Bigg Boss 8: ಅರವಿಂದ್​ಗಾಗಿ ಆಟವನ್ನು ಬಿಡುವುದಿಲ್ಲ ಎಂದ ದಿವ್ಯಾ ಉರುಡುಗ: ಅರವಿಂದ್​ ಪ್ರತಿಕ್ರಿಯೆ ಬೇರೆನೇ ಆಗಿತ್ತು...!

ಅರವಿಂದ್ ಹಾಗೂ ದಿವ್ಯಾ ಉರುಡುಗ ಅವರಲ್ಲಿ ಬಿಗ್ ಬಾಸ್​ ಮನೆಯಲ್ಲಿ ಇಬ್ಬರಲ್ಲಿ ಒಬ್ಬರು ಮಾತ್ರ ಇರಬಹುದು ಎಂದು ಹೇಳುವ ಪರಿಸ್ಥಿತಿ ಬಂದಾಗ ನಿರ್ಧಾರವನ್ನು ನಿಮಗೆ ಬಿಡಲಾಗುತ್ತದೆ ಎಂದು ಕಿಚ್ಚ ಸುದೀಪ್​ ಅರ್ಮಿಯಾ ಅವರನ್ನು ಕೇಳುತ್ತಾರೆ. ಆದ ದಿವ್ಯಾ ನಾನು ಬಿಗ್ ಬಾಸ್​ ಮನೆಯಲ್ಲಿ ಉಳಿದುಕೊಳ್ಳುತ್ತೇನೆ ಎಂದಿದ್ದಾರೆ. ಆದರೆ ಅರವಿಂದ್ ಅವರ ಉತ್ತರ ಬೇರೆಯದ್ದೇ ಆಗಿತ್ತು.

ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ ಪಿ

ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ ಪಿ

  • Share this:
ಬಿಗ್ ಬಾಸ್​ 8ರ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಒಂದು ವಾರದ ಕತೆ ಕಿಚ್ಚನ ಜೊತೆ ಸಂಚಿಕೆ ನಿಜಕ್ಕೂ ಸಖತ್ ಟ್ವಿಸ್ಟ್​ನಿಂದ ಕೂಡಿತ್ತು. ಈ ಬಿಗ್ ಬಾಸ್ ಮನೆಯಲ್ಲಿ ತುಂಬಾ ಆತ್ಮೀಯರಾಗಿರುವ ಬೈಕರ್​ ಅರವಿಂದ್ ಕೆ ಪಿ ಹಾಗೂ ದಿವ್ಯಾ ಉರುಡುಗ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ಜೋಡಿ ಅಭಿಮಾನಿ ವಲಯದಲ್ಲಿ ಅರ್ವಿಯಾ ಎಂದೇ ಖ್ಯಾರಾಗಿದ್ದಾರೆ. ಟಾಸ್ಕ್​ ವಿಷಯ್ಕಕೆ ಬಂದಾಗ ಇಬ್ಬರೂ ಅವರರವರ ಕೈಲಾದಷ್ಟು ಪ್ರಯತ್ನ ಪಡುತ್ತಾರೆ. ಇನ್ನು ದಿವ್ಯಾ ಉರುಡುಗ ಈ ಬಿಗ್ ಬಾಸ್​ ಮನೆಯಿಂದ ಅನಾರೋಗ್ಯದ ಕಾರಣಕ್ಕೆ ಹೊರಗೆ ಹೋದಾಗ ಅರವಿಂದ್​ ಕಣ್ಣೀರಿಟ್ಟಿದ್ದರು. ಇವರ ನಡುವಿನ ಸ್ನೇಹ ಸಂಬಂಧಕ್ಕೆ ಸಾಕಷ್ಟು ಮಂದಿ ಅಭಿಮಾನಿಗಳಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರ ಹೆಸರಿನ ಪೇಜ್​ಗಳು ಹುಟ್ಟಿಕೊಂಡಿವೆ. 

ಬಿಗ್ ಬಾಸ್​ 8ರ ಸೆಕೆಂಡ್​ ಇನ್ನಿಂಗ್ಸ್​ ಆರಂಭವಾಗಿದ್ದು, ಪ್ರತಿ ವಾರಾಂತ್ಯಕ್ಕೆ ಸ್ಪರ್ಧಿಗಳು ಸ್ಟೈಲಿಶ್​ ಆಗಿ ರೆಡಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆ. ವಾರದ ಕತೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ವಾರಾಂತ್ಯದಲ್ಲಿ ಸ್ಪರ್ಧಿಗಳು ಸುದೀಪ್​ ಅವರೊಂದಿಗೆ ಮಾತುಕತೆ ನಡೆಸುತ್ತಾರೆ.

Manju Pavagada became Captain, captaincy task, Bigg Boss Second innings, Bigg Boss Second innings from June 23rd, colors kannada, Bigg Boss, ಬುಧವಾರದಿಂದ ಬಿಗ್​ ಬಾಸ್ 8ರ 2ನೇ ಇನ್ನಿಂಗ್ಸ್ ಆರಂಭ, bigg boss kannada, Bigg Boss Kannada 8, Divya Suresh, Sandalwood, Rowdy Baby, Divya Suresh Kissing video, Lip Lock Video, Divya Suresh hot photos, ದಿವ್ಯಾ ಸುರೇಶ್​ ಹಾಟ್​ ಫೋಟೋಗಳು, ದಿವ್ಯಾ ಸುರೇಶ್​ ಕಿಸ್ಸಿಂಗ್​ ವಿಡಿಯೋ, ರೌಡಿ ಬೇಬಿ ಕನ್ನಡ ಸಿನಿಮಾ, Bigg Boss 8 Kannada Second Innings Manju Pavagada is the first captain ae
ವಾರದ ಕತೆ ಕಿಚ್ಚನ ಜೊತೆ


ಒಬ್ಬರೇ ವಿನ್ಯಾಸಕರ ಬಳಿ ಡ್ರೆಸ್​ ಡಿಸೈನ್​ ಮಾಡಿಸುತ್ತಿರುವ ಅರ್ವಿಯಾ

ಈ ವಾರವೂ ಸಹ ವಾರದ ಕತೆ ಕಿಚ್ಚನ ಜೊತೆ ನಡೆಯಿತು. ಈ ವೇಳೆ ಒಂದು ಆಸಕ್ತಿಕರ ವಿಷಯವೊಂದು ಬಹಿರಂಗವಾಗಿದೆ. ಅರವಿಂದ್​ ಹಾಗೂ ದಿವ್ಯಾ ಉರುಡುಗ ಇಬ್ಬರೂ ಒಬ್ಬರೇ ವಸ್ತ್ರ ವಿನ್ಯಾಸಕರ ಬಳಿ ತಮ್ಮ ಡ್ರೆಸ್​ಗಳ ಡಿಸೈನ್ ಮಾಡಿಸಿದ್ದಾರಂತೆ. ಈ ಬಗ್ಗೆ ಸುದೀಪ್​ ಅವರೇ ಅರ್ವಿಯಾ ಬಳಿ ಕೇಳಿದ್ದಾರೆ. ಇಲ್ಲಿಯವರೆಗೂ ಈ ವಿಷಯ ಯಾರಿಗೂ ತಿಳಿದಿರಲಿಲ್ಲ. ಇನ್ನು ಈ ವಾರ ಯಾರದ್ದು ಬೆಸ್ಟ್​ ಡ್ರೆಸ್ಡ್​ ಅಂತ ಕೇಳಿದ್ದಕ್ಕೆ ದಿವ್ಯಾ ಉರುಡುಗ ಅರವಿಂದ್​ ಹಾಗೂ ಅರವಿಂದ್​ ದಿವ್ಯಾ ಉರುಡುಗ ಅವರ ಹೆಸರನ್ನೇ ತೆಗೆದುಕೊಂಡಿದ್ದಾರೆ.

ಕಿಚ್ಚ ಕೇಳಿದ ಆ ಒಂದು ಪ್ರಶ್ನೆ ಅರವಿಂದ್-ದಿವ್ಯಾ ನಡುವಿನ ಸ್ನೇಹದಲ್ಲಿ ಬಿರುಕು ಮೂಡಿಸುತ್ತಾ..!

ಬಿಗ್ ಬಾಸ್​ 8ರ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ದಿವ್ಯಾ ಉರುಡುಗ ಹಾಗೂ ಅರವಿಂದ್​ ಉಳಿದುಕೊಂಡರೆ, ಇಬ್ಬರಲ್ಲಿ ಯಾರಾದರೂ ಒಬ್ಬರು ಉಳಿದುಕೊಂಡು ಒಬ್ಬರು ಮನೆಗೆ ಹೋಗುವಂತೆ ಹೇಳಿ, ನಿರ್ಧಾರ ನಿಮಗೆ ಬಿಟ್ಟರೆ ನಿಮ್ಮ ನಿರ್ಧಾರ ಏನಿರುತ್ತದೆ ಅಂತ ಸುದೀಪ್​ ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಉತ್ತರಿಸಲು ಹಿಂಜರಿಯುವ ದಿವ್ಯಾ ಉರುಡುಗ, ಸ್ವಲ್ಪ ಸಮಯದ ನಂತರ ನಾನೇ ಉಳಿದುಕೊಂಡು ಅರವಿಂದ್​ ಅವರನ್ನು ಹೋಗಲು ಹೇಳುತ್ತೇನೆ ಎಂದಿದ್ದಾರೆ. ಆದರೆ ಅರವಿಂದ್ ಮಾತ್ರ ದಿವ್ಯಾ ಅವರನ್ನು ಬಿಗ್ ಬಾಸ್​ ಮನೆಯಲ್ಲಿ ಇರುವಂತೆ ತಾನೇ ಹೊರಗೆ ಹೋಗುವುದಾಗಿ ಹೇಳಿದ್ದಾರೆ.
ಆಟದ ವಿಷಯಕ್ಕೆ ಬಂದಾಗ ಎದುರಾಳಿಯಾಗಿ ಅರವಿಂದ್​ ಇದ್ದರೆ ಅವರನ್ನು ತಾನು ಪ್ರತಿಸ್ಪರ್ಧಿಯಾಗಿಯೇ ನೋಡುತ್ತೇನೆ ಎಂದಿದ್ದಾರೆ ದಿವ್ಯಾ ಉರುಡುಗ.ಇನ್ನು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅರವಿಂದ್​ ನಾನು ಸೋಲುತ್ತೇನೆ, ಆದರೆ ಆಟ ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಮತ್ತೆ ಹುಡುಗಿಯರ ಕೈ ತಪ್ಪಿದ ಕ್ಯಾಪ್ಟನ್ಸಿ ಟಾಸ್ಕ್: ಈ ಸಲದ ಮೊದಲ ಕ್ಯಾಪ್ಟನ್​ ಮಂಜು ಪಾವಗಡ

ಇದೇ ಪ್ರಶ್ನೆಯನ್ನು ಅರವಿಂದ್ ಕೆ ಪಿ ಅವರಿಗೆ ಕೇಳಿದಾಗ ಅವರು ಯೋಚಿಸದೆಯೇ ದಿವ್ಯಾ ಬಿಗ್ ಬಾಸ್​ ಮನೆಯಲ್ಲೇ ಇರಲಿ, ನಾನು ಹೊರಗೆ ಹೋಗುತ್ತೇನೆ ಎಂದಿದ್ದಾರೆ. ಸುದೀಪ್​ ಅವರ ಪ್ರಶ್ನೆಗೆ ದಿವ್ಯಾ ಉರುಡುಗ ಕೊಟ್ಟ ಉತ್ತರದಿಂದ ಈ ಜೋಡಿಯ ನಡುವಿನ ಸಂಬಂಧದಲ್ಲಿ ಏನಾದರೂ ಬದಲಾವಣೆ ಕಾಣಬಹುದಾ ಅನ್ನೋ ಅನುಮಾನ ಈಗ ಕೆಲವರನ್ನು ಕಾಡಲಾರಂಭಿಸಿದೆ.
Published by:Anitha E
First published: