Bigg Boss 8 Kannada: ಸಿನಿಮಾ ಆಗಲಿದೆ ಅರವಿಂದ್​-ದಿವ್ಯಾ ಉರುಡುಗ ಲವ್​ ಸ್ಟೋರಿ: ಅರ್ಧ ಗಂಟೆಯಲ್ಲಿ ಕಥೆ ರೆಡಿಯಂತೆ..!

Bigg Boss 8 Kannada-Arviya: ಅರವಿಂದ್ ಹಾಗೂ ದಿವ್ಯಾ ಉರುಡುಗ ಅವರ ಲವ್​ ಸ್ಟೋರಿ ಈಗ ಸಿನಿಮಾ ಆಗಿ ಬೆಳ್ಳಿ ಪರದೆ ಮೇಲೆ ಬರಲಿದೆಯಂತೆ. ಅರ್ಧ ಗಂಟೆಯಲ್ಲಿ ಈ ಸಿನಿಮಾ ಕಥೆ ರೆಡಿಯಾಗಲಿದೆಯಂತೆ.

ಅರ್ವಿಯಾ... ಅರವಿಂದ್​ ಹಾಗೂ ದಿವ್ಯಾ ಉರುಡುಗ

ಅರ್ವಿಯಾ... ಅರವಿಂದ್​ ಹಾಗೂ ದಿವ್ಯಾ ಉರುಡುಗ

  • Share this:
ಬಿಗ್ ಬಾಸ್​ ಮನೆಯಲ್ಲಿ 8ನೇ ಸೀಸನ್​ 2ನೇ ಇನ್ನಿಂಗ್ಸ್​ ಆರಂಭವಾದ ಮೇಲೂ ಏನಾದರೂ ಬದಲಾಗಿಲ್ಲ ಅಂದರೆ ಅದು ಅರ್ವಿಯಾ ಅವರ ನಡುವಿನ ಬಾಂಡಿಂಗ್​. ಹೌದು, ಅರವಿಂದ್ ಹಾಗೂ ದಿವ್ಯಾ ಉರುಡುಗ ಅವರ ನಡುವಿನ ಬಾಂಧವ್ಯ ಇನ್ನೂ ಗಟ್ಟಿಯಾಗಿದೆ. ಈ ಜೋಡಿಯನ್ನು ಜೋಡಲು ಅವರ ಅಭಿಮಾನಿಗಳು ಕಾಯುತ್ತಿರುತ್ತಾರೆ. ನಿನ್ನೆಯ ಸಂಚಿಕೆಯಲ್ಲಿ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ನನ್ನ ರಾಜ ನೀನು ನಿನ್ನ ರಾಣಿ ನಾನು ಅಂತ ಸಖತ್ತಾಗಿ ಸ್ಟೆಪ್​ ಹಾಕಿದ್ದಾರೆ. ಇದೇನು ಇದ್ದಕ್ಕಿದ್ದಂತೆ ಹೀಗೆಲ್ಲ ಹೇಳುತ್ತಿದ್ದಾರೆ ಅನ್ಕೋಬೇಡಿ. ದಿವ್ಯಾ ಉರುಡುಗ ಮನೆಯಲ್ಲಿ ಕಪ್​ ಒಡೆದು ಹಾಕಿದ ಕಾರಣದಿಂದ ಬಿಗ್ ಬಾಸ್​ ಅವರಿಗೆ ಒಂದು ಶಿಕ್ಷೆ ನೀಡುತ್ತಾರೆ. ಅದೇ ಅರವಿಂದ್ ಜೊತೆ ಒಂದು ಹಾಡಿಗೆ ಹೆಜ್ಜೆ ಹಾಕೋದು.  ದಿವ್ಯಾ ಉರುಡುಗ  ಬಿಗ್ ಬಾಸ್​ ಕೊಟ್ಟ ಶಿಕ್ಷೆಯನ್ನು ತುಂಬಾ ಖುಷಿಯಿಂದ ಸ್ವೀಕರಿಸಿದ್ದು, ಅರವಿಂದ್​ ಜತೆ ಸಖತ್ತಾಗಿ ಡ್ಯಾನ್ಸ್​ ಮಾಡಿದ್ದಾರೆ. 

ದಿವ್ಯಾ ಹಾಗೂ ಅರವಿಂದ್​ ಅವರ ನಡುವಿನ ಆತ್ಮೀಯತೆ ಹಾಗೂ ಬಾಂಧವ್ಯ ನೋಡಲು ಅಭಿಮಾನಿಗಳಿಗೆ ಒಂಥರಾ ಖುಷಿ. ಎಲ್ಲರೂ ಈ ಜೋಡಿ ಲವ್​ವಲ್ಲಿದೆ ಅಂದ್ರೆ, ಇವರು ಮಾತ್ರ ನಾವು ಬೆಸ್ಟ್​ ಫ್ರೆಂಡ್ಸ್​ ಅಂತಾರೆ. ನಿಜಕ್ಕೂ ಇವರ ನಡುವೆ ಪ್ರೀತಿ ಚಿಗುರಿದೆ ಅಂತ ಬಿಗ್ ಬಾಸ್​ಮನೆಯಲ್ಲಿ ಸಾಕಷ್ಟು ಮಂದಿ ಅವರ ಕಾಲೆಳೆಯುತ್ತಿರುತ್ತಾರೆ. ಇದಾವುದಕ್ಕೂ ತಲೆ ಕೆಡಿಸಿಕೊಳ್ಳದ ಅರ್ವಿಯಾ ಮಾತ್ರ ತಮ್ಮ ಪಾಡಿಗೆ ತಾವು ಒಟ್ಟಿಗೆ ಕಾಲ ಕಳೆಯುತ್ತಿದ್ದಾರೆ.

Aravind Kp, Divya Uruduga, ಅರವಿಂದ್ ಕೆಪಿ, ದಿವ್ಯಾ ಉರುಡುಗ, ನಿಧಿ ಸುಬ್ಬಯ್ಯ, Aravind Kp and Nidhi Subbaiah fight, Nidhi Subbaiah, Nidhi Subbaiah Divorce, Nidhi Subbaiah wedding, Nidhi Subbaiah Husband, Chakravarthy Chandrachud, ನಿಧಿ ಸುಬ್ಬಯ್ಯ ಮದುವೆ, ನಿಧಿ ಸುಬ್ಬಯ್ಯ ವಿಚ್ಛೇದನ, ನಿಧಿ ಸುಬ್ಬಯ್ಯ ಗಂಡ, ಚಕ್ರವರ್ತಿ ಚಂದ್ರಚೂಡ, Priyanka Timmesh, Bigg Boss 8 Nomination, Bigg Boss 8 Contestants, ದಿವ್ಯಾ ಸುರೇಶ್​, ಬಿಗ್​ ಬಾಸ್​ 8 ನಾಮಿನೇಷನ್​, ಅರವಿಂದ್​ ಕೆ ಪಿ, ದಿವ್ಯಾ ಉರುಡುಗ, ಮಂಜು ಪಾವಗಡ, Manju Pavagada, Divya Suresh, Divya Uruduga, Aravind, Bigg Boss 8 Kannada, Bigg Boss 8 Winner, Divya Uruduga, Divya Suresh, Manju Pavagada, ದಿವ್ಯಾ ಉರುಡುಗ- ಸುರೇಶ್​ ನಡುವೆ ಜಗಳ, ಬಿಗ್​ ಬಾಸ್​ ಸೆಕೆಂಡ್​ ಇನ್ನಿಂಗ್ಸ್​ ಮೊದಲ ಮಹಾ ಸಂಚಿಕೆ, Bigg Boss 8 second innings first episode, Kichcha Sudeep, Aravind, Bigg Boss Second innings, Bigg Boss Second innings from June 23rd, colors kannada, Bigg Boss, ಬುಧವಾರದಿಂದ ಬಿಗ್​ ಬಾಸ್ 8ರ 2ನೇ ಇನ್ನಿಂಗ್ಸ್ ಆರಂಭ, bigg boss kannada, Bigg Boss Kannada 8, Divya Suresh, Sandalwood, Rowdy Baby, Divya Suresh Kissing video, Lip Lock Video, Divya Suresh hot photos, ದಿವ್ಯಾ ಸುರೇಶ್​ ಹಾಟ್​ ಫೋಟೋಗಳು, ದಿವ್ಯಾ ಸುರೇಶ್​ ಕಿಸ್ಸಿಂಗ್​ ವಿಡಿಯೋ, ರೌಡಿ ಬೇಬಿ ಕನ್ನಡ ಸಿನಿಮಾ, Bigg Boss 8 Divya Uruduga criticized Avravind K Ps behave with Nidhi Subbaiah in That Task ae
ಅರವಿಂದ್​ - ದಿವ್ಯಾ ಉರುಡುಗ


ನಿನ್ನೆ ದಿವ್ಯಾ ಉರುಡುಗ ಹೇಳಿದ ಮಾತಿನಿಂದಾಗಿ ಬೈಕರ್​ ಅರವಿಂದ್ ಕಣ್ಣೀರಿಟ್ಟಿದ್ದಾರೆ. ಟಿಶು ಪೇಪರ್​ ಟಾಸ್ಕ್​ ಆಡುವ ವೇಳೆ ಅರವಿಂದ್​ ನಿಧಿ ಸುಬ್ಬಯ್ಯ ಅವರ ಬಳಿ ಸಿಟ್ಟಿನಿಂದ ವರ್ತಿಸಿದ್ದು, ಒಂದು ಪದವನ್ನು ಬಳಸಿದ್ದರು. ಇದರುಂದಾಗಿ ಅರವಿಂದ್ ಟ್ರೋಲ್​ ಸಹ ಆಗಿದ್ದಾರೆ. ಇದೇ ವಿಷಯವಾಗಿ ದಿವ್ಯಾ ಉರುಡುಗ ಸಹ ನಿನ್ನೆ ಸೂರ್ಯ ಸೇನೆ ತಂಡದ ಎದುರು ಅರವಿಂದ್​ ಅವರು ಮಾಡಿದ್ದು ಸರಿಯಲ್ಲ ಎಂದಿದ್ದಾರೆ. ಆ ಪದವನ್ನು ಬಳಸದೆ ಒಳ್ಳೆಯ ರೀತಿಯಲ್ಲಿ ಮಾತನಾಡುವ ಅವಕಾಶ ಇತ್ತು. ಎಷ್ಟೇ ಸ್ನೇಹಿತರಾದರೂ ಎಲ್ಲರ ಮುಂದೆ ಆ ಪದ ಬಳಕೆ ಮಾಡಿದ್ದು ಸರಿಯಲ್ಲ ಎಂದು ಖಂಡಿಸಿದ್ದಾರೆ. ಇದರಿಂದಾಗಿ ಅರವಿಂದ್​ ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: Bigg Boss 8: ನಿಧಿ ಜೊತೆ ಅರವಿಂದ್​ ನಡೆದುಕೊಂಡ ರೀತಿ ಸರಿಯಿಲ್ಲ ಎಂದ ದಿವ್ಯಾ ಉರುಡುಗ: ಕಣ್ಣೀರಿಟ್ಟ ಅರವಿಂದ್​..!

ಸಿನಿಮಾ ಆಗಲಿದೆ ಅರ್ವಿಯಾ ಲವ್​ ಸ್ಟೋರಿ

ಅರವಿಂದ್ ಹಾಗೂ ದಿವ್ಯಾ ಉರುಡುಗ ಅವರ ಲವ್​ ಸ್ಟೋರಿ ಈಗ ಸಿನಿಮಾ ಆಗಿ ಬೆಳ್ಳಿ ಪರದೆ ಮೇಲೆ ಬರಲಿದೆಯಂತೆ. ಅರ್ಧ ಗಂಟೆಯಲ್ಲಿ ಈ ಸಿನಿಮಾ ಕಥೆ ರೆಡಿಯಾಗಲಿದೆಯಂತೆ. ಅಷ್ಟಕ್ಕೂ ಈ ಸಿನಿಮಾಗೆ ಕಥೆ ಬರೆಯೋದು ಯಾರು ಹಾಗೂ ನಿರ್ದೇಶನ ಮಾಡೋರು ಯಾರು ಅಂತೀರಾ..?

11 ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವುದಾಗಿ ಹೇಳಿಕೊಳ್ಳುವ ಚಕ್ರವರ್ತಿ ಚಂದ್ರಚೂಡ ಅವರು ಅರವಿಂದ್ ಹಾಗೂ ದಿವ್ಯಾ ಅವರ ಲವ್​ ಸ್ಟೋರಿ ಮೇಲೆ ಸಿನಿಮಾ ಮಾಡಲಿದ್ದಾರಂತೆ. ಇವರ ನಡುವಿನ ಸಂಬಂಧ ಹಾಗೂ ಪ್ರೀತಿ ಚಕ್ರವರ್ತಿ ಅವರಿಗೆ ನಿಜವೆನಿಸುತ್ತದೆಯಂತೆ. ಅದಕ್ಕೆ ಇವರಿಬ್ಬರೆಂದು ತುಂಬಾ ಗೌರವವಿದೆಯಂತೆ ಇವರಿಗೆ.

ಇದನ್ನೂ ಓದಿ: Janumada Jodi Shilpa: ಬೆಳ್ಳಿತೆರೆಯಿಂದ ಕಿರುತೆರೆಯತ್ತ ಮುಖ ಮಾಡಿದ ಜನುಮದ ಜೋಡಿ ಖ್ಯಾತಿಯ ನಟಿ ಶಿಲ್ಪಾ ಈಗ ಹೇಗಿದ್ದಾರೆ ಗೊತ್ತಾ..!

ಈ ಸಿನಿಮಾಗೆ ಅರ್ವಿಯಾ ಎಂದು ಟೈಟಲ್​ ಫಿಕ್ಸ್ ಮಾಡಲಾಗಿದ್ದು, ಬಿಗ್ ಬಾಸ್​ ಮನೆಯಿಂದ ಹೊರ ಹೋದ ನಂತರ ಸಿನಿಮಾ ಕೆಲಸಕ್ಕೆ ಚಾಲನೆ ನೀಡುವುದಾಗಿ ಚಕ್ರವರ್ತಿ ಚಂದ್ರಚೂಡ್​ ಹೇಳಿದ್ದಾರೆ. ಇನ್ನು ಈ ಸಿನಿಮಾಗೆ ನಾಯಕ ಅರವಿಂದ್​ ಅವರೇ ಅಂತೆ, ನಾಯಕಿ ದಿವ್ಯಾ ಉರುಡುಗ. ಇನ್ನು ಅರವಿಂದ್ ಅವರಿಗೆ ಅಭಿನಯದ ತರಬೇತಿ ಸಹ ಅವರೇ ಕೊಡುತ್ತಾರಂತೆ. ಇನ್ನು ಈ ಸಿನಿಮಾದಲ್ಲಿ ಶಮಂತ್​ ನಾಯಕಿಯ ಸಹೋದರನ ಪಾತ್ರದಲ್ಲಿ ನಡಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಪ್ರಶಾಂತ್ ಸಂಬರಗಿ ತಾನು ನಾಯಕಿಯ ಅಣ್ಣನ ಪಾತ್ರಧಾರಿ ಎಂದಿದ್ದಾರೆ. ಇನ್ನು ಶಮಂತ್​ ಅವರಿಗೆ ಪಾತ್ರ ಕೋಡಬೇಕೋ ಬೇಡವೋ ಎಂದು ಚಕ್ರವರ್ತಿ ನಿರ್ಧರಿಸುತ್ತಾರಂತೆ. ಅಷ್ಟೇ ಅಲ್ಲ ಈ ಸಿನಿಮಾದಲ್ಲಿ ಬಿಗ್​ ಬಾಸ್​ ಮನೆಯ ಒಂದು ಎಪಿಸೋಡ್​ ಸಹ ಬಂದು ಹೋಗುತ್ತದೆಯಂತೆ.
Published by:Anitha E
First published: