Bigboss OTT: ದಿವ್ಯಾ ಅಗರ್ವಾಲ್ ಪಾಲಾದ ಬಿಗ್​ಬಾಸ್​ ಒಟಿಟಿ ಟ್ರೋಫಿ.. ಶಮಿತಾ ಶೆಟ್ಟಿಗೆ ನಿರಾಸೆ..

Divya Agarwal: ವಿಜೇತರಾಗಿರುವ ದಿವ್ಯಾ ಅಗರ್ವಾಲ್ ಆರಂಭದಲ್ಲಿ ಒಳ್ಳೆಯ ಸ್ಪರ್ಧಿ ಎನಿಸಿಕೊಂಡಿರಲಿಲ್ಲ. ಯಾರೊಂದಿಗೂ ಸರಿಯಾಗಿ ಬೆರೆಯುತ್ತಿರಲಿಲ್ಲ. ಗೆಳೆತನ ಸಾಧಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ದಿವ್ಯಾ ಅಗರ್ವಾಳ್ ಆರಂಭದಲ್ಲಿ ಶಮಿತಾ ಶೆಟ್ಟಿ ಜೊತೆ  ಚನ್ನಾಗಿದ್ದರು ಆದರೆ ಅದು ಹೆಚ್ಚು ದಿನ ಮುಂದುವರೆಯಲಿಲ್ಲ, ಅಲ್ಲದೇ ಅವರ ಮನೆಯಲ್ಲಿನ ಪ್ರದರ್ಶನ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.

ಬಿಗ್​ಬಾಸ್​ ವಿನ್ನರ್ ದಿವ್ಯಾ ಅಗರ್ವಾಲ್

ಬಿಗ್​ಬಾಸ್​ ವಿನ್ನರ್ ದಿವ್ಯಾ ಅಗರ್ವಾಲ್

  • Share this:
ಕೆಲವು ದಿನಗಳಿಂದ ಭಾರೀ ಸುದ್ದಿಯಲ್ಲಿದ್ದ ಬಿಗ್‌ಬಾಸ್ ಒಟಿಟಿಗೆ(Bigboss OTT) ನಿನ್ನೆಯಷ್ಟೆ ತೆರೆ ಬಿದ್ದಿದೆ. ಇದು ಮೊದಲ ಬಿಗ್‌ಬಾಸ್ ಒಟಿಟಿ  ಶೋ ಆಗಿದ್ದು, ದಿವ್ಯಾ ಅಗರ್ವಾಲ್ (Divya Agarwal)ಕೆಲವು ದಿನಗಳಿಂದ ಭಾರೀ ಸುದ್ದಿಯಲ್ಲಿದ್ದ ಬಿಗ್‌ಬಾಸ್ ಒಟಿಟಿಗೆ ನಿನ್ನೆಯಷ್ಟೆ ತೆರೆ ಬಿದ್ದಿದೆ. ಇದು ಮೊದಲ ಬಿಗ್‌ಬಾಸ್ ಒಟಿಟಿ  ಶೋ ಆಗಿದ್ದು, ದಿವ್ಯಾ ಅಗರ್ವಾಲ್ ವಿಜೇತರಾಗಿದ್ದಾರೆ.  ಗೆಲುವನ್ನು ಮುಡಿಗೇರಿಸಿಕೊಂಡಿರುವ ದಿವ್ಯಾ ಅಗರ್ವಾಲ್ 25 ಲಕ್ಷ ರು ಹಣ ಮತ್ತು ಟ್ರೋಫಿಯನ್ನು  ತಮ್ಮದಾಗಿಸಿಕೊಂಡಿದ್ದಾರೆ. ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್​ ಬಾಸ್ ನಿರೂಪಣೆಯನ್ನು ಸಲ್ಮಾನ್​ ಖಾನ್(Salman Khan)​ ಮಾಡಿದ್ದರು. ಆದರೆ, ‘ಬಿಗ್​ ಬಾಸ್​ ಒಟಿಟಿ’ಯನ್ನು ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ಕರಣ್​ ಜೋಹರ್(Karan Johar)​ ನಡೆಸಿಕೊಟ್ಟಿದ್ದಾರೆ. 

ಹಲವಾರು ಜನರ ಪ್ರಕಾರ ಶಮಿತಾ ಶೆಟ್ಟಿ ಗೆಲ್ಲುತ್ತಾರೆ  ಎಂದು ಹೇಳಲಾಗುತಿತ್ತು, ಆದರೆ ನಿನ್ನೆ ನಡೆದ ಫಿನಾಲೆಯಲ್ಲಿ ದಿವ್ಯಾ ಅಗರ್ವಾಲ್ ಅನ್ನು ವಿಜೇತರಾಗಿ  ಹೊರ ಹಮ್ಮಿದ್ದಾರೆ, ನಿಶಾಂತ್ ಮೊದಲ ರನ್ನರ್​‌ ಅಪ್, ಶಮಿತಾ ಎರಡನೇ ರನ್ನರ್ ಅಪ್ ಆಗಿ ಆಯ್ಕೆಯಾಗಿದ್ದಾರೆ. ಶಮಿತಾ ಅವರ ಆಪ್ತ ಎಂದೇ ಖ್ಯಾತರಾಗಿದ್ದ ರಾಕೇಶ್ ಮೂರನೇ ರನ್ನರ್ ಆಪ್ ಆಗಿದ್ದಾರೆ. ಪ್ರತೀಕ್ ಫೈನಲ್‌ಗೆ ಬರದೆ ಅದೃಷ್ಟದ ಸೂಟ್‌ಕೇಸ್ ಪಡೆದುಕೊಂಡು ಸ್ಪರ್ಧೆಯಿಂದ ಹೊರಗೆ ನಡೆದು ನಾಲ್ಕನೇ ರನ್ನರ್ ಅಪ್ ಆಗಿದ್ದಾರೆ.

ವಿಜೇತರಾಗಿರುವ ದಿವ್ಯಾ ಅಗರ್ವಾಲ್ ಆರಂಭದಲ್ಲಿ ಒಳ್ಳೆಯ ಸ್ಪರ್ಧಿ ಎನಿಸಿಕೊಂಡಿರಲಿಲ್ಲ. ಯಾರೊಂದಿಗೂ ಸರಿಯಾಗಿ ಬೆರೆಯುತ್ತಿರಲಿಲ್ಲ. ಗೆಳೆತನ ಸಾಧಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ದಿವ್ಯಾ ಅಗರ್ವಾಳ್ ಆರಂಭದಲ್ಲಿ ಶಮಿತಾ ಶೆಟ್ಟಿ ಜೊತೆ  ಚನ್ನಾಗಿದ್ದರು ಆದರೆ ಅದು ಹೆಚ್ಚು ದಿನ ಮುಂದುವರೆಯಲಿಲ್ಲ, ಅಲ್ಲದೇ ಅವರ ಮನೆಯಲ್ಲಿನ ಪ್ರದರ್ಶನ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.

ಇದನ್ನೂ ಓದಿ: Katrina Kaif ಫಿಟ್ ಆಗಿರಲು ಜಿಮ್‌ನಲ್ಲಿ ಏನೆಲ್ಲಾ ಕಸರತ್ತು ಮಾಡುತ್ತಾರೆ ನೋಡಿ..

ನಿನ್ನೆ ನಡೆದ ಫಿನಾಲೆ ಕಾರ್ಯಕ್ರಮದಲ್ಲಿ ನಟಿ ಜೆನಿಲಿಯಾ ಡಿಸೋಜಾ, ನಟ ರಿತೇಶ್ ದೇಶ್‌ಮುಖ್, ಋತ್ವಿಕ್ ಧನಂಜಯ್, ಕರಣ್ ವಾಹಿ, ಭಾರತಿ ಸಿಂಗ್, ಹರ್ಷ್ ಲಿಂಬಾಚಿಯಾ ಅತಿಥಿಗಳಾಗಿ ಭಾಗವಹಿಸಿದ್ದರು ಕರಣ್ ಜೋಹರ್ ನಡೆಸಿಕೊಟ್ಟ ಈ ಶೋನಲ್ಲಿ ಶಮಿತಾ ಶೆಟ್ಟಿ ಸೇರಿ ಕೆಲವು ಪ್ರಮುಖ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ವಿಜೇತರಾಗಿರುವ ದಿವ್ಯಾ ಅಗರ್ವಾಲ್ ಟಿವಿ ಸೆಲೆಬ್ರಿಟಿಯಾಗಿ ಗುರುತಿಸಿಕೊಂಡಿದ್ದಾರೆ.  ಟಿವಿಯ ಹಲವು ಪ್ರಮುಖ ರಿಯಾಲಿಟಿ ಶೋಗಳಲ್ಲಿ ದಿವ್ಯಾ ಭಾಗವಹಿಸಿದ್ದರು. ಎಂಟಿವಿ ಸ್ಪಿಟ್ಸ್ ವಿಲ್ಲಾ, ಎಂಟಿವಿ ರೋಡೀಸ್, ಬಿಗ್‌ಬಾಸ್ ಸೀಸನ್ 11, ಆನ್ ರೋಡ್ ವಿತ್ ರೋಡೀಸ್, ಎಂಟಿವಿ ಏಸ್ ಸ್ಪೇಸ್, ಎಂಟಿವಿ ಏಸ್ ಆಫ್ ಕ್ವಾರಂಟೈನ್ ಇನ್ನೂ ಕೆಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ.

ಇನ್ನು 2 ದಿನಗಳ ಹಿಂದೆಯಷ್ಟೇ ಶಮಿತಾ ಶೆಟ್ಟಿ ಸಹೋದರಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಬಿಗ್​ಬಾಸ್​ ಒಟಿಟಿಯಲ್ಲಿ ಭಾಗವಹಿಸಿರುವ ಸಹೋದರಿಗೆ ಮತ ನೀಡುವಂತೆ ಮನವಿ ಮಾಡಿದ್ದರು.

ಇದನ್ನೂ ಓದಿ: ಬಿಗ್​ಬಾಸ್ ಸ್ಪರ್ಧಿಯಾಗಿರುವ ತಂಗಿಗೆ ಮತ ನೀಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ Shilpa Shetty!

ಇನ್ನು  ಬಿಗ್ ಬಾಸ್ ಒಟಿಟಿ ವಿನ್ನರ್ ದಿವ್ಯ ಅವರ ಗೆಳೆಯರಾಗಿದ್ದ ಜೀಶನ್ ಖಾನ್ 'ಬಾಸ್ ಮ್ಯಾನ್' ಆಗಿದ್ದರು. ಟಾಸ್ಕ್ ವೇಳೆ ಇತರೆ ಸ್ಪರ್ಧಿಗಳಾದ ಪ್ರತೀಕ್ ಸೆಹಜ್‌ಪಾಲ್ ಮತ್ತು ನಿಶಾಂತ್ ಭಟ್ ನಡುವೆ ಹೊಡೆದಾಟ ನಡೆದಿತ್ತು. ಈ ಸಮಯದಲ್ಲಿ. ನಿಶಾಂತ್ ಭಟ್ ಬಳಿಯಿದ್ದ ಫ್ಲ್ಯಾಗ್‌ಗಳನ್ನು ಬಲವಂತವಾಗಿ ಜೀಶನ್ ಖಾನ್ ಕಿತ್ತುಕೊಂಡಿದ್ದರು. ಆಗ ಪರಿಸ್ಥಿತಿ ಕೈ ಮೀರಿ ಪ್ರತೀಕ್ ಸೆಹಜ್‌ಪಾಲ್ ಮತ್ತು ನಿಶಾಂತ್ ಭಟ್ ನಡುವಿನ ಕಿತ್ತಾಟ ಕೈಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿತ್ತು.
Published by:Sandhya M
First published: