• Home
  • »
  • News
  • »
  • entertainment
  • »
  • Big Boss Roopesh Shetty: ಸೀದಾ-ಸಾದಾ ಬಿಗ್ ಬಾಸ್ ರೂಪೇಶ್ ಶೆಟ್ಟಿ! ಇದು ರಿಯಲ್ ಅಲ್ಲ, ರೀಲ್ ಕಥೆ

Big Boss Roopesh Shetty: ಸೀದಾ-ಸಾದಾ ಬಿಗ್ ಬಾಸ್ ರೂಪೇಶ್ ಶೆಟ್ಟಿ! ಇದು ರಿಯಲ್ ಅಲ್ಲ, ರೀಲ್ ಕಥೆ

ರೂಪೇಶ್ ಅಭಿನಯದ ಚಿತ್ರದಲ್ಲಿದೆ ವಿಶೇಷ ಕಥೆ

ರೂಪೇಶ್ ಅಭಿನಯದ ಚಿತ್ರದಲ್ಲಿದೆ ವಿಶೇಷ ಕಥೆ

ರೂಪೇಶ್ ಶೆಟ್ಟಿ ಅಭಿನಯದ ಈ ಸಿನಿಮಾದಲ್ಲಿ ಸಸ್ಪೆನ್ಸ್ ಇದೆ, ಲವ್ ಸ್ಟೋರಿನೂ ಇದೆ. ಎರಡನ್ನೂ ಹೊಂದಿರೋ ಈ ಚಿತ್ರವನ್ನ ಗಗನ್ ಎಂ. ನಿರ್ದೇಶನ ಮಾಡಿದ್ದಾರೆ. ರೂಪೇಶ್, ಪಂಚಮಿ ರಾವ್ ಅಭಿನಯದ ಈ ಚಿತ್ರವನ್ನ ರಿಲೀಸ್ ಮಾಡೋಕೆ ಸಿನಿಮಾ ತಂಡ ಪ್ಲಾನ್ ಮಾಡಿದೆ.

  • Share this:

ಬಿಗ್ ಬಾಸ್ ಮನೆಯಲ್ಲಿ ರೂಪೇಶ್ (Roopesh Shetty) ಶೆಟ್ಟಿ ತಮ್ಮದೇ ವಿಶೇಷ ರೀತಿಯಲ್ಲಿ ಆಟ ಆಡುತ್ತಿದ್ದಾರೆ. ಸಾನ್ಯಾ (Sanya Iyer) ಅಯ್ಯುರ್ ಜೊತೆಗಿನ ಕ್ಲೋಸ್​ ನೆಸ್ ಕೂಡ ಪ್ರೇಕ್ಷಕರಿಗೆ ಬೇರೆ ರೀತಿಯ ಫೀಲ್ ಕೂಡ ಕೊಡುತ್ತಿದೆ. ಇದರ ಹೊರತಾಗಿಯೂ ರೂಪೇಶ್ ಶೆಟ್ಟಿ, ಹಾಡು-ಕುಣಿತ ಮಾತು-ಕತೆ ಎಲ್ಲದರೊಂದಿಗೂ ಬಿಗ್ (Big Boss) ಪ್ರೇಕ್ಷಕರ ಮನದಲ್ಲಿ ಜಾಗ ಮಾಡಿಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗುವ ಮುಂಚೇನೆ ರೂಪೇಶ್ ಒಂದು ಸಿನಿಮಾದಲ್ಲೂ (Cinema) ಅಭಿನಯಿಸಿದ್ದಾರೆ. ಆ ಸಿನಿಮಾದ ಪ್ರಮೋಷನ್ ಈಗ ನಡೆಯುತ್ತಿದೆ. ಹಾಡುಗಳೂ ಹೆಚ್ಚು ಗಮನ ಸೆಳೆಯುತ್ತಿದೆ. ರೂಪೇಶ್ ಶೆಟ್ಟಿ ಈ ಒಂದು ಚಿತ್ರದಲ್ಲಿ ವಿಭಿನ್ನವಾಗಿಯೇ ಕಾಣಿಸಿಕೊಂಡಿದ್ದಾರೆ. ಗಗನ್ ಎಂ. ಈ ಚಿತ್ರವನ್ನ ಡೈರೆಕ್ಟರ್ ಮಾಡಿದ್ದಾರೆ. ಮುಂದಿನ ವರ್ಷ ಈ ಸಿನಿಮಾ ರಿಲೀಸ್ ಪ್ಲಾನ್​ ಆಗಿದೆ. 


ರೂಪೇಶ್ ಶೆಟ್ಟಿ ಚಿತ್ರದ ಟೈಟಲ್ ಭಿನ್ನ-ವಿಭಿನ್ನ
ಬಿಗ್ ಬಾಸ್ ಮನೆಯಲ್ಲಿರೋ ರೂಪೇಶ್ ಶೆಟ್ಟಿ ಅಭಿನಯದ ಚಿತ್ರದ ಹೆಸರು ವಿಶೇಷವಾಗಿದೆ. "ಮಂಕು ಭಾಯ್ ಫಾಕ್ಸಿ ರಾಣಿ" ಅನ್ನೋ ಈ ವಿಶೇಷ ಟೈಟಲ್ ಗಮನ ಸೆಳೆಯುತ್ತಿದೆ. ಕನ್ನಡದ ಈ ಸಿನಿಮಾದ ಕೆಲಸ ಬಹುತೇಕ ಪೂರ್ಣಗೊಂಡಿದೆ.


ಇದರಲ್ಲಿ ಬಿಗ್ ಬಾಸ್ ರೂಪೇಶ್ ಶೆಟ್ಟಿ ವಿಭಿನ್ನ ಲುಕ್ ಅಲ್ಲಿಯೇ ಕಾಣಿಸಿಕೊಂಡಿದ್ದಾರೆ. ಕ್ಲೀನ್ ಶೇವ್ ರೂಪದಲ್ಲಿಯೇ ರೂಪೇಶ್ ಅಭಿನಯಿಸಿದ್ದಾರೆ. ಈ ಸಿನಿಮಾದ ಕಥೆ ವಿಶೇಷವಾಗಿಯೇ ಇದೆ.


Big Boss Roopesh Shetty New Film Now Ready to Release
ರೂಪೇಶ್ ಶೆಟ್ಟಿ ಚಿತ್ರದ ಟೈಟಲ್ ಭಿನ್ನ-ವಿಭಿನ್ನ


ರೂಪೇಶ್ ಅಭಿನಯದ ಚಿತ್ರದಲ್ಲಿದೆ ವಿಶೇಷ ಕಥೆ
ರೂಪೇಶ್ ಶೆಟ್ಟಿ ಅಭಿನಯದ ಈ ಸಿನಿಮಾದಲ್ಲಿ ಸಸ್ಪೆನ್ಸ್ ಇದೆ. ಲವ್ ಸ್ಟೋರಿನೂ ಇದೆ. ಎರಡನ್ನೂ ಹೊಂದಿರೋ ಈ ಚಿತ್ರವನ್ನ ಗಗನ್ ಎಂ. ನಿರ್ದೇಶನ ಮಾಡಿದ್ದಾರೆ.
ಸಿನಿಮಾದ ಕೆಲಸ ಈಗ ಹೆಚ್ಚು ಕಡಿಮೆ ಮುಗಿದಿದೆ.


ಡೈರೆಕ್ಟರ್ ಗಗನ್ ಎಂ ಹಿನ್ನೆಲೆ ಏನು ?


ಗಗನ್ ಎಂ ಈ ಹಿಂದೆ ಕೆಲವು ಕಿರು ಚಿತ್ರಗಳಿಗೆ ಸಹ ನಿರ್ದೇಶನ ಮಾಡಿದ್ದಾರೆ. ಈ ಮೂಲಕ ನಿರ್ದೇಶನದ ಅನುಭವ ಪಡೆದಿದ್ದಾರೆ. ತುಳು ಸಿನಿಮಾಗಳಿಗೆ ಸಹ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದಾರೆ.


ಇದನ್ನೂ ಓದಿ: Alia Bhatt: ಮುಂಬೈನ ಈ ಆಸ್ಪತ್ರೆಯಲ್ಲಿಯೇ ಮಗುವಿಗೆ ಜನ್ಮ ನೀಡಲಿದ್ದಾರಂತೆ ನಟಿ ಆಲಿಯಾ


ಈಗ ಈ ವಿಶೇಷ ಟೈಟಲ್​ನ ಸಿನಿಮಾ ಡೈರೆಕ್ಟ್ ಮಾಡಿದ್ದಾರೆ. ಈ ಒಂದು ಸಿನಿಮಾ ಮುಖಾಂತರ ಸ್ವತಂತ್ರ ನಿರ್ದೇಶಕರೂ ಆಗಿದ್ದಾರೆ.


ಈ ಹಿಂದೆ ಸೋನು ನಿಗಮ್ ಹಾಡಿರೋ ಒಂದು ಹಾಡು ರಿಲೀಸ್ ಆಗಿತ್ತು. ಅದಕ್ಕೂ ಒಳ್ಳೆ ರೆಸ್ಪಾನ್ಸ್ ಕೂಡ ಬಂದಿತ್ತು. ಈಗ ಇದೇ ಚಿತ್ರದ ಇನ್ನೂ ಒಂದು ಹಾಡು ರಿಲೀಸ್ ಆಗಿದ್ದು, "ತಂಗಾಳಿಯೇ ತಲುಪಿಸು" ಅಂತಲೇ ಇದು ಶುರುವಾಗುತ್ತದೆ.




ರೂಪೇಶ್ ಶೆಟ್ಟಿಗೆ ಯಾರು ಇಲ್ಲಿ ಜೋಡಿ ಗೊತ್ತೇ?
ರೂಪೇಶ್ ಶೆಟ್ಟಿ ಅಭಿನಯದ ಈ ಚಿತ್ರಕ್ಕೆ ಬ್ರಹ್ಮಗಂಟು ಖ್ಯಾತಿಯ ಗೀತಾ ಭಾರತಿ ಜೊತೆಯಾಗಿದ್ದಾರೆ. ಗೀತಾ ಭಾರತಿ ಅಲ್ಲದೇ ಮತ್ತೋರ್ವ ನಟಿ ಪಂಚಮಿ ರಾವ್ ಕೂಡ ಅಭಿನಯಿಸಿದ್ದಾರೆ.


ರೂಪೇಶ್ ಶೆಟ್ಟಿ ಈ ಚಿತ್ರದ ಮೊದಲು ತುಳು ಸಿನಿಮಾ ಮಾಡಿದ್ದಾರೆ. ಕನ್ನಡದ ಕೆಲವು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಆದರೆ ಈ ಸಿನಿಮಾದಲ್ಲಿ ರೂಪೇಶ್ ವಿಭಿನ್ನವಾಗಿಯೇ ಕಾಣಿಸಿಕೊಂಡಿದ್ದಾರೆ.


Big Boss Roopesh Shetty New Film Now Ready to Release
ರೂಪೇಶ್ ಶೆಟ್ಟಿಗೆ ಯಾರು ಇಲ್ಲಿ ಜೋಡಿ ಗೊತ್ತೇ?


ರೂಪೇಶ್, ಪಂಚಮಿ ರಾವ್ ಅಭಿನಯದ ಈ ಚಿತ್ರವನ್ನ ರಿಲೀಸ್ ಮಾಡೋಕೆ ಸಿನಿಮಾ ತಂಡ ಪ್ಲಾನ್ ಮಾಡಿದೆ. ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ಕೂಡ ಸಿಕ್ಕಿದೆ.


ವಿನ್ಯಾಸ್ ಮಧ್ಯ ಹಾಗೂ ಶಮೀರ್ ಮುಡಿಪು ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಈಗಾಗಲೇ ಹೊರ ಬಿದ್ದ ತಂಗಾಳಿಯೇ ತಲುಪಿಸು ಹಾಡು ಗಮನ ಸೆಳೆಯುತ್ತಿದೆ.


ಇದನ್ನೂ ಓದಿ: Head Bush: ಡಾಲಿಗೆ ಫ್ಯಾನ್ಸ್ ಸಪೋರ್ಟ್! ಅಮೆರಿಕಾದಿಂದಲೇ 10 ಟಿಕೆಟ್ ಬುಕ್ ಮಾಡಿದ ಅಭಿಮಾನಿ


ಜನವರಿ ತಿಂಗಳಲ್ಲಿ ಸಿನಿಮಾ ಮತ್ತು ಮಿಂಚಂತೆ ಮಿನುಗುತಿರು ಹಾಡು ಗಮನ ಸೆಳೆದಿವೆ. ರೂಪಶ್ ಶೆಟ್ಟಿ ಕೂಡ ಈ ಮೂಲಕ ತುಂಬಾ ಸರಳ ವ್ಯಕ್ತಿತ್ವದ ಪ್ರೇಮಿಯಾಗಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

First published: