Jothe Jotheyali: ಆಫೀಸ್ ಕಡೆ ಖುಷಿಯಿಂದ ಹೆಜ್ಜೆ ಹಾಕಿದ ಹರ್ಷ! ತಾನು ಕಳೆದುಕೊಂಡ ಜೀವನವನ್ನು ಮತ್ತೆ ಹರ್ಷನಿಗೆ ನೀಡುತ್ತಾಳಾ ಅನು?

ಮುದ್ದಿನ ತಮ್ಮನಿಗೆ ಜೊತೆಯಲ್ಲಿ ನಿಂತು ಧೈರ್ಯ ತುಂಬುತ್ತಿದ್ದಾಳೆ. ಹರ್ಷ ಇಷ್ಟ ಪಟ್ಟದ್ದೆಲ್ಲವನ್ನು ನೀಡುತ್ತಿದ್ದಾಳೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಜೊತೆ ಜೊತೆಯಲಿ (Jothe Jotheyali) ಧಾರಾವಾಹಿಯಲ್ಲಿ ಸತ್ಯ ಹೇಳೋಕೆ ಬಂದ ಅನು, ಆರ್ಯವರ್ಧನ್‌ಗೆ ಏನೂ ಹೇಳೋಕೆ ಆಗದೆ ಒದ್ದಾಡುತ್ತಿದ್ದಾಳೆ. ಆರ್ಯವರ್ಧನ್ (Arya Vardhan) ಖಳನಾಯಕನಾದರೆ ಧಾರಾವಾಹಿ ನೋಡಲ್ಲ ಎಂದಿದ್ದೋರು ಈಗ ಅನಿರುದ್ಧ ಅವರ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ 'ಜೊತೆ ಜೊತೆಯಲಿ' ಧಾರಾವಾಹಿಯ ಎಪಿಸೋಡ್‌ (Episode) ದಿನದಿಂದ ದಿನಕ್ಕೆ ರೋಚಕವಾಗಿ ಮೂಡಿಬರುತ್ತಿದೆ. ಆರಂಭದಿಂದಲೂ ಈ ಧಾರಾವಾಹಿ ಟಾಪ್ 5ರೊಳಗಡೆ ಸ್ಥಾನ ಪಡೆದಿದೆ. ಸದ್ಯ ಜೊತೆ ಜೊತೆಯಲಿ ಧಾರಾವಾಹಿ ಎಲ್ಲರ ಮನಸ್ಸನ್ನು ಹಿಡಿದಿಟ್ಟುಕೊಂಡು ಬಿಟ್ಟಿದೆ. ಧಾರಾವಾಹಿಯಲ್ಲಿ ಇತ್ತೀಚೆಗೆ ಬಂದಂತ ಒಂದೊಂದು ಟ್ವಿಸ್ಟ್ (Twist) ನಲ್ಲಿ ಕುತೂಹಲ ಹೆಚ್ಚು ಮಾಡಿದೆ. ಸೀಕ್ರೇಟ್ ಕೋಣೆಯಲ್ಲಿದ್ದ ರಾಜನಂದಿನಿ (Rajanandhini) ಜಗಜ್ಜಾಹಿರಾಗಿದ್ದಾಳೆ.

  ನಾನೇ ರಾಜನಂದಿನಿಯ ಪುನರ್ಜನ್ಮ ಎನ್ನುವುದು ಇದೀಗ ಅನುಗೆ ಸಂಪೂರ್ಣವಾಗಿ ಸತ್ಯ ಗೊತ್ತಾಗಿದೆ. ಇದರಿಂದಾಗಿ ಆರ್ಯ ಮಾಡಿದ ಮೋಸವೂ ಗೊತ್ತಾಗಿದೆ. ಆಸ್ತಿಗಾಗಿ ರಾಜನಂದಿಯ ಪ್ರಾಣವನ್ನು ತೆಗೆದಿದ್ದಾನೆ.  ರಾಜನಂದಿನಿ ತೀರಿಕೊಂಡ ಬಳಿಕ ಜನಿಸಿದ್ದೆ ಅನುಸಿರಿಮನೆ.

  ಆದರೆ ಈಗ ಅನು ಸೇಡು ತೀರಿಸಿಕೊಳ್ಳಬೇಕು ನಿಜ. ಆದರೆ ಸುಮ್ಮನೆ ರಿಯಾಕ್ಟ್ ಮಾಡುವುದರಲ್ಲಿ ಅರ್ಥವಿರುವುದಿಲ್ಲ. ಅದು ಸಕ್ಸಸ್ ಕೂಡ ಆಗುವುದಿಲ್ಲ. ಅದಕ್ಕಾಗಿಯೇ ಅನು ಕೂಡ ಆರ್ಯನಂತೆ ಫ್ಲ್ಯಾನ್ ಮಾಡಿದ್ದಾಳೆ. ಏನು ಗೊತ್ತಿಲ್ಲದವಳಂತೆ ಇದ್ದು ಆರ್ಯ ಆಂಡ್ ಗ್ಯಾಂಗ್ ಗೆ ಬುದ್ದಿ ಕಲಿಸಲು ನಿಶ್ಚಯಿಸಿದ್ದಾಳೆ. ಅದಕ್ಕಾಗಿಯೇ ವಠಾರ ಬಿಟ್ಟು ವರ್ಧನ್ ಮನೆಗೆ ಮತ್ತೆ ಬಂದಿದ್ದಾಳೆ.

  ಜೊತೆ ಜೊತೆಯಲಿ ಧಾರಾವಾಹಿಯ ಕಥೆ ಏನು?

  ಆರ್ಯವರ್ಧನ್ ಮೂಲ ಹೆಸರು ಸಂಜಯ್ ಪಾಟೀಲ್. ಆರ್ಯವರ್ಧನ್ ಶಾರದಾ ದೇವಿಯ ಅಳಿಯ. ಶಾರದಾ ದೇವಿಯ ಪುತ್ರಿ ರಾಜನಂದಿನಿ ಎಂಬುದು ಅನುಗೆ ಗೊತ್ತಾಗಿದೆ.

  ಆರ್ಯವರ್ಧನ್ ಹಳೇ ವಿಚಾರಗಳ ಬಗ್ಗೆ ಅನು ಸಿರಿಮನೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾಳೆ. ರಾಜನಂದಿನಿ ಗೊತ್ತೋ ಗೊತ್ತಿಲ್ಲದೆ ಅನುಗೆ ಪದೇ ಪದೇ ದೊಡ್ಡ ಪ್ರಶ್ನೆಯಾಗುತ್ತಿದ್ದಾಳೆ.

  ಇದನ್ನೂ ಓದಿ: Sathya Serial: ಬಾಲನ ಸುಳ್ಳಿನ ಅರಮನೆಯಲ್ಲಿ ಸಿಲುಕಿದಳಾ ದಿವ್ಯಾ? ಮುಂದೆ ಏನ್ ಮಾಡ್ತಾಳೆ ಸತ್ಯಾ?

  ಆರ್ಯವರ್ಧನ್ ಖಳನಾಯಕನಾದರೆ ಧಾರಾವಾಹಿ ನೋಡಲ್ಲ ಎಂದಿದ್ದೋರು ಈಗ ಅನಿರುದ್ಧ ಅವರ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ 'ಜೊತೆ ಜೊತೆಯಲಿ' ಧಾರಾವಾಹಿಯ ಎಪಿಸೋಡ್‌ ದಿನದಿಂದ ದಿನಕ್ಕೆ ರೋಚಕವಾಗಿ ಮೂಡಿಬರುತ್ತಿದೆ. ಆರಂಭದಿಂದಲೂ ಈ ಧಾರಾವಾಹಿ ಟಾಪ್ 5ರೊಳಗಡೆ ಸ್ಥಾನ ಪಡೆದಿದೆ.

  ತಮ್ಮನಿಗೆ ಧೈರ್ಯ ತುಂಬುತ್ತಿದ್ದಾಳೆ ಅನು

  ಮುದ್ದಿನ ತಮ್ಮನಿಗೆ ಜೊತೆಯಲ್ಲಿ ನಿಂತು ಧೈರ್ಯ ತುಂಬುತ್ತಿದ್ದಾಳೆ. ಹರ್ಷ ಇಷ್ಟ ಪಟ್ಟದ್ದೆಲ್ಲವನ್ನು ನೀಡುತ್ತಿದ್ದಾಳೆ. ಆರ್ಯ ಅದೆಷ್ಟು ಬುದ್ಧಿವಂತನೆಂದರೆ ಎಲ್ಲರನ್ನು ತನ್ನ ಸುಳ್ಳಿನ ಕೋಟೆಯಿಂದಲೇ ಕ್ರೂಢೀಕರಿಸಿದ್ದಾನೆ.  ಎಲ್ಲಾ ಮಾತನ್ನು ಪ್ರಾಮಾಣಿಕವಾಗಿ ನಂಬುವಂತೆ ಮಾಡಿದ್ದಾನೆ. ಬೇರೆಯವರ ವೀಕ್ನೇಸ್ ನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಇಷ್ಟು ದಿನ ಬದುಕಿದ್ದಾನೆ.

  ರಾಜನಂದಿನಿಯೇ ನನ್ನ ಸರ್ವಸ್ವ, ನಿಮ್ಮ ಬದುಕು ಚೆನ್ನಾಗಿರಬೇಕೆಂದೆ ನಾನು ದುಡಿಯುತ್ತೇನೆ ಎಂಬ ಕಥೆ ಕಟ್ಟಿದ್ದಾನೆ. ಹರ್ಷ ಇನ್ನು ಸಣ್ಣವನು, ಅವನಿಗೆ ವ್ಯಾವಹಾರಿಕ ಜ್ಞಾನ ಇಲ್ಲ ಎಂದು ಎಲ್ಲರಿಗೂ ತೋರಿಸಿ ತಾನೊಬ್ಬನೇ ರಾಜ್ಯ ಭಾರ ಮಾಡುತ್ತಿದ್ದ. ಇದೀಗ ಅನು ರಾಜನಂದಿನಿಯಾಗಿ ಎಲ್ಲವನ್ನು ಬದಲಾಯಿಸುತ್ತಿದ್ದಾಳೆ. ಇಷ್ಟು ದಿನ ಮಂಕಾಗಿದ್ದ ಅನು ಮುಖದಲ್ಲಿ ನಗು ಕಾಣುತ್ತಿದೆ.

  ಇದನ್ನೂ ಓದಿ: Hitler Kalyana: ಲೀಲಾಳ ತಂದೆಗೆ ಅವಮಾನಿಸಲು ಸಂಚು ಮಾಡುತ್ತಿರುವ ದುರ್ಗಾ, ತಂದೆಯನ್ನು ಪಾರು ಮಾಡ್ತಾಳಾ ಲೀಲಾ?

  ಹರ್ಷನಿಗೆ ಕಾರು ಓಡಿಸಲು ಬಹಳ ಆಸಕ್ತಿ ಇದ್ದರೂ ತನ್ನ ಒಳ್ಳೆತನದಿಂದ ಹರ್ಷನ ಮನ ಕೆಡಿಸಿ ಡ್ರೈವರ್ ಜೊತೆಗೆನೇ ಕಾರಿನಲ್ಲಿ ಪ್ರಯಾಣಿಸುವಂತೆ ಮಾಡಿದ್ದಾನೆ ಆರ್ಯವರ್ಧನ್. ಈ ಬಗ್ಗೆ ತಿಳಿದುಕೊಂಡ ಅನು ಹರ್ಷನನ್ನು ಪ್ರಶ್ನಿಸಿ ಆತನೇ ಕಾರು ಓಡಿಸಿಕೊಂಡು ಹೋಗುವಂತೆ ಪ್ರೇರೇಪಿಸಿದ್ದಾಳೆ.

  ಬಹಳ ಸಂತೋಷದಿಂದಲೇ ಹರ್ಷ ಅನು ಸಿರಿಮನೆ ಜೊತೆಗೆ ಆಫೀಸ್ ಕಡೆ ಪ್ರಯಾಣ ಬೆಳೆಸಿದ್ದಾರೆ. ಈ ಮಧ್ಯೆ ಅನು ಹರ್ಷನ ಹಳೆಯ ಜೀವನದ ಬಗ್ಗೆ ಪ್ರಶ್ನಿಸಿ ಉತ್ತರಕ್ಕಾಗಿ ಕಾಯುತ್ತಿದ್ದಾಳೆ ಈ ಬಗ್ಗೆ ಇನ್ನೇನು ಹೊಸ ಟ್ವಿಸ್ಟ್ ಆಗುತ್ತದೆ ಎಂದು ಮುಂದಿನ ಸಂಚಿಕೆಗಳಲ್ಲಿ ತಿಳಿಯಬಹುದು.
  Published by:Swathi Nayak
  First published: