Bigg Boss 8 Kannada: ರಾತ್ರಿ ಮದುವೆ ಮಾತುಕತೆ ಬೆಳಗಾಗುವಷ್ಟರಲ್ಲಿ ಗರ್ಭಿಣಿಯಾದ ಕತೆ: ಏನಿದು ವಿಚಿತ್ರ ಘಟನೆ..!

ಬಿಗ್ ಬಾಸ್ ಮನೆಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಮತ್ತೊಂದು ವಿಚಿತ್ರ ಘಟನೆಯ ಅನುಭವ ಆಗಿರೋದು ಶುಭಾ ಪೂಂಜಾ ಅವರಿಗೆ.

ಲಾಕ್​ಡೌನ್​ನಿಂದಾಗಿ ಅರ್ಧಕ್ಕೆ ನಿಂತಿದ್ದ ಬಿಗ್​ ಬಾಸ್​ 8 ಕಾರ್ಯಕ್ರಮವನ್ನು ಮತ್ತೆ ಈಗ ಆರಂಭಿಸಲಾಗಿದೆ.

ಲಾಕ್​ಡೌನ್​ನಿಂದಾಗಿ ಅರ್ಧಕ್ಕೆ ನಿಂತಿದ್ದ ಬಿಗ್​ ಬಾಸ್​ 8 ಕಾರ್ಯಕ್ರಮವನ್ನು ಮತ್ತೆ ಈಗ ಆರಂಭಿಸಲಾಗಿದೆ.

  • Share this:
ಬಿಗ್ ಬಾಸ್​ ಮನೆಯಲ್ಲಿ ಏನೆಲ್ಲ ಘಟನೆಗಳು ನಡೆಯುತ್ತವೆ ಅಂತ ನಿತ್ಯ ಕಾರ್ಯಕ್ರಮದಲ್ಲಿ ನೋಡುತ್ತಿರುತ್ತೇವೆ. ಅಲ್ಲಿ ಯಾವುದೇ ಘಟನೆ ನಡೆದರೂ ಅದು ಟಾಸ್ಕ್​ ಇರಬೇಕು ಅಂತ ಅನ್ಕೋತಾರೆ. ಆದರೆ, ಇತ್ತೀಚೆಗಷ್ಟೆ ಕ್ಯಾಪ್ಟನ್​ ಕೋಣೆಯಲ್ಲಿ ಕಪ್ಪು ಬಣ್ನದ ಆಕಾರವೊಂದು ಓಡಾಡುತ್ತಿರುವುದನ್ನು ನೋಡಿ ಹೆದರಿಕೊಂಡಿದ್ದರು. ಆ ಬಗ್ಗೆ ಶಮಂತ್​ ಚಕ್ರವರ್ತಿ ಚಂದ್ರಚೂಡ, ಪ್ರಿಯಾಂಕಾ ತಿಮ್ಮೇಶ್​ ಹಾಗೂ ಬಿಗ್ ಬಾಸ್​ ಬಳಿ ಹೇಳಿಕೊಂಡಿದ್ದರು. ಇನ್ನು ಇದೇ ವಿಷಯ ವಾರದ ಕತೆ ಕಿಚ್ಚನ ಜೊತೆ ಸಂಚಿಕೆಯಲ್ಲೂ ಚರ್ಚೆಯಾಗಿತ್ತು. ಆದರೆ  ಈಗ ಮತ್ತೊಂದು ವಿಚಿತ್ರ ಘಟನೆಗೆ ಬಿಗ್ ಬಾಸ್ ಮನೆ ಸಾಕ್ಷಿಯಾಗಿದೆ. 

ಬಿಗ್​ ಬಾಸ್​ ಮನೆಯಲ್ಲಿ ಕೆಲವು ದಿನಗಳಿಂದ ಜಗಳ ಹಾಗೂ ಮನಸ್ತಾಪ ಕೊಂಚ ಹೆಚ್ಚಾಗಿದೆ. ಇದರಿಂದಾಗಿಯೇ ಮೊದಲಿನಂತೆ ಸ್ಪರ್ಧಿಗಳ ನಡುವೆ ಮಾತುಕತೆಯಾಗಲಿ, ತಮಾಷೆಯಾಗಲಿ ಏನೂ ಇಲ್ಲ. ಎಲ್ಲರೂ ತಮ್ಮ ಪಾಡಿಗೆ ತಾವು ಇರುತ್ತಿದ್ದಾರೆ. ಸ್ಪರ್ಧಿಗಳು ಗುಂಪುಗಳಾಗಿ ಬೇರ್ಪಟ್ಟಿದ್ದಾರೆ.


ಬಿಗ್ ಬಾಸ್ ಮನೆಯಲ್ಲಿ ದೂರ ಇರುವವರು ಮತ್ತಷ್ಟು ದೂರ ಆಗುತ್ತಿದ್ದಾರೆ. ಇದರಿಂದಾಗಿ ಮನೆಯಲ್ಲಿ ಮೌನ ಹೆಚ್ಚಾಗಿದೆ. ಈ ಮೌನ ಕೆಲವರಿಗೆ ಬೇಸರ ಉಂಟು ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ಮನೆಯಲ್ಲಿರುವ ಹ್ಯಾಪಿ ಬೇಬಿ ಶುಭಾ ಪೂಂಜಾ ಸಹ ಆಗಾಗ ತಾಳ್ಮೆ ಕಳೆದುಕೊಂಡು ಕೂಗಾಡುತ್ತಿದ್ದಾರೆ. ಆದರೆ, ಇದರ ಜೊತೆಗೆ ಸ್ಪರ್ಧಿಗಳನ್ನು ರಂಜಿಸಲು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: Tamannaah Bhatia: ಅಡುಗೆ ಶೋ ಮೂಲಕ ಬೆರ್ರಿ ಟ್ರೀಟ್​ ಕೊಡಲು ಮುಂದಾದ ನಟಿ ತಮನ್ನಾ

ಬಿಗ್ ಬಾಸ್ ಮನೆಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಮತ್ತೊಂದು ವಿಚಿತ್ರ ಘಟನೆಯ ಅನುಭವ ಆಗಿರೋದು ಶುಭಾ ಪೂಂಜಾ ಅವರಿಗೆ. ಹೌದು, ಹಿಂದಿನ ರಾತ್ರಿ ಶುಭಾ ಮನೆಯಲ್ಲಿ ಮಂಜು ಪಾವಗಡ ಅವರೊಂದಿಗೆ ತಮ್ಮ ಮದುವೆ ವಿಷಯ ಚರ್ಚಿಸಿದ್ದರಂತೆ. ಆದರೆ ಶುಭಾ ಮಲಗಿ ಬೆಳಗಾಗುವಷ್ಟರಲ್ಲಿ ಅವರು ನಾಲ್ಕು ತಿಂಗಳ ಗರ್ಭಿಣಿಯಾದಂತೆ ಅನಿಸುತ್ತಿತ್ತಂತೆ. ಅದಕ್ಕೂ ಕಾರಣ ಇದೆ. ಇಷ್ಟೆಲ್ಲ ಆಗಿರೋದು ಶುಭಾ ಅವರ ಕನಸಿನಲ್ಲಂತೆ.

ಹೌದು, ರಾತ್ರಿ ಮಂಜು ಜತೆ ಮದುವೆ ವಿಷಯ ಚರ್ಚಿಸಿ , ಅದೇ ನೆನಪಿನಲ್ಲಿ ಮಲಗಿದ್ದ ಶುಭಾಗೆ ನಾಲ್ಕು ತಿಂಗಳ ಗರ್ಭಿಣಿಯಾದಂತೆ ಕನಸು ಬಿದ್ದಿದೆ. ಅದೂ ಅವರು ಸೆಕೆಂಡ್​ ಇನ್ನಿಂಗ್ಸ್​ಗೆ ಬರುವ ಮೊದಲು ಮನೆಯಲ್ಲಿದ್ದಂತೆ ಕನಸ್ಸು ಬಿದ್ದಿದೆ. ತಮಗೆ ಬಿದ್ದ ವಿಚಿತ್ರ ಕನಸಿನ ಬಗ್ಗೆ ಶುಭಾ ಬೆಳಗ್ಗೆ ಎಳುತ್ತಿದ್ದಂತೆಯೇ ಪ್ರಶಾಂತ್ ಸಂಬರಗಿ ಬಳಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Bigg Boss 8 Kannada: ಶುಭಾ ಪೂಂಜಾ ಆಟದಲ್ಲಿದ್ರೂ ಲೆಕ್ಕಕ್ಕಿಲ್ಲವಂತೆ: ಮಹತ್ವ ಕಳೆದುಕೊಳ್ಳುತ್ತಿದ್ದಾರಾ ಹ್ಯಾಪಿ ಬೇಬಿ..!

ಸಿಕ್ಕ ಅವಕಾಶವನ್ನು ಬಳಸಿಕೊಂಡ ಪ್ರಶಾಂತ್​ ಸಂಬರಗಿ ಬೆಳಗ್ಗೆಯೇ ಶುಭಾ ಅವರ ಕಾಲು ಎಳೆಯಲು ಬಳಿಸಿಕೊಂಡಿದ್ದಾರೆ. ಈಗಲೇ ನೀನು ಟಾಸ್ಕ್​ನಲ್ಲಿ ಸರಿಯಾಗಿ ಆಡೋದಿಲ್ಲ. ಇನ್ನು ಗರ್ಭಿಣಿಯಾಗಿದ್ದರೆ ಕತೆಯೇ ಬೇರೆಯಾಗುತ್ತಿತ್ತು ಎಂದು ತಮಾಷೆ ಮಾಡಿದ್ದಾರೆ.

ನಿಧಿ ಸುಬ್ಬಯ್ಯ ಅವರಿಗೆ ಬಿದ್ದ ಬಿಗ್ ಬಾಸ್​ ಫಿನಾಲೆ ಕನಸು

ನಿಧಿ ಸುಬ್ಬಯ್ಯ ಅವರಿಗೂ ಈ ಹಿಂದೆ ಒಂದು ಕನಸು ಬಿದ್ದಿತ್ತು. ಅದು ನಿಧಿ ಇನ್ನೂ ಮನೆಯಲ್ಲೇ ಇರುವಾಗಲೇ ಇತರೆ ಸ್ಪರ್ಧಿಗಳು ವಿಮಾನ ನಿಲ್ದಾಣಕ್ಕೆ ಹೋಗಿರುತ್ತಾರೆ. ಕಾರಣ, ವಿದೇಶದಲ್ಲಿ ಬಿಗ್​ ಬಾಸ್ 8ರ ಫಿನಾಲೆ ನಡೆಯುತ್ತಿದ್ದು,ಅದಕ್ಕಾಗಿ ಎಲ್ಲರೂ ಹೋಗುತ್ತಿರುತ್ತಾರೆ. ನಿಧಿ ಎಲ್ಲರಿಗಿಂತ ತಡವಾಗಿ ತಲುಪುತ್ತಾರೆ. ಇದು ನಿಧಿ ಸುಬ್ಬಯ್ಯ ಅವರಿಗೆ ಬಿದ್ದ ಕನಸಾಗಿತ್ತು.

ಬಿಗ್ ಬಾಸ್​ ಮನೆಯ ಮೊದಲ ಮಹಿಳಾ ಕ್ಯಾಪ್ಟನ್​ ಆದ ದಿವ್ಯಾ ಉರುಡುಗ

ಬಿಗ್ ಬಾಸ್ 8ನೇ ಸೀಸನ್​ನ ಮೊದಲ ಕ್ಯಾಪ್ಟನ್​ ಆಗಿ ದಿವ್ಯಾ ಉರುಡುಗ ಆಯ್ಕೆಯಾಗಿದ್ದಾರೆ. ಸೂರ್ಯ ಸೇನೆ ತಂಡದ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಭಾಗಿಯಾಗಲು ಅರ್ಹತೆ ಪಡೆದಿತ್ತು. ಇದರಲ್ಲಿ ಪ್ರಶಾಂತ್ ಸಂಬರಗಿ, ವೈಷ್ಣವಿ, ಚಕ್ರವರ್ತಿ ಚಂದ್ರಚೂಡ, ಶಮಂತ್, ಅರವಿಂದ್ ಅವರನ್ನು ಸೋಲಿಸುವ ಮೂಲಕ ದಿವ್ಯಾ ಉರುಡುಗ ಕ್ಯಾಪ್ಟನ್​ ಆಗಿದ್ದಾರೆ.
Published by:Anitha E
First published: