ಈ ಬಾರಿಯ ಬಿಗ್​ ಬಾಸ್​ ವಿನ್ನರ್​ ಮಾಡರ್ನ್​ ರೈತ ಶಶಿ ಕುಮಾರ್

ಈ ಹಿಂದಿನ ಬಿಗ್​ಬಾಸ್​ಗಿಂತಲೂ ಈ ಬಾರಿ ಹೆಚ್ಚು ಸ್ಪರ್ಧಿಗಳು ಸಾಮಾನ್ಯ ನಾಗರಿಕರು ಎನ್ನುವುದೇ ವಿಶೇಷವಾಗಿತ್ತು. ಕೆಲವೇ ಸೆಲಬ್ರೆಟಿಗಳನ್ನು ಆರಿಸಿ, ಅದರಲ್ಲೂ ಯುವ ಸಮುದಾಯವನ್ನೇ ಈ ಬಾರಿ ಬಿಗ್‌ ಬಾಸ್‌ ಸ್ಪರ್ಧಿಗಳನ್ನಾಗಿ ಮಾಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

zahir | news18
Updated:January 28, 2019, 9:10 AM IST
ಈ ಬಾರಿಯ ಬಿಗ್​ ಬಾಸ್​ ವಿನ್ನರ್​ ಮಾಡರ್ನ್​ ರೈತ ಶಶಿ ಕುಮಾರ್
ಶಶಿ ಕುಮಾರ್
  • News18
  • Last Updated: January 28, 2019, 9:10 AM IST
  • Share this:
ಕನ್ನಡದ ಖ್ಯಾತ​ ರಿಯಾಲಿಟಿ ಶೋ ಬಿಗ್​ ಬಾಸ್​-6 ವಿನ್ನರ್ ಆಗಿ ಶಶಿ ಕುಮಾರ್ ಹೊರ ಹೊಮ್ಮಿದ್ದಾರೆ. ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಈ ಬಾರಿಯ ಸ್ಫರ್ಧೆಯಲ್ಲಿ ನವೀನ್ ಸಜ್ಜು ರನ್ನರ್​ ಅಪ್​ ಆಗಿದ್ದಾರೆ.

ಬೆಂಗಳೂರಿನ ಬಿಡದಿ ಬಳಿಯ ಇನ್ನೊವೇಟೀವ್‌ ಫಿಲಂ ಸಿಟಿಯಲ್ಲಿ ನಡೆದ ಗ್ರ್ಯಾಂಡ್‌ ಫಿನಾಲೆಯಲ್ಲಿ ನಟಿ ಕವಿತಾ ಅವರನ್ನು ಸೆಕೆಂಡ್ ರನ್ನರ್​ ಅಪ್​ ​ ಆಗಿ ಘೋಷಿಸಲಾಯಿತು.  ಈ ಮೂಲಕ ತ್ರಿಕೋನ ಸ್ಫರ್ಧೆಗೆ ಅಂತ್ಯವಾಡಿದ ಕಿಚ್ಚ, ಗಾಯಕ ನವೀನ್​ ಸಜ್ಜು ಮತ್ತು ಶಶಿಕುಮಾರ್​ ನಡುವೆ ಯಾರಾಗಲಿದ್ದಾರೆ ಬಿಗ್​ಬಾಸ್​ ಎಂಬ ಕುತೂಹಲವನ್ನು ಪ್ರೇಕ್ಷಕರಲ್ಲಿ ಹೆಚ್ಚಿಸಿದರು.

ಆದರೆ ಆರಂಭದಿಂದಲೂ ಮನರಂಜನೆ ಮತ್ತು ಗಾಯನದ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ನವೀನ್ ಸಜ್ಜು ಈ ಬಾರಿಯ ಚಾಂಪಿಯನ್​ ಆಗಿ ಆಯ್ಕೆಯಾಗಲಿದ್ದಾರೆ ಎಂಬ ಪ್ರೇಕ್ಷಕರಿಗೆ ನಿರಾಸೆಯಾಗಿದೆ ಎಂದು ಹೇಳಲಾಗಿದೆ. ಕಿಚ್ಚ ಸುದೀಪ್​ ಶಶಿ ಅವರ ಕೈಯನ್ನು ಎತ್ತುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು. ಇನ್ನು ಅತ್ಯುತ್ತಮ ಸ್ಫರ್ಧೆ ನೀಡಿದ ನವೀನ್ ಎರಡನೇ ಸ್ಥಾನ ಪಡೆದಿದ್ದಾರೆ.

ಕಿಚ್ಚ ಸುದೀಪ್​ ಅವರ ನಿರೂಪಣೆಯಲ್ಲಿ ಮೂಡಿ ಬಂದಿದ್ದ ಬಿಗ್ ​ಬಾಸ್ ಈ ಬಾರಿ ಕೂಡ​ ಪ್ರೇಕ್ಷಕರನ್ನು ಮೋಡಿ ಮಾಡುವಲ್ಲಿ ಯಶಸ್ವಿಯಾಗಿದೆ. ಅಬ್ಬರದ ಫಿನಾಲೆಯಲ್ಲಿ ವಿನ್ನರ್​ ಅನೌನ್ಸ್​ ಮಾಡುವಲ್ಲಿ ಪ್ರೇಕ್ಷಕರ ನಾಡಿಮಿಡಿತವನ್ನು ಹೆಚ್ಚಿಸಿದ ಅಭಿನಯ ಚಕ್ರವರ್ತಿ, ಫೈನಲ್ ಕುತೂಹಲಕ್ಕೆ ಮತ್ತು ಬಿಗ್​ಬಾಸ್​ಗೆ ತೆರೆ ಎಳೆದಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿಂದಿನ ಬಿಗ್ ​ಬಾಸ್​ಗಿಂತಲೂ ಈ ಬಾರಿ ಹೆಚ್ಚು ಸ್ಪರ್ಧಿಗಳು ಸಾಮಾನ್ಯ ನಾಗರಿಕರು ಎನ್ನುವುದೇ ವಿಶೇಷವಾಗಿತ್ತು. ಕೆಲವೇ ಸೆಲಬ್ರೆಟಿಗಳನ್ನು ಆರಿಸಿ, ಅದರಲ್ಲೂ ಯುವ ಸಮುದಾಯವನ್ನೇ ಈ ಬಾರಿ ಬಿಗ್‌ ಬಾಸ್‌ ಸ್ಪರ್ಧಿಗಳನ್ನಾಗಿ ಮಾಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆರಂಭದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ನಂತರ ವಿಶೇಷ ಟಾಸ್ಕ್​ಗಳ ಮೂಲಕ ಜನರನ್ನು ಸೆಳೆಯುವಲ್ಲಿ 6ನೇ ಬಿಗ್​ಬಾಸ್ ಯಶಸ್ವಿಯಾಗಿದೆ.​
ಇದುವರೆಗೆ ಬಿಗ್ ಬಾಸ್ ಕನ್ನಡ ಗೆದ್ದವರು
1. ಸೀಸನ್ -1 ವಿನ್ನರ್: ವಿಜಯ್ ರಾಘವೇಂದ್ರ (ನಟ)
2. ಸೀಸನ್-2 ವಿನ್ನರ್: ಅಕುಲ್ ಬಾಲಾಜಿ (ನಿರೂಪಕ)
3. ಸೀಸನ್-3 ವಿನ್ನರ್: ಶ್ರುತಿ (ನಟಿ)
4. ಸೀಸನ್-4 ವಿನ್ನರ್: ಪ್ರಥಮ್ (ನಿರ್ದೇಶಕ)
5. ಸೀಸನ್-5 ವಿನ್ನರ್: ಚಂದನ್ ಶೆಟ್ಟಿ (ಗಾಯಕ)

ಬಿಗ್​ ಬಾಸ್​ ಸೀಸನ್​-6 ನಲ್ಲಿ ಯಾರೆಲ್ಲಾ ಸ್ಪರ್ಧಿಸಿದ್ದರು? ಬಿಗ್​ ಬಾಸ್​ ಮನೆಗೆ ಹೋಗುವ ಮುನ್ನ ಸ್ಪರ್ಧಿಗಳು ಏನು ಹೇಳಿದ್ದರೂ ಎಂಬುದನ್ನು ಈ ವಿಡಿಯೋದಲ್ಲಿ ನೋಡಿ
First published:January 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ