Bigg Boss 8 Kannada: ಬಿಗ್​ ಬಾಸ್​ ವೇದಿಕೆ ಮೇಲೆ ಕಾಣಿಸಿಕೊಂಡ ಸುದೀಪ್​: ಖುಷಿಯಿಂದ ಕಮೆಂಟ್​​ ಮಾಡಿದ ಬಾಲಿವುಡ್​ ನಟಿ ..!

Bigg Boss 8 Kannada: ಇನ್ನೇನು ಕೆಲವೇ ಕ್ಷಣಗಳಲ್ಲಿ ಬಿಗ್​ ಬಾಸ್​ ಸೀಸನ್​ 8ರ ಎರಡನೇ ಇನ್ನಿಂಗ್ಸ್​ ಕಾರ್ಯಕ್ರಮ ಮತ್ತೆ ಆರಂಭವಾಗಲಿದೆ. ವೇದಿಕೆ ಮೇಲೆ ಮತ್ತೆ ಕಾಲಿಡಲಿದ್ದೇನೆ ಎಂದು ಕಿಚ್ಚ ಸುದೀಪ್​ ತಮ್ಮ ಲೆಟೆಸ್ಟ್​ ಫೋಟೋ ಒಂದನ್ನು ಹಂಚಿಕೊಂಡಿದ್ದರು.

ಬಿಗ್ ಬಾಸ್​ ವೇದಿಕೆ ಮೇಲೆ ಕಿಚ್ಚ ಸುದೀಪ್​

ಬಿಗ್ ಬಾಸ್​ ವೇದಿಕೆ ಮೇಲೆ ಕಿಚ್ಚ ಸುದೀಪ್​

  • Share this:
ಕೊರೋನಾ ಲಾಕ್​ಡೌನ್​ನಿಂದಾಗಿ ಅರ್ಧಕ್ಕೆ ನಿಂತಿದ್ದ ಬಿಗ್​ ಬಾಸ್​ ಸೀಸನ್​ 8ರ (Bigg Boss 8 Kannada) ಎರಡನೇ ಇನ್ನಿಂಗ್ಸ್​ ಅದ್ಧೂರಿಯಾಗಿ ಆರಂಭವಾಗಿದೆ. ಈಗಾಗಲೇ ಎಲ್ಲ ಸ್ಪರ್ಧಿಗಳು ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಈ ಸಲ ಸ್ಪರ್ಧಿಗಳ ಎಂಟ್ರಿ ಸಖತ್​ ವಿಭಿನ್ನವಾಗಿ ಪ್ಲಾನ್​ ಮಾಡಲಾಗಿತ್ತು. 12 ಮಂದಿ ಸ್ಪರ್ಧಿಗಳು ಈಗಾಗಲೇ ಬಿಗ್​ ಬಾಸ್​ ಮನೆ ಸೇರಿದ್ದಾರೆ. ನಿನ್ನೆಯೇ ಮೊದಲ ಮಹಾ ಸಂಚಿಕೆಯ ಚಿತ್ರೀಕರಣ ನಡೆದಿದೆ. ಹೌದು ನಿನ್ನೆ ನಡೆದ ಕಾರ್ಯಕ್ರಮದಲ್ಲಿ 12 ಮಂದಿ ಸ್ಪರ್ಧಿಗಳು ಬಿಗ್​ ಬಾಸ್ ಮನೆ ಸೇರಿಕೊಂಡಿದ್ದಾರೆ. ಮೊದಲಿನಂತೆಯೇ ಕಿಚ್ಚ ಸುದೀಪ್​ ಎಲ್ಲ ಸ್ಪರ್ಧಿಗಳನ್ನು ಒಬ್ಬೊಬ್ಬರಾಗಿ ವೇದಿಕೆಗೆ ಕರೆದು ಮಾತನಾಡಿಸಿ ನಂತರ ಮನೆ ಒಳಗೆ ಕಳುಹಿಸಿಕೊಟ್ಟಿದ್ದಾರೆ. ಸದ್ಯ ಎಲಿಮಿನೇಟ್​ ಆಗದೆ ಉಳಿದಿದ್ದ 12 ಮಂದಿ ಮಾತ್ರ ಮನೆಯೊಳಗೆ ಕಾಣಿಸುತ್ತಿದ್ದಾರೆ. ಮತ್ತೆ ಬಿಗ್​ ಬಾಸ್​ ಮನೆಯಲ್ಲಿರುವ ಕಣ್ಮಣಿಯ ಕೆಲಸ ಆರಂಭವಾಗಿದೆ. ಆದರೆ ಈ ಸಲ ಸಾಕಷ್ಟು ಟ್ವಿಸ್ಟ್​ ಹಾಗೂ ಟರ್ನ್​ಗಳು ಕಾರ್ಯಕ್ರಮದಲ್ಲಿ ಇರಲಿವೆಯಂತೆ. 

ನಿನ್ನೆ ಸಂಜೆಯೇ ಕಿಚ್ಚ ಸುದೀಪ್​ ಬಿಗ್​ ಬಾಸ್​ ಸೀಸನ್​ 8ರ ಎರಡನೇ ಇನ್ನಿಂಗ್ಸ್​ ಆರಂಭವಾಗಲಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುವ ಮೂಲಕ ಸುಳಿವು ನೀಡಿದ್ದರು. ಹೌದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಕಾರ್ಯಕ್ರಮ ಮತ್ತೆ ಆರಂಭವಾಗಲಿದೆ. ವೇದಿಕೆ ಮೇಲೆ ಮತ್ತೆ ಕಾಲಿಡಲಿದ್ದೇನೆ ಎಂದು ಕಿಚ್ಚ ಸುದೀಪ್​ ತಮ್ಮ ಲೆಟೆಸ್ಟ್​ ಫೋಟೋ ಒಂದನ್ನು ಹಂಚಿಕೊಂಡಿದ್ದರು.
ಕಿಚ್ಚ ಸುದೀಪ್​ ಮಾಡಿರುವ ಪೋಸ್ಟ್​ನಲ್ಲಿ ಅವರ ಲುಕ್ ರಿವೀಲ್ ಆಗಿದೆ. ಜೊತೆಗೆ ಮನೆಯಲ್ಲಿ ಏನೆಲ್ಲ ನಡೆಯಲಿದೆ ಹಾಗೂ ಅದಕ್ಕೆ ಕಾರಣ ಏನೆಂದು ಕಿಚ್ಚ ವಿವರಿಸಿದ್ದಾರೆ. ಸ್ಪರ್ಧಿಗಳು ಒಂದು ಬ್ರೇಕ್​ ತೆಗೆದುಕೊಂಡಿದ್ದು, ತಮ್ಮ ಎಲ್ಲ ಎಪಿಸೋಡ್​ಗಳನ್ನು ನೋಡಿರುತ್ತಾರೆ. ಯಾರು ಯಾರ ಬಗ್ಗೆ ಎಲ್ಲಿ ಏನೆಲ್ಲ ಮಾತನಾಡಿದ್ದಾರೆ ಎಂದು ತಿಳಿದುಕೊಂಡಿದ್ದಾರೆ. ಈಗ ಮತ್ತೆ ಮನಗೆ ಹೊಸದಾಗಿ ಎಂಟ್ರಿ ತೆಗೆದುಕೊಂಡಿದ್ದು, ಈಗ ಮಜ ಬರಲಿದೆ ಎಂದು ನಗುತ್ತಿರುವ ಇಮೋಜಿ ಪೋಸ್ಟ್​ ಮಾಡಿದ್ದಾರೆ ಸುದೀಪ್​.

ಇದನ್ನೂ ಓದಿ: Rashmika Mandanna-Amitabh Bachchan: ಶೂಟಿಂಗ್​ ಸೆಟ್​ನಲ್ಲಿ ಅಮಿತಾಭ್​ ಬಚ್ಚನ್​ಗೆ ಉಡುಗೊರೆ ನೀಡಿ ಸರ್ಪ್ರೈಸ್​ ಕೊಟ್ಟ ರಶ್ಮಿಕಾ ಮಂದಣ್ಣ..!

ಇನ್ನು ಕಿಚ್ಚ ಸುದೀಪ್ ಬಿಗ್​ ಬಾಸ್​ ಬಗ್ಗೆ ಪೋಸ್ಟ್​ ಮಾಡುತ್ತಿದ್ದಂತೆಯೇ ನಟಿ ಜೆನಿಲಿಯಾ ಖುಷಿಯಾಗಿ ಆ ಟ್ವೀಟ್​ಗೆ ಕಮೆಂಟ್​ ಮಾಡಿದ್ದಾರೆ. ನಾನು ಸಹ ಬಿಗ್​ ಬಾಸ್​ ನೋಡಲು ಕಾತರಳಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಇನ್ನು ಕಿಚ್ಚ ಸುದೀಪ್​ ಅವರ ಲುಕ್ಸ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಮತ್ತೆ ಬಿಗ್​ ಬಾಸ್​ ವೇದಿಕೆ ಮೇಲೆ ಕಿಚ್ಚನನ್ನು ಕಂಡ ಅಭಿಮಾನಿಗಳು ಹುಚ್ಚೆದ್ದು ಕಮೆಂಟ್​ ಮಾಡುತ್ತಿದ್ದಾರೆ.

ಲಾಕ್​ಡೌನ್​ನಿಂದಾಗಿ ಅರ್ಧಕ್ಕೆ ರದ್ದಾಗಿದ್ದ ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಬಿಗ್ ಬಾಸ್​ 8 ಮತ್ತೆ ಆರಂಭವಾಗುತ್ತಿದೆ. ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುವ ಬಿಗ್​ ಬಾಸ್​ 8 ಕಾರ್ಯಕ್ರಮದ 2ನೇ ಇನ್ನಿಂಗ್ಸ್​​ ಕಾರ್ಯಕ್ರಮದ ಮೊದಲ ಸಂಚಿಕೆಯ ಪ್ರಸಾರವಾಗಲಿದೆ. ಹೌದು, ಜೂನ್​ 23ರಿಂದ ಬಿಗ್​ ಬಾಸ್​ 8ರ ಎರಡನೇ ಇನ್ನಿಂಗ್ಸ್​ಗೆ ಕಿಕ್​ ಸ್ಟಾರ್ಟ್​ ಸಿಗಲಿದೆ. 12 ಮಂದಿ ಸ್ಪರ್ಧಿಗಳ ಜೊತೆಯಲ್ಲಿ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ಸಖತ್​ ಟ್ವಿಸ್ಟ್​ ಹಾಗೂ ಟರ್ನ್​ಗಳಿರಲಿವೆಯಂತೆ. ಬಿಗ್​ ಬಾಸ್​ ನೋಡಲು ಸಾಕಷ್ಟು ಮಂದಿ ವೀಕ್ಷಕರು ಕಾತರರಾಗಿದ್ದು, ಬಿಗ್ ಬಾಸ್ 2ನೇ ಇನ್ನಿಂಗ್​ ಆರಂಭವಾಗಲಿರುವ ವಿಷಯ ತಿಳಿದಾಗಿನಿಂದ ಪ್ರಸಾರದ ಕ್ಷಣಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಅಭಿಮಾನಿಗಳ ಅರ್ವಿಯಾ ಜೋಡಿ, ನಿಧಿ ಸುಬ್ಬಯ್ಯ, ಮಂಜು ಪಾವಗಡ, ಪ್ರಿಯಾಂಕಾ ತಿಮ್ಮೇಶ್​, ದಿವ್ಯಾ ಸುರೇಶ್​, ಚಕ್ರವರ್ತಿ ಚಂದ್ರಚೂಡ್​, ರಘು, ಶಮಂತ್​ ಗೌಡ, ವೈಷ್ಣವಿ ಗೌಡ, ಶುಭಾ ಪೂಂಜಾ ಹಾಗೂ ಪ್ರಶಾಂತ್​ ಸಂಬರಗಿ ಮತ್ತೆ ಬಿಗ್​ ಬಾಸ್​ ಮನೆಗೆ ಕಾಲಿಟ್ಟಿದ್ದಾರೆ. ಇಂದು ಸಂಜೆ 6ಕ್ಕೆ ಕಾರ್ಯಕ್ರಮದ ಮೊದಲ ಮಹಾ ಸಂಚಿಕೆ ಪ್ರಸಾರವಾಗಲಿದೆ.
Published by:Anitha E
First published: