ಶಾರುಖ್ ಖಾನ್ ಮಗನ ಗುಣಕ್ಕೆ ಬಿಗ್​ಬಾಸ್ ರನ್ನರ್ ಅಪ್ ರಾಹುಲ್ ವೈದ್ಯ ಮೆಚ್ಚುಗೆ: ವಿಡಿಯೋ ವೈರಲ್

ಶಾರುಖ್ ಖಾನ್ ಪುತ್ರ ಆರ್ಯನ್ ತಮ್ಮ ಗೆಳೆಯರೊಬ್ಬರ ಜನ್ಮದಿನದಂದು ಆತನನ್ನು ಭೇಟಿಯಾಗಲು ಅಲ್ಲಿಗೆ ಬಂದಿದ್ದರು. ಆದರೆ, ಸೆಕ್ಯುರಿಟಿ ಗಾರ್ಡ್​ಗಳು ಆರ್ಯನ್​ ಅವರನ್ನು ಒಳಬಿಡಲು ನಿರಾಕರಿಸಿದ್ದರು.

ಆರ್ಯನ್ ಖಾನ್- ರಾಹುಲ್ ವೈದ್ಯ

ಆರ್ಯನ್ ಖಾನ್- ರಾಹುಲ್ ವೈದ್ಯ

 • Share this:
  ಬಿಗ್​ಬಾಸ್ ಅತ್ಯಂತ ಜನಪ್ರಿಯ ಹಾಗೂ ಟಿವಿ ವೀಕ್ಷಕರ ನೆಚ್ಚಿನ ಕಾರ್ಯಕ್ರಮಗಳಲ್ಲಿ ಒಂದು. ಸದ್ಯ, ಬಿಗ್​ಬಾಸ್ ಕನ್ನಡ ಸೀಸನ್ 8 ಆರಂಭವಾಗಿದ್ದು, ಪ್ರೇಕ್ಷಕರು ಕುತೂಹಲದಿಂದ ಟಿವಿ, ಇಂಟರ್ನೆಟ್​ನಲ್ಲಿ ಬಿಗ್​ಬಾಸ್ ಸ್ಪರ್ಧಿಗಳ ಬಗ್ಗೆ, ಈ ಬಾರಿಯ ಕಾರ್ಯಕ್ರಮದ ವಿಶೇಷತೆಗಳನ್ನು ನೋಡುತ್ತಿದ್ದಾರೆ. ಆದರೆ, ಇಲ್ಲಿ ಬಿಗ್​ಬಾಸ್​ ಹಿಂದಿ ಸೀಸನ್ 14 ರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಕಾರಣ ಬಾಲಿವುಡ್ ಬಾದಷಾ ಶಾರುಖ್ ಖಾನ್ ಪುತ್ರ ಆರ್ಯನ್ ನಮ್ರತೆ ಮತ್ತು ತಾಳ್ಮೆಯನ್ನು ಬಿಗ್ ಬಾಸ್ 14 ರನ್ನರ್ ಅಪ್ ರಾಹುಲ್ ವೈದ್ಯ ಹೊಗಳಿರುವುದು.

  ಆರ್ಯನ್ ನನ್ನು ಕ್ಲಬ್​ವೊಂದರಲ್ಲಿ ಭೇಟಿಯಾಗಿದ್ದನ್ನು ರಾಹುಲ್ ನೆನಪಿಸಿಕೊಂಡಿದ್ದಾರೆ. ಆರ್ಯನ್ ತಮ್ಮ ಗೆಳೆಯರೊಬ್ಬರ ಜನ್ಮದಿನದಂದು ಆತನನ್ನು ಭೇಟಿಯಾಗಲು ಅಲ್ಲಿಗೆ ಬಂದಿದ್ದರು. ಆದರೆ, ಸೆಕ್ಯುರಿಟಿ ಗಾರ್ಡ್​ಗಳು ಆರ್ಯನ್​ ಅವರನ್ನು ಒಳಬಿಡಲು ನಿರಾಕರಿಸಿದ್ದರು. ಇದಕ್ಕೆ ಕಾರಣ ಗೊತ್ತಿಲ್ಲ ಎಂದು ರಾಹುಲ್ ವೈದ್ಯ ಹೇಳಿಕೊಂಡಿದ್ದಾರೆ.

  ಇಷ್ಟೆಲ್ಲ ಆದರೂ, ಆರ್ಯನ್ ತಾಳ್ಮೆಯಿಂದ ಕಾಯುತ್ತಿದ್ದರು, ಕ್ಲಬ್ ಒಳಗೆ ಪ್ರವೇಶ ಪಡೆಯಲು ತಾನು ಶಾರುಖ್ ಖಾನ್ ಮಗನೆಂದು ಹೇಳಿಕೊಳ್ಳಲಿಲ್ಲ ಎಂದು ರಾಹುಲ್ ವೈದ್ಯ ಹೇಳಿದ್ದಾರೆ. ಆ ಸಮಯದಲ್ಲಿ ಅವರ ವರ್ತನೆ ನೋಡಿ ಆರ್ಯನ್ ಬಗ್ಗೆ ತುಂಬಾ ಪ್ರಭಾವಿತನಾದೆ ಎಂದೂ ಬಿಗ್​ಬಾಸ್ ರನ್ನರ್ ಅಪ್ ಹೇಳಿದ್ದಾರೆ. ಜತೆಗೆ, ಆರ್ಯನ್ ನಂತಹ ಮಗನನ್ನು ಬೆಳೆಸಿದ ಶಾರುಖ್ ಮತ್ತು ಗೌರಿ ಖಾನ್ ಅವರನ್ನು ರಾಹುಲ್ ಅಭಿನಂದಿಸಿದ್ದಾರೆ.
  ಈ ಮಧ್ಯೆ, ರಾಹುಲ್ ಹಾಗೂ ಆತನ ಗೆಳತಿ ದಿಶಾ ಪರ್ಮಾರ್ ಅವರ ವಿವಾಹಕ್ಕಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಹಿಂದಿಯ ಬಿಗ್ ಬಾಸ್ 14 ಶೋ ವೇಳೆ ದಿಶಾ ಹುಟ್ಟುಹಬ್ಬದಂದು ರಾಹುಲ್ ವೈದ್ಯ ಆಕೆಯನ್ನು ಪ್ರೊಪೋಸ್ ಮಾಡಿದ್ದರು. ನಂತರ ದಿಶಾ ಪರ್ಮಾರ್ ಬಿಗ್​ಬಾಸ್​ಗೆ ಎಂಟ್ರಿಯಾದಾಗ ರಾಹುಲ್ ಮತ್ತೊಮ್ಮೆ ಮೊಣಕಾಲೂರಿ ಪ್ರೊಪೋಸ್ ಮಾಡಿದ್ದಕ್ಕೆ, ಆಕೆ ಒಪ್ಪಿಕೊಂಡಿದ್ದರು.  ಆದರೆ, ತಮ್ಮ ವಿವಾಹದ ಬಗ್ಗೆ ಮಾತನಾಡಿದ ರಾಹುಲ್, ''ನಾನು ಆ ಬಗ್ಗೆ ಇನ್ನೂ ಪ್ಲ್ಯಾನ್ ಮಾಡಿಲ್ಲ. ಆದರೆ ನಾನು ಸಮಯ ವ್ಯರ್ಥ ಮಾಡಲು ಬಯಸುವುದಿಲ್ಲ. ಅವಳು ನನಗೆ ಸಂಭವಿಸಿದ ಅತ್ಯಂತ ಸುಂದರವಾದ ವಿಷಯ ಮತ್ತು ಅವಳು ತುಂಬಾ ಸುಂದರವಾಗಿದ್ದಾಳೆ. ಹೀಗಾಗಿ, ಅವಳೊಂದಿಗೆ ನನ್ನ ಜೀವನವನ್ನು ಪ್ರಾರಂಭಿಸಲು ನಾನು ಕಾಯುತ್ತಿದ್ದೇನೆ'' ಎಂದು ಹೇಳಿಕೊಂಡಿದ್ದಾರೆ.
  Published by:Sushma Chakre
  First published: