news18-kannada Updated:December 19, 2020, 4:01 PM IST
ಬಿಗ್ ಬಾಸ್
ನಟಿ ಮೊನಾಲ್ ಗಜ್ವರ್ ಈ ಬಾರಿಯ ಬಿಗ್ ಬಾಸ್ ಸೀಸನ್ 4ರಲ್ಲಿ ಭಾಗವಹಿಸಿದ್ದರು. ನಾಗರ್ಜುನ ಅಕ್ಕಿನೇನಿ ನಿರೂಪಣೆಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಮೊನಾಲ್ ಗಜ್ವರ್ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಆದರೆ ಕೆಲವು ದಿನಗಳ ಹಿಂದೆ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಹೊರಬಂದ ಮೊನಾಲ್ ಸಹಸ್ಪರ್ಧಿ ನಟ ಅಭಿಜಿತ್ ಅಭಿಮಾನಿಗಳ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮೊನಾಲ್ ಗಜ್ವರ್ ಅವರ ತಂಗಿಯನ್ನು ಅಭಿಜಿತ್ ಅಭಿಮಾನಿಗಳು ಕೆಟ್ಟದಾಗಿ ಟ್ರೋಲ್ ಮಾಡಿದ್ದಾರೆ. ಇದರಿಂದ ಬೇಸರವಾಗಿ ಪೋಲಿಸ್ ಠಾಣೆ ಮೆಟ್ಟಿಲೇರಿದ್ದಾರೆ. ಕೆಟ್ಟದಾಗಿ ಟ್ರೋಲ್ ಮಾಡುವವವರ ಮೇಲೆ ಸೂಕ್ತವಾದ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಇತ್ತೀಚೆಗೆ ತೆಲುಗು ಬಿಗ್ಬಾಸ್ ವೇದಿಕೆಗೆ ಕಿಚ್ಚ ಸುದೀಪ್ ಅತಿಥಿಯಾಗಿ ಎಂಟ್ರಿ ನೀಡಿದ್ದರು. ಆ ವೇಳೆ ಸುದೀಪ್ ಮತ್ತು ಮೊನಾಲ್ ಗಜ್ವರ್ ಮಾತನಾಡುವ ವಿಡಿಯೋ ಸಖತ್ ವೈರಲ್ ಆಗಿತ್ತು. ಆದಾದ ಬಳಿಕ ಮೊನಾಲ್ ಗಜ್ವರ್ ಮನೆಯಿಂದ ಹೊರಬಂದಿದ್ದಾರೆ. ಈ ವೇಳೆ ಆಕೆಯ ತಂಗಿ ಹೇಮಾಲಿ ಬಿಗ್ಬಾಸ್ ಮನೆಗೆ ಭೇಟಿ ನೀಡಿದ್ದರು.
ಹೇಮಾಲಿ ಬಿಗ್ಬಾಸ್ ಮನೆ ಒಳಕ್ಕೆ ಹೋಗುವ ವೇಳೆ ಅಭಿಜಿತ್ ಬಗ್ಗೆ ಕಾಮೆಂಟ್ ಮಾಡಿದ್ದರು. ಇದನ್ನು ಕಂಡು ಅಭಿಜಿತ್ ಅಭಿಮಾನಿಗಳು ತಿರುಗಿ ಬಿದ್ದಿದ್ದು, ಅವರನ್ನು ಟ್ರೋಲ್ ಮಾಡಿದ್ದಾರೆ. ಇದನ್ನು ಕಂಡ ಅಕ್ಕ ಮೊನಾಲ್ ಗಜ್ವರ್ ಅಭಿಜಿತ್ ಅಭಿಮಾನಿಗಳು ನನ್ನ ಸಹೋದರಿ ಬಗ್ಗೆ ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಅಷ್ಟು ಮಾತ್ರವಲ್ಲದೆ, ಕೊಲೆ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಮೊನಾಲ್ ಗಜ್ವರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಸದ್ಯ ತೆಲುಗಿನಲ್ಲಿ ಬಿಗ್ ಬಾಸ್ ಸೀಸನ್ 4 ಕಾರ್ಯಕ್ರಮ ನಡೆಯುತ್ತಿದೆ. ಅದಾದ ಬಳಿಕ ಕನ್ನಡದಲ್ಲಿ ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಸೀಸನ್ 8 ಕಾರ್ಯಕ್ರಮ ನಡೆಯಲಿದೆ. ಈಗಾಗಗಲೇ ಈ ಬಗ್ಗೆ ಕೆಲಸಗಳು ನಡೆಯುತ್ತಿದೆ ಎನ್ನಲಾಗುತ್ತಿದೆ.
Published by:
Harshith AS
First published:
December 19, 2020, 3:54 PM IST