Bigg Boss Kannada 7: ಬಿಗ್​ಬಾಸ್​ನಲ್ಲಿ ಶೈನ್​ ಶೆಟ್ಟಿ ಕಣ್ಣಿಟ್ಟಿರೋ ಹುಡುಗಿ ಈಕೆ; ಸುದೀಪ್ ಮುಂದೆ ಬಯಲಾಯ್ತು ಸೀಕ್ರೆಟ್!

Kannada Bigg Boss Elimination: ಬಿಗ್​ಬಾಸ್​ ಸ್ಪರ್ಧಿ ದೀಪಿಕಾ ದಾಸ್ ಬಗ್ಗೆ ಶೈನ್ ಶೆಟ್ಟಿ ಏನು ಹೇಳುತ್ತಾರೆ? ಎಂದು ಕಿಚ್ಚ ಸುದೀಪ್ ಚಂದನಾ ಅವರನ್ನು ಕೇಳುತ್ತಾರೆ. ಅದಕ್ಕೆ ನಗುತ್ತಲೇ ಉತ್ತರಿಸುವ ಚಂದನಾ ಶೈನ್ ಶೆಟ್ಟಿ ಅವರನ್ನು ಇಮಿಟೇಟ್ ಮಾಡಿದ್ದಾರೆ.

Sushma Chakre | news18-kannada
Updated:November 10, 2019, 8:06 PM IST
Bigg Boss Kannada 7: ಬಿಗ್​ಬಾಸ್​ನಲ್ಲಿ ಶೈನ್​ ಶೆಟ್ಟಿ ಕಣ್ಣಿಟ್ಟಿರೋ ಹುಡುಗಿ ಈಕೆ; ಸುದೀಪ್ ಮುಂದೆ ಬಯಲಾಯ್ತು ಸೀಕ್ರೆಟ್!
ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಸಿನಿಮಾದಲ್ಲಿ ನಾಯಕನಾಗಬೇಕೆಂಬ ಆಸೆಯನ್ನೂ ಶೈನ್ ಶೆಟ್ಟಿ ಹೇಳಿಕೊಂಡಿದ್ದರು.
  • Share this:
ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ನ 7ನೇ ಸೀಸನ್​ನಲ್ಲಿ ಈಗಾಗಲೇ ರವಿ ಬೆಳಗೆರೆ ಸೇರಿದಂತೆ 4 ಸ್ಪರ್ಧಿಗಳು ಹೊರಬಂದಿದ್ದಾರೆ. ಇಂದು ಮತ್ತೋರ್ವ ಸ್ಪರ್ಧಿ ಬಿಗ್​ಬಾಸ್ ಮನೆಯಿಂದ ಹೊರನಡೆಯಲಿದ್ದಾರೆ. ವೀಕ್ಷಕರು ಕಾತುರದಿಂದ ಕಾಯುತ್ತಿದ್ದ 'ವಾರದ ಕಥೆ ಕಿಚ್ಚನ ಜೊತೆ' ನಿನ್ನೆಯ ಎಪಿಸೋಡ್​ನಲ್ಲಿ ಹಲವಾರು ಕುತೂಹಲಕಾರಿ ಸಂಗತಿಗಳು ಬಯಲಾಗಿವೆ. ಯಾರು ಈ ವಾರ ಎಲಿಮಿನೇಟ್ ಆಗುತ್ತಾರೆಂಬ ವಿಷಯವನ್ನು ಇಂದು ಕಿಚ್ಚ ಸುದೀಪ್ ಘೋಷಣೆ ಮಾಡಲಿದ್ದಾರೆ.

ಇಂದು ನಡೆಯುವ 'ವಾರದ ಕಥೆ ಕಿಚ್ಚನ ಜೊತೆ' ಎಪಿಸೋಡ್​ನಲ್ಲಿ ಇನ್ನಷ್ಟು ಕುತೂಲಹಕಾರಿ ಸಂಗತಿಗಳು ಹೊರ ಬೀಳಲಿವೆ. ಈ ಬಾರಿಯ ಬಿಗ್​ಬಾಸ್​ ಸೀಸನ್​ನ ಲವರ್​ಬಾಯ್​ ಎಂದೇ ಕರೆಯಲಾಗುವ ಕಿರುತೆರೆ ನಟ ಶೈನ್ ಶೆಟ್ಟಿ ಕಣ್ಣು ದೊಡ್ಡಮನೆಯಲ್ಲಿರುವ ಹುಡುಗಿಯರ ಮೇಲೇ ನೆಟ್ಟಿರುತ್ತದೆ ಎಂಬುದು ತಿಳಿಯದ ವಿಷಯವೇನಲ್ಲ. ಪ್ರಿಯಾಂಕಾ, ಚಂದನಾ, ಚೈತ್ರಾ ಕೋಟೂರ್ ಜೊತೆಗೆ ಸಮಯ ಸಿಕ್ಕಾಗಲೆಲ್ಲ ಫ್ಲರ್ಟ್​ ಮಾಡುವ ಶೈನ್ ಶೆಟ್ಟಿ ಈಗ ಬೇರೊಬ್ಬರ ಮೇಲೆ ಕಣ್ಣು ನೆಟ್ಟಿದ್ದಾರಂತೆ.

KGF Star Yash: ಫೇಸ್​ಬುಕ್​ನಲ್ಲಿ ಚಾಲೆಂಜ್ ಹಾಕಿ ಸುದ್ದಿಯಾದ ರಾಕಿಂಗ್ ಸ್ಟಾರ್ ಯಶ್!

ಅದು ಯಾರೆಂದು ಆಶ್ಚರ್ಯ ಪಡುತ್ತಿದ್ದೀರ? ಆ ಬಗ್ಗೆ ಇಂದಿನ ಎಪಿಸೋಡ್​ನಲ್ಲಿ ಕಿಚ್ಚ ಸುದೀಪ್ ಮಾತನಾಡಲಿದ್ದಾರೆ. ಬಿಗ್​ಬಾಸ್​ ಸ್ಪರ್ಧಿ ದೀಪಿಕಾ ದಾಸ್ ಬಗ್ಗೆ ಶೈನ್ ಶೆಟ್ಟಿ ಏನು ಹೇಳುತ್ತಾರೆ? ಎಂದು ಕಿಚ್ಚ ಸುದೀಪ್ ಚಂದನಾ ಅವರನ್ನು ಕೇಳುತ್ತಾರೆ. ಅದಕ್ಕೆ ನಗುತ್ತಲೇ ಉತ್ತರಿಸುವ ಚಂದನಾ ಶೈನ್ ಶೆಟ್ಟಿ ಅವರನ್ನು ಇಮಿಟೇಟ್ ಮಾಡಿದ್ದಾರೆ.

ದೀಪಿಕಾ ದಾಸ್ ಮನೆಯಲ್ಲಿ ಓಡಾಡುವಾಗ ಶೈನ್ ಶೆಟ್ಟಿ ಸೋಫಾ ಮೇಲೆ ಕುಳಿತುಕೊಂಡು ಆಕೆಯನ್ನೇ ನೋಡುತ್ತಿರುತ್ತಾರೆ. ಪಕ್ಕದಲ್ಲಿದ್ದವರ ಬಳಿ 'ದೀಪಿಕಾ ಡ್ರೆಸ್ ಮಾಡ್ಕೊಂಡು ಬರ್ತಾ ಇದ್ರೆ ನೋಡೋಕೆ ಚಂದ ಅಲ್ವ? ಚಂದ ಕಾಣ್ತಾರೆ. ಅವ್ರು ಒಂದು ರೀತಿಯ ಪ್ಯಾಕೇಜ್. ಅಡುಗೆ ಮಾಡ್ತಾರೆ, ಫಿಸಿಕಲ್ ಟಾಸ್ಕ್ ಕೂಡ ಚೆನ್ನಾಗೇ ಮಾಡ್ತಾರೆ. ನೋಡೋಕೂ ಚೆನ್ನಾಗಿದ್ದಾರೆ. ಮೇಕಪ್, ಹೇರ್​ಸ್ಟೈಲ್ ಎಲ್ಲ ಎಷ್ಟು ಚೆನ್ನಾಗಿ ಮಾಡ್ಕೊಳ್ತಾರೆ ಅಲ್ವ?' ಎಂದು ಶೈನ್ ಶೆಟ್ಟಿ ಕೇಳುತ್ತಾರೆ ಎಂದು ಅವರದೇ ಸ್ಟೈಲ್​ನಲ್ಲಿ ಚಂದನಾ ಅಭಿನಯಿಸಿ ತೋರಿಸಿದರು. ಚಂದನಾ ನನ್ನನ್ನು ಸರಿಯಾಗಿ ಇಮಿಟೇಟ್ ಮಾಡಿದ್ದಾರೆ ಎಂದು ಶೈನ್ ಶೆಟ್ಟಿ ಕೂಡ ಮೆಚ್ಚುಗೆ ನೀಡಿದರು. ಈ ಎಪಿಸೋಡ್ ಇಂದು ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.ಬಿಗ್​ಬಾಸ್​ ಮನೆಯಿಂದ ಮೊದಲ ವಾರ ಗುರುಲಿಂಗ ಸ್ವಾಮಿ ಹಾಗೂ ರವಿ ಬೆಳಗೆರೆ ಹೊರ ನಡೆದಿದ್ದರು. 2ನೇ ವಾರ ನಿರೂಪಕಿ ಚೈತ್ರಾ ವಾಸುದೇವನ್ ಎಲಿಮಿನೇಟ್ ಆಗಿದ್ದರು. ಕಳೆದ ವಾರ ದುನಿಯಾ ರಶ್ಮಿ ದೊಡ್ಡ ಮನೆಯಿಂದ ಹೊರನಡೆದಿದ್ದರು. ಈ ವಾರ ಒಟ್ಟು 7 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಕಿರುತೆರೆ ನಟಿಯರಾದ ಭೂಮಿ ಶೆಟ್ಟಿ, ಪ್ರಿಯಾಂಕಾ, ದೀಪಿಕಾ ದಾಸ್, ಶೈನ್ ಶೆಟ್ಟಿ, ಬರಹಗಾರ್ತಿ ಚೈತ್ರಾ ಕೋಟೂರ್, ನಟರಾದ ಚಂದನ್ ಆಚಾರ್ ಹಾಗೂ ರಾಜು ತಾಳೀಕೋಟೆ ಈ ವಾರ ನಾಮಿನೇಟ್ ಆಗಿದ್ದಾರೆ.ಈ ಶೋ ಚಿತ್ರೀಕರಣ ನಿನ್ನೆಯೇ ಪೂರ್ಣಗೊಂಡಿದ್ದು, ಚೈತ್ರಾ ಕೋಟೂರ್ ಎಲಿಮಿನೇಟ್ ಆಗಿದ್ದಾರೆ ಎಂದು ಖಚಿತ ಮೂಲಗಳು ತಿಳಿಸಿವೆ. ಆ ಬಗ್ಗೆ ಅಧಿಕೃತ ಮಾಹಿತಿ ಸಿಗಲು ಇಂದು ರಾತ್ರಿಯವರೆಗೆ ಕಾಯಬೇಕು.

First published:November 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading