Bigg Boss 8: ಪುಕ್ಸಟ್ಟೆ ಸಲಹೆ ಕೊಟ್ಟ ಪ್ರಶಾಂತ್ ಸಂಬರಗಿ: ದಿವ್ಯಾ ಸುರೇಶ್​ ಗರಂ..!

Divya Suresh-Prashanth Sambargi: ದಿವ್ಯಾ ಸುರೇಶ್​ ಪ್ರಶಾಂತ್​ ಸಂಬರಗಿ ನಡುವೆ ಮಾತುಕತೆ ನಡೆದಿದ್ದು, ವಾತಾವರಣ ಕೊಂಚ ಬಿಸಿಯಾಗಿತ್ತು. ಇನ್ನು ಪ್ರಶಾಂತ್ ಬಿಟ್ಟಿ ಸಲಹೆ ಕೊಟ್ಟು ತಪ್ಪು ಮಾಡಿದೆ ಎಂದ್ರೆ, ನಿಮ್ಮ ಮಾತು ಕೇಳಿದ್ದು ನನ್ನ ತಪ್ಪು ಅಂತ ದಿವ್ಯಾ ಗರಂ ಆಗಿದ್ದಾರೆ.

ದಿವ್ಯಾ ಸುರೇಶ್ ಹಾಗೂ ಪ್ರಶಾಂತ್​ ಸಂಬರಗಿ

ದಿವ್ಯಾ ಸುರೇಶ್ ಹಾಗೂ ಪ್ರಶಾಂತ್​ ಸಂಬರಗಿ

  • Share this:
ಬಿಗ್ ಬಾಸ್​ ಸೀಸನ್​ 8ರ ಸೆಕೆಂಡ್​ ಇನ್ನಿಂಗ್ಸ್​ ಆರಂಭವಾಗಿ ಎರಡು ದಿನ ಕಳೆದಿದೆ. ಆಗಲೇ ಮನೆಯಲ್ಲಿ ಪ್ರತಿಸ್ಪರ್ಧಿಗಳ ನಡುವೆ ಜಗಳ, ವಾದ-ವಿವಾದ ಹಾಗೂ ಅಸಮಾಧಾನ ಕಾಣಿಸಿಕೊಳ್ಳುತ್ತಿದೆ. ಹೀಗಿರುವಾಗಲೇ ಮೊದಲ ದಿನ ನಡೆದ ನಾಮಿನೇಶನ್​ ಪ್ರಕ್ರಿಯೆ ಸ್ಪರ್ಧಿಗಳ ನಡುವೆ ಇದ್ದ ಬೆಂಕಿಗೆ ತುಪ್ಪ ಸುರಿದಿದೆ. ಇನ್ನು ಮನೆಯಲ್ಲಿ ಹೊಸ ಹೊಸ ಟಾಸ್ಕ್​ಗಳ ಮೂಲಕ ಸ್ಪರ್ಧಿಗಳಿಗೆ ಸವಾಲೆಸೆಯಲಾಗುತ್ತಿದೆ.  ಸ್ಪರ್ಧಿಗಳು ಪೈಪೋಟಿಗೆ ಬಿದ್ದು ಟಾಸ್ಕ್​ಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಮುಂದಾಗುತ್ತಿದ್ದಾರೆ. ನಿನ್ನೆ ಚೆಂಡನ್ನು ಹಿಡಿದು ಓಡುವ ಆಟ, ಈಗ ಬಂಡಿ ತಳ್ಳುವ ಟಾಸ್ಕ್​. ಬಿಗ್ ಬಾಸ್​ ಮನೆಗೆ ಕಾಲಿಟ್ಟ ದಿನದಿಂದಲೇ ಮಾಡಲಾಗಿರುವ ಲೀಡರ್ಸ್​ ಹಾಗೂ ಚಾಲೆಂಜರ್ಸ್​ ತಂಡಗಳು ಟಾಸ್ಕ್​ನಲ್ಲಿ ಭಾಗಿಯಾಗುತ್ತಿದ್ದಾರೆ. ಈ ಟಾಸ್ಕ್​ನಲ್ಲಿ ಹೆಚ್ಚು ಅಂಕಗಳಿಸುವ ತಂಡ ಕ್ಯಾಪ್ಟನ್ಸಿ ಚಾಲೆಂಜ್​ಗೆ ಅರ್ಹತೆ ಪಡೆಯಲಿದೆ. 

ಬಿಗ್ ಬಾಸ್​ ಮನೆಯಲ್ಲಿ ಒಂದು ಕಡೆ ತಳ್ಳು ಬಂಡಿ ಟಾಸ್ಕ್​ ಮತ್ತೊಂದು ಕಡೆ ಕುರ್ಚಿ ಪಾಲಿಟಿಕ್ಸ್​ ಟಾಸ್ಕ್​ ಆರಂಭವಾಗಿ 24 ಗಂಟೆ ಕಳೆದಿದೆ. ಈ ಆಟ ಆಡುವ ವೇಳೆ ಪ್ರಶಾಂತ್​ ಸಂಬರಗಿ ಹಾಗೂ ದಿವ್ಯಾ ಸುರೇಶ್​ ಅವರ ನಡುವೆ ಮಾತುಕತೆ ಆರಂಭವಾಗಿತ್ತು.

ಕುರ್ಚಿ ಪಾಲಿಟಿಕ್ಸ್​ ಟಾಸ್ಕ್​


ಆಗಲೇ ಪ್ರಶಾಂತ್ ಸಂಬರಗಿ ಮೊದಲ ಇನ್ನಿಂಗ್ಸ್​ ಮುಗಿಸಿ ಮನೆಗೆ ಹೋದಾಗ ನಿಮ್ಮ ಅಮ್ಮ ಖುಷಿಯಾಗಿರಬೇಕಲ್ಲವಾ  ಎಂದು ದಿವ್ಯಾ ಸುರೇಶ್ ಅವರ ಬಳಿ ಕೇಳುತ್ತಾರೆ. ಜೊತೆಗೆ ನಿಮ್ಮ ಅಮ್ಮ ನನ್ನ ಬಗ್ಗೆ ಏನು ಹೇಳಿದರು ಅಂತ ಮಾತು ಆರಂಭಿಸಿದ ಪ್ರಶಾಂತ್ ಸಂಬರಗಿ, ನಾನು ನಿಮ್ಮ ಬಗ್ಗೆ ಈ ಬಿಗ್ ಬಾಸ್​ ಮನೆಯಲ್ಲಿ ಒಂದು ಸಲವೂ ನೆಗೆಟಿವ್​ ಆಗಿ ಮಾತನಾಡಿಲ್ಲ ಎನ್ನುತ್ತಾರೆ.

ಇದನ್ನೂ ಓದಿ: Anushka Sharma: ಮಗುವಾದ ನಂತರದ ಕೂದಲುದುರುವಿಕೆಗೆ ಪರಿಹಾರ ಕಂಡುಕೊಂಡ ಅನುಷ್ಕಾ ಶರ್ಮಾ: ಸಲಹೆ ಕೊಟ್ಟಿದ್ದು ಸೋನಮ್ ಕಪೂರ್..!

ಅದಕ್ಕೆ ಪ್ರತಿಕ್ರಿಯಿಸುವ ದಿವ್ಯಾ ಸುರೇಶ್​, ನನಗೆ ಸುಮಾರು ಜನ ಹೇಳಿದದಾರೆ. ನೀವು ಪ್ರತಿ ವಾರ ನನ್ನನ್ನು ಟಾರ್ಗೆಟ್​ ಮಾಡುತ್ತಿದ್ರಿ ಅಂತ. ನಿಮ್ಮ ಜತೆ ಶಮಂತ್​ ಹಾಗೂ ಚಕ್ರವರ್ತಿ ಚಂದ್ರಚೂಡ ಅವರೂ ಇರುತ್ತಿದ್ದರು ಅಂತ ಹೇಳುತ್ತಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಸಂಬರಗಿ ಅದು ಕೇವಲ ನಾಮಿನೇಶನ್​ ಸಮಯದಲ್ಲಿ ಮಾತ್ರ ಎಂದಿದ್ದಾರೆ.

ಮತ್ತೆ ಮಾತು ಮುಂದುವರೆಸಿದ ದಿವ್ಯಾ ಸುರೇಶ್​, ನೀವು ಪ್ರತಿ ಸಲ ಬಂದು ನನ್ನ ಬಳಿ ನಾನು ಮಂಜು ಜೊತೆ ಇದ್ದಿದ್ದು ತಪ್ಪು, ನೀನು ಮಂಜು ಬಾಲದಂತೆ, ಹಾಗೆ-ಹೀಗೆ ಎಂದಾಗ ನಾನು ನನ್ನ ಸ್ಟ್ಯಾಂಡ್​ ತೆಗೆದುಕೊಳ್ಳಲಿಲ್ಲ. ಅದು ನಾನು ಮಾಡಿದ ತಪ್ಪು. ಅದರಿಂದಲೇ ವೀಕ್ಷಕರ ಎದುರು ನಾನು ತಪ್ಪಿತಸ್ಥೆಯಂತೆ ಕಾಣಿಸಿಕೊಂಡಿದ್ದೀನಿ ಎಂದು ಖಾರವಾಗಿ ಉತ್ತರಿಸಿದ್ದಾರೆ. ಅದಕ್ಕೆ ಪ್ರಶಾಂತ್ ಪುಕ್ಸಟ್ಟೆ ಸಲಹೆ ಕೊಟ್ಟಿದ್ದು ನನ್ನ ತಪ್ಪು ಎಂದಿದ್ದಾರೆ.

ಇದನ್ನೂ ಓದಿ: Bro Gowda: ಪ್ರಿಯಾಂಕಾರನ್ನು ಹಣ್ಣಿಗೆ ಹೋಲಿಸಿದ ಬ್ರೊ ಗೌಡ​: ಸ್ಪರ್ಧಿಗಳಿಂದ ಶಮಂತ್​ಗೆ ಸಿಕ್ತು ಹೊಸ ಹೆಸರು..!

ಇನ್ನು ತಳ್ಳು ಬಂಡಿ ಟಾಸ್ಕ್ ಆಡುವಾಗ ದಿವ್ಯಾ ಸುರೇಶ್ ತಮ್ಮ ಪಾದಕ್ಕೆ ಗಾಯ ಮಾಡಿಕೊಂಡಿದ್ದಾರೆ. ಇನ್ನು ದಿವ್ಯಾ ಅವರಿಗೆ ಅಲ್ಲೇ ಚಿಕಿತ್ಸೆ ನೀಡಲಾಗಿದೆ. ಇನ್ನು ಪ್ರಶಾಂತ್​ ಸಂಬರಗಿ ಅವರು ಮನೆಯಿಂದ ಹೊರ ಹೋಗಿದ್ದಾಗ ಮಂಜು ಹಾಗೀ ದಿವ್ಯಾ ಬಗ್ಗೆ ಕೆಟ್ಟದಾಗಿ ಕೆಲವು ಸಂದರ್ಶನಗಳಲ್ಲಿ ಮಾತನಾಡಿದ್ದು, ಅದು ಬಿಗ್ ಬಾಸ್ ಸ್ಪರ್ಧಿಗಳ ಬೇಸರಕ್ಕೆ ಕಾರಣವಾಗಿದೆ.

ಪ್ರಶಾಂತ್ ಸಂಬರಗಿ ಕಾಲೆಳೆದ ಚಕ್ರವರ್ತಿ ಚಂದ್ರಚೂಡ

ಇನ್ನು ಎಲ್ಲ ಕಡೆ ಕುಳಿತುಕೊಳ್ಳುವ ಒಬ್ಬರು ಕೋರ್ಟ್​ನಲ್ಲಿ ಹೋಗಿ ನಿಲ್ಲುತ್ತಾರೆ ಅಂತ ಚಕ್ರವರ್ತಿ ಚಂದ್ರಚೂಡ ಅವರಿ ಗೆಳೆಯ ಪ್ರಶಾಂತ್ ಸಂಬರಗಿ ಅವರ ಬಗ್ಗೆ ತಮಾಷೆ ಮಾಡಿದ್ದಾರೆ. ಇನ್ನು ಶಮಂತ್ ಮಾತ್ರ ಸಂಬರಗಿ ಅವರನ್ನೂ ತಮ್ಮದೇ ಆದ ರೀತಿಯಲ್ಲಿ ಹೊಗಳಿದ್ದಾರೆ. ನ್ಯಾಯ ಎಂದರೆ ಅದು ಸಂಬರಗಿ ಅನ್ನೋ ಅರ್ಥದಲ್ಲಿ ಮಾತನಾಡಿದ್ದಾರೆ. ಅದಕ್ಕೆ ಅರವಿಂದ್ ಶಮಂತ್​ ಅವರನ್ನು ಬಕೆಟ್​, ಟ್ಯಾಂಕ್​ ಅಂತೆಲ್ಲ ಹೇಳುವ ಮೂಲಕ ಕಾಲೆಳೆದಿದ್ದಾರೆ.
Published by:Anitha E
First published: