Karan Kundrra -Shamita Shetty: ಶಮಿತಾ ಶೆಟ್ಟಿಯನ್ನು ಆಂಟಿ ಎಂದ ಕರಣ್ ಕುಂದ್ರಾ

ನಟಿಯ ವಯಸ್ಸು ಬಳಸಿ ಟೀಕೆ ಮಾಡಿರೋದನ್ನು ಶಮಿತಾ ಅಭಿಮಾನಿಗಳು ಖಂಡಿಸಿದ್ದಾರೆ. ಕೆಲವರು ಕರಣ್ ಮತ್ತು ಶಮಿತಾ ವಯಸ್ಸು ಉಲ್ಲೇಖಿಸಿ ಟ್ರೋಲ್ ಮಾಡುತ್ತಿದ್ದಾರೆ.

 ಕರಣ್ ಕುಂದ್ರಾ, ಶಮಿತಾ ಶೆಟ್ಟಿ

ಕರಣ್ ಕುಂದ್ರಾ, ಶಮಿತಾ ಶೆಟ್ಟಿ

  • Share this:
    ಮುಂಬೈ: ಬಿಗ್‍ಬಾಸ್ ಸೀಸನ್ 15 (Bigg Boss 15_ ಅದ್ಧೂರಿಯಾಗಿ ಹೊಸ ಕಾನ್ಸೆಪ್ಟ್ ನೊಂದಿಗೆ ಆರಂಭಗೊಂಡಿದೆ. ಮೊದಲ ದಿನದಿಂದಲೇ ಸ್ಪರ್ಧಿಗಳು ತಮ್ಮ ತಾಕತ್ತು ಪ್ರದರ್ಶಿಸುತ್ತಿದ್ದಾರೆ. ಮನೆಯಲ್ಲಿ ಡ್ರಾಮಾ, ಜಗಳ, ಒಬ್ಬರನ್ನೊಬ್ಬರು ನಿಂದಿಸುವ, ತಂಡಗಳ ರಚನೆ ಹೀಗೆ ಬಿಗ್‍ಬಾಸ್ ಆರಂಭಗೊಂಡಿದೆ. ಮೊದಲ ದಿನವೇ ಜಯ್ (Jay) ಮತ್ತು ಪ್ರತೀಕ್ (Pratik) ನಡುವಿನ ಜಗಳ ತಾರಕಕ್ಕೇರಿತ್ತು. ಇಬ್ಬರ ಜಗಳವೇ ಇಡೀ ದಿನದ ಹೈಲಟ್ ಆಗಿತ್ತು. ಇದೀಗ ಕರಣ್ ಕುಂದ್ರಾ (Karan Kundra) ಸರದಿ. ಆಟದ ವೇಳೆ ನಟಿ ಶಮಿತಾ ಶೆಟ್ಟಿ (Shamita Shetty)ಯನ್ನು ಆಂಟಿ ಎಂದು ಕರಣ್ ಕರೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಟಿಯ ವಯಸ್ಸು ಬಳಸಿ ಟೀಕೆ ಮಾಡಿರೋದನ್ನು ಶಮಿತಾ ಅಭಿಮಾನಿಗಳು ಖಂಡಿಸಿದ್ದಾರೆ. ಕೆಲವರು ಕರಣ್ ಮತ್ತು ಶಮಿತಾ ವಯಸ್ಸು (Age-Shaming) ಉಲ್ಲೇಖಿಸಿ ಟ್ರೋಲ್ ಮಾಡುತ್ತಿದ್ದಾರೆ.

    ಕರಣ್ ವಿರುದ್ಧ ಟ್ರೋಲ್
    ಜಯ್ ಮತ್ತು ಪ್ರತೀಕ್ ನಡುವಿನ ಜಗಳ ನಡೆಯುತ್ತಿತ್ತು. ಚೋಟು ಫಾಲೋ ಮಿ ಎಂದು ಎಂದು ಕರೆಯುವ ಮೂಲಕ ಪ್ರತೀಕ್ ನನ್ನು ಜಯ್ ಕಾಲೆಳೆದರು. ಇಬ್ಬರನ್ನ ಜಗಳ ನೋಡಿದ ಶಮಿತಾ ಯಾಕೆ ದಂಪತಿಗಳ ರೀತಿ ಆಡುತ್ತೀರಿ ಎಂದು ಹೇಳಿದ್ದರು. ತದನಂತರ ನಿಶಾಂತ್ ಮತ್ತು ಕರಣ್ ನಡುವೆ ಸಂಭಾಷಣೆ ನಡೆಯುತ್ತಿತ್ತು. ಜಗಳದ ಮಧ್ಯದಲ್ಲಿ ಆಂಟಿಯಾಗಿ ಶಮಿತಾ ಬಂದರು ಎಂದು ಹೇಳಿದ್ದಾರೆ. ಶಮಿತಾ ಬಗ್ಗೆ ಕರಣ್ ಆಡಿರುವ ಮಾತುಗಳ ಅಸಹ್ಯಕರ ಮತ್ತು ವಯಸ್ಸನ್ನು ಬಳಸಿ ನಿಂದಿಸೋದು ತಪ್ಪು ಎಂದು ಖಂಡಿಸುತ್ತಿದ್ದಾರೆ.

    ನಿಮ್ಮ ವಯಸ್ಸು 37 ಅಲ್ವಾ?
    ನಾನು ಬಿಗ್‍ಬಾಸ್ ನೋಡುತ್ತಿಲ್ಲ. ಆದ್ರೆ ಕರಣ್ ಮಾತುಗಳ ಬಗ್ಗೆ ಕೇಳಿದಾಗ ಕೆಲ ವಿಡಿಯೋ ಕ್ಲಿಪ್ ಗಳನ್ನು ನೋಡಿದೆ. ಬಿಗ್‍ಬಾಸ್‍ನಲ್ಲಿ ಶಮಿತಾ ಸೇರಿದಂತೆ ಎಲ್ಲರೂ ಆಟವೇ ಆಡುತ್ತಿದ್ದಾರೆ. ಕರಣ್ ಕುಂದ್ರಾ ಅವರೇ ಬಿಗ್‍ಬಾಸ್ ನಲ್ಲಿ ಶಮಿತಾ ಶೆಟ್ಟಿಯನ್ನು ಟಾರ್ಗೆಟ್ ಮಾಡೋದನ್ನು ನಿಲ್ಲಿಸಿ, ನಿಮ್ಮ ಆಟ ಆಡಬೇಕು. ತನ್ನ ವಲಯದಲ್ಲಿ ಸಾಧನೆ ಮಾಡಿರುವ ಮಹಿಳೆಯನ್ನು ಆಂಟಿ ಎಂದು ಸಂಬೋದಿಸುವುದು ತಪ್ಪು. ಅದರಲ್ಲಿ ನಿಮ್ಮ ವಯಸ್ಸು 37. ಆದ್ರೂ ಮತ್ತೊಬ್ಬರನ್ನು ಆಂಟಿ ಎಂದು ಕರೆಯುವ ನೈತಿಕತೆ ನಿಮಗಿಲ್ಲ ಎಂದು ನೇಹಾ ಬಸಿನ್ ಎಂಬವರು ಕರಣ್ ಚಳಿ ಬಿಡಿಸಿದ್ದಾರೆ.

    ಇದನ್ನು ಓದಿ: ರಾಜ್​ ಕುಂದ್ರಾ ಮನೆಗೆ ಮರಳಿದ ಬಳಿಕ ಮೊದಲ ಬಾರಿ ಮಾಧ್ಯಮದ ಮುಂದೆ ಮನಸಾರೆ ನಕ್ಕ ಶಿಲ್ಪಾ ಶೆಟ್ಟಿ

    ಶಮಿತಾ ಶೆಟ್ಟಿಯನ್ನು ಆಂಟಿ ಎಂದು ಕರೆಯುವ ವ್ಯಕ್ತಿಯ ವಯಸ್ಸು 37. ನಟಿಯ ಹಿಂದೆ ಈ ರೀತಿ ಮಾತನಾಡೋದು ಎಷ್ಟು ಸರಿ. ವೀಕೆಂಡ್ ಸಂಚಿಕೆಯಲ್ಲಿ ಸಲ್ಮಾನ್ ಖಾನ್ ಈ ವಿಷಯದ ಬಗ್ಗೆ ಎಲ್ಲ ಸ್ಪರ್ಧಿಗಳ ಜೊತೆ ಚರ್ಚೆ ನಡೆಸಬೇಕು. ರಿಯಾಲಿಟಿ ಶೋನಲ್ಲಿರುವ ಕ್ಯಾಮೆರಾಗಳು ಎಲ್ಲರನ್ನು ಗಮನಿಸುತ್ತಿರುತ್ತವೆ. ಹಾಗಾಗಿ ಸ್ಪರ್ಧೆಯಲ್ಲಿ ನಿಮ್ಮತನವನ್ನು ನೀವು ಕಳೆದುಕೊಳ್ಳಬೇಡಿ. ಆಡುವ ಮಾತುಗಳನ್ನ ನೇರವಾಗಿ ಆಡಿ. ಮತ್ತೊಬ್ಬರ ಬೆನ್ನಹಿಂದೆ ಮಾತುಗಳನ್ನಾಡುವ ಚಾಳಿ ಬಿಡಿ ಎಂದು ಶಮಿತಾ ಶೆಟ್ಟಿ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಇದನ್ನು ಓದಿ: KSMCL Recruitment: ರಾಜ್ಯ ಖನಿಜ ನಿಗಮದಲ್ಲಿ ನೇಮಕಾತಿ; ತಿಂಗಳಿಗೆ 55 ಸಾವಿರ ವೇತನ

    ಬಿಗ್‍ಬಾಸ್‍ನಲ್ಲಿ ಮೂರನೇ ಇನ್ನಿಂಗ್ಸ್:
    ಶಮಿತಾ ಶೆಟ್ಟಿ ಬಿಗ್‍ಬಾಸ್ ಮೂರನೇ ಸೀಸನ್ ನಲ್ಲಿ ಬಿಗ್ ಮನೆ ಪ್ರವೇಶಿಸಿದ್ದರು. ಆದ್ರೆ ಸೋದರಿ ಶಿಲ್ಪಾ ಶೆಟ್ಟಿ (Shilpa Shetty) ಮದುವೆ ಹಿನ್ನೆಲೆ ಅರ್ಧಕ್ಕೆ ರಿಯಾಲಿಟಿ ಶೋನಿಂದ ಹೊರ ಬಂದಿದ್ದರು. ಬಿಗ್‍ಬಾಸ್ ಓಟಿಟಿಯ ಮೊದಲ ಸೀಸನ್ ನಲ್ಲಿ ಸ್ಪರ್ಧಿಯಾಗಿದ್ದ ಶಮಿತಾ ಎರಡನೇ ರನ್ನರ್ ಅಪ್ ಆಗಿದ್ದರು. ಇದೀಗ ಮೂರನೇ ಬಾರಿ ಬಿಗ್‍ಬಾಸ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ್ದ ಶಮಿತಾ, ಪ್ರತಿಬಾರಿಯೂ ಹೊಸದನ್ನು ಕಲಿಯುವ ಅವಕಾಶ ಸಿಕ್ಕಿದೆ. ಮನೆಯಿಂದ ಹೊರ ಬಂದಾಗ ಸ್ಟ್ರಾಂಗ್ ಆಗಿದ್ದೇನೆ ಎಂದು ಹೇಳಿದ್ದರು.

    ಮಹ್ಮದ್​ ರಫೀಕ್​ ಕೆ
    Published by:Seema R
    First published: