HOME » NEWS » Entertainment » BIGG BOSS 8 KANNADA START AGAIN ARVIND DIVYA AND MANJU DIVYA SURESH FRIENDSHIP STORY KVD

ಅರ್ಧಕ್ಕೆ ನಿಂತಿದ್ದ ಬಿಗ್​ಬಾಸ್​ ಮತ್ತೆ ಶುರು: ಅರವಿಂದ್-ದಿವ್ಯ, ಮಂಜ-ದಿವ್ಯ ಸುರೇಶ್ ಸ್ನೇಹ ಏನಾಗಿದೆ ಈಗ?

ಫೇವರೆಟ್​ ಜೋಡಿಗಳ ಫ್ರೆಂಡ್​​ಶಿಪ್​​ ಲಾಕ್​​ಡೌನ್​ನಲ್ಲಿ ಮುರಿದು ಬಿದ್ದಿದ್ದಿಯಾ, ಮುಂದುವರೆದಿದೆಯಾ ಕುತೂಹಲ ಪ್ರೇಕ್ಷಕರಲ್ಲಿ ಮನೆ ಮಾಡಿದೆ.

Kavya V | news18-kannada
Updated:June 16, 2021, 6:31 PM IST
ಅರ್ಧಕ್ಕೆ ನಿಂತಿದ್ದ ಬಿಗ್​ಬಾಸ್​ ಮತ್ತೆ ಶುರು: ಅರವಿಂದ್-ದಿವ್ಯ, ಮಂಜ-ದಿವ್ಯ ಸುರೇಶ್ ಸ್ನೇಹ ಏನಾಗಿದೆ ಈಗ?
ಬಿಗ್​ಬಾಸ್​ ಸ್ಪರ್ಧಿಗಳು
  • Share this:
ಕಲರ್ಸ್​​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್​ಬಾಸ್​​ ಸೀಸನ್​​ 8 ಶೋನ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಶೋ ಮುಗಿಯಲು 29 ದಿನಗಳ ಬಾಕಿ ಇರುವಾಗಲೇ 12 ಸ್ಪರ್ಧಿಗಳನ್ನು ಮನೆಗೆ ಕಳುಹಿಸಲಾಗಿತ್ತು. ಕೊರೊನಾ ಕಾರಣದಿಂದ ಶೋ ಮುಗಿಯುವ ಹಿಂದಿನ 3 ವಾರಗಳ ಕಾಲ ನಟ ಕಿಚ್ಚ ಸುದೀಪ್​​ ಕೂಡ ನಿರೂಪಣೆಯಿಂದ ದೂರವಿದ್ದರು. ರಾಜ್ಯದಲ್ಲಿ ಕೊರೊನಾ 2ನೇ ಅಲೆ ಉಲ್ಬಣಿಸಿದ ಹಿನ್ನೆಲೆಯಲ್ಲಿ ರಿಯಾಲಿಟಿ ಶೋನ ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಬಿಗ್​ಬಾಸ್​ ಶೋ ಇತಿಹಾಸದಲ್ಲೇ ಮೊದಲ ಬಾರಿಗೆ ಎಲ್ಲಾ ಸ್ಪರ್ಧಿಗಳನ್ನು ಅರ್ಧಕ್ಕೆ ಮನೆಗೆ ಕಳುಹಿಸಿಕೊಡಲಾಗಿತ್ತು. ಆದರೆ ಈಗ ಬಿಗ್​ಬಾಸ್​ ವೀಕ್ಷಕರಿಗೆ ಗುಡ್​ನ್ಯೂಸ್​ ಸಿಕ್ಕಿದೆ. ಅರ್ಧಕ್ಕೆ ನಿಂತಿದ್ದ ಬಿಗ್​ಬಾಸ್​ ಶೋನ ಮುಂದುವರೆಸಲು ಚಾನೆಲ್​ ಮುಂದಾಗಿದ್ದಾರೆ.

ಬಿಗ್​ ಬಾಸ್​ ಪುನಾರಂಭದ ಬಗ್ಗೆ ಕಲರ್ಸ್​ ಕನ್ನಡ ವಾಹಿನಿಯ ಬ್ಯುಸಿನೆಸ್​ ಹೆಡ್​ ಪರಮೇಶ್ವರ ಗುಂಡ್ಕಲ್​ ಅವರೇ ತಿಳಿಸಿದ್ದಾರೆ. ಹೀಗಾಗಿ ಮತ್ತೆ ಅದೇ ಸ್ಪರ್ಧಿಗಳ ಮೂಲಕ ಶೋ ಮುಂದುವರೆಯುತ್ತಾ? 29 ದಿನಗಳ ಬಿಗ್​ಬಾಸ್​ ಎರಡನೇ ಇನ್ನಿಂಗ್ಸ್​ ಹೇಗಿರುತ್ತೆ ಎಂಬ ಕುತೂಹಲ ಪ್ರೇಕ್ಷಕರನ್ನು ಮನೆ ಮಾಡಿದೆ. ಶೋನಲ್ಲಿ ಎಲ್ಲರ ಗಮನ ಸೆಳೆದಿದ್ದ ಕ್ಯೂಟ್​ ಜೋಡಿ ಅರವಿಂದ್​​-ದಿವ್ಯ ಉರುಡುಗ ಈಗ ಏನು ಮಾಡುತ್ತಿದ್ದಾರೆ? ಅವರ ಸ್ನೇಹ ಎಲ್ಲಿಯವರೆಗೂ ಬಂದಿದೆ ಎಂಬೆಲ್ಲಾ ಪ್ರಶ್ನೆಗಳು ನೋಡುಗರನ್ನು ಕಾಡುತ್ತಿದೆ. ಅನಾರೋಗ್ಯಕ್ಕೆ ತುತ್ತಾಗಿ ಶೋ ಮೊಟಕುಗೊಳ್ಳುವ ಮೊದಲೇ ಹೊರ ಬಂದಿದ್ದ ದಿವ್ಯಾ ಉರುಡುಗ ಮತ್ತೆ ಶೋಗೆ ಮರಳುತ್ತಾರಾ? ಆರೋಗ್ಯದ ಕಾರಣದಿಂದ ಬಿಗ್​ಬಾಸ್​ನಿಂದ ದೂರು ಉಳಿಯುತ್ತಾರಾ ಎಂಬ ಸುದ್ದಿ ಹರಿದಾಡುತ್ತಿದೆ.

ಶೋನಿಂದ ಹೊರ ಬಂದ ಬಳಿಕ ಬೈಕರ್​ ಕೆ.ಪಿ ಅರವಿಂದ್​ ಹಾಗೂ ಕಿರುತೆರೆ ನಟಿ ದಿವ್ಯ ಉರುಡುಗ ಸ್ನೇಹ ಹೇಗಿದೆ ಎಂಬ ಕೌತುಕವೂ ಮನೆ ಮಾಡಿದೆ. ಇನ್ನು ಪ್ರೇಕ್ಷಕರ ಗಮನ ಸೆಳೆದಿದ್ದ ಮತ್ತೊಂದು ಜೋಡಿ ಹಾಸ್ಯ ಕಲಾವಿದ ಲ್ಯಾಗ್​ ಮಂಜ, ನಟಿ ದಿವ್ಯ ಸುರೇಶ್​ ಸ್ನೇಹ ಮುಂದುವರೆದಿದೆಯಾ ಎಂಬ ಅನುಮಾನವೂ ಎಲ್ಲರನ್ನೂ ಕಾಡುತ್ತಿದೆ. ಶೋ ಕೊನೆಯಾತ್ತೆ ಎಂದು ತಿಳಿದ ದಿನ ಇನ್ಮುಂದೆ ಫ್ರೆಂಡ್ಸ್​ ಆಗಿ ಇರೋಣ ಎಂದು ಮಂಜ ಅವರಿಗೆ ದಿವ್ಯಾ ಹೇಳಿದ್ದು ಸಾಕಷ್ಟು ಟ್ರೋಲ್​​, ಮಿಮ್ಸ್​ಗೆ ಗುರಿಯಾಗಿತ್ತು.

ಇನ್ನು ದಿವ್ಯ ಸುರೇಶ್​ ಅವರ ಯಾವ ಪ್ರಾಜೆಕ್ಟ್​​ ಕೂಡ ಕಂಪ್ಲೀಟ್​ ಆಗಲ್ಲ. ಶೋ ಆರಂಭದ ದಿನ ದಿವ್ಯ ಸುರೇಶ್​ ಅವರೇ  ಹೇಳಿದ್ದ ಹೇಳಿಕೆಯನ್ನು ಟ್ರೋಲ್​ ಮಾಡಲಾಗಿತ್ತು. ದಿವ್ಯ ಸುರೇಶ್​ರಿಂದಲೇ ಬಿಗ್​ಬಾಸ್​ ಕೂಡ ಅರ್ಧಕ್ಕೆ ನಿಂತೋಗಿದೆ ಎಂದೆಲ್ಲಾ ಟ್ರೋಲ್​ ಮಾಡಲಾಗಿತ್ತು. ಶೋನಿಂದ ಹೊರ ಬಂದ ಬಳಿಕ ಈ ಬಗ್ಗೆ ದಿವ್ಯ ಸುರೇಶ್​ ಬೇಸರ ವ್ಯಕ್ತಪಡಿಸಿದ್ದರು. ನನ್ನಿಂದ ಶೋ ಅರ್ಧಕ್ಕೆ ನಿಂತಿದೆ ಅನ್ನೋದು ತಪ್ಪು. ಇದು ಅರ್ಧಕ್ಕೆ ನಿಂತಿದೆ ಎಂದಾದರೆ ಮತ್ತೇನೋ ಇದಕ್ಕಿಂತ ದೊಡ್ಡದು ನನಗಾಗಿ ಕಾದಿದೆ ಎಂದರ್ಥ ಎಂದು ಟ್ರೋಲ್​ಗಳಿಗೆ ತಿರುಗೇಟು ನೀಡಿದ್ದರು.

ಇದನ್ನೂ ಓದಿ: Kannada Bigg Boss 8: ಕನ್ನಡ ಬಿಗ್ ಬಾಸ್​ 8 ಸೆಕೆಂಡ್​ ಇನ್ನಿಂಗ್ಸ್ ಆರಂಭ​: ಅಧಿಕೃತವಾಗಿ ಪ್ರಕಟಿಸಿದ ಪರಮೇಶ್ವರ ಗುಂಡ್ಕಲ್​

ಇನ್ನು ಶೋ ಆರಂಭದಲ್ಲಿ ಕೊರೊನಾ ಕಾರಣದಿಂದ 14 ದಿನಗಳ ಕ್ವಾರಂಟೈನ್​​ಗೆ ಒಳಗಾಗಿದ್ದ ಸ್ಪರ್ಧಿಗಳು ಈ ಬಾರಿಯೂ ಹೋಟೆಲ್​ನಲ್ಲಿ ಕ್ವಾರಂಟೈನ್​ಗೆ ಒಳಗಾಗುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ. ಬಿಗ್​ಬಾಸ್​-8ರ ಪ್ರೊಮೋ ರಿಲೀಸ್​ ಮಾಡಿರುವ ಕಲರ್ಸ್​ ಕನ್ನಡ ವಾಹಿನಿ ಇನ್ನೂ ಯಾವ ಗುಟ್ಟನ್ನೂ ಬಿಟ್ಟುಕೊಟ್ಟಿಲ್ಲ. ಫೇವರೆಟ್​ ಜೋಡಿಗಳ ಫ್ರೆಂಡ್​​ಶಿಪ್​​ ಲಾಕ್​​ಡೌನ್​ನಲ್ಲಿ ಮುರಿದು ಬಿದ್ದಿದ್ದಿಯಾ, ಮುಂದುವರೆದಿದೆಯಾ ಎಂದು ಶೋ ಶುರುವಾದ ಮೇಲೆಯೇ ತಿಳಿಯಲಿದೆ.
Published by: Kavya V
First published: June 16, 2021, 6:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories