ಬಿಗ್ ಬಾಸ್ ಮನೆಯಲ್ಲಿ 13 ದಿನಗಳನ್ನು ಕಳೆದಿರುವ 11 ಮಂದಿ ಸ್ಪರ್ಧಿಗಳು ಈಗ 14 ದಿನಕ್ಕೆ ಕಾಲಿಡಲಿದ್ದಾರೆ. ಸೆಕೆಂಡ್ ಇನ್ನಿಂಗ್ಸ್ ಆರಂಭವಾದಾಗಿನಿಂದಲೂ ಬಿಗ್ ಬಾಸ್ ಮನೆಯಲ್ಲಿ ಜಗಳ, ಚುಚ್ಚು ಮಾತುಗಳೇ ಹೆಚ್ಚಾಗಿವೆ. ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೊದಲ ದಿನದನಿಂದಲೇ ಆರಂಭವಾದ ಜಗಳ ಇನ್ನೂ ಮುಂದುವರೆಯುತ್ತಲೇ ಇದೆ. ಮೊದಲ ದಿನ ಸಹ ಹೊರಗೆ ಇದ್ದಾಗ ನೋಡಿದ ವಿಡಿಯೋಗಳ ಆಧಾರದ ಮೇಲೆ ಇತರೆ ಸ್ಪರ್ಧಿಗಳನ್ನು ನಾಮಿನೇಟ್ ಮಾಡಲಾಗಿತ್ತು. ಮೊದಲ ವಾರ ಎಲಿಮಿನೇಷನ್ ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು. ಇದರಿಂದಾಗಿ ನಿನ್ನೆ ನಡೆ ಎಲಿಮಿನೇಷನ್ನಲ್ಲಿ ನಟಿ ನಿಧಿ ಸುಬ್ಬಯ್ಯ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರ ನಡೆದರು. ಎಲಿಮಿನೇಷನ್ ಪ್ರಕ್ರಿಯೆ ನಡೆದು ಒಂದು ದಿನ ಕಳೆಯುತ್ತಿದ್ದಂತೆಯೇ ಈ ವಾರದ ನಾಮಿನೇಷನ್ ಪ್ರಕ್ರಿಯೆ ಮತ್ತೆ ಈಗ ಬಿಗ್ ಬಾಸ್ ಮನೆಯಲ್ಲಿ ನಡೆದಿದೆ.
ಈ ವಾರ ಮನೆಯಲ್ಲಿರುವ 11 ಮಂದಿ ಸ್ಪರ್ಧಿಗಳಲ್ಲಿ ಪ್ರತಿಯೊಬ್ಬರೂ ಇಬ್ಬರು ಸ್ಪರ್ಧಿಗಳನ್ನು ನಾಮಿನೇಟ್ ಮಾಡಬೇಕಾಗಿತ್ತು. ನಾಮಿನೇಷನ್ ಮಾಡುವ ಬರದಲ್ಲಿ ಪ್ರತಿಯೊಬ್ಬರೂ ಈಗ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ.
View this post on Instagram
ಇದನ್ನೂ ಓದಿ: ಲಂಕೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ಲೂಸ್ ಮಾದ ಯೋಗಿ
ಅರವಿಂದ್ ಅವರು ಮನೆಯಿಂದ ಹೊರ ಹೋದ ನಿಧಿ ಸುಬ್ಬಯ್ಯ ಅವರಿಂದ ನೇರವಾಗಿ ನಾಮಿನೇಟ್ ಆಗಿದ್ದ ಕಾರಣದಿಂದಾಗಿ ಅವರನ್ನು ದಿವ್ಯಾ ಪಾರು ಮಾಡಲು ಸಾಧ್ಯವಾಗಲಿಲ್ಲ.
ಮಂಜು ಪಾವಗಡ-ದಿವ್ಯಾ ಸುರೇಶ್ ಅವರನ್ನೇ ಮತ್ತೆ ಟಾರ್ಗೆಟ್ ಮಾಡಿದ ಅರವಿಂದ್ ಕೆಪಿ
ಅರವಿಂದ್ ಕೆ ಪಿ ಅವರು ಮೊದಲ ಇನ್ನಿಂಗ್ಸ್ನಲ್ಲಿ ಇದ್ದಂತೆ ಅವರು ಇಲ್ಲ ಅನ್ನೋ ಮಾತುಗಳು ತುಂಬಾ ಕೇಳಿ ಬರುತ್ತಿದೆ. ಅವರು ಈ ಸಲ ಬಿಗ್ ಬಾಸ್ ಮನೆಗೆ ಬಂದಾಗಿನಿಂದ ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಅವರನ್ನೇ ಟಾರ್ಗೆಟ್ ಮಾಡಿಕೊಂಡಿದ್ದಾರೆ. ಈ ಹಿಂದೆ ನಡೆದ ನಾಮಿನೇಷನ್ನಲ್ಲೂ ಈ ಇಬ್ಬರ ಹೆಸರನ್ನೇ ಅರವಿಂದ್ ಹಾಗೂ ದಿವ್ಯಾ ಉರುಡುಗ ತೆಗೆದುಕೊಂಡಿದ್ದರು. ಈ ಸಲ ಮತ್ತೆ ಅರವಿಂದೇ ಅದನ್ನೆ ರಿಪೀಟ್ ಮಾಡಿದ್ದಾರೆ.
ಅರವಿಂದ್ ಅವರ ಈ ನಿರ್ಧಾರವನ್ನು ನೋಡಿದರೆ, ಮಂಜು ಹಾಗೂ ದಿವ್ಯಾ ಪ್ರಬಲ ಸ್ಪರ್ಧಿಗಳು ಎಂಬ ಕಾರಣಕ್ಕೆ ಹೀಗೆ ಟಾರ್ಗೆಟ್ ಮಾಡಿದ್ದಾರಾ ಅನ್ನೋ ಅನುಮಾನ ಕಾಡಲಾರಂಭಿಸಿದೆ. ಈ ಸಲ ಮಂಜು ಅವರು ಟಾಸ್ಕ್ನಲ್ಲಿ ಮಾಡಿದ ಯಾವುದೋ ಒಂದು ಕಾರಣ ಕೊಟ್ಟು ಅವರನ್ನು ನಾಮಿನೇಟ್ ಮಾಡಿದ್ದಾರೆ.
ಇದನ್ನೂ ಓದಿ: Kavya Shastry: ಕ್ಯಾನ್ಸರ್ ರೋಗಿಗಳಿಗಾಗಿ ಕೂದಲು ದಾನ ಮಾಡಿದ ನಟಿ ಕಾವ್ಯಾ ಶಾಸ್ತ್ರಿ..!
ದಿವ್ಯಾ ಸುರೇಶ್ ಅವರ ವರ್ತನೆ ನಾಟಕೀಯ ಹಾಗೂ ಅವರು ಅಡುಗೆ ಮನೆ ಕೆಲಸದಲ್ಲಿ ಹೆ್ಚಾಗಿ ಕಾಣಿಸಿಕೊಂಡಿಲ್ಲ ಅನ್ನೋ ಕಾರಣವನ್ನೇ ಮತ್ತೆ ಕೊಡುವ ಮೂಲಕ ಅವರನ್ನು ನಾಮಿನೇಟ್ ಮಾಡಿದ್ದಾರೆ. ಇನ್ನೂ ದಿವ್ಯಾ ಸುರೇಶ್ ಅವರು ಅಡುಗೆ ಮನೆ ಕೆಲಸದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ ಎಂದು ಬೇರೆ ಯಾವ ಸದಸ್ಯರೂ ಆರೋಪ ಮಾಡಿಲ್ಲ. ಅಲ್ಲದೆ ದಿವ್ಯಾ ಉರುಡುಗ ಅವರೂ ಅರವಿಂದ್ ಆರೋಪಿಸಿದಾಗ ದಿವ್ಯಾ ಸುರೇಶ್ ಅವರ ಪರ ವಾದಿಸಿದ್ದರು.
ಅರವಿಂದ್ ಮೇಲೆ ಸಿಟ್ಟು ತೀರಿಸಿಕೊಂಡ ನಿಧಿ ಸುಬ್ಬಯ್ಯ
ಬಿಗ್ ಬಾಸ್ ಮನೆಯಲ್ಲಿ 12 ದಿನಗಳನ್ನು ಕಳೆದಿದ್ದ ನಿಧಿ ಸುಬ್ಬಯ್ಯ ನಿನ್ನೆ ರಾತ್ರಿ ಮನೆಯಿಂದ ಹೊರ ಬಿದ್ದಿದ್ದಾರೆ. ಸೆಕೆಂಡ್ ಇನ್ನಿಂಗ್ಸ್ನ ಮೊದಲ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಪಂಚರಂಗಿ ಹುಡುಗಿ ನಿಧಿ ಸುಬ್ಬಯ್ಯ ಎಲಿಮಿನೇಟ್ ಆದ ಮೊದಲ ಸ್ಪರ್ಧಿಯಾಗಿದ್ದಾರೆ.
ಸೆಕೆಂಡ್ ಇನ್ನಿಂಗ್ಸ್ ಮೂಲಕ ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿತ್ತು. ಆಗ ಮನೆಯವರು ಮಾಡಿದ ವೋಟ್ ಆಧಾರದ ಮೇಲೆ ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ, ನಿಧಿ ಸುಬ್ಬಯ್ಯ, ರಘು ಗೌಡ, ಪ್ರಿಯಾಂಕಾ ತಿಮ್ಮೇಶ್. ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ನಾಮಿನೇಟ್ ಆಗಿದ್ದರು. ಮೊದಲ ವಾರಾಂತ್ಯದಲ್ಲಿ ಎಲಿಮಿನೇಷನ್ ಪ್ರಕ್ರಿಯೆ ಆಗದ ಕಾರಣದಿಂದ ಅದು ಒಂದು ವಾರ ಮುಂದೆ ಹೋಯಿತು.
ಇನ್ನು ಒಂದು ವಾರದಲ್ಲಿ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟ ಬೆಳವಣಿಗೆಗಳಾಗಿದ್ದವು. ಮನೆಯಲ್ಲಿ ನಡೆದ ಕ್ಯಾಪ್ಟನ್ಸಿ ಟಾಸ್ಕ್ ವೇಳೆ ಅರವಿಂದ್ ಅವರು ನಿಧಿ ವಿಷಯದಲ್ಲಿ ಮಾತು ಜಾರಿದ್ದರು. ಇದರಿಂದಾಗಿ ಸಿಟ್ಟಿಗೆದ್ದ ನಿಧಿ ಅರವಿಂದ್ ಅವರ ಕ್ರೀಡೆ ಹಾಗೂ ಪದಕ ಗೆಲ್ಲುವ ಕುರಿತು ಖಾರವಾಗಿ ಮಾತನಾಡಿದ್ದರು. ಈ ವಿಷಯದಲ್ಲಿ ಅರವಿಂದ್ ಹಾಗೂ ನಿಧಿ ಸುಬ್ಬಯ್ಯ ಅವರ ಅಭಿಮಾನಿಗಳು ಒಬ್ಬರೊನ್ನಬ್ಬರು ಟ್ರೋಲ್ ಮಾಡಿದ್ದರು. ನಿಧಿ ಹಾಗೂ ಅರವಿಂದ್ ಅವರು ಮಾಡಿದ ತಪ್ಪಿಗೆ ಕ್ಷಮೆ ಯಾಚಿಸಬೇಕೆಂದು ಇಬ್ಬರ ಅಭಿಮಾನಿಗಳೂ ಆಗ್ರಹಿಸಿದ್ದರು.
ಇದನ್ನೂ ಓದಿ: Samantha Akkineni: ವೈರಲ್ ಆಗುತ್ತಿರುವ ಸಮಂತಾರ ಬ್ಯಾಕ್ಲೆಸ್ ಫೋಟೋ ನೋಡಿ ಸುಸ್ತಾದ ರಾಕುಲ್ ಪ್ರೀತ್ ಸಿಂಗ್..!
ವಾರದ ಕತೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಅರವಿಂದ್ ಅವರನ್ನು ತರಾಟೆಗೆ ತೆಗೆದುಕೊಂಡ ಸುದೀಪ್, ಯಾವಾಗಲೂ ಕ್ಷಮೆ ಕೇಳು ಸ್ಥಾನದಲ್ಲಿರಬಾರದು ಎಂದಿದ್ದರು. ಅಲ್ಲದೆ ಗೌರವ ಕೊಡುವಂತೆಯೇ ಕೊಟ್ಟು ಮಾತು ಜಾರ ಬಾರದು ಎಂದೂ ಅರವಿಂದ್ ಮಾಡಿದ್ದ ತಪ್ಪನ್ನು ಎತ್ತಿ ತೋರಿಸಿದ್ದರು. ಅಂತೆಯೇ ನಿಧಿ ಅವರಿಗೂ ಸಹ ಓರ್ವ ಕ್ರೀಡಾಪಟುವಾಗಿ ಮತ್ತೊಬ್ಬರ ಸಾಧನೆ ಬಗ್ಗೆ ಮಾತು ಜಾರುವುದು ಸರಿಯಲ್ಲ ಎಂದು ಹೇಳಿ ಇಬ್ಬರ ನಡುವಿನ ಮನಸ್ತಾಪಕ್ಕೆ ಅಂತ್ಯ ಹಾಡಿದ್ದರು.
ನಿಧಿ ಹಾಗೂ ಅರವಿಂದ್ ನಡುವೆ ಕಿಚ್ಚ ಸಂಧಾನ ಮಾಡಿಸಿದ್ದರೂ ಅವರ ನಡುವಿನ ಜಗಳ ಹಾಗೂ ಸಿಟ್ಟು ಕಡಿಮೆಯಾಗಿರಲಿಲ್ಲ. ಹೌದು, ನಿಧಿ ಸುಬ್ಬಯ್ಯ ಅವರು ಮನೆಯಿಂದ ಹೊರ ಬರುವಾಗ ಅದು ಸಾಬೀತಾಯಿತು. ಮನೆಯಿಂದ ಹೊರ ಬರುವ ಮುನ್ನ ನಿಧಿ ಅವರಿಗೆ ಯಾರನ್ನಾದರೂ ಮುಂದಿನ ವಾರಕ್ಕೆ ನಾಮಿನೇಟ್ ಮಾಡುವ ವಿಶೇಷ ಅಧಿಕಾರ ಸಿಕ್ಕಿತ್ತು. ಅದನ್ನು ಬಳಿಸಿಕೊಂಡ ನಿಧಿ, ಅರವಿಂದ್ ಅವರನ್ನು ನೇರವಾಗಿ ನಾಮಿನೇಟ್ ಮಾಡುವ ಮೂಲಕ ತಮ್ಮ ಸಿಟ್ಟು ತೀರಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ