Bigg Boss 8 Kannada: ಈ ವಾರ ಬಿಗ್​​ಬಾಸ್​​ನಿಂದ ರಘು ಎಲಿಮಿನೇಟ್ ಆಗೋದಕ್ಕೆ ಇದೇ ಕಾರಣ...!

ಭಾನುವಾರ ಅಂದರೆ ನಿನ್ನೆ ನಡೆದ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ನಲ್ಲಿ ರಘುಗೌಡ ಮನೆಯಿಂದ ಹೊರಬಿದ್ದಿದ್ದಾರೆ. ಆ ಮೂಲಕ ಬಿಗ್​ಬಾಸ್​ ಮನೆಯಲ್ಲಿ ಸ್ಪರ್ಧಿಗಳ ಸಂಖ್ಯೆ 11 ರಿಂದ 10ಕ್ಕೆ ಇಳಿದಿದೆ.

ರಘುಗೌಡ

ರಘುಗೌಡ

 • Share this:
  ಬಿಗ್​ಬಾಸ್​ ಸೀಸನ್​ 8 ಸೆಕೆಂಡ್ ಇನ್ನಿಂಗ್ಸ್​​ನಲ್ಲಿ​ ಎರಡನೇ ಎಲಿಮಿನೇಷನ್​ ನಡೆದಿದ್ದು, ರಘುಗೌಡ ಬಿಗ್​ಬಾಸ್​ ಮನೆಯಿಂದ ಹೊರಬಂದಿದ್ದಾರೆ. ಈ ಬಾರಿ ರಘುಗೌಡ ಅವರು ಎಲಿಮಿನೇಟ್ ಆಗಿರುವುದು ಶಾಕಿಂಗ್ ಸುದ್ದಿಯಾಗಿದೆ. ಯಾಕೆಂದರೆ ಕಳೆದ ಬಾರಿ ಪ್ರಶಾಂತ್ ಸಂಬರಗಿ ಅವರು ಮನೆಯಿಂದ ಹೊರ ಹೋಗುತ್ತಾರೆ ಎನ್ನಲಾಗಿತ್ತು. ಆದರೆ ನಿಧಿ ಸುಬ್ಬಯ್ಯ ಎಲಿಮಿನೇಟ್ ಆಗಿದ್ದರು. ಈ ಬಾರಿ ಕ್ಯಾಪ್ಟನ್ ದಿವ್ಯ ಉರುಡುಗ ಅವರನ್ನು ಹೊರತುಪಡಿಸಿ, ಉಳಿದೆಲ್ಲಾ ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಭಾನುವಾರ ಅಂದರೆ ನಿನ್ನೆ ನಡೆದ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ನಲ್ಲಿ ರಘುಗೌಡ ಮನೆಯಿಂದ ಹೊರಬಿದ್ದಿದ್ದಾರೆ. ಆ ಮೂಲಕ ಬಿಗ್​ಬಾಸ್​ ಮನೆಯಲ್ಲಿ ಸ್ಪರ್ಧಿಗಳ ಸಂಖ್ಯೆ 11 ರಿಂದ 10ಕ್ಕೆ ಇಳಿದಿದೆ.

  ಈ ವಾರ ಮನೆಯ ಕ್ಯಾಪ್ಟನ್​ ದಿವ್ಯ ಉರುಡುಗ ಅವರನ್ನು ಹೊರತುಪಡಿಸಿ, ನಿಧಿ ಸುಬ್ಬಯ್ಯ ಮನೆಯಿಂದ ಹೊರಹೋಗುವಾಗ ನೇರವಾಗಿ ನಾಮಿನೇಟ್ ಮಾಡಿದ್ದ ಅರವಿಂದ್ ಕೆ.ಪಿ. ಸೇರಿದಂತೆ ದಿವ್ಯ ಸುರೇಶ್, ಮಂಜು ಪಾವಗಡ, ಚಕ್ರವರ್ತಿ ಚಂದ್ರಚೂಡ್, ಪ್ರಶಾಂತ್ ಸಂಬರಗಿ, ರಘುಗೌಡ, ವೈಷ್ಣವಿಗೌಡ, ಶುಭಾ ಪೂಂಜಾ, ಪ್ರಿಯಾಂಕ ತಿಮ್ಮೇಶ್, ಶಮಂತ್ ನಾಮಿನೇಟ್ ಆಗಿದ್ದರು.

  ಭಾನುವಾರ ರಾತ್ರಿ ನಡೆದ ‘ವಾರದ ಕತೆ ಕಿಚ್ಚನ ಜೊತೆ‘ ಎಪಿಸೋಡ್​ನಲ್ಲಿ ಮೊದಲು ಮಂಜು ಪಾವಗಡ ಅವರು ಸೇವ್​ ಆದರು. ಬಳಿಕ ಅರವಿಂದ್ ಕೆ.ಪಿ., ವೈಷ್ಣವಿಗೌಡ, ದಿವ್ಯ ಸುರೇಶ್, ಪ್ರಶಾಂತ್ ಸಂಬರಗಿ, ಶಮಂತ್ ಹಾಗೂ ಪ್ರಿಯಾಂಕ ತಿಮ್ಮೇಶ್ ಸೇವ್ ಆದರು. ಕೊನೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ಹಾಗೂ ರಘುಗೌಡ ಉಳಿದುಕೊಂಡರು. ರಘುಗೌಡ ಎಲಿಮಿನೇಟ್​ ಆಗಿ ಮನೆಯಿಂದ ಹೊರಬಂದರೆ, ಚಕ್ರವರ್ತಿ ಚಂದ್ರಚೂಡ್​ ಸೇವ್​ ಆಗಿ ಮನೆಯಲ್ಲೇ ಉಳಿದುಕೊಂಡರು.

  ರಘುಗೌಡ ಎಲಿಮಿನೇಟ್ ಆಗಲು ಇದೇ ಕಾರಣನಾ?

  ಬಿಗ್​ಬಾಸ್​ ಸೀಸನ್​ 8ರ ಸೆಕೆಂಡ್​ ಇನ್ನಿಂಗ್ಸ್​ನ ಎರಡನೇ ವಾರದಲ್ಲಿ ರಘುಗೌಡ ಅಷ್ಟಾಗಿ ಆ್ಯಕ್ಟೀವ್ ಇರಲಿಲ್ಲ. ಮೊದಲ ವಾರಕ್ಕೆ ಹೋಲಿಸಿದರೆ ಈ ವಾರ ಹೆಚ್ಚಿನ ಆಸಕ್ತಿ ತೋರಲಿಲ್ಲ. ರಘುಗೌಡ ಅರವಿಂದ್​ ಕೆ.ಪಿಗೆ ಹೆದರುತ್ತಾರೆ ಎಂಬ ಮಾತು ಕೂಡ ಕೇಳಿ ಬಂದಿತ್ತು. ಪ್ರಶಾಂತ್ ಸಂಬರಗಿ ರಘುಗೌಡ ಅವರ ಪರವಾಗಿ ಮಾತನಾಡಿದ್ದರೂ ಸಹ ಈ ವಿಚಾರದಲ್ಲಿ ರಘು ಮೌನ ವಹಿಸಿದ್ದರು. ಸಂಬರಗಿ ಅವರೇ ರಘು ಪರ ನಿಂತಿದ್ದರೂ ರಘು ಎಲ್ಲಿಯೂ ಮಾತನಾಡಿರಲಿಲ್ಲ. ಇದೇ ಕಾರಣಕ್ಕೆ ರಘು ಅವರಿಗೆ ಕಡಿಮೆ ಮತಗಳು ಬಿದ್ದಿದ್ದು, ಎಲಿಮಿನೇಟ್​ ಆಗಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ಬಿಗ್​ ಬಾಸ್​ ಮನೆಯಲ್ಲಿ ರಘುಗೌಡ ಅವರ 91 ದಿನಗಳ ಜರ್ನಿ ಅಂತ್ಯಗೊಂಡಿದೆ.

  ಚಕ್ರವರ್ತಿ ಚಂದ್ರಚೂಡ್​, ಮಂಜು ಪಾವಗಡ, ಪ್ರಿಯಾಂಕಾ ತಿಮ್ಮೇಶ್​, ದಿವ್ಯಾ ಸುರೇಶ್​, ಪ್ರಶಾಂತ್ ಸಂಬರಗಿ​, ಶಮಂತ್ ಬ್ರೋ ಗೌಡ,​ ವೈಷ್ಣವಿ, ಅರವಿಂದ್ ಕೆ.ಪಿ, ದಿವ್ಯಾ ಉರುಡುಗ, ಶುಭಾ ಮನೆಯಲ್ಲಿ ಮುಂದುವರಿದಿದ್ದಾರೆ. ಇನ್ನು ಕೆಲವೇ ವಾರಗಳಲ್ಲಿ ಬಿಗ್​ ಬಾಸ್ ಗ್ರ್ಯಾಂಡ್​​ ಫಿನಾಲೆ ನಡೆಯಲಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಫೈಟ್​ ಮತ್ತಷ್ಟು ಜೋರಾಗಲಿದೆ.

  ​​ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
  Published by:Latha CG
  First published: