• Home
  • »
  • News
  • »
  • entertainment
  • »
  • Bigg Boss Dosti: ರೂಪೇಶ್ ರಾಜಣ್ಣ ಮುಗ್ಧ, ಸಂಬರ್ಗಿ ಸುಳ್ಳುಗಾರ! ಎಷ್ಟೇ ಕಿತ್ತಾಡಿದ್ರೂ ದೋಸ್ತಿ ಬಿಡಲ್ಲ

Bigg Boss Dosti: ರೂಪೇಶ್ ರಾಜಣ್ಣ ಮುಗ್ಧ, ಸಂಬರ್ಗಿ ಸುಳ್ಳುಗಾರ! ಎಷ್ಟೇ ಕಿತ್ತಾಡಿದ್ರೂ ದೋಸ್ತಿ ಬಿಡಲ್ಲ

ಪರಸ್ಪರ ಕಿತ್ತಾಡಿದರೂ ಬಿಡದ ದೋಸ್ತಿ

ಪರಸ್ಪರ ಕಿತ್ತಾಡಿದರೂ ಬಿಡದ ದೋಸ್ತಿ

ರೂಪೇಶ್ ರಾಜಣ್ಣ ತುಂಬಾ ಮುಗ್ಧ ವ್ಯಕ್ತಿ. ಇಂತಹ ಮುಗ್ಧ ವ್ಯಕ್ತಿಯನ್ನ ನಾನು ನೋಡಿಯೇ ಇಲ್ಲ. ಇವರಿಗೆ ಏನೂ ಗೊತ್ತಿಲ್ಲ. ಕನ್ನಡ ಹೋರಾಟ ಬಿಟ್ರೆ ಏನೂ ತಿಳಿದಿಲ್ಲ. ಇಂತಹ ವ್ಯಕ್ತಿಯನ್ನ ನಾನು ನೋಡಿಯೇ ಇಲ್ಲ ಹಿಂಗೆ ಪ್ರಶಾಂತ್ ಸಂಬರ್ಗಿ ಹೇಳಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಬಿಗ್ ಬಾಸ್ (Bigg Boss) ಮನೆಯಲ್ಲಿ ಏನೇನೋ ಆಗುತ್ತದೆ. ಯಾವಾಗ ಏನ್ ಆಗುತ್ತದೆ ಅನ್ನೋದು ಆ ಬಿಗ್ ಬಾಸ್ ಗೆ ಮಾತ್ರ ಗೊತ್ತು. ಏನ್ ಆಡಿಸಬೇಕು ಅನ್ನೋದು ಆ ಬಿಗ್ ಬಾಸ್ ಗೆ ಮಾತ್ರ ತಿಳಿದಿದೆ. ಇದರ ಮಧ್ಯ ಬಿಗ್ ಬಾಸ್ ಸ್ಪರ್ಧಿಗಳು ತಮ್ಮದೇ ಆಟಕ್ಕೆ ಸಜ್ಜಾಗಿರುತ್ತಾರೆ. ಮನೆಯ ಸದಸ್ಯರೆಲ್ಲ ಒಂದು ಹಂತಕ್ಕೆ ಸಖತ್ ಆಗಿಯೇ ಆಡುತ್ತಿದ್ದಾರೆ. ಅವರ ಶಕ್ತಿಗೆ ಅನುಸಾರವಾಗಿಯೇ ಮುನ್ನುಗ್ಗುತ್ತಿದ್ದಾರೆ. ದೋಸ್ತಿಗಳೂ (Friends) ಆಗುತ್ತಿದ್ದಾರೆ. ಬಾರೋ ಹೋಗೋ ಅನ್ನೋ ಮಟ್ಟಕ್ಕೂ ಸ್ನೇಹ ಬೆಳೆದಿದೆ. ಆ ದೋಸ್ತಿಗಳಲ್ಲಿ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ ದೋಸ್ತಿ ಮಜವಾಗಿಯೇ ಇದೆ. ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಜಗಳ ದಿನವೂ ಇರುತ್ತದೆ. ನೇರಾ ನೇರವಾಗಿಯೇ ಆರೋಪಗಳು ಇದ್ದೇ ಇರುತ್ತವೆ. ನೀವೂ ಸುಳ್ಳು ಹೇಳುತ್ತೀರಿ ಅಂತಲೇ (Prashanth Sambargi) ಪ್ರಶಾಂತ್ ಗೆ ರೂಪೇಶ್ ಮುಖದ ಮೇಲೆ ಹೇಳುತ್ತಾರೆ. ಪ್ರಶಾಂತ್ ಕೂಡ ಅಷ್ಟೇ, ರೂಪೇಶ್ ನೀನು ಮುಗ್ದ ಅಂತಲೇ ಕಾಮೆಂಟ್ ಹೊಡಿತಾರೆ. ಹೀಗೆ ಕಿತ್ತಾಡಿದ್ರು ಇವರು ದೋಸ್ತಿಗಳೇ ಅನ್ನೋಮಟ್ಟಿಗೆ ಇಲ್ಲಿ ಇವರು ಬಿಹೇವ್ ಮಾಡುತ್ತಿದ್ದಾರೆ.


ರೂಪೇಶ್ ರಾಜಣ್ಣ-ಪ್ರಶಾಂತ್ ಕಿತ್ತಾಡಿದರೂ ಬಿಡದ ದೋಸ್ತಿ
ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಒಂದು ರೀತಿ ಇದ್ರೆ, ರೂಪೇಶ್ ರಾಜಣ್ಣ ಬೇರೆನೆ ಬಿಡಿ. ಇನ್ನು ಪ್ರಶಾಂತ್ ಸಂಬರ್ಗಿ ಹೋರಾಟದ ತೀವ್ರತೆ ಉತ್ತುಂಗಕ್ಕೆ ಹೋಗಿ ಬಿಡುತ್ತದೆ.


ಹೀಗಿರೋವಾಗ ಪ್ರಶಾಂತ್ ಸಂಬರ್ಗಿ ಮತ್ತು ರೂಪೇಶ್ ರಾಜಣ್ಣ ಮುಖಾ-ಮುಖಿ ಆದ್ರೆ ಮುಗಿದೇ ಹೋಯಿತು, ಇಬ್ಬರ ನಡುವೆ ಮಾತಿನ ಸಮರ ಬಲು ಜೋರಾಗಿಯೇ ನಡೆದು ಬಿಡುತ್ತದೆ.




ಇವರ ಜಗಳಕ್ಕೆ ಮನೆಯ ಇತರ ಸದಸ್ಯರು ಬೇಸರಗೊಳ್ಳುತ್ತಾರೆ. ಹಾಗೇನೆ ಇವರ ಜಗಳ ಈಗ ಕಾಮನ್ ಆಗಿ ಬಿಟ್ಟಿದೆ. ಇದರಿಂದ ಮನೆಯ ಸದಸ್ಯರು ಇವರ ಜಗಳಕ್ಕೆ ಕ್ಯಾರೆ ಅನ್ನೋದಿಲ್ಲ. ಆದರೂ ಇವರ ಜಗಳ ನಿಲ್ಲೋದಿಲ್ಲ ನೋಡಿ, ಅಷ್ಟು ಈಗೀಗ ನೇರಾ ನೇರ ಆರೋಪಗಳನ್ನ ಪರಸ್ಪರ ಮಾಡಿಕೊಳ್ತಿದ್ದಾರೆ.


Big Boss Prashanth Sambargi and Roopesh Rajanna
ಪ್ರಶಾಂತ್ ನೀವೂ ಸುಳ್ಳುಗಾರ-ರೂಪೇಶ್ ರಾಜಣ್ಣ


ಪ್ರಶಾಂತ್ ನೀವೂ ಸುಳ್ಳುಗಾರ-ರೂಪೇಶ್ ರಾಜಣ್ಣ
ಹೌದು, ರೂಪೇಶ್ ರಾಜಣ್ಣ ಈಗ ನೇರವಾಗಿಯೆ ಆರೋಪ ಮಾಡುತ್ತಿದ್ದಾರೆ. ಪ್ರಶಾಂತ್ ಸಂಬರ್ಗಿ ಅವರೇ ನೀವು ಸುಳ್ಳುಗಾರ. ಸುಳ್ಳು ಹೇಳಿಯೇ ಸಮಾಜವನ್ನ ಹಾಳು ಮಾಡುತ್ತಿದ್ದೀರಾ ಅಂತಲೇ ರೂಪೇಶ್ ರಾಜಣ್ಣ ದೂರುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರಶಾಂತ್ ಸಂಬರ್ಗಿ ಕಾಮೆಂಟ್ ಹೊಡೆದಿದ್ದಾರೆ.


ರೂಪೇಶ್ ರಾಜಣ್ಣ ಆರೋಪಕ್ಕೆ ಪ್ರಶಾಂತ್ ಏನಂತಾರೆ?
ರೂಪೇಶ್ ನಿನ್ನ ಮೇಲೆ ಒಂದೇ ಒಂದು ಕೇಸ್ ಇಲ್ಲ. ಏನೂ ಇಲ್ಲ. ಆದರೂ ಹೋರಾಟ ಮಾಡ್ತೀಯಾ? ಒಂದು ಕೇಸ್ ಮಾಡಿಕೊಂಡು ಕೋರ್ಟ್​​ಗೆ ಬಾರೋ ಗೊತ್ತಾಗುತ್ತದೆ. ಸುಮ್ನೆ ಮಾತಾಡ್ತೀಯಾ ಅಂತಲೇ ಪ್ರಶಾಂತ್ ಸಂಬರ್ಗಿ ಹೇಳಿದ್ದಾರೆ.


ಇದನ್ನೂ ಓದಿ: Actor Upendra: ಅಭಿಮಾನಿಯ ಬರ್ತ್​ಡೇ ಆಚರಿಸಿ ಚಿನ್ನದ ಸರ ಕೊಟ್ಟ ಉಪ್ಪಿ


ಈ ರೀತಿ ಕಿತ್ತಾಡೋ ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ರಾಜಣ್ಣ ಒಳ್ಳೆ ದೋಸ್ತಿಗಳೂ ಆಗುತ್ತಿದ್ದಾರೆ. ಇವರಿಗೆ ಪರಸ್ಪರ ಗೌರವವು ಇದ್ದಂತೆ ಕಾಣುತ್ತಿದೆ. ರೂಪೇಶ್ ರಾಜಣ್ಣ ಕಂಡ್ರೆ ಪ್ರಶಾಂತ್ ಬಾರೋ ಹೋಗೋ ಅನ್ನೋ ಮಟ್ಟಿಗೆ ಇದ್ದಾರೆ. ರೂಪೇಶ್ ರಾಜಣ್ಣ ಏಕ ವಚನದಲ್ಲಿ ಮಾತನಾಡೋದಿಲ್ಲ. ಪ್ರಶಾಂತ್ ಅವರೇ ಅಂತಲೇ ಸಂಬರ್ಗಿಗೆ ಹೇಳುತ್ತಾರೆ.


ರೂಪೇಶ್ ರಾಜಣ್ಣ ಮುಗ್ಧ ವ್ಯಕ್ತಿ-ಪ್ರಶಾಂತ್ ಸಂಬರ್ಗಿ
ರೂಪೇಶ್ ರಾಜಣ್ಣ ತುಂಬಾ ಮುಗ್ಧ ವ್ಯಕ್ತಿ. ಇಂತಹ ಮುಗ್ಧ ವ್ಯಕ್ತಿಯನ್ನ ನಾನು ನೋಡಿಯೇ ಇಲ್ಲ. ಇವರಿಗೆ ಏನೂ ಗೊತ್ತಿಲ್ಲ. ಕನ್ನಡ ಹೋರಾಟ ಬಿಟ್ರೆ ಏನೂ ತಿಳಿದಿಲ್ಲ. ಇಂತಹ ವ್ಯಕ್ತಿಯನ್ನ ನಾನು ನೋಡಿಯೇ ಇಲ್ಲ. ಹಿಂಗೆ ಪ್ರಶಾಂತ್ ಸಂಬರ್ಗಿ ಹೇಳಿದ್ದಾರೆ.


ಇದನ್ನೂ ಓದಿ: Kantara Crazy Fan: ಮೆಲ್ಬರ್ನ್​ ಕ್ರಿಕೆಟ್ ಅಂಗಳದಲ್ಲಿ ಪಾಕ್-ಭಾರತ ಪಂದ್ಯದ ವೇಳೆ ಕಾಂತಾರ ಕ್ರೇಜ್


ಮನೆಯ ಸದಸ್ಯ ನೇಹಾ ಗೌಡ ಕೂಡ ಇದನ್ನೇ ಹೇಳುತ್ತಾರೆ. ರೂಪೇಶ್ ರಾಜಣ್ಣ ಮುಂದೇನೆ ನೇಹಾ ಗೌಡ ಹಾಗೂ ಪ್ರಶಾಂತ್ ಸಂಬರ್ಗಿ ಈ ವಿಷಯ ಹೇಳಿದ್ದಾರೆ. ಹಿಂಗೆ ಒಳ್ಳೆ ಅಭಿಪ್ರಾಯ ಇಟ್ಟುಕೊಂಡಿರೋ ಪ್ರಶಾಂತ್ ಸಂಬರ್ಗಿ ಮತ್ತು ರೂಪೇಶ್ ರಾಜಣ್ಣ ಒಳ್ಳೆ ದೋಸ್ತಿಗಳೂ ಆಗುತ್ತಿದ್ದಾರೆ. ಹೀಗಂತ ಅಂದ್ರೆ ಯಾರೂ ತಪ್ಪು ತಿಳಿಯೋದಿಲ್ಲ ಅಲ್ವೇ?

First published: