• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Bigg Boss: ಲೈಂಗಿಕ ಕಿರುಕುಳದ ಆರೋಪ; ಬಿಗ್ ಬಾಸ್​ನಿಂದ ಈ ಸ್ಪರ್ಧಿಯನ್ನು ಹೊರಹಾಕಲು ಒತ್ತಾಯ

Bigg Boss: ಲೈಂಗಿಕ ಕಿರುಕುಳದ ಆರೋಪ; ಬಿಗ್ ಬಾಸ್​ನಿಂದ ಈ ಸ್ಪರ್ಧಿಯನ್ನು ಹೊರಹಾಕಲು ಒತ್ತಾಯ

ಬಿಗ್​​ಬಾಸ್

ಬಿಗ್​​ಬಾಸ್

ಈಗ ಈ ವ್ಯಕ್ತಿಗೆ ಬಿಗ್ ಬಾಸ್‌ನಲ್ಲಿ ಸ್ಥಾನ ನೀಡಲಾಗಿದೆ. ಅದು ತಪ್ಪಾದ ನಿರ್ಧಾರ.  ಈ ಕಾರ್ಯಕ್ರಮದಿಂದ ತೆಗೆದು ಹಾಕಬೇಕೆಂದು ದೆಹಲಿ ಮಹಿಳಾ ಆಯೋಗದ ಅಧ್ಯಕರು ಆಗ್ರಹ ವ್ಯಕ್ತಪಡಿಸಿದ್ದಾರೆ.

  • Share this:

ದೆಹಲಿ: ಲೈಂಗಿಕ ಕಿರುಕುಳದ ಆರೋಪದ ಅಡಿ ಚಿತ್ರ ನಿರ್ಮಾಪಕ ಸಾಜಿದ್ ಖಾನ್ ಅವರನ್ನು (Sajid Khan) ರಿಯಾಲಿಟಿ ಶೋ ಬಿಗ್ ಬಾಸ್‌ನಿಂದ ಹೊರಹಾಕಬೇಕೆಂದು (Bigg Boss Sajid Khan)  ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರಿಗೆ (Anurag Thakur) ಪತ್ರ ಬರೆದಿದ್ದಾರೆ. #MeToo ಆಂದೋಲನದ ಸಂದರ್ಭದಲ್ಲಿ ಹಲವಾರು ಮಹಿಳೆಯರು ಸಾಜಿದ್ ಖಾನ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಬಿಗ್ ಬಾಸ್ 16 ನೇ ಸೀಸನ್ ನ ಮೊದಲ ಸಂಚಿಕೆ ಅಕ್ಟೋಬರ್ 1 ರಂದು ಪ್ರಸಾರವಾಗಿದೆ. ಈ ಕಾರ್ಯಕ್ರಮವನ್ನು ನಟ ಸಲ್ಮಾನ್ ಖಾನ್ ಹೋಸ್ಟ್ ಮಾಡಿದ್ದಾರೆ.


#MeToo ಆಂದೋಲನದ ಸಂದರ್ಭದಲ್ಲಿ 10 ಮಹಿಳೆಯರು ಸಾಜಿದ್ ಖಾನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಎಲ್ಲಾ ದೂರುಗಳು ಸಾಜಿದ್ ಅವರ ಅಸಹ್ಯಕರ ಮನಸ್ಥಿತಿಯನ್ನು ತೋರಿಸುತ್ತವೆ. ಎಂಬ ಆರೋಪ ಮಾಡಲಾಗಿದೆ. ಈಗ ಈ ವ್ಯಕ್ತಿಗೆ ಬಿಗ್ ಬಾಸ್‌ನಲ್ಲಿ ಸ್ಥಾನ ನೀಡಲಾಗಿದೆ. ಅದು ತಪ್ಪಾದ ನಿರ್ಧಾರ.  ಈ ಕಾರ್ಯಕ್ರಮದಿಂದ ಸಾಜಿದ್ ಖಾನ್​ರನ್ನು ತೆಗೆಯಬೇಕೆಂದು ಮಲಿವಾಲ್ ಸೋಮವಾರ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.


4 ವರ್ಷ ನಿಷೇಧ
ಸದ್ಯ ಸಾಜಿದ್ ಖಾನ್ ಅವರನ್ನು ಇಂಡಿಯನ್ ಫಿಲ್ಮ್ ಮತ್ತು ಟೆಲಿವಿಷನ್ ಡೈರೆಕ್ಟರ್ಸ್ ಅಸೋಸಿಯೇಷನ್ (IFTDA)  2018ರಲ್ಲಿ 4 ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗಿಸಿದೆ.  ಹಲವು ಮಹಿಳೆಯರು ಸಾಜಿದ್ ಖಾನ್ ಅವರ ಮೇಲೆ ಲೈಂಗಿಕ ಕಿರುಕುಳ ಮಾಡಿದ ಆರೋಪ ಕೇಳಿಬಂದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೇ ಹೌಸ್​ಫುಲ್ 4 ಸಿನಿಮಾದ ನಿರ್ದೇಶನ ಜವಾಬ್ದಾರಿಯೂ ಈ ಆರೋಪದಿಂದ ಸಾಜಿದ್ ಖಾನ್ ಕೈತಪ್ಪಿದೆ.   


67ನೇ ಪಾರ್ಲೆ ಫಿಲ್ಮ್ ಫೇರ್ ಅವಾರ್ಡ್ಸ್​ ಸೌಥ್ 2022; ಅತ್ಯುತ್ತಮ ನಟ ಧನಂಜಯ್, ಅಪ್ಪು​ಗೆ ಜೀವಮಾನದ ಸಾಧನೆ ಪ್ರಶಸ್ತಿ


67 ನೇ ಪಾರ್ಲೆ, 2022 ಫಿಲ್ಮ್ ಫೇರ್ ಸೌಥ್ ಪ್ರಶಸ್ತಿ (67 th Parle Filmfare Awards South) ಕಾರ್ಯಕ್ರಮ ನಿನ್ನೆ (ಅಕ್ಟೋಬರ್ 9) ಬೆಂಗಳೂರಿನಲ್ಲಿ (Bengaluru) ನಡೆದಿದ್ದು, ತೆಲುಗು, ತಮಿಳು, ಕನ್ನಡ (Kannada) ಮತ್ತು ಮಲಯಾಳಂ ಚಲನಚಿತ್ರೋದ್ಯಮಗಳಲ್ಲಿ ಅತ್ಯುತ್ತಮವಾದದ್ದಕ್ಕೆ ಪ್ರಶಸ್ತಿಗಳು ಲಭಿಸಿವೆ. 2020 ಮತ್ತು 2021 ರಲ್ಲಿ ತೆರೆಗೆ ಬಂದ ಅತ್ಯುತ್ತಮ ಚಲನಚಿತ್ರಗಳಿಗೆ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಬಾರಿಯ ಉತ್ತಮ ನಟ, ನಟಿ, ಚಲನಚಿತ್ರ ಯಾವುದು ಎಂದು ತಿಳಿಸಿಕೊಟ್ಟರು. ತೆಲುಗಿನಲ್ಲಿ ಅಲ್ಲು ಅರ್ಜುನ್ ಪ್ರಶಸ್ತಿ ಪಡೆದಿದ್ರೆ, ಕನ್ನಡದಲ್ಲಿ ಡಾಲಿ ಧನಂಜಯ್ (Daali Dhananjay) ಉತ್ತಮ ನಟರಾಗಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ನಮ್ಮನ್ನು ಅಗಲಿದ ಅಪ್ಪು, ಪುನೀತ್ ರಾಜ್ ಕುಮಾರ್ ಗೆ (Puneeth Rajkumar) ಜೀವಮಾನದ ಸಾಧನೆ ಪ್ರಶಸ್ತಿ ಲಭಿಸಿದೆ.


ಇದನ್ನೂ ಓದಿ: National Animal: ಹಸು ರಾಷ್ಟ್ರಪ್ರಾಣಿ ಆಗ್ಬೇಕು! ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್​


ಪಾರ್ಲೆ ಫಿಲ್ಮ್‍ಫೇರ್ ಅವಾಡ್ರ್ಸ್ ಸೌತ್ 2022 ರಲ್ಲಿ ವಿಜೇತರ ಸಂಪೂರ್ಣ ಪಟ್ಟಿ


ಕನ್ನಡ ಸಿನಿಮಾ ವಿಜೇತರು


ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ (ಪುರುಷ) - ಧನಂಜಯ್ (ಬಡವ ರಾಸ್ಕಲ್)
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ (ಮಹಿಳೆ) - ಯಜ್ಞ ಶೆಟ್ಟಿ (ಆಕ್ಟ್ 1978)
ಅತ್ಯುತ್ತಮ ಚಿತ್ರ - ಆಕ್ಟ್ 1978
ಅತ್ಯುತ್ತಮ ನಿರ್ದೇಶಕ - ರಾಜ್ ಬಿ ಶೆಟ್ಟಿ (ಗರುಡ ಗಮನ ವೃಷಭ ವಾಹನ)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ (ಪುರುಷ) - ಬಿ. ಸುರೇಶ (ಆಕ್ಟ್ 1978)


ಇದನ್ನೂ ಓದಿ: Hubballi News: ಉತ್ತರ ಕರ್ನಾಟಕ ಜನರಿಗೆ ಖುಷಿಸುದ್ದಿ! ಹೊಸ ರೈಲಿಗೆ ಹಸಿರು ನಿಶಾನೆ


ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ (ಮಹಿಳೆ) - ಉಮಾಶ್ರೀ (ರತ್ನನ್ ಪ್ರಪಂಚ)
ಅತ್ಯುತ್ತಮ ಸಂಗೀತ ಆಲ್ಬಮ್ - ವಾಸುಕಿ ವೈಭವ್ (ಬಡವ ರಾಸ್ಕಲ್)
ಅತ್ಯುತ್ತಮ ಸಾಹಿತ್ಯ - ಜಯಂತ್ ಕಾಯ್ಕಿಣಿ- ತೇಲಾಡು ಮುಗಿಲೆ (ಆಕ್ಟ್ 1978)
ಅತ್ಯುತ್ತಮ ಹಿನ್ನೆಲೆ ಗಾಯಕ (ಪುರುಷ) - ರಘು ದೀಕ್ಷಿತ್- ಮಲೇ ಮಲೇ ಮಲೇ (ನಿನ್ನ ಸನಿಹಕೆ)
ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳೆ) - ಅನುರಾಧಾ ಭಟ್- ಧೀರ ಸಮ್ಮೋಹಗಾರ (ಬಿಚ್ಚುಗಟ್ಟಿ)
ಅತ್ಯುತ್ತಮ ಛಾಯಾಗ್ರಹಣ - ಶ್ರೀಶ ಕುಡುವಳ್ಳಿ (ರತ್ನನ್ ಪ್ರಪಂಚ)
ಬೆಸ್ಟ್ ಕೊರಿಯೋಗ್ರಫಿ - ಜಾನಿ ಮಾಸ್ಟರ್ - ಫೀಲ್ ದಿ ಪವರ್ (ಯುವರತ್ನ)
ಜೀವಮಾನದ ಸಾಧನೆ ಪ್ರಶಸ್ತಿ - ಪುನೀತ್ ರಾಜ್‍ಕುಮಾರ್

Published by:ಗುರುಗಣೇಶ ಡಬ್ಗುಳಿ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು