• Home
  • »
  • News
  • »
  • entertainment
  • »
  • Bigg Boss 16: ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಛೋಟಾ ಮ್ಯಾನ್! ಅಬ್ದು ರೋಝಿಕ್ ಯಾರು ಗೊತ್ತಾ?

Bigg Boss 16: ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಛೋಟಾ ಮ್ಯಾನ್! ಅಬ್ದು ರೋಝಿಕ್ ಯಾರು ಗೊತ್ತಾ?

ಅಬ್ದು ರೋಝಿಕ್

ಅಬ್ದು ರೋಝಿಕ್

ಬಿಗ್‌ ಬಾಸ್‌ 16ರ ಹವಾ ಶುರುವಾಗಿದೆ. ಬಿಗ್‌ ಬಾಸ್‌ ಮನೆಗೆ ಮೊದಲು ಎಂಟ್ರಿಕೊಟ್ಟಿದ್ದು ತಜಕಿಸ್ತಾನ್ ಗಾಯಕ ಅಬ್ದು ರೋಝಿಕ್. ಬಿಗ್ ಬಾಸ್ 16 ರ ಮೊದಲ ಸ್ಪರ್ಧಿಯಾಗಿ ಮೊಟ್ಟ ಮೊದಲು ಸಲ್ಮಾನ್ ಖಾನ್ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ.

  • Share this:

ಹಿಂದಿಯ ಬಿಗ್‌ ಬಾಸ್‌ 16ನೇ ಸೀಸನ್‌ (Bigg Boss Season 16) ಅಕ್ಟೋಬರ್​ 1ರಂದು ಪ್ರಾರಂಭವಾದ, ಜನಪ್ರಿಯ ರಿಯಾಲಿಟಿ ಶೋ (Reality show). ಬಿಗ್‌ ಬಾಸ್‌ 16ರ ಕುರಿತಾದ ಪ್ರೆಸ್‌ ಮೀಟಿಂಗ್‌ ಗ್ರ್ಯಾಂಡ್‌ ಆಗಿ ನೆರವೇರಿದ್ದು, ಮೊದಲ ಸ್ಪರ್ಧಿಯನ್ನು ನಿರೂಪಕ, ನಟ ಸಲ್ಮಾನ್ ಖಾನ್ (Salman Khan) ವೆಲ್‌ ಕಮ್‌ ಮಾಡಿದ್ದಾರೆ. ಬಿಗ್‌ ಬಾಸ್‌ ಮನೆಗೆ ಮೊದಲು ಎಂಟ್ರಿಕೊಟ್ಟಿದ್ದು, ತಜಕಿಸ್ತಾನ್ ಗಾಯಕ ಅಬ್ದು ರೋಝಿಕ್ (Abdu Rozik). ಬಿಗ್ ಬಾಸ್ 16 ರ ಮೊದಲ ಸ್ಪರ್ಧಿಯಾಗಿ ಮೊಟ್ಟ ಮೊದಲು ಸಲ್ಮಾನ್ ಖಾನ್ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ.


ಬಿಗ್‌ ಬಾಸ್‌ ಮನೆಗೆ ಅಬ್ದು ರೋಝಿಕ್ ಮೊದಲ ಎಂಟ್ರಿ
ಅಬ್ದು ರೋಝಿಕ್ ಮೂಲತಃ ತಜಕಿಸ್ತಾನ್ ಗಾಯಕ. ಮೊದಲ ಸ್ಪರ್ಧಿಯನ್ನು ಪರಿಚಯಿಸಿದ ಸಲ್ಮಾನ್‌ ಖಾನ್‌ ಮೊದಲು ಪ್ರೇಕ್ಷಕರಿಗೆ ಕೆಲವು ಹಾಡುಗಳನ್ನು ಹಾಡಲು ಕೇಳಿಕೊಂಡರು. ವೇದಿಕೆಯಲ್ಲಿ ಅಬ್ದು ಮೈನೆ ಪ್ಯಾರ್ ಕಿಯಾ ಚಿತ್ರದ ದಿಲ್ ದೀವಾನಾ ಹಾಡನ್ನು ಹಾಡುವ ಮೂಲಕ ಸಲ್ಮಾನ್ ಮತ್ತು ವೀಕ್ಷಕರಿಗೆ ಎಂಟರ್‌ಟೇನ್‌ ಮಾಡಿದರು. ಅಬ್ದು ಹಾಡನ್ನು ಮೆಚ್ಚಿಕೊಂಡ ಸಲ್ಲು ಅಬ್ದು ಇವರಿಗೆ ಹಿಂದಿ ಬರಲ್ಲ ಆದರೆ ಹಿಂದಿ ಹಾಡುಗಳನ್ನು ಹಾಡಬಲ್ಲರು ಎಂದು ಹೇಳಿದರು.


ಅಬ್ದು ರೋಝಿಕ್ ಈ ಹಿಂದೆ ಕೂಡ ಸಲ್ಮಾನ್ ಒಟ್ಟಿಗೆ ಕೆಲಸ ಮಾಡಿರುವ ಸ್ಪರ್ಧಿ. ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಎಂಬ ಸಲ್ಲು ಭಾಯ್‌ ನ ಮುಂಬರುವ ಭಾರತೀಯ ಹಿಂದಿ ಭಾಷೆಯ ಆಕ್ಷನ್ ಹಾಸ್ಯ ಚಲನಚಿತ್ರದ ಭಾಗವಾಗಿದ್ದಾರೆ ಎಂದು ನಿರೂಪಕ ಬಹಿರಂಗಪಡಿಸಿದರು.


ಇದನ್ನೂ ಓದಿ: Rashmika Mandanna - Vijay Deverakona: ವಿಜಯ್ ದೇವರಕೊಂಡ ಜೊತೆ ಮಾಲ್ಡೀವ್ಸ್​ಗೆ ಹಾರಿದ ರಶ್ಮಿಕಾ ಮಂದಣ್ಣ


ಪ್ಲೀಸ್‌ ನನ್ನಹತ್ರ ಯಾರು ಜಗಳವಾಳಬೇಡಿ ಎಂದ ಮೊದಲ ಸ್ಪರ್ಧಿ
ರಿಯಾಲಿಟಿ ಶೋಗೆ ಸೇರುವ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ ಅಬ್ದು, “ನನಗೆ ತುಂಬಾ ಸಂತೋಷವಾಗಿದೆ. ನಾನು ಮನೆಯೊಳಗೆ ಹೋಗಲು ಉತ್ಸುಕನಾಗಿದ್ದೇನೆ. ನಾನು ಎಲ್ಲರೊಟ್ಟಿಗೆ ಪ್ರೀತಿಯಿಂದ ಇರಲು ಪ್ರಯತ್ನಿಸುತ್ತೇನೆ, ಆದರೆ ದಯವಿಟ್ಟು ನನ್ನೊಂದಿಗೆ ಜಗಳವಾಡಬೇಡಿ“ ಎಂದು ಹಾಸ್ಯಮಯವಾಗಿ ಉತ್ತರಿಸಿದರು. ನನಗೆ ವೋಟ್‌ ಮಾಡುತ್ತಾ, ಬೆಂಬಲ ನೀಡಿ ಎಂದು ವೀಕ್ಷಕರಿಗೆ ಕೇಳಿಕೊಂಡರು.


ಬಿಗ್ ಬಾಸ್ 16 ರ ಸ್ಪರ್ಧಿ ಅಬ್ದು ರೋಜಿಕ್ ಯಾರು?
ಬಿಗ್ ಬಾಸ್ 16 ರ ಮೊದಲ ದೃಢೀಕೃತ ಸ್ಪರ್ಧಿ ಎಂದು ಅಬ್ದು ರೋಜಿಕ್ ಅವರನ್ನು ಘೋಷಿಸಲಾಗಿದೆ. ಅಬ್ದು ರೋಜಿಕ್ ತಜಾಕಿಸ್ತಾನ್ ಗಾಯಕ . ಅವರು ತಮ್ಮ 'ಓಹಿ ದಿಲಿ ಜೋರ್' ಹಾಡಿನ ಮೂಲಕ ಇಂಟರ್ನೆಟ್ ನಲ್ಲಿ ಹವಾ ಸೃಷ್ಟಿಸಿದ್ದರು. ಗಾಯಕ Avlod Media ಎಂಬ ಯೂಟ್ಯೂಬ್ ಚಾನಲ್ ಮೂಲಕ ಸಖತ್‌ ಫೇಮಸ್‌ ಆಗಿದ್ದಾರೆ, ಮತ್ತೆ ಅವರ ಈ ಚಾನಲ್‌ 580k ಚಂದಾದಾರರನ್ನು ಹೊಂದಿದೆ. ಅಬ್ದು ರೋಜಿಕ್ ಇನ್ಸ್ಟಾಗ್ರಾಮ್‌ ನಲ್ಲೂ ಕೂಡ 3.5 ಮಿಲಿಯನ್ ಫಾಲೋವರ್ಸ್‌ ಗಳನ್ನು ಹೊಂದಿದ್ದಾರೆ.


ಇನ್‌ಸ್ಟಾಗ್ರಾಮ್‌ನಲ್ಲಿ ಬಿಗ್ ಬಾಸ್ 16 ರ ಪತ್ರಿಕಾಗೋಷ್ಠಿಯಲ್ಲಿ ಸಲ್ಮಾನ್ ಖಾನ್ ಜೊತೆಗಿರುವ ಚಿತ್ರವನ್ನು ಹಂಚಿಕೊಂಡ ಅಬ್ದು ಹೀಗೆ ಬರೆದಿದ್ದಾರೆ, “ನಾನು ಇಂದು ಬಿಗ್ ಬಾಸ್‌ನ ಅಧಿಕೃತ ಮೊದಲ ಸ್ಪರ್ಧಿ ಎಂದು ನನ್ನ ಸಹೋದರ ಸಲ್ಮಾನ್‌ ಖಾನ್ ಘೋಷಿಸಿದ್ದಾರೆ. ಈ ಅವಕಾಶ ಲಭಿಸಿದ್ದಕ್ಕೆ ತುಂಬಾ ಸಂತೋಷ ಮತ್ತು ಕೃತಜ್ಞರಾಗಿರುತ್ತೇನೆ. ಅಕ್ಟೋಬರ್ 1 ರಿಂದ ನಾಟಕವನ್ನು ವೀಕ್ಷಿಸಿ ಎಂದು ಬರೆದುಕೊಂಡಿದ್ದರು.


ಇದನ್ನೂ ಓದಿ:  Keerthy Suresh: ಹೊಸ ಕಾರು ಖರೀದಿಸಿದ ನಟಿ ಕೀರ್ತಿ ಸುರೇಶ್! ಅಬ್ಬಬ್ಬಾ ಬೆಲೆ ಎಷ್ಟು ಗೊತ್ತಾ?


ವಿಶೇಷ ಎಂದರೆ ಈ ಬಾರಿ ‘ಹಿಂದಿ ಬಿಗ್​ ಬಾಸ್​ 16’ ತುಂಬ ಡಿಫರೆಂಟ್​ ಆಗಿರಲಿದೆಯಂತೆ. ಹೊಸ ಪ್ರೋಮೋದಲ್ಲಿ ಈ ವರ್ಷದ ಕಾರ್ಯಕ್ರಮ ಪೂರ್ತಿ ಭಿನ್ನವಾಗಿರಲಿದೆ ಎಂದು ಸಲ್ಮಾನ್​ ಖಾನ್​ ಹೇಳಿದ್ದಾರೆ. ಕಲರ್ಸ್​ ಟಿವಿಯಲ್ಲಿ ಹಿಂದಿ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಅಕ್ಟೋಬರ್​ 1ರಿಂದ ಸ್ಟ್ರೀಮ್‌ ಆಗುತ್ತಿದೆ.

Published by:Ashwini Prabhu
First published: