Bigg Boss 8: ಜೈಲು ಪಾಲಾದ ಬ್ರೋ ಗೌಡ: ಶಮಂತ್​ ಪ್ರೀತಿ ಮಾಡಲೆಂದೇ ಬಿಗ್​ ಬಾಸ್​ಗೆ ಬಂದಿದ್ದಾರಾ ಎಂದ ದಿವ್ಯಾ ಸುರೇಶ್​..!

ಹೊಸ ಕ್ಯಾಪ್ಟನ್​ ಅಧಿಕಾರ ತೆಗೆದುಕೊಳ್ಳುತ್ತಿದ್ದಂತೆಯೇ ಮಾಜಿ ಕ್ಯಾಪ್ಟನ್​ ಬ್ರೋ ಗೌಡ ಅಲಿಯಾಸ್​ ಶಮಂತ್​ ಜೈಲು ಪಾಲಾಗಿದ್ದಾರೆ.

ಶಮಂತ್​ ಹಾಗೂ ದಿವ್ಯಾ ಸುರೇಶ್​

ಶಮಂತ್​ ಹಾಗೂ ದಿವ್ಯಾ ಸುರೇಶ್​

  • Share this:
ಬಿಗ್ ಬಾಸ್​ ಮನೆಯಲ್ಲಿ ಕಳೆದೆರಡು ದಿನಗಳಿಂದ ಬೂದಿ ಮುಚ್ಚಿದ ಕೆಂಡದಂತಿದೆ ವಾತಾವರಣ. ಕೊರೋನಾ ವೈರಸ್​ ಕುರಿತಾದ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ಮನುಷ್ಯರು ಹಾಗೂ ವೈರಸ್​ಗಳೆಂಬ ಎರಡು ಗುಂಪುಗಳನ್ನು ಮಾಡಲಾಗಿತ್ತು. ಟಾಸ್ಕ್​ ಮಾಡುವ ಬರದಲ್ಲಿ ಸಾಕಷ್ಟು ಮಂದಿಗೆ ಗಾಯಗಳಾದವು. ಅಲ್ಲದೆ ಆಟದ ಹೆಸರಿನಲ್ಲಿ ಕೆಲವರು ಹುಡುಗಿಯರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಬೇಕೆಂದೇ ನಮ್ಮನ್ನು ಕೆಟ್ಟ ರೀತಿಯಲ್ಲಿ ಮುಟ್ಟಲಾಗಿದೆ ಎಂದು ನಿಧಿ ಸುಬ್ಬಯ್ಯ ಆರೋಪಿಸಿದ್ದಾರೆ.ಇನ್ನು ಕೊನೆ ಕ್ಷಣದಲ್ಲಿ ನಿಧಿ ಹಾಗೂ ದಿವ್ಯಾ ಸುರೇಶ್​ ಆಟವನ್ನು ಲಘುವಾಗಿ ತೆಗೆದುಕೊಂಡು ಸರಿಯಾಗಿ ಆಡಲಿಲ್ಲ. ಇದೇ ಕಾರಣದಿಂದಾಗಿ ಕ್ಯಾಪ್ಟನ್​ ಆಗಲು ಮಾಡಿದ್ದ ಆಟವನ್ನು ಬಿಗ್​ ಬಾಸ್​​ ರದ್ದುಗೊಳಿಸಿದರು. ಆಟ ರದ್ದುಗೊಂಡದ್ದಕ್ಕೆ ಕಾರಣ ನಿಧಿ ಹಾಗೂ ದಿವ್ಯಾ ಸುರೇಶ್​ ಅವರೇ  ಎಂದು ಮನೆಯವರು ಹೇಳಿಕೊಳ್ಳಲಾರಂಭಿಸಿದರು. ಅದೇ ವೇಳೆಗೆ ಆಟದಲ್ಲಿ ಕೆಟ್ಟ ಪ್ರದರ್ಶನ ಮಾಡಿದವರಿಗೆ ಮಸಿ ಬಳಿಯುವಂತೆ ಬಿಗ್​ ಬಾಸ್​ನಿಂದ ಆದೇಶ ಬರುತ್ತದೆ. 

ಬಿಗ್​ ಬಾಸ್​ ಆದೇಶದಂತೆ ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್​, ಶಮಂತ್​, ಅರವಿಂದ್​, ನಿರ್ಮಲಾ ಹಾಗೂ ಪ್ರಶಾಂತ್​ ಅವರಿಗೆ ಇತರೆ ಸ್ಪರ್ಧಿಗಳು ಮಸಿ ಬಳಿಯುತ್ತಾರೆ. ನಂತರ ಮಸಿ ಬಳಿಸಿಕೊಂಡವರನ್ನು ಹೊರತು ಪಡಿಸಿ ಉಳಿದವರು ಕ್ಯಾಪ್ಟನ್ಸಿಗಾಗಿ ಮತ್ತೊಂದು ಟಾಸ್ಕ್​ನಲ್ಲಿ ಭಾಗಿಯಾಗುತ್ತಾರೆ.


View this post on Instagram


A post shared by Param (@parameshwargundkal)


ಈ ಟಾಸ್ಕ್​ನಲ್ಲಿ ರಾಜೀವ್ ಗೆಲ್ಲುವ ಮೂಲಕ ಮನೆಯ ಕ್ಯಾಪ್ಟನ್​ ಆಗುತ್ತಾರೆ. ಕ್ಯಾಪ್ಟನ್​ ಆದ ಕೂಡಲೇ ರಾಜೀವ್​ ಯಾರ ನಡುವೆ ಮನಸ್ತಾಪ ಇತ್ತೋ ಅವರನ್ನು ಒಂದು ಮಾಡುವ ನಿರ್ಧಾರ ತೆಗೆದುಕೊಂಡು ಅವರುಗಳನ್ನು ಕರೆದು ಅಪ್ಪುಗೆ ನೀಡುವಂತೆ ಹೇಳುತ್ತಾರೆ. ಇಷ್ಟಕ್ಕೆ ಬಿಗ್​ ಬಾಸ್​ ಮನೆಯಲ್ಲಿ ಎಲ್ಲವೂ ಮೊದಲಿನಂತೆ ಆಗಿದೆ ಎಂದು ಹೇಳಲಾಗುವುದಿಲ್ಲ.

ಇದನ್ನೂ ಓದಿ: ಚಿತ್ರೀಕರಣಕ್ಕೆ ಮರಳಿದ ಆಲಿಯಾ ಭಟ್​: ಮಿಸ್ಸಿಂಗ್​ ಯೂ ಎಂದು ಫೋಟೋ ಹಂಚಿಕೊಂಡ ನಟಿ..!

ಆದರೆ ಹೊಸ ಕ್ಯಾಪ್ಟನ್​ ಅಧಿಕಾರ ತೆಗೆದುಕೊಳ್ಳುತ್ತಿದ್ದಂತೆಯೇ ಮಾಜಿ ಕ್ಯಾಪ್ಟನ್​ ಬ್ರೋ ಗೌಡ ಅಲಿಯಾಸ್​ ಶಮಂತ್​ ಜೈಲು ಪಾಲಾಗಿದ್ದಾರೆ. ಇಡೀ ವಾರದಲ್ಲಿ ಕಳಪೆ ಪ್ರದರ್ಶನ ತೋರಿದವರನ್ನು ಆಯ್ಕೆ ಮಾಡಿದ ಎಂದ ಬಿಗ್ ಬಾಸ್​ ಮಾತಿಗೆ, ಮನೆಯ ಸದಸ್ಯರೆಲ್ಲ ಸೇರಿ ಶಮಂತ್​ ಕಳಪೆ ಪ್ರದರ್ಶನ ನೀಡಿದ ಸದಸ್ಯ ಎಂದು ನಿರ್ಧರಿಸಿದ್ದು, ಅವರನ್ನು ಜೈಲಿಗಟ್ಟಿದ್ದಾರೆ.


View this post on Instagram


A post shared by Param (@parameshwargundkal)


ಇನ್ನು ಕಳಪೆ ಪ್ರದರ್ಶನದ ಹೇಗೆ ಎಂದು ಕಾರಣ ಕೊಡುವಾಗ ದಿವ್ಯಾ ಸುರೇಶ್​ ಅವರು ಶಮಂತ್ ಬಗ್ಗೆ ಕೊಂಛ ಖಾರವಾಗಿ ಮಾತನಾಡಿದ್ದಾರೆ. ಹೌದು, ಶಮಂತ್​ ಬಿಗ್​ ಬಾಸ್​ಗೆ ಬಂದಿರುವುದು ಪ್ರೀತಿ ಮಾಡೋಕಾ ಅಥವಾ ಜನರ ಪ್ರೀತಿ ಗೆಲ್ಲೋಕಾ ಎಂದಿದ್ದಾರೆ. ಇದರಿಂದಾಗಿ ಶಮಂತಾ ಈಗ ದಿವ್ಯಾ ಅವರಿಂದ ಮತ್ತಷ್ಟು ದೂರಾಗಿದ್ದಾರೆ. ಶಮಂತ್​ ಮನೆಗೆ ಬಂದಾಗ ಇದೇ ದಿವ್ಯಾ ಸುರೇಶ್ ಅವರ ಮೇಲೆ ಕ್ರಶ್​ ಆಗಿದೆ ಎಂದು ಹೇಳಿದ್ದರು. ಆದರೆ ದಿವ್ಯಾಗೆ ಈ ವಿಷಯ ಗೊತ್ತಿಲ್ಲದ ಕಾರಣಕ್ಕೆ ಈಗ ಅವರ ಬಗ್ಗೆ ಯಾವುದೇ ಫಿಲಿಂಗ್​ ಇಲ್ಲ ಎಂದಿದ್ದ ಬ್ರೋಗೌಡ, ಪ್ರೀತಿಗೆ ಎಳ್ಳು ನೀರು ಬಿಟ್ಟು ಸ್ನೇಹವನ್ನು ಆರಂಭಿಸಿದ್ದರು

ಇದನ್ನೂ ಓದಿ: Roberrt First Day Collection: ಬಾಕ್ಸಾಫಿಸ್​ನಲ್ಲಿ ಧೂಳೆಬ್ಬಿಸುತ್ತಿರುವ ದರ್ಶನ್​:​ ಕೋಟಿ ಕೋಟಿ ಬಾಚಿದ ರಾಬರ್ಟ್​

ಇನ್ನು ದಿವ್ಯಾ ಸುರೇಶ್​ ಶಮಂತ್​ ವಿಷಯದಲ್ಲಿ ಹೇಳಿರುವ ಮಾತಿಗೆ ಶಮಂತ್ ಹೇಗೆ ಪ್ರತಿಕ್ರಿಯಿಸಲಿದ್ದಾರೆ. ಮುಂದೇನು ನಡೆಯಲಿದೆ. ಮನೆಯಲ್ಲಿ ಮತ್ತಾವೆಲ್ಲ ಬದಲಾವಣೆಗಳು ಆಗಲಿವೆ ಎಂದು ಇಂದು ರಾತ್ರಿ ಪ್ರಸಾರವಾಗಲಿರುವ ಸಂಚಿಕೆಯಲ್ಲಿ ತಿಳಿಯಲಿದೆ. ಅದಕ್ಕೆ ಇಂದು ರಾತ್ರಿ 9:30ಕ್ಕೆ ಬಿಗ್​ ಬಾಸ್​ ಸೀಸನ್​ 8 ನೋಡಲು ಮರೆಯದಿರಿ.
Published by:Anitha E
First published: