Bigg Boss 8 Kannada: ಟಾಸ್ಕ್​ನಲ್ಲಿ ಅರವಿಂದನ್ನೇ ಸೋಲಿಸಿ ಬಿಗ್ ಬಾಸ್ ಸೀಸನ್ 8ರ ಮೊದಲ ಮಹಿಳಾ ಕ್ಯಾಪ್ಟನ್ ಆದ ದಿವ್ಯಾ ಉರುಡುಗ

Bigg Boss 8 Kannada: ಬಿಗ್ ಬಾಸ್ 8ನೇ ಸೀಸನ್​ನ ಮೊದಲ ಕ್ಯಾಪ್ಟನ್​ ಆಗಿ ದಿವ್ಯಾ ಉರುಡುಗ ಆಯ್ಕೆಯಾಗಿದ್ದಾರೆ. ಸೂರ್ಯ ಸೇನೆ ತಂಡದ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಭಾಗಿಯಾಗಲು ಅರ್ಹತೆ ಪಡೆದಿತ್ತು. ಇದರಲ್ಲಿ ಪ್ರಶಾಂತ್ ಸಂಬರಗಿ, ವೈಷ್ಣವಿ, ಚಕ್ರವರ್ತಿ ಚಂದ್ರಚೂಡ, ಶಮಂತ್, ಅರವಿಂದ್ ಅವರನ್ನು ಸೋಲಿಸುವ ಮೂಲಕ ದಿವ್ಯಾ ಉರುಡುಗ ಕ್ಯಾಪ್ಟನ್​ ಆಗಿದ್ದಾರೆ. 

ದಿವ್ಯಾ ಉರುಡುಗ

ದಿವ್ಯಾ ಉರುಡುಗ

  • Share this:
ಬಿಗ್ ಬಾಸ್​ ಕನ್ನಡ ಸೀಸನ್​ 8ರ ಸೆಕೆಂಡ್​ ಇನ್ನಿಂಗ್ಸ್​ನ ಮೊದಲ ವಾರದಲ್ಲಿ ಕ್ಯಾಪ್ಟನ್ಸಿ ಟಾಸ್ಕ್​ ನಡೆದು, ಅದರಲ್ಲಿ ಮತ್ತೆ ಹುಡುಗರೇ ಮೇಲುಗೈ ಸಾಧಿಸಿದ್ದರು. ಈ ಮೂಲಕ ಸೆಕೆಂಡ್​ ಇನ್ನಿಂಗ್ಸ್​ನ ಮೊದಲ ವಾರವೂ ಯಾವೊಬ್ಬ ಹುಡುಗಿಯೂ ಕ್ಯಾಪ್ಟನ್​ ಆಗಿ ಆಯ್ಕೆಯಾಗಲಿಲ್ಲ. ಮಂಜು ಪಾವಗಡ ಕ್ಯಾಪ್ಟನ್​ ಆಗಿ ಆಯ್ಕೆಯಾದ ನಂತರ ವಾರತ ಕತೆ ಕಿಚ್ಚ ಜೊತೆ ಸಂಚಿಕೆಯಲ್ಲಿ ಕಿಚ್ಚ ಸುದೀಪ್​ ಸಹ ಹೆಣ್ಣು ಮಕ್ಕಳು ಕ್ಯಾಪ್ಟನ್​ ಆಗಿ ಆ್ಯಕೆಯಾಗದ ಬಗ್ಗೆ ಚರ್ಚಿಸಿದ್ದರು. ಹೆಣ್ಣು ಮಕ್ಕಳು ಆಯ್ಕೆಯಾಗದಕ್ಕೆ ನೀಡಿದ್ದ ಕಾರಣ ಸಂಜಸವಲ್ಲ ಎಂದೂ ಹೇಳಿದ್ದರು. ಆದರೆ ಸೆಕೆಂಡ್​ ಇನ್ನಿಂಗ್ಸ್​ನ ಎರಡನೇ ವಾರ ಸಹ ಮನೆಯಲ್ಲಿ ಕ್ಯಾಪ್ಟನಸಿಗಾಗಿ ಸಾಕಷ್ಟು ಟಾಸ್ಕ್​ಗಳು ನಡೆದಿದ್ದು, ಅದರಲ್ಲಿ ಪ್ರತಿ ವಾರದಂತೆ ಎಲ್ಲರೂ ಬಾಗಿಯಾಗಿದ್ದರು. ಆದರೆ ಈ ಸಲ ಮೊದಲ ಬಾರಿಗೆ ಹುಡಿಗಿಯೊಬ್ಬರು ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. 

ಬಿಗ್ ಬಾಸ್ 8ನೇ ಸೀಸನ್​ನ ಮೊದಲ ಕ್ಯಾಪ್ಟನ್​ ಆಗಿ ದಿವ್ಯಾ ಉರುಡುಗ ಆಯ್ಕೆಯಾಗಿದ್ದಾರೆ. ಸೂರ್ಯ ಸೇನೆ ತಂಡದ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಭಾಗಿಯಾಗಲು ಅರ್ಹತೆ ಪಡೆದಿತ್ತು. ಇದರಲ್ಲಿ ಪ್ರಶಾಂತ್ ಸಂಬರಗಿ, ವೈಷ್ಣವಿ, ಚಕ್ರವರ್ತಿ ಚಂದ್ರಚೂಡ, ಶಮಂತ್, ಅರವಿಂದ್ ಹಾಗೂ ದಿವ್ಯಾ ಉರುಡುಗ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಭಾಗಿಯಾಗಿದ್ದರು. ಇಷ್ಟು ಮಂದಿಯನ್ನು ಸೋಲಿಸುವ ಮೂಲಕ ದಿವ್ಯಾ ಉರುಡುಗ ಕ್ಯಾಪ್ಟನ್​ ಆಗಿದ್ದಾರೆ.






ಇನ್ನು ಯಾರು ಹೆಚ್ಚು ಬಟ್ಟೆ ತೊಡುತ್ತಾರೋ ಅವರೇ ಈ ವಾರದ ಕ್ಯಾಪ್ಟನ್​ ಎಂದು ಬಿಗ್ ಬಾಸ್​ ಹೇಳುತ್ತಿದ್ದಂತೆಯೇ ಸ್ಪರ್ಧಿಗಳು ಮುಗಿಬಿದ್ದು ಬಟ್ಟೆ ತೊಡಲು ಪ್ರಾರಂಭಿಸಿದರು. ಈ ಟಾಸ್ಕ್​ನಲ್ಲಿ ದಿವ್ಯಾ ಉರುಡುಗ ಅತಿ ಹೆಚ್ಚು ಬಟ್ಟೆಗಳನ್ನು ತೊಡುವ ಮೂಲಕ ಟಾಸ್ಕ್​ನಲ್ಲಿ ಗೆದ್ದು ಮನೆಯ ಮೊದಲ ಮಹಿಳಾ ಕ್ಯಾಪ್ಟನ್​ ಆಗಿದ್ದಾರೆ.

ಇದನ್ನೂ ಓದಿ: Bigg Boss 8 Kannada: ಸಿನಿಮಾ ಆಗಲಿದೆ ಅರವಿಂದ್​-ದಿವ್ಯಾ ಉರುಡುಗ ಲವ್​ ಸ್ಟೋರಿ: ಅರ್ಧ ಗಂಟೆಯಲ್ಲಿ ಕಥೆ ರೆಡಿಯಂತೆ..!

ಕ್ಯಾಪ್ಟನ್​ ಆದ ನಂತರ ದಿವ್ಯಾ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ತುಂಬಾ ಸಮಯ ಮಾತನಾಡಲು ಪ್ರಯತ್ನಿಸಿದರೂ ಅವರಿಗೆ ಮಾತನಾಡಲು ಆಗಲಿಲ್ಲ. ಅಷ್ಟು ಭಾವುಕರಾಗಿದ್ದರು. ಇನ್ನು ದಿವ್ಯಾ ಉರುಡುಗ ತಮಗೆ ಸಹಾಯ ಮಾಡಿದ ಇತರೆ ಮಹಿಳಾ ಸ್ಪರ್ಧಿಗಳಿಗೆ ಮೊದಲು ಧನ್ಯವಾದ ತಿಳಿಸಿದರು.

ದಿವ್ಯಾ ಕ್ಯಾಪ್ಟನ್ ಆಗಿದ್ದಕ್ಕೆ ಭಾವುಕರಾದ ಅರವಿಂದ್​

ಸೂರ್ಯ ಸೇನೆ ಹಾಗೂ ಕ್ವಾಟ್ಲೆ ಕಿಲಾಡಿಗಳ ನಡುವೆ ನಡುವೆ ಟಾಸ್ಕ್​ಗಳಲ್ಲಿ ಹೆಚ್ಚಿನ ಟಾಸ್ಕ್​ಗಳನ್ನು ಗೆಲ್ಲುವ ಮೂಲಕ ಸೂರ್ಯ ಸೇನೆ ಕ್ಯಾಪ್ಟನಸಿ ಟಾಸ್ಕ್​ಗೆ ಆಯ್ಕೆಯಾಗಿತ್ತು. ಹೀಗೆ ಕಡೆಯ ಸುತ್ತಿನಲ್ಲಿ ನಡೆದ ಟಾಸ್ಕ್​ನಲ್ಲಿ ಸೂರ್ಯ ಸೇನೆ ತಂಡದಲ್ಲಿ ಮಾತಿನ ಚಕಮಕಿ ನಡೆದು ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.




ಚಕ್ರವರ್ತಿ ಚಂದ್ರಚೂಡ ಅವರು ಪ್ರಶಾಂತ್ ಸಂಬರಗಿ ಅವರ ಮೇಲೆ ಸಿಟ್ಟಾಗಿ ಕೂಗಾಡಿದ್ದರು. ಚಕ್ರವರ್ತಿ ಅವರು ಶಮಂತ್ ಆಡುವಾಗ ಏನೋ ಹೇಳಲು ಹೋದರೆ ಮಧ್ಯ ಪ್ರವೇಶಿಸುತ್ತಾರೆ ಪ್ರಶಾಂತ್​. ಇದರಿಂದಾಗಿ ಸಿಟ್ಟಾದ ಚಕ್ರವರ್ತಿ ಅವರು ಗೆಳೆಯ ಪ್ರಶಾಂತ್ ಅವರನ್ನು ಮನಸ್ಸಿಗೆ ಬಂದಂತೆ ನಿಂದಿಸುತ್ತಾರೆ. ಹತ್ತಿರ ಹೋಗಿ ಅಪ್ಪುಗೆ ನೀಡಲು ಹೋಗುವ ಪ್ರಶಾಂತ್ ಅವರನ್ನು ತಳ್ಳುತ್ತಾರೆ.

ಇದನ್ನೂ ಓದಿ: Bigg Boss 8: ನಿಧಿ ಜೊತೆ ಅರವಿಂದ್​ ನಡೆದುಕೊಂಡ ರೀತಿ ಸರಿಯಿಲ್ಲ ಎಂದ ದಿವ್ಯಾ ಉರುಡುಗ: ಕಣ್ಣೀರಿಟ್ಟ ಅರವಿಂದ್​..!

ಇನ್ನು ಕಳೆದ ಕೆಲವು ದಿನಗಳಿಂದ ಚಕ್ರವರ್ತಿ ಅವರ ವರ್ತನೆ ಪ್ರಶಾಂತ್ ಅವರಿಗೂ ಇಷ್ಟವಾಗುತ್ತಿಲ್ಲವಂತೆ. ಅದಕ್ಕೆ ಆದಷ್ಟು ಚಕ್ರವರ್ತಿಯಿಂದ ದೂರ ಇರಲಿ ನಿರ್ಧರಿಸಿರುವುದಾಗಿ ಪ್ರಶಾಂತ್ ಶಮಂತ್ ಅವರ ಬಳಿ ಹೇಳಿಕೊಂಡಿದ್ದಾರೆ. ಶಮಂತ್ ಸಹ ಇದೇ ವಿಷಯವಾಗಿ ಪ್ರಶಾಂತ್ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಚಕ್ರವರ್ತಿ ಹಿಂದೆ ತುಂಬಾ ಮಾತನಾಡುತ್ತಿದ್ದು, ಬೇರೆಯವರ ಬಗ್ಗೆ ಸುಮ್ಮನ್ನೆ ಒಪಿನಿಯನ್ ಕ್ರಿಯೇಟ್​ ಮಾಡುತ್ತಿದ್ದಾರೆ ಎಂದು ಶಮಂತ್​ ಆರೋಪಿಸಿದ್ದಾರೆ.
Published by:Anitha E
First published: