Bigg Boss 16: ಹೇಗಿರಲಿದೆ ಗೊತ್ತಾ ಬಿಗ್ ಬಾಸ್ 16? ಪ್ರೋಮೋದಲ್ಲಿ ಸಲ್ಲು ಕೊಟ್ರು ನೋಡಿ ಟ್ವಿಸ್ಟ್

ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ನ ಹೊಚ್ಚ ಹೊಸ ಸೀಸನ್ ಅನ್ನು ಮತ್ತೆ ತರಲು ಸಜ್ಜಾಗಿದೆ. ಮೆಗಾಸ್ಟಾರ್ ಸಲ್ಮಾನ್ ಖಾನ್ ಅವರು ಇದಕ್ಕೆ ನಿರೂಪಕರಾಗಿದ್ದಾರೆ. ನಟ ಇತ್ತೀಚೆಗೆ ಕಾರ್ಯಕ್ರಮದ ಪ್ರೋಮೋವನ್ನು ಚಿತ್ರೀಕರಿಸಿದರು. ಕಳೆದ 15 ವರ್ಷಗಳಿಂದ, ಬಿಗ್‌ಬಾಸ್ ಎಲ್ಲರ ಆಟಕ್ಕೆ ಸಾಕ್ಷಿಯಾಗಿದೆ, ಆದರೆ ಈಗ ಅದನ್ನು ಆಡುವ ಸಮಯ ಬಂದಿದೆ ಅಂತ ಸಲ್ಲು ಹೇಳಿದ್ದಾರೆ.

ಬಿಗ್‌ಬಾಸ್ 16 ಪ್ರೋಮೋ

ಬಿಗ್‌ಬಾಸ್ 16 ಪ್ರೋಮೋ

  • Share this:
ಕಳೆದ ಒಂದು ತಿಂಗಳಿಂದ ಹಿಂದಿ ಭಾಷೆಯ ‘ಬಿಗ್‌ಬಾಸ್’ (Bigg Boss) ರಿಯಾಲಿಟಿ ಶೋ ನ ಸೀಸನ್ 16ರ ಬಗ್ಗೆ ಅನೇಕ ಸುದ್ದಿಗಳು ಸುದ್ದಿ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಜೋರಾಗಿಯೇ ಹರಿದಾಡುತ್ತಿವೆ. ‘ಬಿಗ್‌ಬಾಸ್’ ರಿಯಾಲಿಟಿ ಶೋ ನ ಸೀಸನ್ 16ರ ಸಂಚಿಕೆಗೆ ಆ ಸ್ಪರ್ಧಿ  (competitor) ಬರಬಹುದು, ಈ ಸ್ಪರ್ಧಿ ಬರಬಹುದು ಅಂತ ಅನೇಕ ಉಹಾಪೋಹಗಳು ಹರಿದಾಡುತ್ತಲೇ ಇವೆ. ಕೆಲವು ವಾರಗಳ ಹಿಂದೆಯಷ್ಟೆ ಈ ರಿಯಾಲಿಟಿ ಶೋ ಗೆ (Reality show) ಬಂಗಾಳಿ ನಟಿ ಮತ್ತು ಲೋಕಸಭಾ ಸಂಸದೆ ನುಸ್ರತ್ ಜಹಾನ್ ಅವರನ್ನು ಬರುವಂತೆ ಕೇಳಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.

ಕೆಲವು ದಿನಗಳ ಹಿಂದೆಯಷ್ಟೆ ಆಮಿರ್ ಖಾನ್‌ ಅವರ ಸಹೋದರ ಫೈಸಲ್ ಖಾನ್ ಅವರನ್ನು ಬರುವಂತೆ ಕೇಳಿಕೊಂಡಿದ್ದರು. ಆದರೆ ಅವರು ರಿಯಾಲಿಟಿ ಶೋ ಗೆ ಬರಲು ಆಗುವುದಿಲ್ಲ ಅಂತ ಹೇಳಿರುವ ಸುದ್ದಿಯನ್ನು ನೋಡಿದ್ದೆವು. ಈಗಾಗಲೇ ಜನರಿಗೆ ‘ಬಿಗ್‌ಬಾಸ್’ ರಿಯಾಲಿಟಿ ಶೋ ನ ಸೀಸನ್ 16ರ ಬಗ್ಗೆ ಎಲ್ಲಿಲ್ಲದ ಕುತೂಹಲ ಹೆಚ್ಚಾಗಿದೆ.

ಮತ್ತೆ ಬರ್ತಿದೆ ‘ಬಿಗ್‌ಬಾಸ್’ ರಿಯಾಲಿಟಿ ಶೋ
ಕಲರ್ಸ್ ಭಾರತದ ನೆಚ್ಚಿನ ರಿಯಾಲಿಟಿ ಶೋ ಬಿಗ್‌ಬಾಸ್ ನ ಹೊಚ್ಚ ಹೊಸ ಸೀಸನ್ ಅನ್ನು ಮತ್ತೆ ತರಲು ಸಜ್ಜಾಗಿದೆ, ಏಕೈಕ ಮೆಗಾಸ್ಟಾರ್ ಸಲ್ಮಾನ್ ಖಾನ್ ಅವರು ಇದಕ್ಕೆ ನಿರೂಪಕರಾಗಿದ್ದಾರೆ. ನಟ ಇತ್ತೀಚೆಗೆ ಕಾರ್ಯಕ್ರಮದ ಪ್ರೋಮೋವನ್ನು ಚಿತ್ರೀಕರಿಸಿದರು. ಕಳೆದ 15 ವರ್ಷಗಳಿಂದ, ಬಿಗ್‌ಬಾಸ್ ಎಲ್ಲರ ಆಟಕ್ಕೆ ಸಾಕ್ಷಿಯಾಗಿದೆ, ಆದರೆ ಈಗ ಅದನ್ನು ಆಡುವ ಸಮಯ ಬಂದಿದೆ ಅಂತ ಹೇಳಲಾಗುತ್ತಿದೆ.

ಇದನ್ನೂ ಓದಿ: Tina Datta: ಆ್ಯಕ್ಟಿಂಗ್ ಬಿಟ್ಟು ತರಕಾರಿ ಮಾರುತ್ತಿದ್ದಾರಾ ನಟಿ? ನೆಟ್ಟಿಗರು ಏನಂದ್ರು?

ಸೀಸನ್ ನಿಂದ ಸೀಸನ್ ಗೆ ಬಿಗ್‌ಬಾಸ್ ರಿಯಾಲಿಟಿ ಶೋ ನ ತಪ್ಪದೆ ನೋಡುವ ವೀಕ್ಷಕರನ್ನು ರಂಜಿಸಿದ ನಂತರ, ಈ ವರ್ಷದ ಥೀಮ್ ಮತ್ತು ಸ್ಪರ್ಧಿಗಳ ನಿರೀಕ್ಷೆ ಅಭಿಮಾನಿಗಳಲ್ಲಿ ಇನ್ನೂ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಈ ಎಲ್ಲಾ ಊಹಾಪೋಹಗಳಿಗೆ ಅಂತ್ಯ ಹಾಡಿದ ನಿರೂಪಕ ಮತ್ತು ನಟ ಸಲ್ಮಾನ್ ಖಾನ್, ಬಿಗ್‌ಬಾಸ್ ಇನ್ನು ಮುಂದೆ ಆಟದ ಪ್ರೇಕ್ಷಕರಾಗುವುದಿಲ್ಲ ಎಂದು ಬಹಿರಂಗಪಡಿಸುತ್ತಾರೆ ಮತ್ತು ಎಚ್ಚರಿಕೆ ನೀಡುತ್ತಾರೆ.

ಈ ಸೀಸನ್ ನ ಮೊದಲ ಟೀಸರ್ ರಿಲೀಸ್
ಬಿಗ್‌ಬಾಸ್ ಶೋ ನ ಸೀಸನ್ 16 ಕೇವಲ ನಿಮ್ಮನ್ನು ನೋಡುತ್ತಿಲ್ಲ, ಆದರೆ ಅವರು ನಿಮ್ಮೊಂದಿಗೆ ಆಟವನ್ನು ಆಡಲು ಸಿದ್ಧರಾಗಿದ್ದಾರೆ. ಉತ್ಸಾಹ ಮತ್ತು ಮನರಂಜನೆಯ ಹತ್ತು ಪಟ್ಟು ಹೊಸ ಅವತಾರದಲ್ಲಿ ಪ್ರದರ್ಶನಕ್ಕೆ ಸಿದ್ಧರಾಗಿರಿ. ಕುತೂಹಲಕಾರಿಯಾಗಿ, ನಿರೂಪಕ ಸಲ್ಮಾನ್ ಖಾನ್ ಅವರ ಮುಂಬರುವ ಸೀಸನ್ ನ ಮೊದಲ ಟೀಸರ್ ಅನ್ನು ಚಾನೆಲ್ ಇದೀಗ ಬಿಡುಗಡೆಮಾಡಿದೆ.










View this post on Instagram






A post shared by ColorsTV (@colorstv)




ಬಿಗ್‌ಬಾಸ್ ಸೀಸನ್ 16ರ ಪ್ರೋಮೋ ವಿಡಿಯೋದಲ್ಲಿ, ಸಲ್ಮಾನ್ ಖಾನ್ ಹಿಂದೆ ನಡೆದ ಸೀಸನ್ ಗಳಲ್ಲಿ ಬಂದಂತಹ ಸ್ಪರ್ಧಿಗಳ ದೃಶ್ಯ ತುಣುಕುಗಳನ್ನು ತೋರಿಸುತ್ತಾ ಹಾಗೆ ನಡೆದುಕೊಂಡು ಬರುವುದನ್ನು ನಾವು ನೋಡಬಹುದು. ಇದು ಹಿಂದಿನ ಸೀಸನ್ ನಲ್ಲಿ ಬಂದಿರುವಂತಹ ಎಲ್ಲಾ ಸ್ಪರ್ಧಿಗಳು, ಬಿಗ್‌ಬಾಸ್ ರಿಯಾಲಿಟಿ ಶೋ ನ ವಿಜೇತರು ಮತ್ತು ಅವರ ಆಟಗಳಿಗೆ ಫ್ಲ್ಯಾಶ್ ಬ್ಯಾಕ್ ನೀಡುತ್ತದೆ. ಫ್ಲ್ಯಾಶ್ ಬ್ಯಾಕ್ ನಲ್ಲಿ ಗೌಹರ್ ಖಾನ್, ಸಿದ್ಧಾರ್ಥ್ ಶುಕ್ಲಾ, ಶೆಹನಾಜ್ ಗಿಲ್, ಹೀನಾ ಖಾನ್, ಶಿಲ್ಪಾ ಶಿಂಧೆ ಮತ್ತು ತನಿಷಾ ಮುಖರ್ಜಿ ಅವರನ್ನು ನಾವು ನೋಡಬಹುದು.

ಇದನ್ನೂ ಓದಿ: SIIMA 2022: ಸೈಮಾದಲ್ಲಿ ಕಾಡಿದ ಅಪ್ಪು ನೆನಪು: ಪುನೀತ್​ ನೆನೆದು ವೇದಿಕೆಯಲ್ಲೇ ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ!

ಟಿವಿಯಲ್ಲಿ ಯಾವಾಗ ಪ್ರಸಾರವಾಗುತ್ತೆ ಈ ರಿಯಾಲಿಟಿ ಶೋ
ಏತನ್ಮಧ್ಯೆ, ಹಿನ್ನೆಲೆಯಲ್ಲಿರುವ ವಾಯ್ಸ್ ಓವರ್ "15 ವರ್ಷಗಳಿಂದ ಬಿಗ್‌ಬಾಸ್ ಎಲ್ಲಾ ಸ್ಪರ್ಧಿಗಳ ಆಟವನ್ನು ನೋಡುತ್ತಾ ಬಂದಿದ್ದಾರೆ, ಆದರೆ ಈ ಬಾರಿ ಬಿಗ್‌ಬಾಸ್ ಅವರು ತಮ್ಮ ಆಟವನ್ನು ಎಲ್ಲರಿಗೂ ತೋರಿಸುತ್ತಾರೆ. ಮುಂಜಾನೆ ಆಗಿರುತ್ತದೆ, ಆದರೆ ಆಕಾಶದಲ್ಲಿ ಸೂರ್ಯನ ಬದಲಿಗೆ ಚಂದ್ರ ಕಾಣುತ್ತಾನೆ, ಗುರುತ್ವಾಕರ್ಷಣೆ ಸಹ ಗಾಳಿಯಲ್ಲಿ ಹಾರಿಕೊಂಡು ಹೋಗುತ್ತದೆ, ನಿಮ್ಮ ನೆರಳು ಸಹ ನಿಮ್ಮನ್ನು ಬಿಟ್ಟು ಅದರ ಆಟವನ್ನು ತೋರಿಸುತ್ತದೆ" ಅಂತ ಬರುವುದನ್ನು ನಾವು ಇಲ್ಲಿ ಕೇಳಬಹುದು. ಆದಾಗ್ಯೂ, ಈ ಟೀಸರ್ ಈ ವರ್ಷದ ಸ್ಪರ್ಧಿಗಳ ಹೆಸರುಗಳನ್ನು ಅಥವಾ ಪ್ರೀಮಿಯರ್ ದಿನಾಂಕದ ಬಗ್ಗೆ ಏನನ್ನು ಬಹಿರಂಗಪಡಿಸಿಲ್ಲ.
Published by:Ashwini Prabhu
First published: