• Home
  • »
  • News
  • »
  • entertainment
  • »
  • Kili Paul Bigg Boss Entry: ‌ಬಿಗ್​ ಬಾಸ್ ಮನೆಗೆ ಎಂಟ್ರಿ ಕೊಡ್ತಿದ್ದಾರೆ ಕಿಲಿ ಪೌಲ್! ಗೇಮ್ ಚೇಂಜ್?

Kili Paul Bigg Boss Entry: ‌ಬಿಗ್​ ಬಾಸ್ ಮನೆಗೆ ಎಂಟ್ರಿ ಕೊಡ್ತಿದ್ದಾರೆ ಕಿಲಿ ಪೌಲ್! ಗೇಮ್ ಚೇಂಜ್?

ಕಿಲಿ ಪೌಲ್

ಕಿಲಿ ಪೌಲ್

ಕೆಜಿಎಫ್ ಡಯಲಾಗ್ ಹೇಳಿ ಮಿಂಚಿದ್ದ ಕಿಲಿ ಪೌಲ್ ಈಗ ಬಿಗ್​ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ಕಿಲಿ ಪೌಲ್ ಅವರನ್ನು ಮೋದಿ ಕೂಡಾ ಹೊಗಳಿದ್ದರು.

  • Share this:

ಭಾರತದ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದೆಂದು ಹೇಳಲಾದ ಬಿಗ್ ಬಾಸ್ (Bigg boss) ತನ್ನ ಹದಿನಾರನೇ ಸೀಸನ್‌ನೊಂದಿಗೆ ಅಕ್ಟೋಬರ್ 1 ರಂದು ಗ್ರ್ಯಾಂಡ್‌ ಎಂಟ್ರಿ ಪಡೆದುಕೊಂಡಿದೆ. ಕಳೆದ 12 ವರ್ಷಗಳಿಂದ ಬಾಲಿವುಡ್  (Bollywood) ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಡುವ ಭಾರತದ ಅತ್ಯಂತ ಜನಪ್ರಿಯ ಹಾಗೂ ಶ್ರೀಮಂತ ರಿಯಾಲಿಟಿ ಟಿವಿ ಶೋ (Reality Show) ಬಿಗ್ ಬಾಸ್ 16ನೇ (Bigg Boss 16) ಆವೃತ್ತಿ ಎಲ್ಲರ ಗಮನ ಸೆಳೆಯುತ್ತಿದೆ. ಈ ಮನರಂಜನೆಯ ರಿಯಾಲಿಟಿ ಶೋವನ್ನು ಹೆಚ್ಚಿನ ಪ್ರೇಕ್ಷಕರು ವೀಕ್ಷಿಸುತ್ತಾರೆ. ಆದ ಕಾರಣ ಅಭಿಮಾನಿಗಳನ್ನು ಮತ್ತಷ್ಟು ಮನರಂಜಿಸಲು ಬಿಗ್‌ ಬಾಸ್‌ ಇಂಟರ್‌ನೆಟ್‌ ಸೆನ್ಸೆಷನ್‌ ಆಗಿರುವ ವ್ಯಕ್ತಿಯನ್ನು ತಮ್ಮ ಶೋಗೆ ಕರೆ ತಂದಿದ್ದಾರೆ. ಈಗಾಗಲೇ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಬಿಡುಗಡೆಗೊಂಡಿದ್ದು, ಸಲ್ಮಾನ್ ಖಾನ್ ನೇತೃತ್ವದ ಬಿಗ್‌ ಬಾಸ್ ರಿಯಾಲಿಟಿ ಶೋಗೆ ಇಂಟರ್ನೆಟ್ ಸೆನ್ಸೇಷನ್ ಕಿಲಿ ಪೌಲ್ (Kili Paul) ಬರಲಿದ್ದಾರೆ ಎಂದು ಸುದ್ದಿಗಳು ಹರಿದಾಡುತ್ತಿದ್ದವು.


ಕಿಲಿ ಪೌಲ್‌ ಅವರು ಈಗಾಗಲೇ ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಆದರೆ ಈ ಬಿಗ್‌ ಬಾಸ್‌ ಒಂದು ವಿವಾದಾತ್ಮಕ ಕಾರ್ಯಕ್ರಮ ಎಂದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಅದಕ್ಕೆ ತಕ್ಕಂತೆ ಬಿಗ್‌ಬಾಸ್‌ ತಯಾರಕರು ಮನೆಯೊಳಗೆ ಬಿಸಿ ಹೆಚ್ಚಿಸಲು ಇವರನ್ನು ಕರೆತಂದಿರಬಹುದು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.


ಕಿಲಿ ಪೌಲ್ ಯಾರು?


ಕಿಲಿ ಪೌಲ್ ಒಬ್ಬ ಸೋಷಿಯಲ್ ಮೀಡಿಯಾ ಸ್ಟಾರ್. ಅವರು ಬಾಲಿವುಡ್ ಹಾಡುಗಳಿಗೆ ರೀಲ್ಸ್‌ ಮಾಡುವ ಮೂಲಕ ಜನಪ್ರಿಯರಾದರು. ಅವರು ಉತ್ತಮ ನೃತ್ಯಗಾರರಾಗಿದ್ದಾರೆ ಮತ್ತು ಪ್ರಪಂಚದಾದ್ಯಂತ ಅವರ ವೀಡಿಯೊಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಲಾಗುತ್ತದೆ.
Bigg Boss: ಶುರುವಾಯ್ತು ಹಿಂದಿ ಬಿಗ್ ಬಾಸ್ ಸೀಸನ್​ 16, ದೊಡ್ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳ ಲಿಸ್ಟ್​!


ಸಲ್ಮಾನ್ ಖಾನ್, ಶಾರುಖ್ ಖಾನ್, ಆಯುಷ್ಮಾನ್ ಖುರಾನಾ ಮತ್ತು ಇತರರಂತಹ ಹಲವಾರು ಬಾಲಿವುಡ್ ಹಾಡುಗಳಿಗೆ ಲಿಪ್ ಸಿಂಕ್ ಮಾಡುವ ಮೂಲಕ ಸಾಕಷ್ಟು ಹೆಸರು ಮಾಡಿದ್ದಾರೆ. ಓ ಅಂತವ, ಪಸೂರಿ ಮುಂತಾದ ಹಾಡುಗಳಿಗೆ ರೀಲ್ಸ್‌ ಮಾಡಿದ್ದಾರೆ.


ಕಿಲಿ ಪೌಲ್ ಅವರ ವಯಸ್ಸೆಷ್ಟು?


ಕಿಲಿ ಪೌಲ್‌ ಅವರು 9 ಅಕ್ಟೋಬರ್ 1995 ರಂದು ಜನಿಸಿದರು. ಈಗ ಅವರಿಗೆ 26 ವರ್ಷ ವಯಸ್ಸು. ಕೆಲವು ಮೂಲಗಳ ಪ್ರಕಾರ, ಕಿಲಿ ಪೌಲ್ ಅವರು ಬುಡಕಟ್ಟು ಕುಟುಂಬದ ಮೂಲ ನಿವಾಸಿ ಆಗಿದ್ದಾರೆ. ಅವರು ತಾಂಜಾನಿಯಾದ ಕ್ವಾಜುಲು-ನಟಾಲ್‌ನ ಉಮ್ಲಾಜಿಯಲ್ಲಿ ಜನಿಸಿದ್ದಾರೆ ಎಂದು ಹೇಳಲಾಗುತ್ತದೆ.


ಬಿಗ್‌ ಹೌಸ್‌ ಪ್ರವೇಶ ಮಾಡಿದ ಇಂಟರ್‌ನೆಟ್‌ ಸೆನ್ಸೆಷನ್‌ ಕಿಲಿ ಪೌಲ್‌


ಇಂಟರ್ನೆಟ್ ಸೆನ್ಸೇಷನ್ ತಾಂಜೇನಿಯಾದ ಕಿಲಿ ಪೌಲ್ ತನ್ನ ಬಿಗ್‌ ಬಾಸ್‌ ಹಿಂದಿ 16ನೇ ಸೀಸನ್‌ ಪ್ರವೇಶಿಸಿದ್ದಾರೆ. ಕಿಲಿ ತನ್ನ ಸಹೋದರಿ ನೀಮಾಳೊಂದಿಗೆ ಭಾರತೀಯ ಹಾಡುಗಳಿಗೆ ರೀಲ್ಸ್‌ ಮಾಡುವ ಮೂಲಕ ಸಾಕಷ್ಟು ಹೆಸರುವಾಸಿಯಾಗಿದ್ದರು.

View this post on Instagram


A post shared by Kili Paul (@kili_paul)

ಕಿಲಿ ಪೌಲ್‌ ಅವರು ತಾಂಜಾನಿಯಾ ದೇಶದವರಾಗಿದ್ದು, ಇವರು ಸಾಮಾಜಿಕ ಮಾಧ್ಯಮಗಳಾದ ಇನ್ಸ್ಟಾಗ್ರಾಮ್ ನಲ್ಲಿ 4 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳು ಮತ್ತು ಟಿಕ್‌ಟಾಕ್‌ನಲ್ಲಿ 3 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಇವರು ಸಾಮಾನ್ಯವಾಗಿ ಜನಪ್ರಿಯ ಹಿಂದಿ ಹಾಡುಗಳಿಗೆ ರೀಲ್ಸ್‌ ಮಾಡುವ ಮೂಲಕ ಭಾರತದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದರು.


ಇದನ್ನೂ ಓದಿ: Bigg Boss: ಈತನ ಮೇಲೆ ಚಿಕ್ಕಪ್ಪನೇ ನಡೆಸಿದ್ದನಂತೆ ಅತ್ಯಾಚಾರ! ಸ್ಫೋಟಕ ವಿಚಾರ ಬಾಯ್ಬಿಟ್ಟ ಬಿಗ್ ಬಾಸ್ ಸ್ಪರ್ಧಿ


ಇಂಡಿಯಾ ಟುಡೇ ಮಾಧ್ಯಮದ ಮೂಲವೊಂದು ಕಿಲಿ ಪೌಲ್ ಬಿಗ್ ಬಾಸ್ 16 ಗೆ ಪ್ರವೇಶಿಸುವ ಸುದ್ದಿಯನ್ನು ದೃಢಪಡಿಸಿದೆ ಮತ್ತು “ಪ್ರಸ್ತುತ ಭಾರತದಲ್ಲಿರುವ ಇಂಟರ್ನೆಟ್ ಸೆನ್ಸೇಷನ್ ಕಿಲಿ ಪೌಲ್ ಅವರು ವಿಶೇಷ ವಿಭಾಗದ ಅಡಿಯಲ್ಲಿ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದಿದ್ದಾರೆ” ಎಂದು ವರದಿ ಮಾಡಲಾಗಿದೆ.


Kili Paul lip syncs to Yash s dialogue from KGF Chapter 2 dvp
ಕಿಲಿ ಪೌಲ್


ಅಡ್ಬು ರೋಝಿಕ್ ಮತ್ತು ಎಂಸಿ ಸ್ಟಾನ್ ನಡುವೆ ಟಾಸ್ಕ್ ನಡೆಯಲಿದೆ. ಈ ಟಾಸ್ಕ್‌ ಅನ್ನು ಸ್ಟಾರ್ಟ್‌ ಮಾಡಲು ಕಿಲಿ ಪೌಲ್‌ ಬಿಗ್‌ ಹೌಸ್‌ ಅನ್ನು ಪ್ರವೇಶಿಸಿದ್ದಾನೆ.


ಇತ್ತೀಚೆಗೆ ಕಿಲಿ ಬಿಗ್‌ಹೌಸ್‌ನಲ್ಲಿ ಅಬ್ದು ರೋಜಿಕ್ ಮತ್ತು ಎಂಸಿ ಸ್ಟಾನ್ ಅವರೊಂದಿಗೆ ವೀಡಿಯೊ ಮಾಡಿದ್ದನು. ಆ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಸಲ್ಮಾನ್ ಖಾನ್ ಅವರ "ಪ್ಯಾರ್ ಕಿಯಾ ತೋ ಡರ್ನಾ ಕ್ಯಾ" ಚಿತ್ರದ "ಓ ಓ ಜಾನೆ ಜಾನಾ" ಹಾಡಿಗೆ ರೀಲ್ಸ್‌ ಮಾಡಿದ್ದರು.

Published by:Divya D
First published: