ಬಿಗ್ ಬಾಸ್ ಮನೆಯಲ್ಲಿ ಕಿಚ್ಚನ ಜೊತೆ ಸೂಪರ್ ಸಂಡೆ ಸಂಚಿಕೆ ಇಂದು ಕೊಂಚ ಗಂಭೀರವಾಗಿತ್ತು. ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳ ನಡುವಿರುವ ಅಸಮಾಧಾನದಿಂದಾಗಿ ಇಂದಿನ ಕಾರ್ಯಕ್ರಮದಲ್ಲಿ ಗಂಭೀರ ಹಾಗೂ ಬಿಸಿಯಾದ ವಾತಾವರಣ ನಿರ್ಮಾಣವಾಗಿತ್ತು. ಕಿಚ್ಚನ ಜೊತೆ ಮಾತನಾಡುತ್ತಿದ್ದ ಸ್ಪರ್ಧಿಗಳಲ್ಲಿ ಮೊದಲಿಗೆ ಚಕ್ರವರ್ತಿ ಹಾಗೂ ಪ್ರಶಾಂತ್ ಸಂಬರಗಿ ಅವರು ಎಂದಿನಂತೆ ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಅವರ ನಡುವಿನ ಬಾಂಡಿಂಗ್ ಬಗ್ಗೆ ಬೆರಳು ಮಾಡಿದರು. ಇದೇ ವಿಷಯವಾಗಿ ಮಂಜು ಸಹ ತಮ್ಮ ಅಭಿಪ್ರಾಯ ಹಂಚಿಕೊಂಡರು. ಹೀಗಿರುವಾಗಲೇ ಚಕ್ರವರ್ತಿ ಚಂದ್ರಚೂಡ ಅವರಿಗೆ ಮಂಜು ಪಾವಗಡ ಅವರ ಬಗ್ಗೆ ಇದ್ದ ಅಸಮಾಧಾನವನ್ನು ಹೊರ ಹಾಕಲು ಒಂದು ಅವಕಾಶ ಸಿಕ್ಕಿತ್ತು. ಮಂಜು ಪಾವಗಡ ಅವರು ಬಿಗ್ ಬಾಸ್ ಮನೆಯಲ್ಲಿ ದಿವ್ಯಾ ಸುರೇಶ್ ಅವರನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸುವ ಮೂಲಕ ಮಾತು ಆರಂಭಿಸಿದ ಚಕ್ರವರ್ತಿ, ನಂತರದಲ್ಲಿ ತಾವು ಮಂಜು ಅವರ ಆಟವನ್ನು ಅರ್ಥ ಮಾಡಿಕೊಂಡಿದ್ದನ್ನು ವಿವರಿಸಿದರು.
ಮಂಜು ಹಾಗೂ ದಿವ್ಯಾ ಸುರೇಶ್ ಅವರು 8ನೇ ಸೀಸನ್ನ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ ಜನರ ಗಮನ ಸೆಳೆಯಲು ಮದುವೆ ಎಂಬ ಆಟ ಆರಂಭಿಸಿದರು. ಇದು ನಾಟಕ ಅನ್ನೋದು ಗೊತ್ತು. ಆದರೆ ಕೋಟ್ಯಂತ ಜನರ ಮುಂದೆ ಒಂದು ಹೆಣ್ಣು ಮಗಳನ್ನು ಮಂಜು ಹೆಂಡತಿ ಎಂದು ಹೇಳುತ್ತಾ ಆಡಿದ ನಾಟಕ ನನಗೆ ಇಷ್ಟವಾಗಲಿಲ್ಲ. ಕೇವಲ ಆಟಕ್ಕಾಗಿ ಹೀಗೆ ಮಾಡಿದ್ದು ಸರಿಯಲ್ಲ ಎಂದು ಆರೋಪಿಸಿದರು. ಅಲ್ಲದೆ ಆಗ ದಿವ್ಯಾ ಸುರೇಶ್ ಅವರ ಜೊತೆ ಮಂಜು ಮಾಡುತ್ತಿದ್ದ ತಮಾಷೆ ಹಾಗೂ ಬಳಸುತ್ತಿದ್ದ ಕೆಲವು ಪದಗಳು ದಿನ ನಿತ್ಯದ ಬಳಕೆಯಲ್ಲಿ ತುಂಬಾ ಕೆಟ್ಟ ಅರ್ಥವನ್ನು ನೀಡುತ್ತವೆ. ಅವುಗಳನ್ನು ದಿವ್ಯಾ ಸುರೇಶ್ ಅವರಿಗೆ ಮಂಜು ಬಳಸಬಾರದಿತ್ತು ಎಂದು ಖಾರವಾಗಿ ಹೇಳಿದ್ದಾರೆ. ಚಕ್ರವರ್ತಿ ಚಂದ್ರಚೂಡ ಅವರ ಮಾತು ಕೇಳಿಸಿಕೊಳ್ಳುತ್ತಿದ್ದ ದಿವ್ಯಾ ಸುರೇಶ್ ಕಣ್ಣೀರಿಡುತ್ತಿದ್ದರು.
ಇನ್ನು ಚಕ್ರವರ್ತಿ ಅವರ ಮಾತು ಮುಗಿಯುತ್ತಿದ್ದಂತೆಯೇ ಮಂಜು ಮಾತು ಆರಂಭಿಸಿದ್ದರು. ಕೇವಲ ತಮಾಷೆ ಹಾಗೂ ಮನರಂಜಿಸುವ ಉದ್ದೇಶದಿಂದ ಮದುವೆಯ ನಾಟಕ ಆಡಿದ್ದು ಎಲ್ಲರಿಗೂ ಗೊತ್ತೇ ಇದೆ. ನಾನು ತಮಾಷೆ ಮಾಡಿದಾಗ ಎಂಜಾಯ್ ಮಾಡಿದ್ದ ಚಕ್ರವರ್ತಿ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋದ ನಂತರ ಅದರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದೇಕೆ ಎಂದು ಪ್ರಶ್ನಿಸಿದರು. ಅಲ್ಲದೆ ಹೀಗೆಲ್ಲ ಆರೋಪಿಸುವ ಇವರು ನಡೆದು ಬಂದ ಹಾದಿ ನನಗೂ ಗೊತ್ತು ಎಂದರು.
ಇದನ್ನೂ ಓದಿ: Bigg Boss 8: ದಿವ್ಯಾ ಸುರೇಶ್-ಪ್ರಿಯಾಂಕಾ ತಿಮ್ಮೇಶ್ರನ್ನು ಟಾರ್ಗೆಟ್ ಮಾಡಿದ ಚಕ್ರವರ್ತಿ ಚಂದ್ರಚೂಡ
ಮಂಜು ಪಾವಗಡ ಅವರು ಹೇಳಿದ ಈ ಮಾತಿನಿಂದ ಸಿಟ್ಟಿಗೆಟ್ಟ ಚಕ್ರವರ್ತಿ ನಾನು ನಡೆದು ಬಂದ ಹಾದಿ ಎಂದರೆ ಯಾವ ವಿಷಯದ ಬಗ್ಗೆ ಹೇಳುತ್ತಿದ್ದೀಯಾ ಎಂದು ಖಾರವಾಗಿ ಸಿಟ್ಟಿನಿಂದ ಪ್ರಶ್ನಿಸಿದರು. ಮಧ್ಯಪ್ರವೇಶಿಸಿದ ಸುದೀಪ್, ಮಂಜು ಅವರನ್ನು ಅವರು ಕೊಟ್ಟ ಹೇಳಿಕೆ ಬಗ್ಗೆ ಸ್ಪಷ್ಟನೆ ಕೇಳಿದರು. ಆಗಲೇ ಚಕ್ರವರ್ತಿ ತಮ್ಮ ಜೀವನದಲ್ಲಿ ಆಗಿರುವ ಎರಡು ವಿಚ್ಛೇದನಗಳ ಬಗ್ಗೆ ಹಾಗೂ ಅದರಲ್ಲಿ ಒಂದು ಖ್ಯಾತ ನಟಿಯ ಜತೆಗಿನ ವಿಚ್ಚೇದನದ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಲು ಮಂಜು ಯಾರೆಂದು ಪ್ರಶ್ನಿಸಿದ್ದಾರೆ. 11 ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರುವ ನನನ್ನು ನನ್ನ ಸಾಧನೆ ನೋಡಿ ಬಿಗ್ ಬಾಸ್ ವೇದಿಕೆಗೆ ಕರೆ ತರಲಾಗಿದೆ ಎಂದು ಸಿಟ್ಟಿನಿಂದ ಮಾತನಾಡಿದರು.
ಇದನ್ನೂ ಓದಿ: Bro Gowda-Vaishnavi Gowda: ಡವ್ ರಾಣಿಯ ಮಗಳು ಎಂದ ಶಮಂತ್: ಸಿಟ್ಟಿಗೆದ್ದ ವೈಷ್ಣವಿ ಗೌಡ..!
ಇನ್ನು ಮಂಜು ಹಾಗೂ ಚಕ್ರವರ್ತಿ ಅವರ ನಡುವಿನ ಈ ವಾದ-ವಿವಾದಕ್ಕೆ ಕೊನೆಗೆ ಕಿಚ್ಚ ಸುದೀಪ್ ಅವರೆ ತೆರೆ ಎಳೆದರು. ಇನ್ನು ಈಗ ಯುದ್ಧ ಆರಂಭವಾಗಿದೆ ಎಂದಿರು ಚಕ್ರವರ್ತಿ ಮುಂದಿನ ದಿನಗಳಲ್ಲಿ ಅವರ ಹಾಗೂ ಮಂಜು ನಡುವೆ ನಡೆಯಲಿರುವ ಬೆಳವಣಿಗೆಗಳ ಬಗ್ಗೆ ಸುಳಿವು ನೀಡಿದ್ದಾರೆ. ಇನ್ನು, ಚಕ್ರವರ್ತಿ ಅವರಿಗೆ ದಿವ್ಯಾ ಉರುಡುಗ ಹಾಗೂ ಅರವಿಂದ್ ಅವರು ಸಮಾಧಾನ ಮಾಡಿದ್ದಾರೆ. ಇದರ ನಡುವೆಯೇ ಈ ವಾರ ಮಂಜು ಪಾವಗಡ ಅವರು 38 ಗಂಡೆಗೂ ಹೆಚ್ಚಿನ ಸಮಯ ಕುರ್ಚಿಯಲ್ಲಿ ಕುಳಿತು ಗೆಲುವು ಸಾಧಿಸಿದ್ದಕ್ಕೆ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ