Karan Kundrra: ಐಷಾರಾಮಿ ಮನೆ ಖರೀದಿಸಿದ ಕರಣ್ ಕುಂದ್ರಾ - ಬಾಂದ್ರಾದ ಈ ಫ್ಲ್ಯಾಟ್​ ಬೆಲೆ ಕೇಳಿದ್ರೆ ಅಬ್ಬಬ್ಬಾ ಅಂತೀರಾ!

Hindi Actor: ಬಿಗ್ಬಾಸ್15 ರ ನಂತರ ಇತ್ತೀಚಿನ ಲಾಕ್ಅಪ್ ರಿಯಾಲಿಟಿ ಶೋದಲ್ಲಿ ಸಹ ಕರಣ್ ಮಿಂಚಿದ್ದಾರೆ. ಏಕ್ತಾ ಆರ್ ಕಪೂರ್ ಅವರ ಈ 'ಲಾಕ್ ಅಪ್' ಶೋನಲ್ಲಿ ಜೈಲರ್ ಆಗಿ ಅವರ ಅಭಿನಯಕ್ಕಾಗಿ ಎಲ್ಲರ ಮೆಚ್ಚುಗೆಯನ್ನು ಪಡೆದಿದ್ದಾರೆ.

ನಟ ಕರಣ್ ಕುಂದ್ರಾ

ನಟ ಕರಣ್ ಕುಂದ್ರಾ

  • Share this:
'ಹಿಂದಿ ಬಿಗ್ ಬಾಸ್ 15' (Bigboss 15) ಖ್ಯಾತಿಯ ಕರಣ್ ಕುಂದ್ರಾ  (Karan Kundrra) ಫುಲ್ ಖುಷಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರು ಖರೀದಿಸಿರುವ ಹೊಸ ಮನೆ. ಹೌದು, ಮುಂಬೈನ ಪ್ರತಿಷ್ಟಿತ ಏರಿಯಾದಲ್ಲಿ ಕರಣ್ ಕುಂದ್ರಾ ಮನೆ ಖರೀದಿ ಮಾಡಿದ್ದು, ಕನಸು ನನಸಾದ ಖುಷಿಯಲ್ಲಿ ತೇಲುತ್ತಿದ್ದಾರೆ. ಹೌದು, ಮುಂಬೈನ ಬಾಂದ್ರಾ (Mumbai Bandra)  ದುಬಾರಿ ಏರಿಯಾ ಎಂದು ಫೇಮಸ್, ಇಲ್ಲಿ ಮನೆ ಖರೀದಿಸುವುದು ಸುಲಭವಲ್ಲ. ಚಿತ್ರರಂಗದಲ್ಲಿ ಬೆಳೆಯುತ್ತಿರುವ ಯುವ ನಟ – ನಟಿಯರಿಗೆ ಇದು ಒಂದು ಕನಸು ಎನ್ನಬಹುದು. ಇದೀಗ ಕರಣ್ ಕುಂದ್ರಾ ಪಾಲಿಗೆ ಈ ಅದೃಷ್ಟ ಒದಗಿ ಬಂದಿದ್ದು, ಅಪಾರ್ಟ್ಮೆಂಟ್ ಒಂದರಲ್ಲಿ ಫ್ಲ್ಯಾಟ್ ಖರೀದಿ ಮಾಡಿದ್ದಾರೆ.

ಮಾಧ್ಯಮಗಳ ವರದಿಗಳ ಪ್ರಕಾರ ಅಪಾರ್ಟ್‌ಮೆಂಟ್ ಸುಂದರವಾದ ಸಮುದ್ರದ ನೋಟ ಹೊಂದಿದೆ ಎನ್ನಲಾಗುತ್ತಿದೆ. ಈ ಅಪಾರ್ಟ್ಮೆಂಟ್ ಬಾಂದ್ರಾ ರಿಕ್ಲಮೇಷನ್ ಪ್ರದೇಶಕ್ಕೆ ಹತ್ತಿರದಲ್ಲಿದ್ದು, ಫ್ಲಾಟ್ಗೆ ಹೊಂದಿಕೊಳ್ಳುವ ಖಾಸಗಿ ಲಿಫ್ಟ್ ಮತ್ತು ಈಜುಕೊಳವನ್ನು ಸಹ ಹೊಂದಿದೆ ಎಂದು ತಿಳಿದುಬಂದಿದೆ. ಇನ್ನು ಮೂಲಗಳ ಪ್ರಕಾರ ಈ ಫ್ಲಾಟ್ ಬೆಲೆ 20 ಕೋಟಿ ರೂ.

ರಿಜಿಸ್ಟರ್​ ಆಫೀಸ್​ ಮುಂದೆ ಕಾಣಿಸಿಕೊಂಡ ಕರಣ್ 

ಪುರಸಭೆಯ ನೋಂದಣಿ ಕಚೇರಿಯ ಹೊರಗೆ ಇರುವ ಕರಣ್ ಕುಂದ್ರಾ ಅವರ ಫೋಟೋ ವೈರಲ್ ಆಗಿದೆ. ಅವರು ಒಂದು ಜೊತೆ ಡೆನಿಮ್‌ಗಳು ಮತ್ತು ಚೆಕ್ಡ್ ಶರ್ಟ್‌ನಲ್ಲಿ ಧರಿಸಿದ್ದು, ಅವರ ಅಭಿಮಾನಿಯೊಬ್ಬರು ಅವರ ಫೋಟೋವನ್ನು ಕ್ಲಿಕ್ಕಿಸಿದಂತಿದೆ.

ಕರಣ್ ಕುಂದ್ರಾ ಖರೀದಿ ಮಾಡಿರುವ ಈ ಫ್ಲಾಟ್ 5238 ಸ್ವೇರ್ ಫೀಟ್ ಹೊಂದಿದ್ದು, 3 ಕಾರು ಪಾರ್ಕಿಂಗ್‌ ಸ್ಪೇಸ್ ಕೂಡ ಇದೆ. ಫ್ಲಾಟ್ ನೋಂದಣಿಗಾಗಿ 81.81 ಲಕ್ಷ ರೂಪಾಯಿಯನ್ನು ಕರಣ್‌ ಕುಂದ್ರಾ ಈಗಾಗಲೇ ಆಡ್ವಾನ್ಸ್ ನೀಡಿದ್ದು, ಮೇ 13, 2022 ರಂದು ರಿಜಿಸ್ಟ್ರೇಷನ್ ಆಗಿದೆ ಎಂಬ ಮಾತು ಕೇಳಿ ಬಂದಿದೆ.

ನಟಿ ತೇಜಸ್ವಿ ಪ್ರಕಾಶ್ ಅವರೊಂದಿಗಿನ ಕರಣ್ ಕೆಮಿಸ್ಟ್ರಿ ಅಭಿಮಾನಿಗಳ ಫೇವರೇಟ್ಎಂದರೆ ತಪ್ಪಲ್ಲ. ಬಿಗ್ಬಾಸ್ 15ರಲ್ಲಿ ಎಲ್ಲರ ಮನಸು ಗೆದ್ದ ಕ್ಯೂಟ್ ಜೋಡಿ ತೇಜಸ್ವಿ ಪ್ರಕಾಶ್ ಹಾಗೂ ಕರಣ್ ಕುಂದ್ರಾ ಈಗ ಪಾಪರಾಜಿಗಳ ಹಾಟ್ ಫೇವರೇಟ್ ಜೋಡಿ. ಕಳೆದೊಂದು ವಾರದಿಂದ ವ್ಯಾಲೆಂಟೈನ್ಸ್ ವೀಕ್ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಬಿಗ್ಬಾಸ್ನಲ್ಲಿ ಸಖತ್ ರೊಮ್ಯಾಂಟಿಕ್ ಆಗಿದ್ದ ಕಿರುತೆರೆ ಜೋಡಿಯ ಮದುವೆಗೆ ಅವರ ಮನೆಯವರಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಈ ಜೋಡಿ ಇನ್ನಷ್ಟು ಥ್ರಿಲ್ ಆಗಿದ್ದಾರೆ.

ಇದನ್ನೂ ಓದಿ: ಹೊಸ ಕಾರು ಖರೀದಿಸಿದ ನವರಸ ನಾಯಕ - ಕಷ್ಟದ ದಿನಗಳನ್ನು ನೆನೆದ ಜಗ್ಗೇಶ್

ಕರಣ್ ಕುಂದ್ರಾ ಕಿರುತೆರೆಯ ಹೊಸ ಲವ್ ಬಾಯ್ ಎನ್ನಬಹುದು. ಕರಣ್ ಒಮ್ಮೆ ಕೋಪದ ಕಾರಣಕ್ಕೆ ಹೆಸರುವಾಸಿಯಾಗಿದ್ದರು. ಆದರೆ ಈಗ ತೇಜಸ್ವಿ ಪ್ರಕಾಶ್ ಅವರೊಂದಿಗೆ ಲವ್ನಲ್ಲಿ ಬಿದ್ದ ನಂತರ ಅವರು ತಮ್ಮ ಅನೇಕ ಮಹಿಳಾ ಅಭಿಮಾನಿಗಳಿಗೆ ಲವ್ಲೀ ಬಾಯ್ ಆಗಿದ್ದಾರೆ.

ಒಂದೊಂದು ಅವಕಾಶ ಪಡೆಯುತ್ತಿದ್ದಾರೆ ಕುಂದ್ರಾ

ಬಿಗ್ಬಾಸ್15 ರ ನಂತರ ಇತ್ತೀಚಿನ ಲಾಕ್ಅಪ್ ರಿಯಾಲಿಟಿ ಶೋದಲ್ಲಿ ಸಹ ಕರಣ್ ಮಿಂಚಿದ್ದಾರೆ. ಏಕ್ತಾ ಆರ್ ಕಪೂರ್ ಅವರ ಈ 'ಲಾಕ್ ಅಪ್' ಶೋನಲ್ಲಿ ಜೈಲರ್ ಆಗಿ ಅವರ ಅಭಿನಯಕ್ಕಾಗಿ ಎಲ್ಲರ ಮೆಚ್ಚುಗೆಯನ್ನು ಪಡೆದಿದ್ದಾರೆ. ಅಲ್ಲದೇ ಅವರು ಇದೀಗ 'ಡ್ಯಾನ್ಸ್ ದೀವಾನೆ ಜೂನಿಯರ್ಸ್' ಕಾರ್ಯಕ್ರಮದ ನಿರೂಪಕರಾಗಿ ಸಹ ಗಮನ ಸೆಳೆಯುತ್ತಿದ್ದಾರೆ.

ನಟಿ ಇಲಿಯಾನಾ ಡಿಕ್ರೂಜ್ ಮತ್ತು ರಣದೀಪ್ ಹೂಡಾ ಅವರೊಂದಿಗೆ ಕರಣ್ ಒಂದು ಸಿನೆಮಾದಲ್ಲಿ ಸಹ ಅಭಿನಯಿಸಿದ್ದು, ಅವರು ಇತ್ತೀಚೆಗೆ ಜಾಕ್ವೆಲಿನ್ ಫರ್ನಾಂಡಿಸ್ ಅವರೊಂದಿಗೆ 'ಖತ್ರಾ ಖತ್ರಾ' ಶೋನಲ್ಲಿ ಸಹ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮದ್ವೆಯಾಗಿ ಎರಡೇ ದಿನಕ್ಕೆ ಶೂಟಿಂಗ್‌ಗೆ ಹೊರಟ ತಾರಾ ಜೋಡಿ; ನಾವ್ ಹೇಳ್ತಿರೋದು 'ಪುರಾಣ' ಅಲ್ಲ ರೀ, ಸತ್ಯ ಕಥೆ!

2009ರಲ್ಲಿ ‘ಕಿತ್ನಿ ಮೊಹಬ್ಬತ್ ಹೈ’ ಧಾರಾವಾಹಿ ಮೂಲಕ ಕರಣ್ ಕುಂದ್ರಾ ಕಿರುತೆರೆ ಲೋಕಕ್ಕೆ ಕಾಲಿಟ್ಟಿದ್ದರು, ನಂತರ ‘ಬೇತಾಬ್ ದಿಲ್ ಕಿ ತಮನ್ನಾ ಹೈ’, ‘ಆಹತ್’, ‘ಕಿತ್ನಿ ಮೊಹಬ್ಬತ್ ಹೈ 2’, ‘ತೇರಿ ಮೇರಿ ಲವ್ ಸ್ಟೋರೀಸ್’ ಸೇರಿದಂತೆ ಸಾಲು ಸಾಲು ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಕರಣ್ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
Published by:Sandhya M
First published: