Bigg Boss OTT: ಬಿಗ್​ ಬಾಸ್ ಮನೆಯಲ್ಲಿ ಬಿಗ್ ಫೈಟ್; ಆರ್ಯವರ್ಧನ್ ಗುರೂಜಿ ಕಿರಿಕ್!

ಕಿರಿತೆರೆ ನಟ ಉದಯ್​ ಹಾಗೂ ಗುರೂಜಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಇಬ್ಬರು ಹೊಡಿ-ಬಡಿ ಅನ್ನೋ ಮಟ್ಟಕ್ಕೂ ಇಳಿದಿದ್ದಾರೆ. ಆರ್ಯವರ್ಧನ್ ಗುರೂಜಿ ಹಾಗೂ ಉದಯ್​ ನಡುವಿನ ಕಿತ್ತಾಟಕ್ಕೆ ಅಸಲಿ ಕಾರಣ ಏನು ಗೊತ್ತಾ? 

ಬಿಗ್​ ಬಾಸ್ ಮನೆಯಲ್ಲಿ ಬಿಗ್​ ಫೈಟ್​

ಬಿಗ್​ ಬಾಸ್ ಮನೆಯಲ್ಲಿ ಬಿಗ್​ ಫೈಟ್​

  • Share this:
OTTಯಲ್ಲಿ ಪ್ರಸಾರವಾಗ್ತಿರೋ ಬಿಗ್​ ಬಾಸ್​ನಲ್ಲಿ (Bigg Boss OTT) ಆರ್ಯವರ್ಧನ್ (Aryavardhan Guruji)​ ಗುರೂಜಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಖಾಸಗಿ ಮಾಧ್ಯಮಗಳಲ್ಲಿ ಸಂಖ್ಯಾಶಾಸ್ತ್ರ (Numerology) ಹಾಗೂ ಭವಿಷ್ಯದ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ಜನಪ್ರಿಯರಾಗಿದ್ದ ಆರ್ಯವರ್ಧನ್​ ಬಿಗ್​ ಬಾಸ್​ ರಿಯಾಲಿಟಿ ಶೋಗೆ (Reality Show) ಎಂಟ್ರಿ ಕೊಟ್ಟಿದ್ದಾರೆ. ಇದೀಗ ಯಾಕೋ ಕಿರಿಕ್​ ಮಾಡಿಕೊಂಡಿದ್ದಾರೆ. ಕಿರಿತೆರೆ ನಟ ಉದಯ್​ ಹಾಗೂ ಗುರೂಜಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಇಬ್ಬರು ಹೊಡಿ-ಬಡಿ ಅನ್ನೋ ಮಟ್ಟಕ್ಕೂ ಇಳಿದಿದ್ದಾರೆ. ಆರ್ಯವರ್ಧನ್ ಗುರೂಜಿ ಹಾಗೂ ಉದಯ್​ ನಡುವಿನ ಕಿತ್ತಾಟಕ್ಕೆ ಅಸಲಿ ಕಾರಣ ಏನು ಗೊತ್ತಾ? 

ಆರ್ಯವರ್ಧನ್ ಗುರೂಜಿ ಹಾಗೂ ಉದಯ್​ ನಡುವೆ ಫೈಟ್​

ಬಿಗ್​ ಬಾಸ್​ ನೀಡಿದ್ದ ಟಾಸ್ಕ್​ ಆಡುತ್ತಿದ್ದ ವೇಳೆ ಉದಯ್​ರನ್ನು ಆರ್ಯವರ್ಧನ್​ ಗುರೂಜಿ ತಳ್ಳಿದ್ರಂತೆ, ಹೀಗಂತ ಉದಯ್​ ಗಲಾಟೆ ತೆಗೆದಿದ್ದಾರೆ. ಬಳಿಕ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ನನ್ನ ಯಾಕೆ ತಳ್ಳಿದ್ರಿ ಎಂದು ಉದಯ್ ಪ್ರಶ್ನೆ ಮಾಡಿದ್ರು. ನಾನು ನಿನ್ನನ್ನು ತಳ್ಳಿಲ್ಲ ನಾನು ಗೇಮ್​ ಆಡಿದೆ ಅಷ್ಟೇ ಎಂದು ಆರ್ಯವರ್ಧನ್​ ಗುರೂಜಿ ಹೇಳಿದ್ದಾರೆ.ನಾನು ತಳ್ಳಿದ್ರೆ 22 ಅಡಿ ದೂರ ಹೋಗಿ ಬೀಳ್ತೀಯಾ

ಇಲ್ಲ ನೀವೇ ನನ್ನನ್ನು ತಳ್ಳಿದ್ದು ಎಂದು ಉದಯ ರಂಪಾಟ ಮಾಡಿದ್ರು. ಗುರೂಜಿ ಏನ್​ ನನ್ನನ್ನೇ ಹೊಡಿಯೋಕೆ ಬರ್ತೀಯಾ, ಸರಿಯಾಗಿ ಮಾತಾಡು ಎಂದು ಏರು ಧ್ವನಿಯಲ್ಲಿ ಕೂಗಾಡಿದ್ದಾರೆ. ನಾನು ತಳ್ಳಿಲ್ಲ. ನಾನೇನಾದ್ರೂ  ತಳ್ಳಿದ್ರೆ ನೀನು 22 ಅಡಿ ದೂರ ಹೋಗಿ ಬೀಳ್ತೀಯಾ ಎಂದು ಅವಾಜ್​ ಹಾಕಿದ್ದಾರೆ.

ಆರ್ಯವರ್ಧನ್ ಗುರೂಜಿ ಹೊಸ ಲುಕ್ ವೈರಲ್

ಬಿಗ್​ಬಾಸ್​ ಮನೆಯಲ್ಲಿ ಬೆಳಗ್ಗೆ ನಟ, ರಾಜಕಾರಣಿ ಅರ್ಜುನ್ ರಮೇಶ್ ಅವರು ಆರ್ಯವರ್ಧನ್​ ಅವರ ಗಡ್ಡ ಬೋಳಿಸಿದ್ದಾರೆ. ಮೀಸೆ ಕತ್ತರಿಸಬೇಡಿ. ಕೆಂಪೇಗೌಡ ಸುದೀಪ್ ರೀತಿ ಕಾಣುತ್ತಿದ್ದೀರಿ ಎಂದು ಬಾಯ್ತುಂಬ ಹೊಗಳಿದ್ದಾರೆ. ಪ್ರೋಮೋದಲ್ಲಿ ಇಷ್ಟೇ ವಿಚಾರ ತೋರಿಸಲಾಗಿದೆ. ನಂತರದ ವಿಡಿಯೋದಲ್ಲಿ ಗುರೂಜಿ ಅವರು ಮೀಸೆ ಹಾಗೂ ತಲೆ ಕೂದಲು ಇಲ್ಲದೆ ಕಾಣಿಸಿಕೊಂಡಿದ್ದಾರೆ. ಅವರ ಹೊಸ ಲುಕ್ ಸಾಕಷ್ಟು ವೈರಲ್ ಆಗುತ್ತಿದೆ.

ಆರ್ಯವರ್ಧನ್ ಅವರು ಹಲವು ವಿಚಾರಗಳಲ್ಲಿ ಹೆಚ್ಚು ಚರ್ಚೆಯಲ್ಲಿದ್ದಾರೆ. ತಾವು ನಿಜ ಜೀವನದಲ್ಲಿ ದೆವ್ವ ನೋಡಿರುವ ಬಗ್ಗೆ ಅವರು ಹೇಳಿದ್ದರು. ಜತೆಗೆ ಅವರ ಆಸ್ತಿ ಮೌಲ್ಯ ಕೇಳಿ ಎಲ್ಲರೂ ಅಚ್ಚರಿಗೊಂಡಿದ್ದರು. ಹಾಸನ ಮತ್ತು ಬೇಲೂರು ಮಧ್ಯೆ ನಮ್ಮದು 40 ಎಕರೆ ಜಮೀನು ಇದೆ.

ಇದನ್ನೂ ಓದಿ: Bigg Boss OTT: ಮೊದಲ ದಿನವೇ ಕಷ್ಟದ ಕಥೆ ಹೇಳಿಕೊಂಡು ಕಣ್ಣೀರಿಟ್ಟ ಸ್ಪರ್ಧಿಗಳು, ಫುಲ್ ಎಮೋಷನಲ್​ ಎಪಿಸೋಡ್

ಸುತ್ತಲೂ ಕಾಡು-ಬೆಟ್ಟ ಇದೆ. ಮೂರು ಕೆರೆ ಇದೆ. ಸುತ್ತ ಮುತ್ತ ಯಾವುದೇ ಮನೆ ಇಲ್ಲ. ಇಂದು ಎಲ್ಲರೂ ಸಿಟಿಯಲ್ಲಿ ದುಡ್ಡು ಸಂಪಾದನೆ ಮಾಡಿ ಹಳ್ಳಿಗೆ ಹೋಗುತ್ತಾರೆ. ಆದರೆ ನಾವು ಹಳ್ಳಿಯಲ್ಲಿ ಇದ್ದು ಬೆಂಗಳೂರಿಗೆ ಬಂದವರು. ನಮಗೆ ಹಳ್ಳಿ ಎಂದರೆ ಬೋರು. ಸಾಕಷ್ಟು ಜಮೀನು ನಮಗೆ ಇದೆ. ನಾನು ಸುಳ್ಳು ಹೇಳಲ್ಲ. ನಮ್ಮ ಅಜ್ಜನ ಆಸ್ತಿ ಏನಿಲ್ಲವೆಂದರೂ 5 ಸಾವಿರ ಕೋಟಿ ರೂಪಾಯಿ ಬೆಲೆ ಬಾಳುತ್ತದೆ ಎಂದು ಆರ್ಯವರ್ಧನ್​ ಗುರೂಜಿ ಹೇಳಿದ್ದು ಎಲ್ಲರನ್ನು ಅಚ್ಚರಿಗೊಳಿಸಿದೆ.

ಐಪಿಎಲ್​ ಭವಿಷ್ಯದ ಮೂಲಕ ಗುರೂಜಿ ಟ್ರೋಲ್​

ಕಳೆದ ಬಾರಿಯ ಐಪಿಎಲ್ ಸಮಯದಲ್ಲಿ ಇವರು ಹೇಳಿತ್ತಿದ್ದ ಭವಿಷ್ಯ ಬಹಳಷ್ಟು ಸದ್ದು ಮಾಡಿತ್ತು. ಏಕೆಂದರೆ ತಮ್ಮ ಸಂಖ್ಯಾಶಾಸ್ತ್ರದ ಮೂಲಕವೇ ಯಾವ ತಂಡ ಪಂದ್ಯ ಗೆಲ್ಲಲಿದೆ ಯಾವ ಆಟಗಾರರು ಅಂದು ಚೆನ್ನಾಗಿ ಆಡಲಿದ್ದಾನೆ ಎನ್ನುವ ಬಗ್ಗೆ ಭವಿಷ್ಯ ನುಡಿಯುತ್ತಿದ್ದರು.
Published by:Pavana HS
First published: