ಬಿಗ್ ಬಾಸ್ ಕನ್ನಡ ಸೀಸನ್ 8 ಅಂತಿಮ ಘಟ್ಟ ತಲುಪಿದೆ. ಈ ಕನ್ನಡದ ರಿಯಾಲಿಟಿ ಶೋನ ಗ್ರ್ಯಾಂಡ್ ಫಿನಾಲೆಗೆ ಕೆಲವೇ ಕೆಲವು ದಿನಗಳು ಬಾಕಿ ಇದೆ. ಇದೇ ಭಾನುವಾರ ಬಿಗ್ ಬಾಸ್ ಕನ್ನಡದ 8ನೇ ಸೀಸನ್ ಫಿನಾಲೆ ನಡೆಯಲಿದ್ದು, ಯಾರು ವಿಜಯಶಾಲಿ ಆಗಲಿದ್ದಾರೆ ಅನ್ನೋದು ತಿಳಿಯಲಿದೆ. ಇನ್ನು ಕಳೆದ ವಾರಾಂತ್ಯ ಅಂದರೆ ಕಳೆದ ಶನಿವಾರ ಹಾಗೂ ಭಾನುವಾರ ನಡೆದ ಎಲಿಮಿನೇಷನ್ನಲ್ಲಿ ಶುಭಾ ಪೂಂಜಾ ಹಾಗೂ ಶಮಂತ್ ಗೌಡ ಮನೆಯಿಂದ ಹೊರ ಬಂದಿದ್ದಾರೆ. ಈಗ ಸದ್ಯ ಬಿಗ್ ಬಾಸ್ ಮನೆಯಲ್ಲಿ ದಿವ್ಯಾ ಸುರೇಶ್, ಪ್ರಶಾಂತ್ ಸಂಬರಗಿ, ವೈಷ್ಣವಿ ಗೌಡ, ಮಂಜು ಪಾವಗಡ, ಅರವಿಂದ್ ಕೆ.ಪಿ ಹಾಗೂ ದಿವ್ಯಾ ಉರುಡುಗ ಉಳಿದುಕೊಂಡಿದ್ದಾರೆ. ಇನ್ನೇನು ಈ ವಾರದ ಮಧ್ಯದಲ್ಲಿ ಒಂದು ಎಲಿಮಿನೇಷನ್ ನಡೆಯಲಿದ್ದು, ಕೊನೆಗೆ ಫಿನಾಲೆ ವಾರದಲ್ಲಿ ಐದು ಮಂದಿ ಮಾತ್ರ ಉಳಿಯಲಿದ್ದಾರೆ.
ಕಳೆದ ಕೆಲ ದಿನಗಳಿಂದಲೇ ಬಿಗ್ ಬಾಸ್ ಸೀಸನ್ 8ರ ವಿನ್ನರ್ ಯಾರು ಆಗಲಿದ್ದಾರೆ ಅನ್ನೋ ಲೆಕ್ಕಾಚಾರ ಆರಂಭವಾಗಿದೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಉಳಿದಿರುವ ಆರು ಮಂದಿ ಸ್ಪರ್ಧಿಗಳಲ್ಲೇ ಒಬ್ಬರು ಈ ಸಲದ ವಿನ್ನರ್ ಆಗೋದಂತು ಖಚಿತ. ಆದರೆ ಫಿನಾಲೆ ನಡೆಯುವ ಮುನ್ನ ಬಿಗ್ ಬಾಸ್ ಮನೆಯಲ್ಲಿ ನಡೆಯಲಿರುವ ಎಲಿಮಿನೇಷನ್ ಈಗ ಇರುವ ಆರು ಮಂದಿ ಸ್ಪರ್ಧಿಗಳ ನಿದ್ದೆಗೆಡಿಸಿದೆ.
View this post on Instagram
ಇದನ್ನೂ ಓದಿ: Shwetha Srivatsav: ವಿನ್ಯಾಸಿತ ಗೌನ್ ತೊಟ್ಟ ಶ್ವೇತಾ ಶ್ರೀವಾತ್ಸವ: ಸೆಲೆಬ್ರಿಟಿ ಅಮ್ಮ-ಮಗಳ ಟ್ವಿನ್ನಿಂಗ್..!
ಇನ್ನು ನಿನ್ನೆ ನಡೆದ ಎಲಿಮಿನೇಷನ್ನಲ್ಲಿ ಅತಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ವೈಷ್ಣವಿ ಗೌಡ ಮೊದಲ ಸ್ಥಾನದಲ್ಲಿದ್ದರೆ, ಮಂಜು ಪಾವಗಡ ಎರಡನೇ ಸ್ಥಾನ ಹಾಗೂ ಅರವಿಂದ್ ಅವರು ಮೂರನೇ ಸ್ಥಾನದಲ್ಲಿದ್ದಾರೆ. ನಾಲ್ಕು ಹಾಗೂ ಐದನೇ ಸ್ಥಾನದಲ್ಲಿ ಪ್ರಶಾಂತ್ ಸಂಬರಗಿ ಹಾಗೂ ದಿವ್ಯಾ ಸುರೇಶ್ ಇದ್ದಾರೆ. ಈ ವಾರದ ಎಲಿಮಿನೇಷನ್ನಲ್ಲಿ ಪಾರಾದ ಕ್ರಮವನ್ನು ಗಮನಿಸಿದರೆ, ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್ ಹಾಗೂ ದಿವ್ಯಾ ಉರುಡುಗ ಸದ್ಯ ವೀಕ್ ಆಗಿರುವ ಸ್ಪರ್ಧಿಗಳು ಎನ್ನಲಾಗುತ್ತಿದೆ.
ದಿವ್ಯಾ ಉರುಡುಗ, ದಿವ್ಯಾ ಸುರೇಶ್ ಹಾಗೂ ಪ್ರಶಾಂತ್ ಸಂಬರಗಿ ಅವರಲ್ಲಿ ಯಾರಾದರೂ ಇಬ್ಬರು ಈ ಸಲದ ಮಿಡ್ ವೀಕ್ ಎಲಿಮಿನೇಷನ್ನಿಂದ ಹೊರ ಬರಬಹುದು ಎಂದು ಅಂದಾಜಿಸಲಾಗುತ್ತಿದೆ. ಇನ್ನು ವೈಷ್ಣವಿ ಗೌಡ, ಮಂಜು ಪಾವಗಡ ಹಾಗೂ ಅರವಿಂದ್ ಅವರು ಫಿನಾಲೆ ವಾರಕ್ಕೆ ಯಾವುದೇ ಭಯವಿಲ್ಲ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: BBK8: ಅರವಿಂದ್ಗೆ ಸಿಕ್ತು ಹೇರ್ ಕಟ್ ಟಾಸ್ಕ್: ದಿವ್ಯಾ ಉರುಡುಗ ಕೂದಲಿನ ಮೇಲೆ ನಡೆಯುತ್ತಾ ಕತ್ತರಿ ಪ್ರಯೋಗ..!
ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ವಾರ ತುಂಬಾ ಕುತೂಹಲದಿಂದ ಕೂಡಿರಲಿದೆ. ಅದಕ್ಕೆ ಪುಟ್ಟ ಉದಾಹರಣೆ ಅಂದರೆ, ಸುದೀಪ್ ಅವರು ಅರವಿಂದ್ ಕೆ ಪಿ ಅವರಿಗೆ ಕೊಟ್ಟಿರುವ ಹೇರ್ ಕಟ್ ಟಾಸ್ಕ್. ದಿವ್ಯಾ ಉರುಡುಗ ಅವರ ನೀಳವಾದ ಕೇಶ ರಾಶಿಗೆ ಅರವಿಂದ್ ಅವರು ಕತ್ತರಿ ಹಾಕಬೇಕು. ಇದು ಸುದೀಪ್ ಅವರು ಸೂಪರ್ ಸಂಡೆ ಸಂಚಿಕೆಯಲ್ಲಿ ತಮಾಷೆ ಮಾಡಿದ್ದಾ ಅಥವಾ ನಿಜವಾಗಿಯೂ ದಿವ್ಯಾ ಉರುಡುಗ ಅವರ ಕೂದಲಿಗೆ ಕತ್ತರಿ ಬೀಳಲಿದೆಯಾ ಅನ್ನೋದು ಮುಂದಿನ ಸಂಚಿಕೆಗಳಲ್ಲಿ ಬಹಿರಂಗವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ