HOME » NEWS » Entertainment » BIGG BOSS 8 KANNADA NOMINATIONS DIVYA SURESH AND MANJU GOT NOMINATED FIRST DAY ONLY AE

Bigg Boss 8 Nomination: ಮೊದಲ ದಿನವೇ ನಾಮಿನೇಟ್​ ಆದ ದಿವ್ಯಾ ಸುರೇಶ್​-ಮಂಜು: ಟಾರ್ಗೆಟ್​ ಮಾಡಿದ್ರಾ ಅರವಿಂದ್​-ದಿವ್ಯಾ ಉರುಡುಗ..!

ಬಿಗ್ ಬಾಸ್​ ಮನೆಯಲ್ಲಿ ಮೊದಲ ದಿನವೇ ನಾಮಿನೇಷನ್​ ಪ್ರಕ್ರಿಯೆ ಕಿಡಿ ಹೊತ್ತಿಸಿದೆ. ಸ್ಪರ್ಧಿಗಳ ಮನಸ್ಸಿನಲ್ಲಿದ್ದ ಅಸಮಾಧಾನ ಹೊರ ಬಿದ್ದಿದೆ. ದಿವ್ಯಾ ಸುರೇಶ್​, ಮಂಜು, ಪ್ರಶಾಂತ್​ ಸಂಬರಗಿ, ಚಕ್ರವರ್ತಿ ಚಂದ್ರಚೂಡ್​ ಸೇರಿದಂತೆ ಇನ್ನೂ ಕೆಲವರು ಮೊಲದ ದಿನವೇ ನಾಮಿನೇಟ್​ ಆಗಿದ್ದಾರೆ. ಮನೆಗೆ ಎಂಟ್ರಿ ಕೊಡುತ್ತಿದ್ದಂತೆಯೇ ಬಿಗ್ ಬಾಸ್​ ಮನೆಯಲ್ಲಿ ಆಟ ಆರಂಭವಾಗಿದೆ.

Anitha E | news18-kannada
Updated:June 24, 2021, 1:25 PM IST
Bigg Boss 8 Nomination: ಮೊದಲ ದಿನವೇ ನಾಮಿನೇಟ್​ ಆದ ದಿವ್ಯಾ ಸುರೇಶ್​-ಮಂಜು: ಟಾರ್ಗೆಟ್​ ಮಾಡಿದ್ರಾ ಅರವಿಂದ್​-ದಿವ್ಯಾ ಉರುಡುಗ..!
ಬಿಗ್​ಬಾಸ್​ ಸ್ಪರ್ಧಿಗಳು
  • Share this:
ಬಿಗ್ ಬಾಸ್​ ಸೀಸನ್​ 8ರ ಸೆಕೆಂಡ್​ ಇನ್ನಿಂಗ್ಸ್​ಗೆ ಈಗಾಗಲೇ ಚಾಲನೆ ಸಿಕ್ಕಿದೆ. 12 ಮಂದಿ ಸ್ಪರ್ಧಿಗಳು ಬಿಗ್ ಬಾಸ್​ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಮನೆಗೆ ಹೋಗುವ ಮುನ್ನವೇ ಕೆಲ ಸ್ಪರ್ಧಿಗಳಿಗೆ  ವೇದಿಕೆ ಮೇಲೆಯೇ ಒಂದೊಂದು ಟಾಸ್ಕ್​ ನೀಡಲಾಗಿತ್ತು. ಆ ಟಾಸ್ಕ್​ನಲ್ಲಿ ಗೆದ್ದವರಿಗೆ ಒಂದು ವಿಶೇಷ ಕೂಪನ್​ ಕೊಡುವುದಾಗಿ ಬಿಗ್​ ಬಾಸ್​ ಹೇಳಿದ್ದರು. ಇನ್ನು ಈ ಟಾಸ್ಕ್​ನಲ್ಲಿ ಕೆಲವು ಗೆದ್ದರೆ ಮತ್ತೆ ಕೆಲವರು ಸೋಲುಂಡರು. ಇನ್ನು ಬಿಗ್​ ಬಾಸ್​ ಮನೆಗೆ ಕಾಲಿಡುವ ಪ್ರಕ್ರಿಯೆ ಸಹ ಈ ಸಲ ಟಾಸ್ಕ್​ನಂತೆಯೇ ಇತ್ತು. ಮನೆಯಲ್ಲಿರುವ ಐದು ದ್ವಾರಗಳಲ್ಲಿ ಒಬ್ಬೊಬ್ಬರನ್ನು ಒಂದೊಂದು ಬಾಗಿಲಿನ ಮೂಲಕ ಒಳಗೆ ಕಳುಹಿಸಲಾಯಿತು. ಮೊದಲಿಗೆ ಮನೆಗೆ ಎಂಟ್ರಿ ಪಡೆದಿದ್ದು ದಿವ್ಯಾ ಸುರೇಶ್​ ಹಾಗೂ ದಿವ್ಯಾ ಉರುಡುಗ. ಈ ಇಬ್ಬರಿಗೂ ಸಹ ಒಂದು ಟಾಸ್ಕ್​ ನೀಡಲಾಗಿತ್ತು. ಒಬ್ಬರ ಹಣೆಗೆ ಮತ್ತೊಬ್ಬರು ಬಿಂದಿ ಇಡಬೇಕಾಗಿತ್ತು. ಯಾರು ಮೊದಲು ಇಡುತ್ತಾರೋ ಅವರೇ ಈ ಆಟದಲ್ಲಿ ಗೆಲ್ಲುತ್ತಾರೆ ಎಂದು ಹೇಳಲಾಗಿತ್ತು. 

ಮೊದಲ ಟಾಸ್ಕ್​ನಲ್ಲಿ ಈ ಸಲ ದಿವ್ಯಾ ಸುರೇಶ್​ ಗೆದ್ದು ದಿವ್ಯಾ ಸೋಲನುಭವಿಸಿದರು. ದಿವ್ಯಾ ಉರುಡುಗ ಗೆದ್ದೇ ಗೆಲ್ಲುತ್ತಾರೆ ಅಂತ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಶೆಯಾಗಿತ್ತು. ಅರ್ಧಕ್ಕೆ ನಿಂತ ಕನಸನ್ನು ಪೂರ್ಣಗೊಳಿಸಿಕೊಳ್ಳಲು ದಿವ್ಯಾ ಸುರೇಶ್​ ಈ ಸಲ ಪೂರ್ಣ ತಯಾರಿಯೊಂದಿಗೆ ಬಂದಿರುವಂತೆ ಕಾಣಿಸುತ್ತಿದೆ. ಅಲ್ಲದೆ ಮಂಜು ಜೊತೆ ಮಾತ್ರ ಕಾಣಿಸಿಕೊಳ್ಳುತ್ತಿದ್ದ ದಿವ್ಯಾ ಇನ್ನು ಮುಂದೆ ಮನೆಯ ಇತರೆ ಸ್ಪರ್ಧಿಗಳೊಂದಿಗೂ ಸಮಯ ಕಳೆಯುವುದಾಗಿ ವೇದಿಕೆ ಮೇಲೆ ಸುದೀಪ್​ ಅವರಿಗೆ ತಿಳಿಸಿದ್ದಾರೆ.





ಇನ್ನು ಮೊದಲ ದಿನವೇ ಈ ಸಲ ಬಿಗ್ ಬಾಸ್​ ಮನೆಯಲ್ಲಿ ಟಾಸ್ಕ್​ಗಳ ಜತೆಗೆ ನಾಮಿನೇಷನ್​ ಪ್ರಕ್ರಿಯೆ ಸಹ ನಡೆಸಲಾಯಿತು. ಇದು ಮಾತ್ರ 12 ಮಂದಿ ಸ್ಪರ್ಧಿಗಳಿಗೆ ಸಿಕ್ಕ ಮೊದಲ ದಿನದ ಶಾಕಿಂಗ್​ ನ್ಯೂಸ್​ ಆಗಿತ್ತು. ಮನೆಗೆ ಹೋಗಿ ಹಳೇ ಸಂಚಿಕೆಗಳನ್ನು ನೋಡಿ ಬಂದಿದ್ದ ಸ್ಪರ್ಧಿಗಳಿಗೆ ಯಾರು ಸ್ನೇಹಿತರು ಹಾಗೂ ಯಾರು ಹಿಂದೆ ಬೆನ್ನಿಗೆ ಚೂರಿ ಹಾಕಿದ್ದಾರೆ ಅನ್ನೋದು ತಿಳಿದಿದೆ. ಇದರಿಂದಾಗಿಯೇ ಮೊಲದ ದಿನ ನಡೆದ ನಾಮಿನೇಷನ್​ ಮನೆಯಲ್ಲಿ ನಿಜಕ್ಕೂ ಬೆಂಕಿಯ ಕಿಡಿ ಹೊತ್ತಿಸಿದೆ.






ಹೌದು, ಮೊದಲ ದಿನವೇ ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್​, ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್​, ಮಂಜು ಪಾವಗಡ, ರಘು, ಶಮಂತ್ ಹಾಗೂ ಪ್ರಿಯಾಂಕಾ ತಿಮ್ಮೇಶ್​ ನಾಮಿನೇಟ್​ ಆಗಿದ್ದಾರೆ. ಇವರಲ್ಲಿ ಹೆಚ್ಚು ಮತಗಳನ್ನು ಪಡೆದವರು ಅಂದರೆ ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್​.

ಇದನ್ನೂ ಓದಿ: Bigg Boss 8 Kannada: ವೈಲೆಂಟ್​ ಆದ್ರೆ ಕಚ್ಚಿ ಬಿಡ್ತೀನಿ ಎಂದ ಬಿಗ್ ಬಾಸ್ 8ರ ಸ್ಪರ್ಧಿಗೆ ಕಿವಿ ಮಾತು ಹೇಳಿದ ಕಿಚ್ಚ ಸುದೀಪ್​..!

ಈ ಸಲವೂ ಇವರು ಮನೆಯಲ್ಲಿರುವ ಇತರೆ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದಕ್ಕೆ ಕಾರಣ ಚಕ್ರವರ್ತಿ ಹಾಗೂ ಪ್ರಶಾಂತ್ ಸಂಬರಗಿ ಬಿಗ್ ಬಾಸ್​ ಮನೆಯಿಂದ ಹೊರ ಹೋದ ನಂತರ ನೀಡಿದ ಸಂದರ್ಶನಗಳಲ್ಲಿ ಇತರೆ ಸ್ಪರ್ಧಿಗಳ ಬಗ್ಗೆ ಮನಸ್ಸಿಗೆ ಬಂದಂತೆ ಮಾತನಾಡಿದ್ದಾರಂತೆ. ಈ ಕಾರಣದಿಂದಲೇ ಮನೆವರು ಈ ಸಲ ಇವರನ್ನು ನಾಮಿನೇಟ್ ಮಾಡಿದ್ದಾರೆ.

ಟಾರ್ಗೆಟ್​ ಮಾಡಿದ್ರಾ ಅರವಿಂದ್​-ದಿವ್ಯಾ ಉರುಡುಗ

ನಾಮಿನೇಷನ್​ ಪ್ರಕ್ರಿಯೆಯಲ್ಲಿ ಪ್ರತಿ ಸ್ಪರ್ಧಿಗಳೂ ಸಹ ನಾಮಿನೇಟ್​ ಮಾಡಿದವರ ಬಗ್ಗೆ ಇದ್ದ ಅಸಮಾಧಾನವನ್ನು ಹೊರ ಹಾಕಿದ್ದಾರೆ. ದಿವ್ಯಾ ಉರುಡುಗ ಹಾಗೂ ಅರವಿಂದ್​ ಕೆಪಿ ಇಬ್ಬರೂ ದಿವ್ಯಾ ಸುರೇಶ್​ ಹಾಗೂ ಮಂಜು ಪಾವಗಡ ಅವರನ್ನು ನಾಮಿನೇಟ್​ ಮಾಡಿದ್ದಾರೆ. ಈ ವಿಷಯ ದಿವ್ಯಾ ಸುರೇಶ್​ ಅವರಿಗೆ ಬೇಸರ ಉಂಟುಮಾಡಿದೆ. ಆ ಇಬ್ಬರೂ ನಮ್ಮಿಬ್ಬರನ್ನು ನಾಮಿನೇಟ್​ ಮಾಡಿದ್ದಾರೆ ಎನ್ನುವ ಮೂಲಕ ಟಾರ್ಗೆಟ್​ ಮಾಡಿದ್ದಾರಾ ಎಂದು ಪರೋಕ್ಷವಾಗಿ ಪ್ರಿಯಾಂಕಾ ತಿಮ್ಮೇಶ್​ ಅವರ ಬಳಿ ಚರ್ಚಿಸಿದ್ದಾರೆ ದಿವ್ಯಾ ಸುರೇಶ್​.
Published by: Anitha E
First published: June 24, 2021, 1:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories