ಸಿನಿಮಾ ಕೆಲಸಗಳಿಗೆ ಅಂಬರೀಶ್ ಸಮಾಧಿ ಅಡ್ಡಿ?; ಕಂಠೀರವ ಸ್ಟುಡಿಯೋಗೆ ಭಾರೀ ನಷ್ಟ!

ಸಿನಿಮಾ ಮುಹೂರ್ತ ನಡೆದರೆ ಕಂಠೀರವ ಸ್ಟುಡಿಯೋಗೆ ಆದಾಯ. ಈಗ ಅಂಬಿ ಸಮಾಧಿಯಿಂದ ಅಶುಭ ಎಂಬ ವಿಚಿತ್ರ ನಂಬಿಕೆಯಿಂದ ಸ್ಟುಡಿಯೋಗೆ ನಷ್ಟವಾಗುತ್ತಿದೆ ಎಂಬುದು ಮೂಲಗಳ ಮಾತು.

Rajesh Duggumane | news18
Updated:August 1, 2019, 12:11 PM IST
ಸಿನಿಮಾ ಕೆಲಸಗಳಿಗೆ ಅಂಬರೀಶ್ ಸಮಾಧಿ ಅಡ್ಡಿ?; ಕಂಠೀರವ ಸ್ಟುಡಿಯೋಗೆ ಭಾರೀ ನಷ್ಟ!
ಅಂಬರೀಶ್​ ಮತ್ತು ಸಮಾಧಿ
  • News18
  • Last Updated: August 1, 2019, 12:11 PM IST
  • Share this:
ಬೆಂಗಳೂರು (ಅ.1): ಸ್ಯಾಂಡಲ್​ವುಡ್​ನ ಸಿನಿಮಾ ಕೆಲಸಗಳಿಗೆ ಕಂಠೀರವ ಸ್ಟುಡಿಯೋ ಕೇಂದ್ರ ಬಿಂದು ಎಂದರೂ ತಪ್ಪಾಗಲಾರದು. ಇಲ್ಲಿ ಅನೇಕ ಚಿತ್ರಗಳ ಮುಹೂರ್ತಗಳು  ನೆರವೇರುತ್ತವೆ. ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ ವರನಟ ರಾಜ್​ಕುಮಾರ್​, ನಿರ್ಮಾಪಕಿ ಪಾರ್ವತಮ್ಮ ಹಾಗೂ ರೆಬೆಲ್​ ಸ್ಟಾರ್​ ಅಂಬರೀಶ್​ ಅವರನ್ನು ಇಲ್ಲಿಯೇ ಮಣ್ಣು ಮಾಡಲಾಗಿದೆ. ಈಗ ಇದೇ ವಿಚಾರ ಸಿನಿಮಾ ಕೆಲಸಗಳಿಗೆ ಅಡ್ಡಿಯಾಗುತ್ತಿದೆ ಎನ್ನುವ ಮಾತು ಕೇಳಿ ಬಂದಿದೆ!

ಹೌದು, ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್​ ಅಂತ್ಯಸಂಸ್ಕಾರ ಮಾಡಿದ ನಂತರದಲ್ಲಿ ಇಲ್ಲಿ ಸಿನಿಮಾ ಕೆಲಸಗಳು ಕಡಿಮೆ ಆಗಿವೆಯಂತೆ! ಹೀಗೆಂದು ಸ್ವತಃ ನಿರ್ಮಾಪಕರೇ ಮಾತನಾಡಿಕೊಳ್ಳುತ್ತಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಅಂಬರೀಶ್​ ಕಳೆದ ವರ್ಷ ಮೃತಪಟ್ಟಿದ್ದರು. ಕಂಠೀರವ ಸ್ಟುಡಿಯೋದಲ್ಲಿ ಅವರ ಅಂತ್ಯಸಂಸ್ಕಾರ ನಡೆದಿತ್ತು. ಸ್ಮಾರಕ ಕಟ್ಟುವ ಕೆಲಸಗಳಿಗೆ ಇನ್ನಷ್ಟೇ ಚಾಲನೆ ಸಿಗಬೇಕಿದೆ. ಹಾಗಾಗಿ, ಸಮಾಧಿ ಇದ್ದ ಕಡೆ ಶುಭ ಕಾರ್ಯ ಹೇಗೆ ಮಾಡುವುದು ಎಂಬ ನಂಬಿಕೆ ಇಟ್ಟುಕೊಂಡಿರುವ ಅನೇಕ ನಿರ್ಮಾಪಕರು ಇಲ್ಲಿ ಸಿನಿಮಾ ಮುಹೂರ್ತ ನಡೆಸಲು ಹಿಂದೇಟು ಹಾಕುತ್ತಿದ್ದಾರಂತೆ!

ಈ ಬಗ್ಗೆ ನ್ಯೂಸ್​18 ಜೊತೆ ಮಾತನಾಡಿರುವ ಹೆಸರು ಹೇಳಲು ಇಚ್ಛಿಸದ ಕೆಲ ನಿರ್ಮಾಪಕರು, “ಈ ಸಮಸ್ಯೆ ಬಗ್ಗೆ ಮಾತನಾಡಿದರೆ ಅಂಬಿ ವಿರೋಧಿ ಪಟ್ಟ ಬರುವ ಭಯ ಕಾಡುತ್ತದೆ. ಆದರೆ, ಇಂಥ ಸ್ಥಳಗಳಲ್ಲಿ ಶುಭಕಾರ್ಯ ನಡೆಸುವುದು ಹೇಗೆ? ಒಂದೊಮ್ಮೆ ಸ್ಮಾರಕ ನಿರ್ಮಾಣ ಬೇಗ ಮುಗಿದರೆ ಸಮಸ್ಯೆ ಇರುವುದಿಲ್ಲ,” ಎನ್ನುತ್ತಾರೆ.

ಇದನ್ನೂ ಓದಿ: ಶ್ರೀರಂಗ ಪಟ್ಟಣದ ಪಶ್ಚಿಮವಾಹಿನಿಯಲ್ಲಿ ಅಂಬರೀಶ್​ ಅಸ್ಥಿ ವಿಸರ್ಜನೆ

ಕಂಠೀರವ ಸ್ಟುಡಿಯೋ ಸಿಬ್ಬಂದಿಗೆ ಸಿನಿಮಾ ಮುಹೂರ್ತಗಳೇ ಜೀವಾಳ. ಸಿನಿಮಾ ಮುಹೂರ್ತ ನಡೆದರೆ ಸ್ಟುಡಿಯೋಗೂ ಆದಾಯ. ಈಗ ಅಂಬಿ ಸಮಾಧಿಯಿಂದ ಅಶುಭ ಎಂಬ ವಿಚಿತ್ರ ನಂಬಿಕೆಯಿಂದ ಸ್ಟುಡಿಯೋಗೆ ನಷ್ಟವಾಗುತ್ತಿದೆ ಎಂಬುದು ಮೂಲಗಳ ಮಾತು.

ಈ ವಿಷಯವನ್ನು ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ತಳ್ಳಿ ಹಾಕಿದ್ದಾರೆ. “ಬಹಿರಂಗವಾಗಿ ಮಾತನಾಡದೇ ಇರುವವರ ಬಗ್ಗೆ ನಾನು ಮಾತನಾಡುವುದಿಲ್ಲ. ಅನೇಕರು ಅಂಬಿಯನ್ನು ದೇವರಂತೆ ಕಂಡು ಪೂಜೆ ಮಾಡಿ ಹೋಗಿದ್ದಾರೆ. ಅನೇಕ ನಿರ್ಮಾಪಕರು ಇಲ್ಲಿ ಪೂಜೆ ಮಾಡಿ ಸಿನಿಮಾ ಕೆಲಸ ಆರಂಭಿಸುತ್ತಾರೆ. ಇದು ಅವರವರ ನಂಬಿಕೆಗೆ ಬಿಟ್ಟ ವಿಚಾರ. ಅಂಬಿ ಸಮಾಧಿಯಿಂದ ಇಲ್ಲಿ ಸಿನಿಮಾ ಕೆಲಸಗಳೇ ಕಡಿಮೆ ಆಗಿದೆ ಎನ್ನುವುದು ತಪ್ಪು, ಎನ್ನುತ್ತಾರೆ.(ವರದಿ: ಥಾಮಸ್​ ಪುಷ್ಪರಾಜ್​)

First published:August 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading