ಜೊತೆ ಜೊತೆಯಲಿ Serialನಲ್ಲಿ ಬಿಗ್ ಟ್ವಿಸ್ಟ್ : ಹೀರೋ ಆಗಿದ್ದ ಆರ್ಯವರ್ಧನ್ ಇದ್ದಕ್ಕಿದ್ದಂತೆ villain ಆಗಿದ್ದು ಯಾಕೆ..?

Jothe Jotheyali Serial: ಸರಳ ಸಜ್ಜನಿಕೆ ನಡೆಯಿಂದ ಧಾರವಾಹಿಯಲ್ಲಿ ಎಲ್ಲರ ಮನಗೆದ್ದಿದ್ದ ಆರ್ಯವರ್ಧನ್ ಈಗ ವಿಲನ್ ಪಾತ್ರಧಾರಿಯಾಗಿ ಬದಲಾಗಿದ್ದಾರೆ.. ರಾಜನಂದಿನಿ ಆಸ್ತಿ ವಿಚಾರ ಬಯಲಾಗುತ್ತಿದ್ದಂತೆ ಕಥೆಯಲ್ಲಿ ಆಸ್ತಿ ಪಡೆಯಲು ಹೊಂಚುಹಾಕುವ ಖಳನಾಯಕನಾಗಿ ಆರ್ಯವರ್ಧನ್ ಕಾಣಿಸಿಕೊಳ್ಳುತ್ತಿರುವುದು ಜೊತೆ ಜೊತೆಯಲಿ ಧಾರಾವಾಹಿ ಅಭಿಮಾನಿಗಳಿಗೆ ಆಶ್ಚರ್ಯ ಉಂಟುಮಾಡಿದೆ

ಜೊತೆ ಜೊತೆಯಲಿ ಸೀರಿಯಲ್

ಜೊತೆ ಜೊತೆಯಲಿ ಸೀರಿಯಲ್

 • Share this:
  ಜೀ ಕನ್ನಡ(Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ‘ಜೊತೆ ಜೊತೆಯಲಿ’(Jothe Jotheyali) ಕೂಡ ಒಂದು. ವೀಕ್ಷಕರ ಮನ ಗೆದ್ದಿರುವ ‘ಜೊತೆ ಜೊತೆಯಲಿ’ ಧಾರಾವಾಹಿ ಮೊದಲಿನಿಂದಲೂ ಟಿಆರ್‌ಪಿ(TRP) ಪಟ್ಟಿಯಲ್ಲಿ ಟಾಪ್‌ನಲ್ಲೇ ಇದೆ. ಇದೀಗ ‘ಜೊತೆ ಜೊತೆಯಲಿ’ ಸೀರಿಯಲ್‌ನಲ್ಲಿ ಅನು ಸಿರಿಮನೆ(Anu Sirimane) ಮತ್ತು ಆರ್ಯವರ್ಧನ್ (Aryavardhan) ವಿವಾಹ ಮಹೋತ್ಸವ ಜರುಗಿದ ಬಳಿಕ ಕಥೆಯ ತಿರುವಿನಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿದ್ದು ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ. ಮೊದಲಿನಿಂದಲೂ ವಿಭಿನ್ನ ಕಥೆಯ(Different Story) ಮೂಲಕ ಗಮನಸೆಳೆಯುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿರುವುದರ ಜೊತಗೆ, ಹೊಸ ಟ್ವಿಸ್ಟ್ ಕೂಡ ನೀಡುತ್ತಿದೆ... ಇಷ್ಟು ದಿನ ಸೀರಿಯಲ್ನಲ್ಲಿ ನಾಯಕ ಪಾತ್ರಧಾರಿ ಆರ್ಯವರ್ಧನ್ ತಮ್ಮ ಸರಳ ಸಜ್ಜನಿಕೆಯ ನಡೆಯಿಂದ ಎಲ್ಲರ ಮನಗೆದ್ದಿದ್ದರು.. ಆದರೆ ಈಗ ಧಾರಾವಾಹಿಯಲ್ಲಿ ಆರ್ಯವರ್ಧನ್ ಅವರನ್ನು ವಿಲನ್ ರೀತಿ ತೋರುತ್ತಿರುವುದು ಧಾರಾವಾಹಿಯ ಅಭಿಮಾನಿಗಳಲ್ಲಿ ಗೊಂದಲದ ಜೊತೆಗೆ ಆಶ್ಚರ್ಯ ಕೂಡ ಉಂಟು ಮಾಡಿದೆ.

  ಜೊತೆ ಜೊತೆಯಲಿ ಸೀರಿಯಲ್ ಹೀರೋನೇ ವಿಲನ್..?

  20ರ ಹರೆಯದ ಹುಡುಗಿ 45ರ ಮಧ್ಯವಯಸ್ಕ ನಡುವೆ ಮೂಡುವ ಪ್ರೀತಿಯ ಕಥಾಹಂದರವುಳ್ಳ ಜೊತೆ ಜೊತೆಯಲಿ ಸೀರಿಯಲ್, ಮೊದಲ ಭಾಗದಲ್ಲಿ ಅನುಸಿರಿಮನೆ ಹಾಗೂ ಆರ್ಯವರ್ಧನ್ ನಡುವಿನ ಪ್ರೇಮ ಪುರಾಣ ಇತ್ತು. ಅಲ್ಲದೆ ಆ ಪ್ರೇಮ ಮದುವೆಯ ಹಂತಕ್ಕೆ ಬಂದು ಅವರಿಬ್ಬರೂ ಯಶಸ್ವಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದರ ನಡುವೆ ಕಥೆ ಸುಖಾಂತ್ಯ ಕಾಣುತ್ತಿದೆ ಎನ್ನುವಾಗಲೇ ಆರ್ಯವರ್ಧನ್ ಹೆಂಡತಿ ರಾಜನಂದಿನಿ ಪಾತ್ರ ಕಥೆಯಲ್ಲಿ ಕಾಣಿಸಿಕೊಂಡಿದ್ದು, . ಆರ್ಯವರ್ಧನ್ ಮೊದಲ ಹೆಂಡತಿ ರಾಜ ನಂದಿನಿ ಆಗಾಗ ಅನು ಸಿರಿಮನೆ ಮೈಮೇಲೆ ಬರಲಾರಂಭಿಸಿದಳು. ಇದೊಂಥರ ಆಪ್ತಮಿತ್ರದ ಸ್ಟೈಲ್ ಪಡ್ಕೊಳ್ತಿದೆ ಅನ್ನುವಾಗ ಅದು ಬದಲಾಗಿ ಅನು ಹಾಗೂ ಆರ್ಯರ ನಡುವೆ ರೋಮ್ಯಾಂಟಿಕ್ ದೃಶ್ಯಗಳು ಕಾಣಿಸಿಕೊಂಡಿದ್ದವು.. ಇದೇ ದೃಶ್ಯಗಳು ಕಂಟಿನ್ಯೂ ಆಗುತ್ತೆ ಅನ್ನುವಾಗಲೇ ಇಡೀ ಧಾರಾವಾಹಿಯಲ್ಲಿ ಆಶ್ಚರ್ಯ ಎನಿಸುವಂತಹ ಬೆಳವಣಿಗೆ ನಡೆದಿದೆ.

  ಇದನ್ನೂ ಓದಿ: ಧಾರಾವಾಹಿಯಲ್ಲಿ ಮೇಜರ್​ ಟ್ವಿಸ್ಟ್​: ಕಿರುತೆರೆಗೆ `ಅಮೃತವರ್ಷಿಣಿ’ ರಜಿನಿ ರೀ ಎಂಟ್ರಿ!

  ಹೌದು ಸರಳ ಸಜ್ಜನಿಕೆ ನಡೆಯಿಂದ ಧಾರವಾಹಿಯಲ್ಲಿ ಎಲ್ಲರ ಮನಗೆದ್ದಿದ್ದ ಆರ್ಯವರ್ಧನ್ ಈಗ ವಿಲನ್ ಪಾತ್ರಧಾರಿಯಾಗಿ ಬದಲಾಗಿದ್ದಾರೆ.. ರಾಜನಂದಿನಿ ಆಸ್ತಿ ವಿಚಾರ ಬಯಲಾಗುತ್ತಿದ್ದಂತೆ ಕಥೆಯಲ್ಲಿ ಆಸ್ತಿ ಪಡೆಯಲು ಹೊಂಚುಹಾಕುವ ಖಳನಾಯಕನಾಗಿ ಆರ್ಯವರ್ಧನ್ ಕಾಣಿಸಿಕೊಳ್ಳುತ್ತಿರುವುದು ಜೊತೆ ಜೊತೆಯಲಿ ಧಾರಾವಾಹಿ ಅಭಿಮಾನಿಗಳಿಗೆ ಆಶ್ಚರ್ಯ ಉಂಟುಮಾಡಿದೆ.

  ರಿಸ್ಕ್ ತೆಗೆದುಕೊಳ್ಳುತ್ತಿದ್ದಾರಾ ಸೀರಿಯಲ್ ನಿರ್ದೇಶಕರು..?

  ಸಾಮಾನ್ಯವಾಗಿ ನಾವು ಬಾಲಿವುಡ್ ಸಿನಿಮಾಗಳಲ್ಲಿ ಆರಂಭದಲ್ಲಿ ಹೀರೋ ಆಗಿದ್ದ ನಾಯಕ ಸಿನಿಮಾ ಮಧ್ಯ ಅಂತಕ್ಕೆ ಬಂದಾಗ ವಿಲನ್ ಆಗಿ ಬದಲಾಗುವ ಅನೇಕ ಕತೆಗಳ ಸಿನಿಮಾಗಳನ್ನು ನೋಡಿದ್ದೇವೆ. ಆದರೆ ಈ ರೀತಿ ನೆಗೆಟಿವ್ ಶೇಡ್ ಪಡೆದುಕೊಂಡು ವಿಲನ್ ಆಗುವ ಧಾರಾವಾಹಿಗಳು ಕನ್ನಡದಲ್ಲಿ ಕಡಿಮೆ. ಆದರೆ ಜೊತೆ ಜೊತೆಯಲ್ಲಿ ಸೀರಿಯಲ್ ನಲ್ಲಿ ನಾಯಕನ ಪಾತ್ರವೇ ಸಡನ್ನಾಗಿ ನೆಗೆಟಿವ್ ಶೇಡ್ ಪಡೆದುಕೊಂಡಿದೆ.. ಆದ್ರೆ ಇಂಥಾ ಟ್ರಿಕ್ ಅನ್ನು ಸೀರಿಯಲ್ ವೀಕ್ಷಕರು ಒಪ್ಪಿಕೊಳ್ಳಲಿಕ್ಕಿಲ್ಲ ಅನ್ನೋದು ಒಂದು ವಾದ. ಇದರ ಪರಿಣಾಮ ಟಿಆರ್ಪಿ ಢಂ ಆದ್ರೆ ಸೀರಿಯಲ್‌ಅನ್ನೇ ನಿಲ್ಲಿಸಬೇಕಾಗುತ್ತೆ, ಈ ರಿಸ್ಕ್ ತಗೊಳ್ಳೋಕೆ ಯಾವ ಸೀರಿಯಲ್‌ ತಂಡಗಳೂ ರೆಡಿ ಇಲ್ಲ. ಆದರೆ ಆರೂರು ಜಗದೀಶ್‌ ಅವರಂಥಾ ಅನುಭವಿ ನಿರ್ದೇಶಕರು ಹೀಗೊಂದು ಹೊಸ ಹೆಜ್ಜೆ ತಗೊಂಡಿದ್ದಾರೆ.

  ಇದನ್ನೂ ಓದಿ: ಕೊನೆ ಹಂತದಲ್ಲಿ ಮತ್ತೊಂದು ಕನ್ನಡದ ಫೇಮಸ್​ ಸೀರಿಯಲ್: ಕೆಲವೇ ದಿನಗಳಲ್ಲಿ ಅಂತ್ಯವಾಗುತ್ತಾ `ನಾಗಿಣಿ 2’?

  ಆರ್ಯವರ್ಧನ್ ಅವರನ್ನು ವಿಲನ್ ಮಾಡದಂತೆ ಅಭಿಮಾನಿಗಳ ಮನವಿ

  ಇನ್ನು ಆರ್ಯವರ್ಧನ್ ಅವರನ್ನು ವಿಲನ್ ಮಾಡುತ್ತಿರುವುದಕ್ಕೆ ಸೀರಿಯಲ್ ಟೀಮ್‌ ವಿರುದ್ಧ ಸಿಟ್ಟಿಗೆದ್ದಿದ್ದಾರೆ. ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ್ ಈ ಬಗ್ಗೆ ಜನರನ್ನು ಸಮಾಧಾನಿಸಲು ಪ್ರಯತ್ನಿಸಿದ್ದಾರೆ. ಹೊಸದನ್ನು ಒಪ್ಪಿಕೊಳ್ಳಲು ಸಿದ್ಧರಿರಬೇಕು ಅಂತ ತಿಳಿಹೇಳಿದ್ದಾರೆ. ತಾನು ಈ ನೆಗೆಟಿವ್ ಶೇಡ್ ಅನ್ನು ಖುಷಿಯಿಂದ ಎನ್ ಜಾಯ್ ಮಾಡುತ್ತಿರೋದಾಗಿಯೂ ಹೇಳಿದ್ದಾರೆ. ಒಂದು ವರ್ಗದ ಜನ ಇದೂ ಒಂದು ಗಿಮಿಕ್. ಆರ್ಯವರ್ಧನ್ ಈ ಎಲ್ಲದರಿಂದ ಶೀಘ್ರದಲ್ಲೇ ಹೊರಬರ್ತಾರೆ ಅನ್ನೋ ವಿಶ್ವಾಸ ಇಟ್ಟಿದ್ದಾರೆ. ಇನ್ನೊಂದು ವರ್ಗದವರು ಮಾತ್ರ ಇಷ್ಟು ಸಮಯ ಹೀರೋ ಆಗಿ ಆರಾಧಿಸುತ್ತಿದ್ದ ಆರ್ಯವರ್ಧನ್ ಅನ್ನು ಸಡನ್ನಾಗಿ ವಿಲನ್ ಛಾಯೆಯಲ್ಲಿ ನೋಡೋದಕ್ಕಾಗ್ತಿಲ್ಲ. ದಯಮಾಡಿ ಕಥೆ ಬದಲಿಸಿ ಎಂದು ಪದೇ ಪದೇ ಸೀರಿಯಲ್‌ ಟೀಮ್‌ಗೆ ರಿಕ್ವೆಸ್ಟ್‌ ಕಳಿಸುತ್ತಿದ್ದಾರೆ.
  Published by:ranjumbkgowda1 ranjumbkgowda1
  First published: