Bigg Boss OTT: ಬಿಗ್​ ಬಾಸ್ ಮನೆಯಲ್ಲಿ ಊಟದ ಫೈಟ್​; ಅರ್ಜುನ್​-ರೂಪೇಶ್ ಶೆಟ್ಟಿ​ ನಡುವೆ ವಾರ್

ಬಿಗ್​ ಬಾಸ್ ಮನೆಯಲ್ಲಿ ರಾತ್ರಿ ಊಟದ ಬಳಿಕ ಎಲ್ಲರೂ ಒಳ್ಳೆಯ ನಿದ್ದೆಯ ಮೂಡ್​ನಲ್ಲಿದ್ದರು, ಆದ್ರೆ ರೂಪೇಶ್​ ಹಾಗೂ ಅರ್ಜುನ್​ ರಮೇಶ್​ ನಡುವಿನ ಗಲಾಟೆ ಸ್ಪರ್ಧಿಗಳ ನಿದ್ದೆಗೆಡಿಸಿದೆ. ರೂಪೇಶ್​ ಚಪಾತಿ ತಿನ್ನಲಾಗದೆ ಕಸದಬುಟ್ಟಿಗೆ ಬಿಸಾಡಿದ್ದಾರೆ.

ರೂಪೇಶ್​ ಶೆಟ್ಟಿ, ಅರ್ಜುನ್​

ರೂಪೇಶ್​ ಶೆಟ್ಟಿ, ಅರ್ಜುನ್​

  • Share this:
ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ (Bigg Boss)​ ಬಾರಿ ಓಟಿಟಿಯಲ್ಲಿ (OTT) ಪ್ರಸಾರವಾಗ್ತಿದ್ದುಜನರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಬಿಗ್ಬಾಸ್ಮನೆಯಲ್ಲಿ ಸ್ಪರ್ಧಿಗಳು (Contestants) ತಮ್ಮ ಜೀವನ ಅನೇಕ ವಿಚಾರವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಕಿತ್ತಾಟ ಕೂಡ ಸಹಜ, ಟಾಸ್ಕ್​ ವಿಚಾರಕ್ಕೆ ಗಲಾಟೆ ನಡೆದ್ರೆ ಮತ್ತೊಮ್ಮೆ ವೈಯಕ್ತಿಕ ವಿಚಾರಕ್ಕೂ ಜಗಳಗಳು ನಡೀತಾನೆ ಇರುತ್ತೆ. ಈ ಬಾರಿ ದೊಡ್ಮನೆಯಲ್ಲಿ ನಡೆದ ವಾರ್​ (War) ಗೆ ಕಾರಣವಾಗಿದ್ದು ಮಾತ್ರ, ಊಟದ ವಿಚಾರ. ಹೌದು ಊಟ ವೇಸ್ಟ್​ ಮಾಡಿದ್ದಕ್ಕೆ. ಅರ್ಜುನ್​ ಹಾಗೂ ರೂಪೇಶ್​ ಶೆಟ್ಟಿ (Roopesh ShettyBigg Boss) ನಡುವೆ ಬಿಗ್ ಫೈಟ್​ ನಡೆದಿದೆ.

ಊಟವನ್ನು ಕಸದ ಬುಟ್ಟಿಗೆ ಹಾಕಿದ್ದ ರೂಪೇಶ್​

ಬಿಗ್​ ಬಾಸ್ ಮನೆಯಲ್ಲಿ ರಾತ್ರಿ ಊಟದ ಬಳಿಕ ಎಲ್ಲರೂ ಒಳ್ಳೆಯ ನಿದ್ದೆಯ ಮೂಡ್​ನಲ್ಲಿದ್ದರು, ಆದ್ರೆ ರೂಪೇಶ್​ ಹಾಗೂ ಅರ್ಜುನ್​ ರಮೇಶ್​ ನಡುವಿನ ಗಲಾಟೆ ಸ್ಪರ್ಧಿಗಳ ನಿದ್ದೆಗೆಡಿಸಿದೆ. ರೂಪೇಶ್​ ಚಪಾತಿ ತಿನ್ನಲಾಗದೆ ಕಸದಬುಟ್ಟಿಗೆ ಬಿಸಾಡಿದ್ದಾರೆ.



ಕಸದ ಬುಟ್ಟಿಯಲ್ಲಿ ಊಟ ಬಿಸಾಡಿದ್ಯಾರು?

ಕಸದ ಬುಟ್ಟಿಯಲ್ಲಿ ಬಿಸಾಡಿರೋ ಚಪಾತಿ ನೋಡಿ ಸಿಟ್ಟಾದ ಅರ್ಜುನ್​ ರಮೇಶ್​, ಊಟ ಬಿಸಾಡಿದ್ದು ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ನಾನೇ ಎಂದ ರೂಪೇಶ್, ನಂಗೆ ತಿನ್ನಲು ಆಗಿಲ್ಲ ಹೀಗಾಗಿ ಬಿಸಾಡಿದೆ ಎಂದಿದ್ದಾರೆ. ಅವರ ಮಾತಿಗೆ ಕೋಪಗೊಂಡ ಅರ್ಜುನ್ ರಮೇಶ್, ಊಟದ ಬೆಲೆ ಗೊತ್ತಾ? ಎಂದು ಪ್ರಶ್ನೆ ಮಾಡಿದ್ದಾರೆ.

ನಂಗೆ ಊಟದ ಬೆಲೆ ಗೊತ್ತಿದೆ?

ರೂಪೇಶ್​ ಹಾಗೂ ಅರ್ಜುನ್ ನಡುವೆ ಮಾತಿಗೆ ಮಾತಿ ಬೆಳೆದಿದೆ. ಎಷ್ಟೋ ಜನರು ಹಸಿವಿನಿಂದ ಸಾಯುತ್ತಿರುತ್ತಾರೆ. ನೀನು ಊಟ ಬಿಸಾಡಿದ್ಯಾ ಎಂದು ಅರ್ಜುನ್ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ನಿಮ್​ ಮಾತು ವಾಪಸ್​ ತೆಗೆದುಕೊಳ್ಳಿ ಎಂದು ರೂಪೇಶ್​ ಸಿಟ್ಟಾಗಿದ್ದಾರೆ.

ನನ್ನ ಕ್ಯಾರೆಕ್ಟರ್​ ಹಾಳು ಮಾಡಿದ್ದಾರೆ

ಪ್ರತಿಸಲ ನಾನು ಬುದ್ದಿವಾದ ಹೇಳಿಸಿಕೊಳ್ಳುವಷ್ಟು ಸಣ್ಣವನಲ್ಲ ಎಂದು ರೂಪೇಶ್​ ಕೂಗಾಡಿದ್ರು. ನನ್ನ ಕ್ಯಾರೆಕ್ಟರ್​ ಹಾಳು ಮಾಡ್ತಿದ್ದಾನೆ ಎಂದು ರೂಪೇಶ್​ ಕೂಗಾಡಿದ್ದಾರೆ. ಇದಕ್ಕೆ ಯಾರು ಯಾರ ಕ್ಯಾರೆಕ್ಟರ್​ ನನ್ನು ಹಾಳು ಮಾಡಲು ಸಾಧ್ಯವಿಲ್ಲ ಎಂದು ಅರ್ಜುನ್ ರಮೇಶ್​ ಹೇಳಿದ್ರು.

ಏನ್​ ಅಂದು ಕೊಂಡಿದ್ದಾನೆ ಎಂದ ರೂಪೇಶ್​

ಏಕವಚನದಲ್ಲಿ ಇಬ್ಬರು ಬೈಯ್ದಾಡಿಕೊಂಡಿದ್ದಾರೆ. ಅವನು ನನ್ನ ಬಗ್ಗೆ ಮಾತಾಡ್ತಿದ್ದಾನೆ ಎಂದು ರೂಪೇಶ್ ಹೇಳಿದ ಮಾತಿಗೆ ಸಿಟ್ಟಾದ ಅರ್ಜುನ್​, ಏನು ನೀನು, ತಾನು ಅಂತಿದ್ದೀಯಾ ಎಂದು ಮತ್ತಷ್ಟು ಕೋಪಗೊಂಡರು ಬಳಿಕ ಬಿಗ್​ ಬಾಸ್ ಮನೆ ಮಂದಿಯೆಲ್ಲಾ ಸೇರಿ ಇಬ್ಬರ ಜಗಳ ಬಿಡಿಸಿದ್ದಾರೆ.

ಇದನ್ನೂ ಓದಿ: Bigg Boss OTT: ಮೊದಲ ದಿನವೇ ಕಷ್ಟದ ಕಥೆ ಹೇಳಿಕೊಂಡು ಕಣ್ಣೀರಿಟ್ಟ ಸ್ಪರ್ಧಿಗಳು, ಫುಲ್ ಎಮೋಷನಲ್​ ಎಪಿಸೋಡ್

ಈ ಹಿಂದೆ ಗುರೂಜಿ, ಉದಯ್ ನಡುವೆ ಫೈಟ್​
ಬಿಗ್​ ಬಾಸ್​ ನೀಡಿದ್ದ ಟಾಸ್ಕ್​ ಆಡುತ್ತಿದ್ದ ವೇಳೆ ಉದಯ್​ರನ್ನು ಆರ್ಯವರ್ಧನ್​ ಗುರೂಜಿ ತಳ್ಳಿದ್ರಂತೆ, ಹೀಗಂತ ಉದಯ್​ ಗಲಾಟೆ ತೆಗೆದಿದ್ದಾರೆ. ಬಳಿಕ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ನನ್ನ ಯಾಕೆ ತಳ್ಳಿದ್ರಿ ಎಂದು ಉದಯ್ ಪ್ರಶ್ನೆ ಮಾಡಿದ್ರು. ನಾನು ನಿನ್ನನ್ನು ತಳ್ಳಿಲ್ಲ ನಾನು ಗೇಮ್​ ಆಡಿದೆ ಅಷ್ಟೇ ಎಂದು ಆರ್ಯವರ್ಧನ್​ ಗುರೂಜಿ ಹೇಳಿದ್ದರು.




ಇಲ್ಲ ನೀವೇ ನನ್ನನ್ನು ತಳ್ಳಿದ್ದು ಎಂದು ಉದಯ್​ ರಂಪಾಟ ಮಾಡಿದ್ರು. ಗುರೂಜಿ ಏನ್​ ನನ್ನನ್ನೇ ಹೊಡಿಯೋಕೆ ಬರ್ತೀಯಾ, ಸರಿಯಾಗಿ ಮಾತಾಡು ಎಂದು ಏರು ಧ್ವನಿಯಲ್ಲಿ ಕೂಗಾಡಿದ್ದರು. ನಾನು ತಳ್ಳಿಲ್ಲ. ನಾನೇನಾದ್ರೂ  ತಳ್ಳಿದ್ರೆ ನೀನು 22 ಅಡಿ ದೂರ ಹೋಗಿ ಬೀಳ್ತೀಯಾ ಎಂದು ಅವಾಜ್​ ಹಾಕಿದ್ದರು

Published by:Pavana HS
First published: