• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Sidharth Shukla: ಬಿಗ್​ ಬಾಸ್​​ ಸ್ಪರ್ಧಿ ಸಾವಿನ ತನಿಖೆಗೆ ಮುಂದಾದ ಪೊಲೀಸರು: ಅಸಲಿಗೆ ಸಾವಿಗೆ ಮುನ್ನ ರಾತ್ರಿ ಆಗಿದ್ದಾದರೂ ಏನು?

Sidharth Shukla: ಬಿಗ್​ ಬಾಸ್​​ ಸ್ಪರ್ಧಿ ಸಾವಿನ ತನಿಖೆಗೆ ಮುಂದಾದ ಪೊಲೀಸರು: ಅಸಲಿಗೆ ಸಾವಿಗೆ ಮುನ್ನ ರಾತ್ರಿ ಆಗಿದ್ದಾದರೂ ಏನು?

ಸಿದ್ಧಾರ್ಥ್​ ಶುಕ್ಲಾ

ಸಿದ್ಧಾರ್ಥ್​ ಶುಕ್ಲಾ

ಇನ್ನು ಸಿದ್ದಾರ್ಥ್​ ಶುಕ್ಲಾ ಸಾವಿನ ಕುರಿತು ಅವರ ಕುಟುಂಬಸ್ಥರು ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ

  • Share this:

ಮುಂಬೈ (ಸೆ. 2):  ಹಿಂದಿ ಬಿಗ್​ ಬಾಸ್​ ವಿಜೇತ ಸಿದ್ಧಾರ್ಥ್​ ಶುಕ್ಲಾ (Sidharth Shukla) ಸಾವು ಕಳೆದ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕೇವಲ 40 ವರ್ಷದ ನಟನ ಅಕಾಲಿಕ ಸಾವು ಎಲ್ಲರನ್ನು ದಂಗು ಪಡಿಸಿದ್ದು ಸುಳ್ಳಲ್ಲ. ಸರಿ ರಾತ್ರಿಯಲ್ಲಿ ಮುಂಬಯಿನ ಕೂಪರ್​ ಆಸ್ಪತ್ರೆಗೆ ದಾಖಲಾಗಿದ್ದ ಸಿದ್ದಾರ್ಥ್​ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂದು ಆಸ್ಪತ್ರೆಗೆ ವೈದ್ಯರು ತಿಳಿಸಿದ್ದಾರೆ. ಇನ್ನು ಸಾವಿಗೆ ಮುನ್ನ ಅವರು ಕೆಲ ಔಷಧಿಗಳನ್ನು ಸೇವಿಸಿದ್ದರು ಎಂದು ಕೂಡ ಇದೇ ವೇಳೆ ವೈದ್ಯರು ತಿಳಿಸಿದ್ದು, ಅಸಲಿಗೆ ಅವರ ಸಾವಿಗೆ ಮುನ್ನ ನಡೆದ ಘಟನೆಗಳು ಏನು ಎಂಬ ಪ್ರಶ್ನೆ ಮೂಡಿದೆ.


ಏನಾಗಿತ್ತು ಆ ರಾತ್ರಿ ?
ಪೊಲೀಸ್​ ಮಾಹಿತಿ ಪ್ರಕಾರ, ಎಂದಿನಂತೆ ಊಟ ಮಾಡಿ ಮಲಗಿದ್ದ ಸಿದ್ಧಾರ್ಥ್​ ಶುಕ್ಲಾ ಗುರುವಾರ ಬೆಳಗಿನ ಜಾವ 3- 30.30ರ ಸುಮಾರಿಗೆ ಎದ್ದಿದ್ದಾರೆ. ಈ ವೇಳೆ ತಮ್ಮ ದೇಹದಲ್ಲಿ ಏನೋ ಒಂದು ರೀತಿ ಸಂಕಟ ಅನುಭವಿಸಿದ್ದು, ತಕ್ಷಣಕ್ಕೆ ಈ ಬಗ್ಗೆ ತಾಯಿಗೆ ತಿಳಿಸಿದ್ದಾರೆ. ಏನೋ ಒಂದು ರೀತಿ ಸಂಕಟದ ಜೊತೆ ಹೃದಯದ ನೋವಾಗುಇತ್ತಿದ್ದ ಹಿನ್ನಲೆ ತಾಯಿ ನೀರು ಕುಡಿಸಿ ಮಲಗಿಸಿದ್ದಾರೆ. ಹೀಗೆ ಮಲಗಿದ ಶುಕ್ಲಾ ಸಂಪೂರ್ಣವಾಗಿ ಚಿರ ನಿದ್ರೆಗೆ ಜಾರಿದ್ದರು. ತಾಯಿ ಎಷ್ಟೇ ಎಚ್ಚರಿಸಿದ್ದರೂ ಎಚ್ಚರಗೊಳ್ಳಲಿಲ್ಲ. ಈ ವೇಳೆ ಆತಂಕಕ್ಕೆ ಒಳಗಾದ ಶುಕ್ಲಾ ತಾಯಿ ಮಗಳಿಗೆ ಕರೆ ಮಾಡಿದ್ದಾರೆ. ಬಳಿಕ ವೈದ್ಯರಿಗೆ ತಿಳಿಸಿದ್ದಾರೆ.
ಬೆಳಗ್ಗೆ ಸುಮಾರು 9.40ರ ಸುಮಾರಿಗೆ ಸಿದ್ದಾರ್ಥ್​ ಕರೆದುಕೊಂಡು ಕೂಪರ್​ ಆಸ್ಪತ್ರೆಗೆ ಬರಲಾಗಿದೆ. 10.15ಕ್ಕೆ ಆತನ ಸಾವನ್ನು ವೈದ್ಯರು ಖಚಿತ ಪಡಿಸಿದ್ದಾರೆ. ಆತನ ದೇಹವನ್ನು ಕನಿಷ್ಠ ಪಕ್ಷ ಎರಡು ಮೂರು ಬಾರಿ ತುರ್ತು ಘಟಕದಲ್ಲಿ ಪರೀಕ್ಷೆ ನಡೆಸಲಾಗಿದೆ. ಈ ವೇಳೆ ಆತನ ದೇಹದ ಮೇಲೆ ಯಾವುದೇ ಬಾಹ್ಯ ಗಾಯ ಆಗಲಿ, ಕಲೆಯಾಗಲಿ ಕಂಡು ಬಂದಿಲ್ಲ.


ಮರಣೋತ್ತರ ಪರೀಕ್ಷೆ
ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಬಳಿಕ ಮತ್ತೊಬ್ಬ ಹಿಂದಿ ನಟ ಚಿಕ್ಕ ವಯಸ್ಸಿಗೆ ಚಿರ ನಿದ್ರೆಗೆ ಜಾರಿತ್ತು. ಈ ಸಾವಿನ ಬಗ್ಗೆ ಕೂಡ ಸಾಕಷ್ಟು ಅನುಮಾನ ವ್ಯಕ್ತವಾದವು. ಇದೇ ಹಿನ್ನಲೆ ಸಿದ್ದಾರ್ಥ್​ ಶುಕ್ಲಾ ಮರಣೊತ್ತರ ಪರೀಕ್ಷೆಯನ್ನು ಹೆಚ್ಚಿನ ಜಾಗರುಕತೆಯಲ್ಲಿ ನಿರ್ವಹಿಸಲಾಗಿದೆ. 3. 45ಕ್ಕೆ ಮರಣೋತ್ತರ ಪರೀಕ್ಷೆಗೆ ಮುಂದಾಗಲಾಗಿದ್ದು, ಇದರ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಅಷ್ಟೇ ಅಲ್ಲದೇ, ಈ ವೇಳೆ ಇಬ್ಬರು ಪೊಲೀಸರು ಕೂಡ ಹಾಕರಿದ್ದರು.


ಪೋಷಕರ ಹೇಳಿಕೆ ದಾಖಲು
ಇನ್ನು ಸಿದ್ದಾರ್ಥ್​ ಶುಕ್ಲಾ ಸಾವಿನ ಕುರಿತು ಅವರ ಕುಟುಂಬಸ್ಥರು ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ. ಆದರೂ ಕೂಡ ಈ ಸಂಬಂಧ ಅವರ ಕುಟುಂಬಸ್ಥರ ಎಲ್ಲಾ ಹೇಳಿಕೆಗಳನ್ನು ಪೊಲೀಸರು ಸಂಪೂರ್ಣವಾಗಿ ದಾಖಲು ಮಾಡಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಶುಕ್ಲಾ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಂತರಿಸಲಾಗಿದೆ.


ಕಾರಣ ಪತ್ತೆಯಾಗಿಲ್ಲ


40 ವರ್ಷದ ಸಿದ್ದಾರ್ಥ್​ ಶುಕ್ಲಾ ಮರಣೋತ್ತರ ಪರೀಕ್ಷೆ ಬಳಿಕವೂ ಇನ್ನು ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಹಿನ್ನಲೆ ಈ ಕುರಿತು ಅವರ ಮನೆಯಲ್ಲಿಯೂ ತನಿಖೆ ನಡೆಸಲಾಗುವುದು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

top videos
    First published: