ಮುಂಬೈ: ಬಿಗ್ ಬಾಸ್ 16ರ (Bigg Boss) ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರಾದ ಶಿವ ಠಾಕ್ರೆ ಅವರು ತಮ್ಮ ಉತ್ತಮ ಆಟ ಹಾಗೂ ವ್ಯಕ್ತಿತ್ವದಿಂದ ಲಕ್ಷಾಂತರ ಅಭಿಮಾನಿಗಳ ಮನಗೆದ್ದಿದ್ದಾರೆ. ಸಲ್ಮಾನ್ ಖಾನ್ ಹೋಸ್ಟ್ ಮಾಡುತ್ತಿರುವ ಬಿಗ್ ಬಾಸ್ ಸೀಸನ್ 16ರ (Hindi) ಶೋನಲ್ಲಿ ಮೊದಲ ದಿನದಿಂದಲೇ ಶಿವ ಠಾಕ್ರೆ (Shiva Thackeray) ಮುಂಚೂಣಿಯಲ್ಲಿರುವ ಸ್ವರ್ಧಿಯಾಗಿದ್ದಾರೆ.
ಶಿವ ಠಾಕ್ರೆ ತಮ್ಮ ವ್ಯಕ್ತಿತ್ವವನ್ನು ಪ್ರದರ್ಶಿಸುವ ರೀತಿಗೆ ಅಭಿಮಾನಿಗಳು ಫಿದಾ ಆಗಿದ್ದು, ಅವರನ್ನು ಬೆಂಬಲಿಸಲು ಹೆಚ್ಚು ಉತ್ಸುಕರಾಗಿದ್ದಾರೆ. ಬಿಗ್ ಬಾಸ್ 16ರ ಹಲವಾರು ವೀಕ್ಷಕರು ಮತ್ತು ಸೆಲೆಬ್ರಿಟಿಗಳು ಸಹ ಟಾಪ್ 3 ರಲ್ಲಿ ಶಿವ್ ಠಾಕ್ರೆ ಇರಬೇಕೆನ್ನುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ. ಫೆಬ್ರವರಿ ಎರಡನೇ ವಾರದಲ್ಲಿ ಫಿನಾಲೆ ನಡೆಯುವ ಸಾಧ್ಯತೆಯಿದ್ದು, ಶಿವ್ ಠಾಕ್ರೆ ಬಿಗ್ ಬಾಸ್ ಮರಾಠಿ ವಿನ್ನರ್ ಟ್ರೋಫಿಯನ್ನು ಹಿಡಿದಿರುವ ಹಲವಾರು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ನಟ-ಚಲನಚಿತ್ರ ನಿರ್ಮಾಪಕ ಮಹೇಶ್ ಮಾಂಜ್ರೇಕರ್ 2019 ರಲ್ಲಿ ಹೊಸ್ಟ್ ಮಾಡಿದ ಬಿಗ್ ಬಾಸ್ ಮರಾಠಿ ಸೀಸನ್ 2 ರ ಕಿರೀಟವನ್ನು ಶಿವ್ ಠಾಕ್ರೆ ಮುಡಿಗೇರಿಸಿಕೊಂಡಿದ್ದರು, ಈ ಫೋಟೋಗಳು ಈಗ ಹೆಚ್ಚು ವೃರಲ್ ಆಗುತ್ತಿವೆ. ಬಿಗ್ ಬಾಸ್ ಹಿಂದಿ ಆವೃತ್ತಿಯ ಅಭಿಮಾನಿಗಳು ಈಗ ಬಿಗ್ ಬಾಸ್ 16 ರ ವಿನ್ನರ್ ಟ್ರೋಫಿಯನ್ನು ಶಿವ್ ಠಾಕ್ರೆ ಹಿಡಿಯಬೇಕೆನ್ನುವ ಬಯಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಬಿಗ್ ಬಾಸ್ ಸೀಸನ್ 16 ರಲ್ಲಿ ಟಾಪ್ 9 ಅರ್ಹ ಸ್ಪರ್ಧಿಗಳು ಉಳಿದುಕೊಂಡಿದ್ದು, ಅವರು ಫೈನಲ್ ಗಾಗಿ ಪರಸ್ಪರ ಸೆಣಸಾಡಲಿದ್ದಾರೆ. ಬಹು ನಿರೀಕ್ಷಿತ ಟಿಕೆಟ್ ಟು ಫಿನಾಲೆ ರೇಸ್ ಆರಂಭವಾಗಿದ್ದು, ನಿಮೃತ್ ಪ್ರಸ್ತುತ ಮನೆಯ ನಾಯಕರಾಗಿದ್ದಾರೆ.
ಈ ವಾರ ಸುಂಬುಲ್ ತೌಕೀರ್ ಖಾನ್, ಶಾಲಿನ್ ಭಾನೋಟ್, ಟೀನಾ ದತ್ತಾ ಮತ್ತು ಸೌಂದರ್ಯ ಶರ್ಮಾ ಎಲಿಮಿನೇಷನ್ ರೌಂಡಿನಲ್ಲಿದ್ದಾರೆ. ಸದ್ದು, ಗದ್ದಲದ ಬಿಗ್ ಬಾಸ್ ಸೀಸನ್ 16ರ ರಿಯಾಲಿಟಿ ಶೋ ಕುತೂಹಲ ಮೂಡಿಸಿದೆ. ಸ್ಪರ್ಧಿಗಳು ಮನೆಯೊಳಗೆ ಪ್ರಪಂಚದಿಂದ ದೂರವಿದ್ದರೂ, ಅವರ ಸಂಭಾವನೆಯೂ ಬಹಳಷ್ಟು ಹೆಚ್ಚಾಗಿದೆ. ಬಿಗ್ ಬಾಸ್ ಶೋ ಕುಟುಂಬ ಸದಸ್ಯರ ಬ್ಯಾಂಕ್ ಬ್ಯಾಲೆನ್ಸ್ ದುಪ್ಪಟ್ಟಾಗಿದ್ದು, ಅನೇಕರು ಕೋಟ್ಯಾಧಿಪತಿಗಳಾಗಿದ್ದಾರೆ.
ಕಿರುತೆರೆಯ ಪ್ರಸಿದ್ಧ ರಿಯಾಲಿಟಿ ಶೋ 'ಬಿಗ್ ಬಾಸ್' 16ನೇ ಸೀಸನ್ ಜನರನ್ನು ರಂಜಿಸುತ್ತಿದೆ. ಅಬ್ದು ರೋಜಿಕ್ ಮತ್ತು ಸಾಜಿದ್ ಖಾನ್ ಮನೆಯಿಂದ ನಿರ್ಗಮಿಸಿದ್ದಾರೆ. ಸದ್ಯ ಸುಂಬುಲ್ ತೌಕೀರ್, ಶಲೀನ್ ಭಾನೋಟ್, ಟೀನಾ ದತ್ತಾ, ನಿಮೃತ್ ಕೌರ್ ಅಹ್ಲುವಾಲಿಯಾ, ಪ್ರಿಯಾಂಕಾ ಚಾಹರ್ ಚೌಧರಿ, ಶಿವ್ ಠಾಕ್ರೆ, ಎಂಸಿ ಸ್ಟಾನ್, ಅರ್ಚನಾ ಗೌತಮ್, ಸೌಂದರ್ಯ ಬಿಗ್ ಬಾಸ್ ಮನೆಯಲ್ಲಿ ಉಳಿದಿದ್ದಾರೆ.
ಇದೀಗ ಫಿನಾಲೆಗೆ ಇನ್ನು ಕೆಲವೇ ದಿನಗಳು ಉಳಿದಿದ್ದು, ಬಿಗ್ ಬಾಸ್'ನ ಹಲವು ಸ್ಪರ್ಧಿಗಳ ಗಳಿಕೆಯೇ ಅವರನ್ನು ಇಲ್ಲಿಯವರೆಗೂ ಕೋಟ್ಯಾಧಿಪತಿಗಳನ್ನಾಗಿ ಮಾಡಿದೆ ಎಂದು ವರದಿಯೊಂದು ಹೇಳಿದೆ.
ಸುಂಬುಲ್ ಟೌಕರ್ ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿ
ಬಾಲಿವುಡ್ ಲೈಫ್ ವರದಿಯ ಪ್ರಕಾರ, 'ಬಿಗ್ ಬಾಸ್ 16' ರ ಕಿರಿಯ ಸ್ಪರ್ಧಿ ಸುಂಬುಲ್ ಟೌಕರ್ ಅತಿ ಹೆಚ್ಚು ಸಂಭಾವನೆ ಗಳಿಸಿದ ಸ್ಪರ್ಧಿಯಾಗಿದ್ದಾರೆ. ಕೇವಲ 19 ವರ್ಷದ ಸುಂಬುಲ್ ಪ್ರತಿ ವಾರ 9 ಲಕ್ಷ ರೂಪಾಯಿ ಪಡೆದಿದ್ದು, ಇಲ್ಲಿಯವರೆಗೆ ಸುಂಬುಲ್ 1.68 ಕೋಟಿ ಸಂಭಾವನೆ ಪಡೆದಿದ್ದಾರೆ. ಮತ್ತೊಂದೆಡೆ, ಟೀನಾ ದತ್ತಾ 1.26 ಕೋಟಿ ,ನಿಮೃತ್ ಕೌರ್ 1.12 ಕೋಟಿ ಮತ್ತು ಎಂಸಿ ಸ್ಟಾನ್ 98 ಲಕ್ಷ ರೂ. ಸಂಭಾವನೆ ಪಡೆದಿದ್ದಾರೆ.
ಇದನ್ನೂ ಓದಿ: Rakul Preet Singh: ಮಹಿಳಾ ಸುರಕ್ಷತೆ ಬಗ್ಗೆ ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಹೇಳಿದ್ದೇನು?
ಶಲೀನ್ ಭಾನೋಟ್ ಕಡಿಮೆ ಸಂಭಾವನೆ ಪಡೆದ ಸ್ವರ್ಧಿ
ಮತ್ತೊಂದೆಡೆ, ಪ್ರಿಯಾಂಕಾ ಚಾಹರ್ ಚೌಧರಿ 70 ಲಕ್ಷ, ಶಿವ್ ಠಾಕ್ರೆ 63 ಲಕ್ಷ ಸಂಭಾವನೆ ಪಡೆದಿದ್ದು, ಶಲೀನ್ ಭಾನೋಟ್ 56 ಲಕ್ಷ ಸಂಭಾವನೆ ಪಡೆಯವ ಮೂಲಕ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ