Bigg Boss 8 Kannada: ತಂದಿಟ್ಟು ತಮಾಷೆ ನೋಡುವ ಚಕ್ರವರ್ತಿಗೆ ಬಿಸಿ ಮುಟ್ಟಿಸಿದ ಪ್ರಶಾಂತ್ ಸಂಬರಗಿ: ಸುಳ್ಳು ಹೇಳಿ ಸಿಕ್ಕಿ ಬಿದ್ದ ಚಂದ್ರಚೂಡ

ವೈಷ್ಣವಿ ವಿಷಯಕ್ಕೆ ಜಗಳವಾಡಿಕೊಂಡ ಪ್ರಶಾಂತ್​ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ. ಚಕ್ರವರ್ತಿ ಹೇಳಿದ ಸುಳ್ಳು ಬಹಿರಂಗವಾದ ನಂತರ ಸಿಟ್ಟಿಗೆದ್ದು ಅವಾಚ್ಯ ಶಬ್ದಗಳಿಂದ ಪ್ರಶಾಂತ್​ ಅವರನ್ನು ನಿಂದಿಸಿದ ಚಕ್ರವರ್ತಿ.

ಚಕ್ರವರ್ತಿ ಹಾಗೂ ವೈಷ್ಣವಿ ಗೌಡ

ಚಕ್ರವರ್ತಿ ಹಾಗೂ ವೈಷ್ಣವಿ ಗೌಡ

  • Share this:
ಬಿಗ್ ಬಾಸ್ ಸೀಸನ್ 8ರ ಎರಡನೇ ಇನ್ನಿಂಗ್ಸ್​ನಲ್ಲಿ​ ಮನೆಯ ಕುಚಿಕುಗಳಾದ ಚಕ್ರವರ್ತಿ ಚಂದ್ರಚೂಡ ಹಾಗೂ ಪ್ರಶಾಂತ್ ಸಂಬರಗಿ ಅವರು ಮನೆಯಲ್ಲಿ ಆಗಾಗ ಜಗಳ ಆಡುತ್ತಾರೆ. ಮತ್ತೆ ಈ ಜೋಡಿಗಳು ಒಂದಾಗುತ್ತಾರೆ. ಇದೇ ವಿಷಯವಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಟ್ರೋಲಿಗರು ಈ ಜೋಡಿಯನ್ನು ಸಾಕಷ್ಟು ಸಲ ಟ್ರೋಲ್​ ಮಾಡಿದ್ದಾರೆ. ಇನ್ನು ಈ ಜೋಡಿಯ ನಡುವಿನ ಸ್ನೇಹದ ಬಗ್ಗೆಯೂ ಸಹ ಸಾಕಷ್ಟು ಮಂದಿ ಖುಷಿಯಿಂದ ಬರೆದುಕೊಳ್ಳುತ್ತಾರೆ. ಪ್ರಶಾಂತ್ ಹಾಗೂ ಚಕ್ರವರ್ತಿ ಜಗಳವಾಡಿದರೆ  ಒಂದಾಗಲು ಒಂದು ಸಿಗರೇಟ್ ಸಾಕು ಎನ್ನುತ್ತಿದ್ದಾರೆ. ಇನ್ನು ನೆಟ್ಟಿಗರ ಈ ಮಾತುಗಳು ಈಗಾಗಲೇ ಸರಿ ಎಂದು ಸಾಕಷ್ಟು ಸಲ ಸಾಬೀತಾಗಿದೆ. ಇಂತಹ ಕುಚಿಕುಗಳು ಈಗ ಮತ್ತೆ ಜಗಳವಾಡಿಕೊಂಡಿದ್ದಾರೆ. ಹೌದು, ಎಂದಿನಂತೆ ಚಕ್ರವರ್ತಿ ಮನೆಯಲ್ಲಿ ನಡೆದ ಘಟನೆಯ ಬಗ್ಗೆ ಹಾಗೂ ಬೇರೆ ಸ್ಪರ್ಧಿಯೊಬ್ಬರು ಪ್ರಶಾಂತ್ ಸಂಬರಗಿ ಅವರ ಬಗ್ಗೆ ಮಾತನಾಡಿದ  ಕುರಿತು ಪ್ರಶಾಂತ್ ಹತ್ತಿರ ಹೇಳುತ್ತಾರೆ. 

ಈಗ ಇದೇ ವಿಷಯ ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ ಅವರ ನಡುವೆ ಜಗಳವಾಗಲು ಕಾರಣವಾಗಿದೆ. ಹೌದು, ಪ್ರಶಾಂತ್ ಹಾಗೂ ಚಕ್ರವರ್ತಿ ನಿನ್ನೆಯ ಸಂಚಿಕೆಯಲ್ಲಿ ವೈಷ್ಣವಿ ಅವರನ್ನು ಈ ಸಲ ಕ್ಯಾಪ್ಟನ್​ ಮಾಡುವ ಅವಕಾಶ ಸಿಕ್ಕರೆ ಬೆಂಬಲ ನೀಡುವುದಾಗಿ ಹೇಳಿದ್ದರು. ಇನ್ನು ಇದೇ ವಿಷಯವಾಗಿ ಪ್ರಶಾಂತ್ ಅವರು ವೈಷ್ಣವಿ ಅವರ ಬಳಿ ಇನ್ನು ಕೆಲವೊಂದು ವಿಷಯಗಳ ಬಗ್ಗೆ ಮಾತನಾಡಿದ್ದರು.


ಪ್ರಶಾಂತ್ ಸಂಬರಗಿ ಹಾಗೂ ವೈಷ್ಣವಿ ನಡುವೆ ಆದ ಮಾತು ಈಗ ಮನೆಯವರ ಮುಂದೆ ಚರ್ಚೆಗೆ ಬಂದಿದ್ದು, ವೈಷ್ಣವಿ ಈ ತಪ್ಪು ಮಾಡಿದ್ದಾರೆ ಎಂದು ಚಕ್ರವರ್ತಿ ಚಂದ್ರಚೂಡ ಅವರು ಹೇಳಿದ್ದಾರೆ. ಮನೆಯವರ ಮುಂದೆ ವೈಷ್ಣವಿ ತಮಾಷೆ ಮಾಡುತ್ತಾ ನಾನು ಪ್ರಶಾಂತ್​ ಸಂಬರಗಿ ಹೇಳಿದ್ದನ್ನು ಬಿಟ್ಟು ಉಳಿದ ಎಲ್ಲವನ್ನೂ ಮಾಡಿದ್ದೇನೆ ಎಂದಿದ್ದಾರಂತೆ. ವೈಷ್ಣವಿ ಈ ಮಾತನ್ನು ಹೇಳಿದಾಗ ಚಕ್ರವರ್ತಿ ಚಂದ್ರಚೂಡ ಅವರು ಅಲ್ಲೆ ಇದ್ದುದಾಗಿ ಪ್ರಶಾಂತ್​ಗೆ ಹೇಳಿದ್ದಾರೆ.

ಇದನ್ನೂ ಓದಿ: Sunny Leone: ಮತ್ತೆ ಸ್ಯಾಂಡಲ್​ವುಡ್​ ಕದ ತಟ್ಟಿದ ಸನ್ನಿ ಲಿಯೋನ್​: ಒಂದು ಹಾಡಿಗೆ ಮಾದಕ ತಾರೆ ಪಡೆದ ಸಂಭಾವನೆ ಎಷ್ಟು ಗೊತ್ತಾ..?

ಇನ್ನು ಚಕ್ರವರ್ತಿ ಈ ವಿಷಯ ಹೇಳಿದ ನಂತರ ಪ್ರಶಾಂತ್ ಸಂಬರಗಿ ಅದನ್ನು ವೈಷ್ಣವಿ ಗೌಡ ಅವರ ಬಳಿಯೇ ಕೇಳುವುದಾಗಿ ಹೇಳುತ್ತಾರೆ. ಆಗ ಚಕ್ರವರ್ತಿ ಈ ವಿಷಯ ಹೇಳಿದ್ದೇ ತಪ್ಪಾಯಿತಾ..? ಈ ವಿಷಯ ಹೋಗಿ ಅವರ ಬಳಿ ಕೇಳಿ ಮಾತನ್ನು ದೊಡ್ಡದು ಮಾಡಬೇಡ ಮಾಡಬೇಡ, ಅರ್ಥ ಮಾಡಿಕೊಂಡು ಆಟವಾಡು. ಕೇಳಿ ಗಲೀಜು ಮಾಡಬೇಡ ಎಂದಿದ್ದಾರೆ. ಆದರೂ ಪ್ರಶಾಂತ್​ ಸಂಬರಗಿ ಅವರು ತಡಿಯಲಾರದೆ ವೈಷ್ಣವಿ ಹೀಗೆ ಮಾತನಾಡಲು ಸಾಧ್ಯವಿಲ್ಲ ಬಳಿ ಚಕ್ರವರ್ತಿ ಅವರು ಹೇಳಿದ ಬಗ್ಗೆ ಕೇಳುತ್ತಾರೆ.

ಇದನ್ನೂ ಓದಿ: ತುಂಡುಡುಗೆಯಲ್ಲಿ ಹಾಟ್​ ಫೋಟೋಶೂಟ್​ಗೆ ಪೋಸ್​ ಕೊಟ್ಟ ಕರಾವಳಿ ಸುಂದರಿ ಪೂಜಾ ಹೆಗ್ಡೆ..!

ಪ್ರಶಾಂತ್ ಕೇಳಿದ ಮಾತಿಗೆ ಪ್ರತಿಕ್ರಿಯಿಸಿದ ವೈಷ್ಣವಿ ಎಂದಿನಂತೆ ತಾಳ್ಮೆಯಿಂದ ನಾನು ಹೀಗೆ ಮಾಡೋಲ್ಲ ಹಾಗೂ ಯಾವತ್ತೂ ಮಾಡುವುದೂ ಇಲ್ಲ ಅಂತಾರೆ. ಇನ್ನು ಚಕ್ರವರ್ತಿ ಬಳಿ ಬಂದು ಸುಳ್ಳು ಏತಕ್ಕೆ ಹೇಳಿದ್ದು ಅಂತ ಪ್ರಶಾಂತ್ ಪ್ರಶ್ನಿಸಿದಾಗ, ಚಕ್ರವರ್ತಿ ಮಾಡಿದ ತಪ್ಪು ಸಿಕ್ಕಿ ಬೀಳುತ್ತದೆ. ಅದಕ್ಕೆ ಕೆಟ್ಟದಾಗಿ ಮಾತನಾಡುವ ಚಕ್ರವರ್ತಿ ಎಂದಿನಂತೆ ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳಲಾರಂಭಿಸುತ್ತಾರೆ. ನಾನು ತಮಾಷೆ ಮಡಿದ್ದು, ಎಲ್ಲರ ಎದುರು ಹೀಗೆ ವೈಷ್ಣವಿ ಹೇಳಿದ್ದು ಅಂತ ನಾನು ಹೇಳಲೇ ಇಲ್ಲ ಎನ್ನುತ್ತಾರೆ. ಇದರ ನಡುವೆ ಪ್ರಶಾಂತ್ ಸಂಬರಗಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಚಕ್ರವರ್ತಿ. ಇನ್ನು ಈ ಕುಚಿಕುಗಳ ಜೋಡಿ ನೋಡಿ ಹೈರಾಣಾಗದ ಮನೆಯವರು ಚಕ್ರವರ್ತಿ ಸುಳ್ಳುವ ಹೇಳುವ ರೀತಿಯಿಂದ ತಬ್ಬಿಬ್ಬಾಗುತ್ತಾರೆ.
Published by:Anitha E
First published: