಬಂಡಿ ಟಾಸ್ಕ್​ ಮತ್ತೊಂದು ಕಡೆ ಕುರ್ಚಿ ಪಾಲಿಟಿಕ್ಸ್​ ಟಾಸ್ಕ್​ ನೀಡಲಾಯಿತು. ತಳ್ಳು ಬಂಡಿ ಟಾಸ್ಕ್​ನಲ್ಲಿ ಚಾಲೆಂಜರ್ಸ್​ ಗೆದ್ದಿದ್ದಾರೆ. ಇನ್ನು ಕುರ್ಚಿ ಪಾಲಿಟಿಕ್ಸ್​ ಟಾಸ್ಕ್​ ಇನ್ನೂ ಮುಂದುವರೆಯುತ್ತಿದೆ.

ವಾರದ ಕತೆ ಕಿಚ್ಚನ ಜೊತೆ

ವಾರದ ಕತೆ ಕಿಚ್ಚನ ಜೊತೆ

  • Share this:
ಬಿಗ್ ಬಾಸ್​ ಸೀಸನ್​ 8ರ ಸೆಕೆಂಡ್​ ಇನ್ನಿಂಗ್ಸ್​ ಆರಂಭವಾಗಿ ಮೂರು ದಿನವಾಗಿದೆ. ಸ್ಪರ್ಧಿಗಳು ಬಿಗ್​ ಬಾಸ್​ ಮನೆಗೆ ಕಾಲಿಡುವ ಮುನ್ನ ಹಾಗೂ ಇಟ್ಟ ತಕ್ಷಣದಿಂದಲೇ ಟಾಸ್ಕ್​ ಆರಂಭವಾಗಿ ಹೋಗಿದೆ. ಮನೆಯಲ್ಲಿ ಮೊದಲ ದಿನವೇ ಎರಡು ಗುಂಪುಗಳಾಗಿವೆ. ಹೌದು ಟಾಸ್ಕ್​ ಕಾರಣಕ್ಕೆ ಬಿಗ್ ಬಾಸ್​ ಮನೆಯಲ್ಲಿ ಪುಟ್ಟ ಟಾಸ್ಕ್​ ಕೊಟ್ಟು ಎರಡು ತಂಡಗಳನ್ನು ಮಾಡಿದ್ದಾರೆ. ಅದರಲ್ಲಿ ಬಿಗ್ ಬಾಸ್​ ಕೊಟ್ಟ ಪುಟ್ಟ ಟಾಸ್ಕ್​ಗಳಲ್ಲಿ ಗೆದ್ದವರದ್ದು ಲೀಡರ್ಸ್​ ತಂಡ ಹಾಗೂ ಸೋತವರದ್ದು ಚಾಲೆಂಜರ್ಸ್​ ತಂಡ. ದಿವ್ಯಾ ಸುರೇಶ್​ ಬಿಂದಿ ಇಡುವ ಟಾಸ್ಕ್​ನಲ್ಲಿ ಗೆದ್ದು ಲೀಡರ್ಸ್​ ತಂಡ ನಾಯಕಿಯಾಗಿದ್ದಾರೆ. ದಿವ್ಯಾ ಉರುಡುಗ ಸೋತು ಚಾಲೆಂಜರ್ಸ್​ ತಂಡದ ನಾಯಕಿಯಾಗಿದ್ದಾರೆ. ಈ ತಂಡಗಳ ನಡುವೆ ಕಳೆದ ಎರಡು ದಿನಗಳಿಂದ ನಾನಾ ರೀತಿಯ ಟಾಸ್ಕ್​ಗಳು ನಡೆಯುತ್ತಿದೆ. 

ಮೊದಲಿಗೆ ಚೆಂಡಿನಾಟ ಆಡಿದ್ದ ಸ್ಪರ್ಧಿಗಳಿಗೆ ನಂತರದಲ್ಲಿ ಬಿಗ್ ಬಾಸ್​ ಮನೆಯಲ್ಲಿ ಒಂದು ಕಡೆ ತಳ್ಳು ಬಂಡಿ ಟಾಸ್ಕ್​ ಮತ್ತೊಂದು ಕಡೆ ಕುರ್ಚಿ ಪಾಲಿಟಿಕ್ಸ್​ ಟಾಸ್ಕ್​ ನೀಡಲಾಯಿತು. ತಳ್ಳು ಬಂಡಿ ಟಾಸ್ಕ್​ನಲ್ಲಿ ಚಾಲೆಂಜರ್ಸ್​ ಗೆದ್ದಿದ್ದಾರೆ. ಇನ್ನು ಕುರ್ಚಿ ಪಾಲಿಟಿಕ್ಸ್​ ಟಾಸ್ಕ್​ ಇನ್ನೂ ಮುಂದುವರೆಯುತ್ತಿದೆ.
ಕುರ್ಚಿ ಪಾಲಿಟಿಕ್ಸ್​ನಲ್ಲಿ ಕುಳಿತಿರುವ ಸ್ಪರ್ಧಿಗಳು ಯಾವುದೇ ಕಾರಣಕ್ಕೂ ಕುರ್ಚಿ ಬಿಟ್ಟು ಏಳುವಂತಿಲ್ಲ. ಊಟ-ತಿಂಡಿ, ಪಾನೀಯಗಳು ಕೂತ ಸ್ಥಳಕ್ಕೆ ಬರುತ್ತವೆ. ಆದರೆ ಸ್ಪರ್ಧಿಗಳು ಏನೇ ಆದರೂ ಅಲ್ಲಿಂದ ಏಳುವಂತಿಲ್ಲ. ಶಾಚಾಲಯ ಬಳಸಬೇಕೆಂದರೂ ಸ್ಪರ್ಧಿಗಳು ಗೇಮ್​ ಬಿಟ್ಟು ಸೋತೆ ಎಂದು ಹೇಳಿ ಹೊರ ಹೋಗಬೇಕು. ಅದು ಆಟದ ನಿಯಮ.

ಇದನ್ನೂ ಓದಿ: Bro Gowda: ಪ್ರಿಯಾಂಕಾರನ್ನು ಹಣ್ಣಿಗೆ ಹೋಲಿಸಿದ ಬ್ರೊ ಗೌಡ​: ಸ್ಪರ್ಧಿಗಳಿಂದ ಶಮಂತ್​ಗೆ ಸಿಕ್ತು ಹೊಸ ಹೆಸರು..!

ಕಳೆದ 28 ಗಂಟೆಗಳಿಂದ ಈ ಕುರ್ಚಿ ಟಾಸ್ಕ್​ ನಡೆಯುತ್ತಿದ್ದು, ಇರಲ್ಲಿದ್ದ ವೈಷ್ಣವಿ, ಬ್ರೊ ಗೌಡ, ಪ್ರಿಯಾಂಕಾ ತಿಮ್ಮೇಶ್​ ಹಾಗೂ ನಿಧಿ ಸುಬ್ಬಯ್ಯ ಈಗಾಗಲೇ ಗೇಮ್​ನಿಂದ ಹೊರ ಬಂದಿದ್ದಾರೆ. ಈಗ ಈ ಟಾಸ್ಕ್​ನಲ್ಲಿ ಉಳಿದಿರುವುದು ಪ್ರಶಾಂತ್​ ಸಂಬರಗಿ ಹಾಗೂ ಮಂಜು ಪಾವಗಡ.

ಮಂಜು-ಪ್ರಶಾಂತ್​ ನಡುವಿನ 38 ಗಂಟೆಯ ಕಾದಾಟದಲ್ಲಿ ಗೆಲ್ಲೋದು ಯಾರು..?

ನಿನ್ನೆ ರಾತ್ರಿಗೆ ಈ ಕುರ್ಚಿ ಪಾಲಿಟಿಕ್ಸ್​ ಆಟ ಆರಮಭವಾಗಿ 27 ಗಂಟೆಗಳು ಕಳೆದಿವೆ. ಮೊದಲು ನಿಧಿ, ನಂತರ ವೈಷ್ಣವಿ, ಬ್ರೋ ಗೌಡ ಹಾಗೂ ನಿನ್ನೆ ಮಧ್ಯರಾತ್ರಿ ಪ್ರಿಯಾಂಕಾ ತಿಮ್ಮೇಶ್​ ಕುರ್ಚಿ ತ್ಯಜಿಸಿದ್ದಾರೆ. ಈಗ ಉಳಿದಿರುವುದು ಮಂಜು ಪಾವಗಡ ಹಾಗೂ ಪ್ರಶಾಂತ್​ ಸಂಬರಗಿ. ಇವರ ನಡುವಿನ  ಆಟದಲ್ಲಿ ಯಾರು ಗೆಲ್ಲುತ್ತಾರೆ ಅನ್ನೋದು ವೀಕ್ಷಕರಲ್ಲಿ ಕುತೂಹಲ ಕೆರಳಿಸಿದೆ. ಒಂದೇ ಚೇರ್​ನಲ್ಲಿ ಕುಳಿತ ಕಡೆ ಹಾಗೇ ಇರುವುದು ಹೇಳುವಷ್ಟು ಸುಲಭವಲ್ಲ. ಈ ಟಾಸ್ಕ್​ ಯಾವ ರೀತಿ ಕೊನೆಗೊಳ್ಳಲಿದೆ ಹಾಗೂ ಯಾರು ಗೆಲ್ಲುತ್ತಾರೆ ಅನ್ನೋದು ಇಂದು ರಾತ್ರಿಯ ವಾರದ ಕತೆ ಕಿಚ್ಚನ ಜೊತೆಯ ಸಂಚಿಕೆಯಲ್ಲಿ ತಿಳಿಯಲಿದೆ.

ಇನ್ನು ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಮೊದಲ ಎಲಿಕ್ಷನ್​ ಈ ವಾರ ನಡೆಯಲಿದೆ. ಅದು ಇಂಧೇ ಆಗಲಿದೆಯಾ ಅಥವಾ ನಾಳೆನಾ ಅನ್ನೋದು ಇನ್ನೂ ಖಚಿತವಾಗಿಲ್ಲ. ವಾರದ ಕತೆ ಹೇಳಲು ಬರುವ ಕಿಚ್ಚ ಸುದೀಪ್​ ಈ ಆಟಕ್ಕೆ ಮತ್ತಾವ ಟ್ವಿಸ್ಟ್​ ಕೊಡಲಿದ್ದಾರೋ ಅಂತ ಅಭಿಮಾನಿಗಳು ಕಾಯುತ್ತಿದ್ದಾರೆ.

ಇದನ್ನೂ ಓದಿ: Anushka Sharma: ಮಗುವಾದ ನಂತರದ ಕೂದಲುದುರುವಿಕೆಗೆ ಪರಿಹಾರ ಕಂಡುಕೊಂಡ ಅನುಷ್ಕಾ ಶರ್ಮಾ: ಸಲಹೆ ಕೊಟ್ಟಿದ್ದು ಸೋನಮ್ ಕಪೂರ್..!

ಇನ್ನು ಕ್ಯಾಪ್ಟನ್ಸಿ ಟಾಸ್ಕ್​ಗಾಗಿ ನಡೆಯುತ್ತಿರುವ ಕಾದಾಟದಲ್ಲಿ ಯಾವ ತಂಡ ಅರ್ಹತೆ ಪಡೆಯಲಿದೆ ಅನ್ನೋದು ಇಂದು ನಿರ್ಧಾರವಾಗಲಿದೆ. ಇದರ ನಡುವೆ ಬಿಗ್ ಬಾಸ್​ ಮನೆಯಲ್ಲಿ ಪ್ರತಿಸ್ಪರ್ಧಿಗಳ ನಡುವೆ ಜಗಳ, ವಾದ-ವಿವಾದ ಹಾಗೂ ಅಸಮಾಧಾನ ಕಾಣಿಸಿಕೊಳ್ಳುತ್ತಿದೆ. ಮೊದಲ ದಿನ ನಡೆದ ನಾಮಿನೇಶನ್​ ಪ್ರಕ್ರಿಯೆ ಸ್ಪರ್ಧಿಗಳ ನಡುವೆ ಇದ್ದ ಬೆಂಕಿಗೆ ತುಪ್ಪ ಸುರಿದಿದೆ.
Published by:Anitha E
First published: