ತಜಕಿಸ್ತಾನ್ (Tajikistan) ಹಾಡುಗಾರ ಅಬ್ದು ರೋಜಿಕ್ ಅತ್ಯಂತ ಕುಳ್ಳಗಿನ ವ್ಯಕ್ತಿಯಾಗಿದ್ದು ಬಿಗ್ ಬಾಸ್ 16 ಸೀಸನ್‌ನಲ್ಲಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಸಫಲರಾಗಿದ್ದಾರೆ. ನೋಡಲು ಎಂಟು ಅಥವಾ ಒಂಭತ್ತರ ಹರೆಯದ ಬಾಲಕನಂತೆ ಕಾಣುವ ಅಬ್ದುವಿಗೆ ಈಗ 19 ರ ಹರೆಯ ಹಾಗೂ ಅವರು 94 ಸೆಂ.ಮೀ ಉದ್ದವಿದ್ದಾರೆ. ಅಬ್ದು ಕುಳ್ಳಗಿರುವುದಕ್ಕೆ ಕಾರಣ ಅವರು ಬೆಳವಣಿಗೆಯ ಹಾರ್ಮೋನ್ ಕೊರತೆಯಿಂದ ಬಳಲುತ್ತಿರುವುದಾಗಿದೆ ಅಂತೆಯೇ ಅಬ್ದು ಅವರು ಮಕ್ಕಳಲ್ಲಿ ಮೂಳೆ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಸ್ಥಿತಿಯಾದ ರಿಕೆಟ್ಸ್‌ನಿಂದ ಕೂಡ ಬಳಲುತ್ತಿದ್ದರು. ಈ ಸಮಯದಲ್ಲಿ (Time) ಅವರ ಕುಟುಂಬಸ್ಥರಿಗೆ (Family) ಚಿಕಿತ್ಸೆ ಭರಿಸಲು ಸಾಧ್ಯವಾಗಲಿಲ್ಲ.
ಬೆಳವಣಿಗೆಯಲ್ಲಿ ಪ್ರಗತಿಯಾಗುತ್ತಿದೆ ಎಂದು ಹಂಚಿಕೊಂಡ ಅಬ್ದು
ಇದೀಗ ಅಬ್ದು ತಮ್ಮ ಇನ್‌ಸ್ಟಾ ಖಾತೆಯಲ್ಲಿ ಖುಷಿಯ ಸುದ್ದಿಯೊಂದನ್ನು ಹಂಚಿಕೊಂಡಿದ್ದು ಇದೀಗ ಸರಾಸರಿ ಎತ್ತರದೊಂದಿಗೆ ತಾನು ಕೂಡ ಸಾಮಾನ್ಯ ಜೀವನವನ್ನು ನಡೆಸಬಹುದು ಎಂದು ತಿಳಿಸಿದ್ದು, ತನ್ನ ಎತ್ತರದಲ್ಲಿ ಸುಧಾರಣೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ನಿಮಗೆ ಏನಾದರೂ ವ್ಯತ್ಯಾಸ ಗೊತ್ತಾಗುತ್ತಿದೆಯೇ? ಎಂದು ಅಬ್ದು ತನ್ನ ಫಾಲೋವರ್ಸ್‌ಗಳಲ್ಲಿ ನೇರವಾಗಿ ಕೇಳಿದ್ದು ವೈದ್ಯರುಗಳು ನಾನು ಇನ್ನು ಮುಂದೆ ಬೆಳೆಯುವುದಿಲ್ಲ ಏಕೆಂದರೆ ಬೆಳವಣಿಗೆಗೆ ಬೇಕಾದ ಶೂನ್ಯ ಹಾರ್ಮೋನ್ ಅನ್ನು ತಾವು ಹೊಂದಿರುವುದಾಗಿ ತಿಳಿಸಿದ್ದರು ಎಂದು ಹಂಚಿಕೊಂಡಿದ್ದಾರೆ. ಆದರೆ ನಿಮ್ಮೆಲ್ಲರ ಪ್ರೀತಿ, ಬೆಂಬಲ ಹಾಗೂ ಪ್ರಾರ್ಥನೆಗಳಿಂದ ನಾನು ಬೆಳೆಯುತ್ತಿದ್ದೇನೆ ಆ ದೇವರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಅಬ್ದು ರೋಜಿಕ್ ಫ್ಯಾನ್ಸ್ ಹೇಗೆ ಪ್ರತಿಕ್ರಿಯಿಸಿದ್ದಾರೆ
ರಮ್ದಾನ್‌ನ ಶುಭ ತಿಂಗಳಿನಲ್ಲಿ ತನ್ನ ಅಭಿಮಾನಿಗಳೊಂದಿಗೆ ಅಬ್ದು ಅವರು ಈ ಪವಾಡ ಸುದ್ದಿಯನ್ನು ಹಂಚಿಕೊಂಡಿದ್ದು ಅಭಿಮಾನಿಗಳು ಅಬ್ದುಗೆ ಶುಭಾಶಯಗಳ ಮಳೆಯನ್ನೇ ಹರಿಸುತ್ತಿದ್ದಾರೆ. ಇದೊಂದು ಶುಭ ಸುದ್ದಿ ಹಾಗೂ ಅಲ್ಲಾಹುವಿಗೆ ಕೃತಜ್ಞತೆಗಳು ಅಬ್ದು ರೋಜಿಕ್ ಬೆಳೆಯುತ್ತಿದ್ದಾರೆ ಮಾಶಲ್ಲಾ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಆಟೋದಲ್ಲಿ ಫ್ರೀ ನೀರಿನ ಬಾಟಲ್, ಬಿಸ್ಕೆಟ್ಸ್ ಮತ್ತು ಪೇಪರ್ ಇಟ್ಟು ಪ್ರಯಾಣಿಕರ ಮನಗೆದ್ದ ರಿಕ್ಷಾವಾಲಾ!
ಅಬ್ದು ಅವರ ಇನ್ನೊಬ್ಬ ಫ್ಯಾನ್ ಅಂತೂ ಭಾವನಾತ್ಮಕವಾಗಿ ಅಬ್ದು ಅವರ ಖುಷಿಯಲ್ಲಿ ಪಾಲ್ಗೊಂಡಿದ್ದು ನೀವು ನೀಡಿರುವ ಶೀರ್ಷಿಕೆ ಅದ್ಭುತವಾಗಿದೆ ಎಂದು ತಿಳಿಸಿದ್ದಾರೆ. ನೀವು ಹಂಚಿಕೊಂಡಿರುವ ಶುಭಸುದ್ದಿ ನನ್ನ ಕಣ್ಣುಗಳಲ್ಲಿ ಖುಷಿಯ ಕಣ್ಣೀರು ತರಿಸಿದೆ ಎಂದು ತಿಳಿಸಿದ್ದಾರೆ.
View this post on Instagram
ಇನ್ನೊಬ್ಬರು ನೀವು ದೇವರ ಮಗ ಎಂದೇ ಹಾಡಿ ಹೊಗಳಿದ್ದು ನಿಮ್ಮನ್ನು ದೇವರು ಆಶೀರ್ವದಿಸಲಿ ನಿಮ್ಮ ಸಂತೋಷದಲ್ಲಿ ಪಾಲ್ಗೊಳ್ಳಲು ಖುಷಿಯಾಗುತ್ತಿದೆ. ನೀವು ಖಂಡಿತ ದೇವರ ಪುತ್ರ ಎಂದು ಕಾಮೆಂಟ್ ಮಾಡಿದ್ದಾರೆ.
ಬೆಳವಣಿಗೆಯ ಹಾರ್ಮೋನ್ ಕೊರತೆ ಎಂದರೇನು?
ಬೆಳವಣಿಗೆಯ ಹಾರ್ಮೋನ್‌ನ ಕೊರತೆ ಎಂದರೆ ಪಿಟ್ಯುಟರಿ ಗ್ರಂಥಿಯು ಸಾಕಷ್ಟು ಹಾರ್ಮೋನ್ ಅನ್ನು ಉತ್ಪಾದಿಸದೇ ಇರುವ ಸ್ಥಿತಿಯಾಗಿದೆ. ಇದರಿಂದ ಮಕ್ಕಳು ಎತ್ತರವಾಗಿ ಬೆಳೆಯುವುದಿಲ್ಲ.
ಇದನ್ನೂ ಓದಿ: ಅನೈತಿಕ ಸಂಬಂಧದ ಆರೋಪ: ಅತ್ತಿಗೆ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಕೊಂದ ಕಿರಾತಕ!
ಪಿಟ್ಯುಟರಿ ಅಂಗವು ಬೆಳವಣಿಗೆಯ ಹಾರ್ಮೋನುಗಳನ್ನು ಸ್ರವಿಸುತ್ತದೆ. ಬೆಳವಣಿಗೆಯ ಹಾರ್ಮೋನ್‌ಗಳ ಸ್ರವಿಸುವಿಕೆಯು ಕಡಿಮೆಯಾದಾಗ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಇಲ್ಲದಿದ್ದರೆ ಶಿಶುಗಳಲ್ಲಿ ಬೆಳವಣಿಗೆಯ ಕೊರತೆಯನ್ನು ಉಂಟುಮಾಡುತ್ತದೆ ಅಂತೆಯೇ ಕೆಲವು ರೋಗಲಕ್ಷಣಗಳನ್ನುಂಟು ಮಾಡುತ್ತದೆ.
ಇದರ ರೋಗಲಕ್ಷಣಗಳೇನು ಹಾಗೂ ಚಿಕಿತ್ಸೆ ಹೇಗೆ ಸಾಧ್ಯ?
ಇದರ ರೋಗಲಕ್ಷಣಗಳೆಂದರೆ ನಿಧಾನ ಬೆಳವಣಿಗೆ, ಕುಳ್ಳಗಿರುವ ದೇಹ, ಪ್ರೌಢಾವಸ್ಥೆಯ ಸಮಯದಲ್ಲಿ ಬೆಳವಣಿಗೆ ಕುಂಠಿತಗೊಳ್ಳುವುದು ಹಾಗೂ ತೀವ್ರ ತಲೆನೋವು.
ಶಿಶುವೈದ್ಯರ ಮಾರ್ಗದರ್ಶನದಲ್ಲಿ ಈ ರೋಗಕ್ಕೆ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ. ಬೆಳವಣಿಗೆಯ ಹಾರ್ಮೋನ್ ಕೊರತೆಗೆ ಸಂಶ್ಲೇಷಿತ (ಕೃತಕವಾಗಿ ಸಂಯೋಜಿಸಲಾದ) ಬೆಳವಣಿಗೆಯ ಹಾರ್ಮೋನ್ ಮೂಲಕ ಚಿಕಿತ್ಸೆ ನೀಡಬಹುದು.
ಇತರ ಹಾರ್ಮೋನ್‌ಗಳ ಕೊರತೆ ಇದ್ದರೆ ಅವುಗಳ ಅನುಪಸ್ಥಿತಿಯಲ್ಲಿ ಕೃತಕವಾಗಿ ಸಂಯೋಜಿಸಲಾದ ಹಾರ್ಮೋನುಗಳು ಈ ಹಾರ್ಮೋನ್‌ಗಳ ಕೊರತೆಯನ್ನು ನೀಗಿಸುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ