HOME » NEWS » Entertainment » BIGG BOSS 8 SECOND INNINGS AFTER ENTERING THE HOUSE DIVYA SURESH AND DIVYA URUDUGA STARTED FIGHTING AE

BBK8: ಬಿಗ್​ ಬಾಸ್ ಮನೆಯೊಳಗೆ ಕಾಲಿಡುತ್ತಿದ್ದಂತೆಯೇ ಆಟ ಶುರು: ಕೈ ಕೈ ಮಿಲಾಯಿಸಿದ ದಿವ್ಯಾ ಉರುಡುಗ-ದಿವ್ಯಾ ಸುರೇಶ್​..!

Bigg Boss 8 Kannada Second Innings: ಬಿಗ್​ ಬಾಸ್​ 8 ಸೆಕೆಂಡ್​ ಇನ್ನಿಂಗ್ಸ್​ನ ಕೆಲವು ಪ್ರೋಮೋಗಳು ರಿಲೀಸ್​ ಆಗಿದ್ದು, ಅದರಲ್ಲಿ ಒಂದ ಪ್ರೋಮೋದಲ್ಲಿ ದಿವ್ಯಾ ಸುರೇಶ್​ ಹಾಗೂ ದಿವ್ಯಾ ಉರುಡುಗ ಕೈ ಕೈ ಮಿಲಾಯಿಸಿರುವುದು ಕಾಣಿಸುತ್ತದೆ.

Anitha E | news18-kannada
Updated:June 23, 2021, 8:59 AM IST
BBK8: ಬಿಗ್​ ಬಾಸ್ ಮನೆಯೊಳಗೆ ಕಾಲಿಡುತ್ತಿದ್ದಂತೆಯೇ ಆಟ ಶುರು: ಕೈ ಕೈ ಮಿಲಾಯಿಸಿದ ದಿವ್ಯಾ ಉರುಡುಗ-ದಿವ್ಯಾ ಸುರೇಶ್​..!
ಬಿಗ್​ ಬಾಸ್​ ಮನೆಯಲ್ಲಿ ಕೈ ಕೈ ಮಿಲಾಯಿಸಿದ ದಿವ್ಯಾ ಸುರೇಶ್​-ದಿವ್ಯಾ ಉರುಡುಗ
  • Share this:
ಬಿಗ್​ ಬಾಸ್​ ಕನ್ನಡ ಸೀಸನ್​ 8ಕ್ಕೆ ಅದ್ದೂರಿಯಾಗಿ ಚಾಲನೆ ಸಿಕ್ಕಿದೆ. ನಿನ್ನೆಯೇ ಬಿಗ್​ ಬಾಸ್​ 8ರ ಸೆಕೆಂಡ್​ ಇನ್ನಿಂಗ್ಸ್​ ಮೊದಲ ಮಹಾ ಸಂಚಿಕೆಯ ಚಿತ್ರೀಕರಣ ನಡೆದಿದೆ. 12 ಮಂದಿ ಸ್ಪರ್ಧಿಗಳು ಈಗಾಗಲೇ ಮನೆಗೆ ಕಾಲಿಟ್ಟಿದ್ದಾರೆ. ಬಿಗ್ ಕಾರ್ಯಕ್ರಮದಲ್ಲಿ ಯಾವಾಗೂ ಸ್ಪರ್ಧಿಗಳನ್ನು ವೇದಿಕೆಗೆ ಕರೆದು ಸುದೀಪ್​ ಅವರು ಮಾತನಾಡಿಸುವಂತೆಯೇ ನಿನ್ನೆಯೂ ಸ್ಪರ್ಧಿಗಳು ಕಿಚ್ಚ ಸುದೀಪ್​ ಅವರನ್ನು ಬಿಗ್​ ಬಾಸ್​ ಕಾರ್ಯಕ್ರಮದ ವೇದಿಕೆಯಲ್ಲಿ ಭೇಟಿ ಮಾಡಿದ್ದಾರೆ. ನಂತರ ಕಿಚ್ಚ ಸುದೀಪ್​ ಅವರು ಕೇಳಿರುವ ಟ್ರಿಕಿ ಹಾಗೂ ಕುತೂಹಲ ಕೆರಳಿಸುವ ಪ್ರಶ್ನೆಗಳಿಗೆ ಉತ್ತರಿಸಿರುವ ಸ್ಪರ್ಧಿಗಳು ಮತ್ತೆ ಬಿಗ್​ ಬಾಸ್​ ಮನೆಗೆ ಎಂಟ್ಟಿ ಕೊಟ್ಟಿದ್ದಾರೆ. ನಿನ್ನೆಯೇ ಮೊದಲ ಮಹಾ ಸಂಚಿಕೆಯ ಚಿತ್ರೀಕರಣ ನಡೆದಿದೆ ಎಂದು ಕಿಚ್ಚ ಸುದೀಪ್​ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್​ನಿಂದ ತಿಳಿಯುತ್ತದೆ. ಸುದೀಪ್​ ಬಿಗ್​ ಬಾಸ್​ ವೇದಿಕೆ ಮೇಲೆ ಕಾಲಿಡುವ ಮುನ್ನ ತಮ್ಮ ಒಂದು ಫೋಟೋವನ್ನು ಹಚಿಕೊಂಡು ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ. 

ಬಿಗ್​ ಬಾಸ್​ ಮನೆಯಲ್ಲಿರುವ ಮುಖ್ಯ ದ್ವಾರದ ಮೂಲಕ ಸ್ಪರ್ಧಿಗಳು ಸದಾ ಒಳಗೆ ಹೋಗುವುದು ಹಾಗೂ ಎಲಿಮಿನೇಟ್​ ಆದಾಗ ಹೊರಗೆ ಬರುವುದು ಮಾಡುತ್ತಿದ್ದರು. ಆದರೆ ಈ ಸಲ ಸ್ಪರ್ಧಿಗಳನ್ನು ಬೇರೆ ಬೇರೆ ದ್ವಾರಗಳ ಮೂಲಕ ಮನೆ ಒಳಗೆ ಕಳುಹಿಸಲಾಗಿದೆ.





ಬಿಗ್​ ಬಾಸ್​ ಮನೆ ಮತ್ತೆ ಜೀವಂತವಾಗಿದೆ ಎಂದು ನಿನ್ನೆಯೇ ಸ್ಪರ್ಧಿಗಳು ಮನೆಯ ಒಳಗೆ ಹೋಗಿರುವ ಫೋಟೋವನ್ನು ಕಲರ್ಸ್​ ಕನ್ನಡದ ಬ್ಯುಸಿನೆಸ್​ ಹೆಡ್ ಪರಮೇಶ್ವರ ಗುಂಡ್ಕಲ್​ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.




ಕಿಚ್ಚ ಸುದೀಪ್ ಅವರನ್ನು ಬಿಗ್​ ಬಾಸ್​ ವೇದಿಕೆ ಮೇಲೆ ಭೇಟಿಯಾಗಿರುವ ಸ್ಪರ್ಧಿಗಳು ಸಖತ್​ ಡಿಫರೆಂಟ್​ ಆಗಿ ಕಾಣಿಸುವುದರೊಂದಿಗೆ ತಮ್ಮದೇ ಆದ ಗೇಮ್​ ಪ್ಲಾನ್​ ಜತೆ ಬಂದಿರುವುದು ತಿಳಿಯುತ್ತದೆ. ಇನ್ನು ಈಗಾಗಲೇ ಮನೆಯಿಂದ ಹೊರ ಹೋಗಿ, ಈ ಹಿಂದೆ ನಡೆದಿರುವ ಎಪಿಸೋಡ್​ಗಳನ್ನು ನೋಡಿರುವ ಸ್ಪರ್ಧಿಗಳು ಯಾರು ನಿಜವಾದ ಸ್ನೇಹಿತರು ಹಾಗೂ ಏನೆಲ್ಲ ಹಿಂದೆ ಮಾತನಾಡಿದ್ದಾರೆ ಅಂತ ತಿಳಿದುಕೊಂಡು ಮನೆಗೆ ಬಂದಿದ್ದಾರೆ. ಹೀಗಿರುವಾಗ ಇನ್ನು ಯಾರು ಯಾರ ಸ್ನೇಹಿತರು, ಯಾರು ಕೇವಲ ಪರಿಚಯಸ್ಥರು ಅನ್ನೋದು ಇನ್ನು ಮುಂದೆ ತಿಳಿಯಲಿದೆ.

ಇದನ್ನೂಓದಿ: ಬಿಗ್​ ಬಾಸ್​ ವೇದಿಕೆ ಮೇಲೆ ಕಾಣಿಸಿಕೊಂಡ ಸುದೀಪ್​: ಖುಷಿಯಿಂದ ಕಮೆಂಟ್​​ ಮಾಡಿದ ಬಾಲಿವುಡ್​ ನಟಿ ..!

ಈ ಹಿಂದೆ ಬೆಸ್ಟ್​ ಫ್ರೆಂಡ್​ ಎಂದುಕೊಂಡಿದ್ದವರು ಈಗ ಅದೇ ರೀತಿ ಉಳಿಯಲು ಸಾಧ್ಯವೇ..?ಅಥವಾ ಎಲ್ಲವನ್ನೂ ಮರೆತು ಈ ಹಿಂದಿಗಿಂತ ಇನ್ನೂ ಒಳ್ಳೆಯ ಭಾಂದವ್ಯ ಬೆಳೆಯುತ್ತಾ ಅನ್ನೋದು ಕೆಲವೇ ದಿನಗಳಲ್ಲಿ ತಿಳಿಯಲಿದೆ.




ಕೈ ಕೈ ಮಿಲಾಯಿಸಿದ ದಿವ್ಯಾ ಉರುಡುಗ-ದಿವ್ಯಾ ಸುರೇಶ್

ಬಿಗ್​ ಬಾಸ್​ 8 ಸೆಕೆಂಡ್​ ಇನ್ನಿಂಗ್ಸ್​ನ ಕೆಲವು ಪ್ರೋಮೋಗಳು ರಿಲೀಸ್​ ಆಗಿದ್ದು, ಅದರಲ್ಲಿ ಒಂದ ಪ್ರೋಮೋದಲ್ಲಿ ದಿವ್ಯಾ ಸುರೇಶ್​ ಹಾಗೂ ದಿವ್ಯಾ ಉರುಡುಗ ಕೈ ಕೈ ಮಿಲಾಯಿಸಿರುವುದು ಕಾಣಿಸುತ್ತದೆ. ಇದು ತುಂಬಾ ದಿನಗಳ ನಂತರ ನೋಡಿದ್ದಕ್ಕಾ... ಮಿಸ್​ ಮಾಡಿಕೊಂಡಿದ್ದಕ್ಕಾ ಅಥವಾ ಮೊದಲ ದಿನವೇ ಇವರಿಗೆ ಬಿಗ್​ ಬಾಸ್​ ಟಾಸ್ಕ್​ ಏನಾದರೂ ಕೊಟ್ಟಿದ್ದಾರಾ...! ಇವರು ಹೀಗೆ ಹೊಡೆದಾಡಿಕೊಂಡು ನೆಲದ ಮೇಲೆ ಬಿದ್ದು ಕಿತ್ತಾಡಿಕೊಂಡಿದ್ದು ಏಕೆ ಅನ್ನೋದು ಇಂದು ಸಂಜೆ ಪ್ರಸಾರವಾಗಲಿರುವ ಮೊದಲ ಮಹಾ ಸಂಚಿಕೆಯಲ್ಲಿ ತಿಳಿಯಲಿದೆ.

Divya Uruduga, Divya Suresh, Manju Pavagada, ದಿವ್ಯಾ ಉರುಡುಗ- ಸುರೇಶ್​ ನಡುವೆ ಜಗಳ, ಬಿಗ್​ ಬಾಸ್​ ಸೆಕೆಂಡ್​ ಇನ್ನಿಂಗ್ಸ್​ ಮೊದಲ ಮಹಾ ಸಂಚಿಕೆ, Bigg Boss 8 second innings first episode, Kichcha Sudeep, Aravind, Bigg Boss Second innings, Bigg Boss Second innings from June 23rd, colors kannada, Bigg Boss, ಬುಧವಾರದಿಂದ ಬಿಗ್​ ಬಾಸ್ 8ರ 2ನೇ ಇನ್ನಿಂಗ್ಸ್ ಆರಂಭ, bigg boss kannada, Bigg Boss Kannada 8, Divya Suresh, Sandalwood, Rowdy Baby, Divya Suresh Kissing video, Lip Lock Video, Divya Suresh hot photos, ದಿವ್ಯಾ ಸುರೇಶ್​ ಹಾಟ್​ ಫೋಟೋಗಳು, ದಿವ್ಯಾ ಸುರೇಶ್​ ಕಿಸ್ಸಿಂಗ್​ ವಿಡಿಯೋ, ರೌಡಿ ಬೇಬಿ ಕನ್ನಡ ಸಿನಿಮಾ, Bigg Boss 8 second innings after entering the house Divya Suresh and Divya Uruduga started fighting ae
ಕೈ ಕೈ ಮಿಲಾಯಿಸಿದ ದಿವ್ಯಾ ಸುರೇಶ್​-ದಿವ್ಯಾ ಉರುಡುಗ


ಇಂದು ಸಂಜೆ ಕಲರ್ಸ್​ ಕನ್ನಡದಲ್ಲಿ ಬಿಗ್ ಬಾಸ್​ ಸೀಸನ್​ 8ರ ಸೆಕೆಂಡ್ ಇನ್ನಿಂಗ್ಸ್​ನ ಮೊದಲ ಮಹಾ ಸಂಚಿಕೆಯ ಪ್ರಸಾರವಾಗಲಿದೆ. ಬಿಗ್ ಬಾಸ್​ ಅಭಿಮಾನಿಗಳು ಹಾಗೂ ಕಿಚ್ಚನ ಫ್ಯಾನ್ಸ್​ ಸಂಜೆ 6ಕ್ಕೆ ಟಿವಿ ಮುಂದೆ ಕುಳಿತಿರುತ್ತಾರೆ. ಯಾರು ಯಾರ ಜತೆ ಹೇಗೆ ವರ್ತಿಸಲಿದ್ದಾರೆ. ಯಾರ ನಡುವೆ ಮೊಲದ ದಿನವೇ ಮನಸ್ತಾಪ ಆಗಲಿದೆ ಅನ್ನೋದು ಇಂದು ಸಂಜೆ ತಿಳಿಯಲಿದೆ.
Published by: Anitha E
First published: June 23, 2021, 8:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories