• Home
  • »
  • News
  • »
  • entertainment
  • »
  • Bigg Boss: ಶುರುವಾಯ್ತು ಹಿಂದಿ ಬಿಗ್ ಬಾಸ್ ಸೀಸನ್​ 16, ದೊಡ್ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳ ಲಿಸ್ಟ್​!

Bigg Boss: ಶುರುವಾಯ್ತು ಹಿಂದಿ ಬಿಗ್ ಬಾಸ್ ಸೀಸನ್​ 16, ದೊಡ್ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳ ಲಿಸ್ಟ್​!

ಹಿಂದಿ ಬಿಗ್​ ಬಾಸ್​ ಸೀಸನ್​ 16

ಹಿಂದಿ ಬಿಗ್​ ಬಾಸ್​ ಸೀಸನ್​ 16

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ನಡೆಸಿಕೊಡುವ ಬಿಗ್ ಬಾಸ್ ಶೋನ 16ನೇ (Bigg Boss 16 ) ಸೀಸನ್‌ಗೆ ಗ್ರ್ಯಾಂಡ್‌ ಓಪನಿಂಗ್‌ (Grand Opening) ಸಿಕ್ಕಿದ್ದು, 16 ಸ್ಪರ್ಧಿಗಳು ಒಂಟಿ ಮನೆಗೆ ಎಂಟ್ರಿ ನೀಡಿ ಲಾಕ್‌ ಆಗಿದ್ದಾರೆ.

  • Share this:

ಹಿಂದಿಯ (Hindi) ಜನಪ್ರಿಯ ಶೋ ಬಿಗ್‌ ಬಾಸ್‌ಗೆ ಅವರು ಬರುತ್ತಾರೆ, ಇವರು ಬರುತ್ತಾರೆ ಎಂಬ ಎಲ್ಲಾ ಊಹಾಪೋಹಗಳಿಗೆ ತೆರೆಬಿದ್ದಿದ್ದು, ಅಖಾಡದಲ್ಲಿ ಯಾರೆಲ್ಲಾ ಇರುತ್ತಾರೆ ಎಂಬುವುದು ಬಟಾಬಯಲಾಗಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ನಡೆಸಿಕೊಡುವ ಬಿಗ್ ಬಾಸ್ ಶೋನ 16ನೇ (Bigg Boss 16 ) ಸೀಸನ್‌ಗೆ ಗ್ರ್ಯಾಂಡ್‌ ಓಪನಿಂಗ್‌ (Grand Opening) ಸಿಕ್ಕಿದ್ದು, 16 ಸ್ಪರ್ಧಿಗಳು ಒಂಟಿ ಮನೆಗೆ ಎಂಟ್ರಿ ನೀಡಿ ಲಾಕ್‌ ಆಗಿದ್ದಾರೆ. ಹಾಗಾದರೆ ಯಾರೆಲ್ಲಾ ಹಿಂದಿಯ ಬಿಗ್ ಬಾಸ್ 16ನೇ ಸೀಸನ್‌ಗೆ ಬಂದಿದ್ದಾರೆ ಎಂಬುದರ ಬಗ್ಗೆ ಫುಲ್‌ ಡಿಟೇಲ್ಸ್‌ ಇಲ್ಲಿದೆ.


ನಿಮೃತ್ ಕೌರ್ ಅಹ್ಲುವಾಲಿಯಾ


ಚೋಟಿ ಸರ್ದಾರ್ನಿ ಖ್ಯಾತಿಯ ನಟಿ ನಿರ್ಮಿತ್ ಕೌರ್ ಅಹ್ಲುವಾಲಿಯಾ ಈ ಬಾರಿಯ ಬಿಗ್‌ ಬಾಸ್‌ ಗೆ ಎಂಟ್ರಿ ನೀಡಿದ್ದಾರೆ. ವೃತ್ತಿಯಲ್ಲಿ ವಕೀಲೆಯಾಗಿರುವ ನಿಮೃತ್‌ ರಂಗಭೂಮಿ ಕಲಾವಿದೆ ಮತ್ತು ಸಾಮಾಜಿಕ ಕಾರ್ಯಕರ್ತೆಯೂ ಹೌದು.


ಅಬ್ದು ರೋಝಿಕ್


ತಜಕಿಸ್ತಾನಿ ಗಾಯಕ ಅಬ್ದು ರೋಝಿಕ್. ಸೋಷಿಯಲ್​ ಮೀಡಿಯಾದಲ್ಲಿ ಹೆಸರು ಗಳಿಸಿರುವ ಗಾಯಕ. 'ಓಹಿ ದಿಲಿ ಜೋರ್' ಎಂಬ ತಾಜಿಕ್ ರ್‍ಯಾಪ್ ಹಾಡಿನ ಮೂಲಕ ಸಖತ್‌ ಫೇಮಸ್‌ ಆಗಿದ್ದ ಈತ ಒಂಟಿ ಮನೆಯಲ್ಲಿ ಮನರಂಜನೆ ಮೂಲಕ ರಂಜಿಸಿ ಗೆಲ್ಲಲು ಬಂದಿದ್ದಾರೆ.


ಅಂಕಿತ್ ಗುಪ್ತಾ


ಉದಾರಿಯನ್‌ ಮೂಲಕ ಫತೇ ಸಿಂಗ್ ವಿರ್ಕ್ ಪಾತ್ರದಲ್ಲಿ ಜನಪ್ರಿಯತೆಗಳಿಸಿದ್ದ ನಟ ಅಂಕಿತ್ ಗುಪ್ತಾ ಬಿಗ್‌ ಬಾಸ್‌ 16ನೇ ಸೀಸನ್‌ನಲ್ಲಿ ಭಾಗಿಯಾಗಿದ್ದಾರೆ.


ಇದನ್ನೂ ಓದಿ: BBK Season 09: ದಿವ್ಯಾ ಉರುಡುಗಗೆ ಇವರನ್ನು ನೋಡಿದ್ರೆ ನಗು ತಡೆದುಕೊಳ್ಳೋಕೆ ಆಗಲ್ವಂತೆ! ಯಾರವರು?


ಪ್ರಿಯಾಂಕಾ ಚಾಹರ್ ಚೌಧರಿ


ಜೈಪುರದಿಂದ ಬಂದಿರುವ ಉದಾರಿಯನ್​​ ಖ್ಯಾತಿಯ ಮತ್ತೊಬ್ಬ ನಟಿ ಪ್ರಿಯಾಂಕಾ ಚೌಧರಿ ಕೂಡ ಬಿಗ್ ಬಾಸ್ ಮನೆಗೆ ಬಂದಿದ್ದಾರೆ.


ಎಂಸಿ ಸ್ಟಾನ್


MC ಸ್ಟಾನ್ ಅಲಿಯಾಸ್ ‌ ಅಲ್ತಾಫ್ ತಡವಿ ಅಕಾ ಅಲ್ತಾಫ್ ಶೇಖ್, ಪುಣೆ ಮೂಲದ ಈ ರ್‍ಯಾಪರ್ ಕೂಡ ಬಿಗ್‌ ಬಾಸ್‌ ನಲ್ಲಿ ಆಡಲು ಬಂದಿದ್ದಾರೆ. 12 ನೇ ವಯಸ್ಸಿನಲ್ಲಿ ಕವ್ವಾಲಿ ಗಾಯಕರಾಗಿ ಸಂಗೀತ ಆರಂಭಿಸಿದ ಇವರು ರ್‍ಯಾಪ್‌ ಹಾಡುಗಳಿಗೆ ಸಖತ್‌ ಫೇಮಸ್.‌


ಸದ್ಯಕ್ಕೆ ಮುಂಬೈನಲ್ಲಿ ನೆಲೆಸಿರುವ MC ಸ್ಟಾನ್ ಇನ್ಸಾನ್ ಮತ್ತು ತಡಿಪಾರ್ ಎಂಬ ಎರಡು ಆಲ್ಬಂಗಳನ್ನು ಬಿಡುಗಡೆ ಮಾಡಿದ್ದಾರೆ. ಆದಾಗ್ಯೂ, ತನ್ನ ಮಾಜಿ ಗೆಳತಿ ಕೆಲ ಹುಡುಗರನ್ನು ಬಿಟ್ಟು ನನ್ನ ಮೇಲೆ ಹಲ್ಲೆ ಮಾಡಿಸಿದ್ದಾಗಿ ಹೇಳಿದ ನಂತರ ಇತ್ತೀಚೆಗೆ ಸುದ್ದಿಯಾಗಿದ್ದರು.


ಅರ್ಚನಾ ಗೌತಮ್


ನಟಿ, ರೂಪದರ್ಶಿ ಮತ್ತು ರಾಜಕಾರಣಿ ಅರ್ಚನಾ ಗೌತಮ್ ಅವರು 'ಬಿಗ್ ಬಾಸ್ 16' ಗೆ ಸೇರಿಕೊಂಡಿದ್ದಾರೆ. ನವೆಂಬರ್ 2021 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿರುವ ಇವರು ಮೀರತ್ ಜಿಲ್ಲೆಯ ಹಸ್ತಿನಾಪುರ ಕ್ಷೇತ್ರದಿಂದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ ಪಡೆಯುವಲ್ಲಿ ವಿಫಲರಾಗಿದ್ದರು. ಮಿಸ್ ಬಿಕಿನಿ ಇಂಡಿಯಾ 2018 ಆಗಿರುವ ಅರ್ಚನಾ 'ಗ್ರೇಟ್ ಗ್ರ್ಯಾಂಡ್ ಮಸ್ತಿ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ.


ಗೌತಮ್ ಸಿಂಗ್ ವಿಜಿ


ಸಾಥಿಯಾ 2, ನಾಮಕರಣ್ ಮತ್ತು ಇಷ್ಕ್ ಸುಭಲ್ಲಾಹನ್‌ನಂತಹ ಅನೇಕ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ಗೌತಮ್ ವಿಗ್ ಈ ಬಾರಿಯ ಬಿಗ್‌ ಬಾಸ್‌ ಗೆ ಎಂಟ್ರಿ ಕೊಟ್ಟಿದ್ದಾರೆ.


ಶಾಲಿನ್ ಭಾನೋಟ್


ನಾಗಿನ್ ಟಿವಿ ಶೋನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ರೋಡೀಸ್ ಖ್ಯಾತಿಯ ಶಾಲಿನ್ ಭಾನೋಟ್ ಬಿಗ್ ಬಾಸ್‌ನಲ್ಲಿ ವೀಕ್ಷಿಕರನ್ನು ರಂಜಿಸಲು ಬಂದಿದ್ದಾರೆ. ಈ ನಟ ಡಾನ್ಸ್ ರಿಯಾಲಿಟಿ ಶೋ 'ನಾಚ್ ಬಲಿಯೇ 4' ನಲ್ಲೂ ಕೂಡ ಭಾಗವಹಿಸಿದ್ದಾರೆ.


ಸೌಂದರ್ಯ ಶರ್ಮಾ


ನಟಿ, ಮಾಡೆಲ್‌ ಮತ್ತು ದಂತವೈದ್ಯೆ ಆಗಿರುವ ಸೌಂದರ್ಯ ಶರ್ಮಾ ಬಿಬಿ 16ರಲ್ಲಿ ಭಾಗಿಯಾಗಿದ್ದಾರೆ. ಹಿರಿಯ ನಟ ಅನುಪಮ್ ಖೇರ್, ಹಿಮಾಂಶ್ ಕೊಹ್ಲಿ, ಜಿಮ್ಮಿ ಶೆರ್ಗಿಲ್ ಮತ್ತು ಸತೀಶ್ ಕೌಶಿಕ್ ಒಳಗೊಂಡ "ರಾಂಚಿ ಡೈರೀಸ್" ಚಿತ್ರದ ಮೂಲಕ ಸೌಂದರ್ಯ ಬಾಲಿವುಡ್‌ ನಲ್ಲಿ ಹೆಸರುವಾಸಿಯಾಗಿದ್ದಾರೆ.


ಶಿವ ಠಾಕರೆ
ಬಿಗ್ ಬಾಸ್ ಮರಾಠಿ ಸೀಸನ್ 2ರಲ್ಲಿ ಗೆದ್ದ ಶಿವ್ ಠಾಕರೆ ಕೂಡ ಹಿಂದಿ ಬಿಬಿ 16 ಮನೆಯೊಳಗೆ ಲಾಕ್ ಆಗಲಿದ್ದಾರೆ. ಎಂಟಿವಿ ರೋಡೀಸ್ ರೈಸಿಂಗ್‌ನಲ್ಲಿ ಫೇಮಸ್‌ ಆಗಿರುವ ಶಿವ್ ಹಿಂದಿ ಬಿಗ್‌ ಬಾಸ್‌ನಲ್ಲಿ ಹೇಗೆ ಆಡಲಿದ್ದಾರೆ ಕಾದು ನೋಡಬೇಕಿದೆ.


ಇದನ್ನೂ ಓದಿ: Anubandha: ಪುಟ್ಟಗೌರಿ ಮದುವೆ, ಮಂಗಳಗೌರಿ ಮದುವೆ ಸೇರಿ 3 ಸಾವಿರಕ್ಕೂ ಹೆಚ್ಚು ಎಪಿಸೋಡ್, ಅನುಬಂಧದಲ್ಲಿ ಆನಂದಭಾಷ್ಪ


ಸುಂಬುಲ್ ತೌಕೀರ್ ಖಾನ್
ಬಿಗ್‌ ಬಾಸ್‌ ಮನೆಗೆ ಇಮ್ಲಿ ಖ್ಯಾತಿಯ ಸುಂಬುಲ್ ತೌಕೀರ್ ಖಾನ್ ಎಂಟ್ರಿಯಾಗಿದೆ. ಆಯುಷ್ಮಾನ್ ಖುರಾನಾ ಅವರ ಆರ್ಟಿಕಲ್ 15 ರಲ್ಲಿ ಸುಂಬುಲ್ ತಮ್ಮ ಮೊದಲ ನಟನೆಯನ್ನು ಮಾಡಿದ್ದರು.


ಮಾನ್ಯ ಸಿಂಗ್


ಫೆಮಿನಾ ಮಿಸ್ ಇಂಡಿಯಾ 2020 ಮಾನ್ಯ ಸಿಂಗ್ ಕೂಡ ಬಿಗ್‌ ಬಾಸ್‌ ಮನೆಯಲ್ಲಿ ಇರಲಿದ್ದಾರೆ. ಮುಂಬೈನ ಅತ್ಯಂತ ಸಾಧಾರಣ ಹಿನ್ನೆಲೆಯಿಂದ ಬಂದ ಮಾನ್ಯ ಒಬ್ಬರು ಆಟೋ ಚಾಲಕನ ಮಗಳು. ಬಡತನದಲ್ಲೂ ಫೆಮಿನಾ ಮಿಸ್ ಇಂಡಿಯಾ 2020 ಸಾಧನೆ ಮಾಡಿದ್ದ ಮಾನ್ಯಳನ್ನು ದೇಶವೇ ಕೊಂಡಾಡಿತ್ತು.


ಗೋರಿ ನಾಗೋರಿ


ರಾಜಸ್ಥಾನದ ನಾಗೌರ್‌ನ ಗೋರಿ ನಾಗೋರಿ ಅವರು ರಾಜಸ್ಥಾನಿ ಮತ್ತು ಹರ್ಯಾನ್ವಿ ಹಾಡುಗಳ ಡ್ಯಾನ್ಸ್​​ಗೆ ಹೆಸರುವಾಸಿಯಾಗಿದ್ದಾರೆ. ಡ್ಯಾನ್ಸ್‌ ಮೂಲಕವೇ ಸೋಶಿಯಲ್‌ ಮೀಡಿಯಾದಲ್ಲಿ ಹವಾ ಎಬ್ಬಿಸಿರುವ ಗೋರಿ ನಾಗೋರಿ ದೊಡ್ಡ ಮನೆಗೆ ಬಂದಿದ್ದಾರೆ.


ಟೀನಾ ದತ್ತಾ


ಟೆಲಿವಿಷನ್ ಲೋಕದ ಜನಪ್ರಿಯ ತಾರೆ ನಟಿ ಟೀನಾ ದತ್ತ ಈ ಬಾರಿಯ ಬಿಗ್‌ ಬಾಸ್‌ಗೆ ರಂಗು ತುಂಬಿದ್ದಾರೆ. ಜನಪ್ರಿಯ ಶೋ ಉತ್ತರನ್‌ನಲ್ಲಿ ಇಚ್ಚಾ ಮತ್ತು ಮೀಥಿ ಎಂಬ ಎರಡು ಪಾತ್ರಗಳಿಗೆ ಹೆಚ್ಚು ಹೆಸರುವಾಸಿಯಾಗಿ ದತ್ತಾ ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ 7 ರಲ್ಲಿ ಸಹ ಸ್ಪರ್ಧಿಯಾಗಿದ್ದರು.


ಶ್ರೀಜಿತಾ ದೇ


ನಟಿ ಶ್ರೀಜಿತಾ ಬಿಗ್​ ಬಾಸ್​ ಮನೆಯಲ್ಲಿ ತಮ್ಮ ಉತ್ತರಾನ್ ಸಹ-ನಟಿ ಟೀನಾ ದತ್ತಾ ಅವರೊಂದಿಗೆ ಮತ್ತೆ ಒಂದಾಗಲಿದ್ದಾರೆ. ಉತ್ತರಾನ್​ ಅಲ್ಲದೇ ಶ್ರೀಜಿತಾ ಅವರು ಕಸೌಟಿ ಜಿಂದಗಿ ಕೇ, ಅನ್ನು ಕಿ ಹೋ ಗಯಿ ವಾ ಭಾಯಿ ವಾ ಮತ್ತು ನಜರ್‌ನಂತಹ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ.


ಸಾಜಿದ್ ಖಾನ್


ನಿರ್ದೇಶಕ, ಚಲನಚಿತ್ರ ನಿರ್ಮಾಪಕ, ಹಾಸ್ಯನಟ ಮತ್ತು ದೂರದರ್ಶನ ನಿರೂಪಕ ಸಾಜಿದ್ ಖಾನ್ ಅವರು ಬಿಗ್‌ ಬಾಸ್ ಶೋಗೆ ಪ್ರವೇಶಿಸಿದ್ದಾರೆ. ‌2018ರ ಮೀ ಟೂ ಅಭಿಯಾನದಲ್ಲೂ ಸಾಜಿದ್ ಖಾನ್ ಹೆಸರು ಸಾಕಷ್ಟು ಕೇಳಿ ಬಂದಿತ್ತು.

Published by:ಪಾವನ ಎಚ್ ಎಸ್
First published: