ಬಿಗ್ ಬಾಸ್ ಸೀಸನ್ 8ರ ಸೆಕೆಂಡ್ ್ಇನ್ನಿಂಗ್ಸ್ನಲ್ಲಿ ಪ್ರಶಾಂತ್ ಸಂಬರಗಿ, ದಿವ್ಯಾ ಉರುಡುಗ ಹಾಗೂ ಅರವಿಂದ್ ಅವರ ನಡುವೆ ಒಂದು ಒಳ್ಳೆಯ ಬಾಂಧವ್ಯ ಇದೆ. ಎರಡನೇ ಇನ್ನಿಂಗ್ಸ್ ಆರಂಭವಾದಾಗಿನಿಂದ ಇವರ ನಡುವೆ ಜಗಳ ಆಗಿದ್ದೇ ಇಲ್ಲ. ಕೆಲವೊಮ್ಮೆ ಟಾಸ್ಕ್ ವಿಷಯದಲ್ಲಿ ಇವರ ನಡುವೆ ಅಸಮಧಾನ ಮೂಡಿದರೂ ಅಲ್ಲೇ ಅದನ್ನು ಮಾತನಾಡಿ ಸರಿಪಡಿಸಿಕೊಳ್ಳುತ್ತಾರೆ. ಆದರೆ 2ನೇ ಇನ್ನಿಂಗ್ಸ್ನಲ್ಲಿ ಇದೇ ಮೊದಲ ಸಲ ಪ್ರಶಾಂತ್ ಸಂಬರಗಿ ಹಾಗೂ ಶಮಂತ್ ಗೌಡ ಅವರು ದಿವ್ಯಾ ಉರುಡುಗ ಅವರ ಮೇಲೆ ಪಕ್ಷಪಾತ ಮಾಡುತ್ತಿರುವ ಆರೋಪ ಮಾಡಿದ್ದಾರೆ. ಹೌದು, ದಿವ್ಯಾ ಉರುಡುಗ ಈಗ ಮನೆಯ ಕ್ಯಾಪ್ಟನ್ ಆಗಿದ್ದು, ಮನೆಯಲ್ಲಿ ನಡೆಯುತ್ತಿರುವ ಟಾಸ್ಕ್ಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ. ಈ ಸಲ ದಿವ್ಯಾ ಉರುಡುಗ ಅವರು ತಮ್ಮ ಕರ್ತವ್ಯ ನಿರ್ವಹಿಸುವಾಗ ಪಕ್ಷಪಾತ ಮಾಡುತ್ತಿದ್ದು ಮೋಸ ಮಾಡುತ್ತಿದ್ದಾರೆ ಅನ್ನೋ ಆರೋಪ ಕೆಲವರಿಂದ ಕೇಳಿ ಬರುತ್ತಿದೆ.
ಬಿಗ್ ಬಾಸ್ ಮನೆಯಲ್ಲಿ ಸದ್ಯ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಭಾಗಿಯಾಗಲು ಅರ್ಹತೆ ಪಡೆಯಲು ನಾನಾ ರೀತಿಯ ಟಾಸ್ಕ್ಗಳು ನಡೆಯುತ್ತಿವೆ. ಇದರಲ್ಲಿ ಕ್ಯಾಪ್ಟನ್ ದಿವ್ಯಾ ಉರುಡುಗ ಅವರನ್ನು ಬಿಟ್ಟು ಉಳಿದ ಹತ್ತು ಮಂದಿ ಸ್ಪರ್ಧಿಗಳು ಭಾಗಿಯಾಗುತ್ತಿದ್ದಾರೆ. ಈ ಅರ್ಹತಾ ಸುತ್ತಿಗಾಗಿ ಸೆಣಸಾಡುತ್ತಿರುವ ಸ್ಪರ್ಧಿಗಳಲ್ಲಿ ಚಕ್ರವರ್ತಿ ಚಂದ್ರಚೂಡ, ಶಮಂತ್ ಗೌಡ ಹಾಗೂ ಪ್ರಶಾಂತ್ ಸಂಬರಗಿ ಅವರಿಗೆ ದಿವ್ಯಾ ಉರುಡುಗ ಟಾಸ್ಕ್ನಲ್ಲಿ ಅರವಿಂದ್ ಅವರ ವಿಷಯ ಬಂದಾಗ ಪಕ್ಷಪಾತ ಮಾಡುತ್ತಿದ್ದಾರೆ ಎಂದು ದೂರುತ್ತಿದ್ದಾರೆ.
View this post on Instagram
View this post on Instagram
ಇನ್ನು ದಿವ್ಯಾ ಉರುಡುಗ ಮಾತ್ರ ಬಜರ್ ಆದಾಗ ಸ್ಪರ್ಧಿಗಳು ಮನೆಯ ಒಳಗಿನಿಂದ ಬಂದರೆ ಮಾತ್ರ ನೋಡು ಮುದ್ರಣ ಮಾಡಲು ಅರ್ಹತೆ ಪಡೆಯುತ್ತಾರೆ ಅನ್ನೋ ನಿಯಮವನ್ನೇ ನಾವೇ ಮಾಡಿಕೊಂಡಿದ್ದೇವೆ. ಅದನ್ನು ಶಮಂತ್ ಉಲ್ಲಂಘನೆ ಮಾಡಿದ್ದಾರೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
View this post on Instagram
ದಿವ್ಯಾ ಉರುಡುಗ ಮೋಸ ಮಾಡಿದ್ದಾರೆ ಎಂದು ಪ್ರಶಾಂತ್ ಅವರು ಜೋರಾಗಿ ಕೂಗುತ್ತಾ ಹೇಳುತ್ತಾರೆ. ಅದಕ್ಕೆ ದಿವ್ಯಾ ಕೂಗಿದರೆ ತಪ್ಪು ಸರಿಯಾಗೋದಿಲ್ಲ ಎನ್ನುತ್ತಾ ನಿಮಗೆ ಮೈಕ್ ಬೇಕಾ ಎಂದು ವ್ಯಂಗ ಮಾಡುತ್ತಾರೆ. ಇನ್ನು ಆಗಲೇ ಅರವಿಂದ್ ರಘು ಅವರ ವಿಷಯದಲ್ಲಿ ಮಾಡಿದ ನಿಮಯ ಉಲ್ಲಂಘನೆ ಬಗ್ಗೆಯೂ ಪ್ರಶಾಂತ್ ಅವರು ಮಾತನಾಡುತ್ತಾರೆ. ಅದಕ್ಕೆ ದಿವ್ಯಾ ಉರುಡುಗ ರಘು ಅವರಿಗೆ ಸಮಸ್ಯೆ ಇಲ್ಲ ನೀವು ಏಕೆ ಕೇಳುತ್ತೀರಾ. ಯಾರಿಗೆ ಸಮಸ್ಯೆ ಆಗುತ್ತೋ ಅವರು ಕೇಳಲಿ ನಾನು ಉತ್ತರಿಸುತ್ತೇನೆ ಎಂದು ಅರವಿಂದ್ ಅವರ ಪರ ಮಾತನಾಡುತ್ತಾರೆ.
ಇದನ್ನೂ ಓದಿ: Bigg Boss 8 Kannada: ಎಡವಟ್ಟಿನ ಮೇಲೆ ಎಡವಟ್ಟು: ಮತ್ತೆ ಟ್ರೋಲ್ ಆಗುತ್ತಿರುವ ಬಿಗ್ ಬಾಸ್ ಸ್ಪರ್ಧಿ ಕೆ ಪಿ ಅರವಿಂದ್..!
ಈ ವಿಷಯ ಈಗ ಸಾಮಾಜಿಕ ಜಾಲತಾಣದಲ್ಲೂ ಸಹ ಚರ್ಚೆಯಾಗುತ್ತಿದೆ. ದಿವ್ಯಾ ಉರುಡುಗ ಅವರು ಅರವಿಂದ್ ವಿಷಯ ಬಂದಾಗ ಬೇರೆ ಸ್ಪರ್ಧಿಗಳಿಗೆ ಮೋಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ನೀರಿನ ಬಲೂನ್ ಆಟದಲ್ಲೂ ಸಹ ಚಕ್ರವರ್ತಿ ಚಂದ್ರಚೂಡ ಅವರೂ ದಿವ್ಯಾ ಉರುಡುಗ ಅವರ ಮೇಲೆ ಇದೇ ಆರೋಪ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ