ಸುಮಾರು ಎರಡು ವರ್ಷಗಳ ಹಿಂದೆ ಎಂದರೆ 2021 ರಲ್ಲಿ ಡ್ರಗ್ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಬಿಗ್‌ಬಾಸ್ 7 (Bigg Boss 7) ರ ಸ್ಪರ್ಧಿಯಾಗಿದ್ದ ಅಜಾಜ್ ಖಾನ್ (Ajaz Khan) ಅವರು ಈಗ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ನಂತರ ಶುಕ್ರವಾರ ಸಂಜೆ ಬಿಡುಗಡೆಯಾಗಿದ್ದಾರೆ. ಖಾನ್ ಬಿಡುಗಡೆಯಾದ ಹಿನ್ನಲೆಯಲ್ಲಿ ಅವರ ಪತ್ನಿ ಹೇಳಿಕೆಯಲ್ಲಿ ತಾನು ಇದುವರೆಗೂ ಅವರನ್ನು ತುಂಬಾನೇ ಮಿಸ್ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ.
ಬಿಗ್‌ಬಾಸ್ 7 ರಿಯಾಲಿಟಿ ಶೋ ನ ಮಾಜಿ ಸ್ಪರ್ಧಿ ಅಜಾಜ್ ಖಾನ್ ಅವರಿಗೆ ಜಾಮೀನು ನೀಡಲಾಗಿದ್ದು, ಅವರು ಶುಕ್ರವಾರ ಸಂಜೆ ಆರ್ಥರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಅಜಾಜ್ ಎರಡು ವರ್ಷಗಳಿಂದ ಜೈಲಿನಲ್ಲಿದ್ದಾರೆ.
ಅಜಾಜ್ ಅವರ ಬಿಡುಗಡೆಯ ಬಗ್ಗೆ ಏನ್ ಹೇಳಿದ್ರು ನೋಡಿ ಅವರ ಪತ್ನಿ
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಅಜಾಜ್ ಅವರ ಪತ್ನಿ ಪತ್ರಿಕಾ ಹೇಳಿಕೆಯಲ್ಲಿ, "ಇದು ನಮಗೆ ತುಂಬಾನೇ ಒಂದು ಸಂತೋಷದ ಕ್ಷಣವಾಗಿದೆ ಮತ್ತು ಅವರನ್ನು ನಮ್ಮೊಂದಿಗೆ ಮನೆಯಲ್ಲಿ ನೋಡಲು ನಾವು ತುಂಬಾ ದಿನಗಳಿಂದ ಕಾತುರತೆಯಿಂದ ಕಾಯುತ್ತಿದ್ದೆವು. ಈ ಎರಡು ವರ್ಷಗಳಲ್ಲಿ ನಾವು ಅವರನ್ನು ಅಪಾರವಾಗಿ ಮಿಸ್ ಮಾಡಿಕೊಂಡಿದ್ದೇವೆ” ಅಂತ ಹೇಳಿದರು.
ಇದನ್ನೂ ಓದಿ: ಪುಷ್ಪ 2 ಚಿತ್ರದಿಂದ ರಶ್ಮಿಕಾ ಸೀನ್ ಲೀಕ್! ಎಲ್ಲೆಡೆ ವೈರಲ್
ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ), ನಟ ಅಜಾಜ್ ಖಾನ್ ಅವರನ್ನು 2021 ರಲ್ಲಿ ಬಂಧಿಸಿತ್ತು. ಕುಖ್ಯಾತ ಡ್ರಗ್ ಪೂರೈಕೆದಾರ ಫಾರೂಕ್ ಶೇಖ್ ಅಲಿಯಾಸ್ ಬಟಾಟಾ ಅವರ ಪುತ್ರ ಶದಾಬ್ ಶೇಖ್ ಅಲಿಯಾಸ್ ಶದಾಬ್ ಬಟಾಟಾ ಅವರ ವಿಚಾರಣೆಯ ಸಮಯದಲ್ಲಿ ಅಜಾಜ್ ಅವರ ಹೆಸರು ಹೊರಬಂದಿತ್ತು. ಶದಾಬ್ ಕೂಡ ಡ್ರಗ್ ಪೆಡ್ಲರ್ ಆಗಿದ್ದಾರೆ.
ವಿಚಾರಣೆ ಸಮಯದಲ್ಲಿ ಖಾನ್ ಅವರ ಬಳಿ ಸಿಕ್ಕಿತ್ತಂತೆ ನಾಲ್ಕು ನಿದ್ರೆ ಮಾತ್ರೆಗಳು..
"ವಿಚಾರಣೆಯ ಸಮಯದಲ್ಲಿ, ಖಾನ್ ಅವರ ಹೆಸರು ಹೊರಹೊಮ್ಮಿತು ಮತ್ತು ಅವರ ವಿರುದ್ಧ ಕೆಲವು ದೋಷಾರೋಪಣೆ ಪುರಾವೆಗಳನ್ನು ಸಹ ನಾವು ಕಂಡು ಕೊಂಡಿದ್ದೇವು" ಎಂದು ವಲಯ ನಿರ್ದೇಶಕರಾಗಿದ್ದ ಸಮೀರ್ ವಾಂಖೆಡೆ ಆ ಸಮಯದಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದರು.
ಬಂಧನದ ನಂತರ, ಅಜಾಜ್ ತನ್ನ ಬಳಿ ಕೆಲವು ನಿದ್ರೆ ಮಾತ್ರೆಗಳು ಮಾತ್ರ ಇದ್ದವು ಎಂದು ಹೇಳಿಕೊಂಡಿದ್ದರಂತೆ. ವಿಚಾರಣೆಯ ನಂತರ ನ್ಯಾಯಾಲಯದಿಂದ ಹೊರಬಂದ ಅವರು ಮಾಧ್ಯಮಗಳ ಎದುರು ಬಂದು "ಅವರಿಗೆ ಅದು ಎಲ್ಲಿಂದ ಸಿಕ್ಕಿತು ಎಂದು ಅವರನ್ನು ಕೇಳಿ, ಅವರಿಗೆ ಸಿಕ್ಕಿದ್ದು ಕೇವಲ ನಾಲ್ಕು ನಿದ್ರೆ ಮಾತ್ರೆಗಳು ಮಾತ್ರ. ನನ್ನ ಹೆಂಡತಿಗೆ ಗರ್ಭಪಾತವಾಯಿತು ಮತ್ತು ಆಕೆ ತುಂಬಾನೇ ಖಿನ್ನತೆಯಲ್ಲಿದ್ದಳು. ಅವಳು ಆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಳು" ಎಂದು ಹೇಳಿದ್ದರಂತೆ.
ಅಜಾಜ್ ಬಳಿ 31 ಅಲ್ಪ್ರಜೋಲಂ ಮಾತ್ರೆಗಳಿದ್ದವು ಅಂತ ಹೇಳಿತ್ತು ಎನ್‌ಸಿಬಿ
ಎನ್‌ಸಿಬಿ ಪ್ರಕಾರ, ಎಜಾಜ್ ನನ್ನು 31 ಅಲ್ಪ್ರಜೋಲಂ ಮಾತ್ರೆಗಳೊಂದಿಗೆ ಬಂಧಿಸಲಾಗಿದೆ. ಇದು ಒಟ್ಟು 4.5 ಗ್ರಾಂ ತೂಕಕ್ಕೆ ಸಮನಾಗಿದೆ. ಬಾಂಬೆ ಹೈಕೋರ್ಟ್ ಕಳೆದ ವರ್ಷ ಅಜಾಜ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
"ಕಸ್ಟಡಿಯ ಅವಧಿ ಅಥವಾ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ, ಆದರೆ ವಿಚಾರಣೆ ಪ್ರಾರಂಭವಾಗಿಲ್ಲ ಎಂಬ ಅಂಶವು ಅರ್ಜಿದಾರರನ್ನು ಸೆಕ್ಷನ್ 37 ರ ಕಠಿಣತೆಯನ್ನು ದಾಟಲು ವಿಫಲವಾದಾಗ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಸಾಧ್ಯವಿರಲಿಲ್ಲ. ಆದ್ದರಿಂದ ಆ ಅರ್ಜಿಯನ್ನು ತಿರಸ್ಕರಿಸಲು ಅರ್ಹವಾಗಿದೆ ಮತ್ತು ಅದರಂತೆ ತಿರಸ್ಕರಿಸಲಾಗಿತ್ತು" ಎಂದು ನ್ಯಾಯಾಲಯ ಹೇಳಿತ್ತು.
2003 ರ ‘ಪಟ್’ ಚಿತ್ರದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅಜಾಜ್ ಶೀಘ್ರದಲ್ಲಿಯೇ ಏಕ್ತಾ ಕಪೂರ್ ಅವರ ‘ಕ್ಯಾ ಹೋಗಾ ನಿಮ್ಮೋ ಕಾ’ (2007) ಎಂಬ ಸೀರಿಯಲ್ ಮೂಲಕ ಸಣ್ಣ ಪರದೆಗೆ ಪಾದಾರ್ಪಣೆ ಮಾಡಿದರು. ಅವರು ಕಹಾನಿ ಹಮಾರೆ ಮಹಾಭಾರತ್ ಕಿ, ಕರಮ್ ಅಪ್ನಾ ಅಪ್ನಾ ಮತ್ತು ರಹೇ ತೇರಾ ಆಶೀರ್ವಾದ್ ಸೇರಿದಂತೆ ಹಲವಾರು ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ