ಬಿಗ್ ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ನ ಮೊದಲ ಎಲಿಮಿನೇಶನ್ ನಡೆದಿದೆ. ಈ ಸಲದ ಎಲಿಮಿನೇಷನ್ ಎಲ್ಲರ ಗಮನ ಸೆಳೆದಿದೆ. ಹೌದು, ಬಿಗ್ ಬಾಸ್ ಮನೆಯಿಂದ ಹೊರ ಹೋಗಿರುವ ಸ್ಪರ್ಧಿಯ ಕಾರಣದಿಂದಾಗಿ ಈ ಸಲ ಎಲಿಮಿನೇಷನ್ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿತ್ತು. ಕಳೆದ ಒಂದು ವಾರ ಮನೆಯಲ್ಲಿ ನೆಗೆಟಿವ್ ವೈಬ್ಸ್ ಜಾಸ್ತಿ ಇದ್ದ ಕಾರಣದಿಂದ ನಾಮಿನೇಷನ್ ತೂಗುಗತ್ತಿ ಚಕ್ರವರ್ತಿ ಚಂದ್ರಚೂಡ ಅವರ ಮೇಲೆ ನೇತಾಡುತ್ತಿತ್ತು ಎಂದು ಎಲ್ಲರೂ ಊಹಿಸಿದ್ದರು. ಇದಕ್ಕೆ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳೂ ಸಹ ಹೊರತಾಗಿರಲಿಲ್ಲ. ಮನೆಯಲ್ಲೂ ಸಹ ಈ ಸಲ ಚಕ್ರವರ್ತಿ ಅವರು ಈ ಸಲ ಎಲಿಮಿನೇಟ್ ಆಗಿ ಮನೆಯಿಂದ ಹೊರ ಹೋಗಲಿದ್ದಾರೆ ಎಂದು ಸಾಕಷ್ಟು ಮಂದಿ ಅಂದಾಜಿಸಿದ್ದರು. ಒಂದು ವೇಳೆ ಚಕ್ರವರ್ತಿ ಅಲ್ಲದಿದ್ದರೂ ಪ್ರಿಯಾಂಕಾ ತಿಮ್ಮೇಶ್ ಎಲಿಮಿನೇಟ್ ಆಗಬಹುದು ಎಂದೂ ಹೇಳಲಾಗುತ್ತಿತ್ತು. ಆದರೆ ಎಲ್ಲರ ಲೆಕ್ಕಾಚಾರ ತಲೆ ಕೆಳಗಾಗಿದೆ.
ಬಿಗ್ ಬಾಸ್ ಮನೆಯಲ್ಲಿ 12 ದಿನಗಳನ್ನು ಕಳೆದಿದ್ದ ನಿಧಿ ಸುಬ್ಬಯ್ಯ ನಿನ್ನೆ ರಾತ್ರಿ ಮನೆಯಿಂದ ಹೊರ ಬಿದ್ದಿದ್ದಾರೆ. ಸೆಕೆಂಡ್ ಇನ್ನಿಂಗ್ಸ್ನ ಮೊದಲ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಪಂಚರಂಗಿ ಹುಡುಗಿ ನಿಧಿ ಸುಬ್ಬಯ್ಯ ಎಲಿಮಿನೇಟ್ ಆದ ಮೊದಲ ಸ್ಪರ್ಧಿಯಾಗಿದ್ದಾರೆ.
View this post on Instagram
ಇದನ್ನೂ ಓದಿ: Bigg Boss 8 Kannada: ಪತ್ರವಳ್ಳಿ ಪದಕ್ಕೆ ಅರ್ಥ ಯಾವ ನಿಘಂಟಿನಲ್ಲೂ ಇಲ್ಲ: ಚಕ್ರವರ್ತಿಗೆ ವಾರ್ನಿಂಗ್ ಕೊಟ್ಟ ಕಿಚ್ಚ ಸುದೀಪ್
ಇನ್ನು ಒಂದು ವಾರದಲ್ಲಿ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟ ಬೆಳವಣಿಗೆಗಳಾಗಿದ್ದವು. ಮನೆಯಲ್ಲಿ ನಡೆದ ಕ್ಯಾಪ್ಟನ್ಸಿ ಟಾಸ್ಕ್ ವೇಳೆ ಅರವಿಂದ್ ಅವರು ನಿಧಿ ವಿಷಯದಲ್ಲಿ ಮಾತು ಜಾರಿದ್ದರು. ಇದರಿಂದಾಗಿ ಸಿಟ್ಟಿಗೆದ್ದ ನಿಧಿ ಅರವಿಂದ್ ಅವರ ಕ್ರೀಡೆ ಹಾಗೂ ಪದಕ ಗೆಲ್ಲುವ ಕುರಿತು ಖಾರವಾಗಿ ಮಾತನಾಡಿದ್ದರು. ಈ ವಿಷಯದಲ್ಲಿ ಅರವಿಂದ್ ಹಾಗೂ ನಿಧಿ ಸುಬ್ಬಯ್ಯ ಅವರ ಅಭಿಮಾನಿಗಳು ಒಬ್ಬರೊನ್ನಬ್ಬರು ಟ್ರೋಲ್ ಮಾಡಿದ್ದರು. ನಿಧಿ ಹಾಗೂ ಅರವಿಂದ್ ಅವರು ಮಾಡಿದ ತಪ್ಪಿಗೆ ಕ್ಷಮೆ ಯಾಚಿಸಬೇಕೆಂದು ಇಬ್ಬರ ಅಭಿಮಾನಿಗಳೂ ಆಗ್ರಹಿಸಿದ್ದರು.
View this post on Instagram
ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣ ಕೊಟ್ಟ ರಿಯಾಕ್ಷನ್ಗೆ ಓವರ್ ಆ್ಯಕ್ಟಿಂಗ್ ದುಡ್ಡು ಕಟ್ ಮಾಡಿ ಎಂದ ನೆಟ್ಟಿಗರು..!
ಅರವಿಂದ್ ಮೇಲೆ ಸಿಟ್ಟು ತೀರಿಸಿಕೊಂಡ ನಿಧಿ ಸುಬ್ಬಯ್ಯ
ನಿಧಿ ಹಾಗೂ ಅರವಿಂದ್ ನಡುವೆ ಕಿಚ್ಚ ಸಂಧಾನ ಮಾಡಿಸಿದ್ದರೂ ಅವರ ನಡುವಿನ ಜಗಳ ಹಾಗೂ ಸಿಟ್ಟು ಕಡಿಮೆಯಾಗಿರಲಿಲ್ಲ. ಹೌದು, ನಿಧಿ ಸುಬ್ಬಯ್ಯ ಅವರು ಮನೆಯಿಂದ ಹೊರ ಬರುವಾಗ ಅದು ಸಾಬೀತಾಯಿತು. ಮನೆಯಿಂದ ಹೊರ ಬರುವ ಮುನ್ನ ನಿಧಿ ಅವರಿಗೆ ಯಾರನ್ನಾದರೂ ಮುಂದಿನ ವಾರಕ್ಕೆ ನಾಮಿನೇಟ್ ಮಾಡುವ ವಿಶೇಷ ಅಧಿಕಾರ ಸಿಕ್ಕಿತ್ತು. ಅದನ್ನು ಬಳಿಸಿಕೊಂಡ ನಿಧಿ, ಅರವಿಂದ್ ಅವರನ್ನು ನೇರವಾಗಿ ನಾಮಿನೇಟ್ ಮಾಡುವ ಮೂಲಕ ತಮ್ಮ ಸಿಟ್ಟು ತೀರಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ