ಫೋಟೋ ವಿಚಾರಕ್ಕೆ ಪಬ್​ನಲ್ಲಿ `ಕಿರಿಕ್​’: ಬಿಯರ್​ ಬಾಟಲ್​ನಿಂದ ಬಿಗ್ ಬಾಸ್ ಸ್ಪರ್ಧಿ ಮೇಲೆ ಹಲ್ಲೆ

Kirik Keerthi: ಇದೇ ವೇಳೆ ಅಲ್ಲಿದ್ದ ಒಬ್ಬ ವ್ಯಕ್ತಿಯೊಬ್ಬ ಕಿರಿಕ್​ ಕೀರ್ತಿ ಅವರ ಫೋಟೋ ತೆಗೆದಿದ್ದಾರೆ. ನನ್ನ ಪರ್ಮಿಷನ್​ ಇಲ್ಲದೇ ಯಾಕೆ ಫೋಟೋ ತೆಗೆದುಕೊಂಡಿದ್ದೀರ ಎಂದು ಕಿರಿಕ್​ ಕೀರ್ತಿ ಕೇಳಿದ್ದಾರೆ. ಇದಾದ ಬಳಿಕ ಕೆಲ ಕಾಲ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇಷ್ಟಕ್ಕೆ ಕುಪಿತಗೊಂಡ ಆ ವ್ಯಕ್ತಿ ಅಲ್ಲೆ ಪಕ್ಕದಲ್ಲಿದ್ದ ಬಿಯರ್​  ಬಾಟಲ್​ ತೆಗೆದುಕೊಂಡು ಕಿರಿಕ್​ ಕೀರ್ತಿ ತಲೆಗೆ ಹೊಡೆದಿದ್ದಾನೆ

ಕಿರಿಕ್ ಕೀರ್ತಿ

ಕಿರಿಕ್ ಕೀರ್ತಿ

  • Share this:
ಬಿಗ್​ಬಾಸ್(Bigboss)​ ಸ್ಪರ್ಧಿ ಕಿರಿಕ್​ ಕೀರ್ತಿ(Kirik Keerthi) ಮೇಲೆ ಹಲ್ಲೆ ಮಾಡಲಾಗಿದೆ. ಅದು ತಡರಾತ್ರಿ ಪಬ್​ನಲ್ಲಿ ಪೋಟೋ(Photo) ವಿಚಾರಕ್ಕೆ ಕಿರಿಕ್​ ನಡೆದು, ಬಿಯರ್​ ಬಾಟಲ್(Beer Bottle)​ನಿಂದ ಕಿರಿಕ್​ ಕೀರ್ತಿ ಮೇಲೆ ಹಲ್ಲೆ ಮಾಡಲಾಗಿದೆ. ಕಿರಿಕ್​ ಕೀರ್ತಿ ಮೇಲೆ 2018ರಲ್ಲೂ ಹಲ್ಲೆ ಮಾಡಲಾಗಿತ್ತು. ಇದೀಗ ಸದಾಶಿವನಗರ ಪಬ್​ನಲ್ಲಿ ಪೋಟೋ ವಿಚಾರಕ್ಕೆ ಬಿಯರ್​ ಬಾಟೆಲ್​ನಿಂದ ಹಲ್ಲೆ ನಡೆಸಲಾಗಿದೆ. ಸ್ನೇಹಿತರು, ಕುಟುಂಬಸ್ಥರೊಂದಿಗೆ ಕಿರಿಕ್​ ಕೀರ್ತಿ ಸದಾಶಿವನಗರದ ಹ್ಯಾಮರ್ಡ್(Hammered)​ ಪಬ್​ಗೆ ಹೋಗಿದ್ದರು. ಇದೇ ವೇಳೆ ಅಲ್ಲಿ ಸಾಕಷ್ಟ ಜನ ಸೇರಿದ್ದರು.  ಇದೇ ವೇಳೆ ಅಲ್ಲಿದ್ದ ಒಬ್ಬ ವ್ಯಕ್ತಿಯೊಬ್ಬ ಕಿರಿಕ್​ ಕೀರ್ತಿ ಅವರ ಫೋಟೋ ತೆಗೆದಿದ್ದಾರೆ. ನನ್ನ ಪರ್ಮಿಷನ್(Permission)​ ಇಲ್ಲದೇ ಯಾಕೆ ಫೋಟೋ ತೆಗೆದುಕೊಂಡಿದ್ದೀರ ಎಂದು ಕಿರಿಕ್​ ಕೀರ್ತಿ ಕೇಳಿದ್ದಾರೆ. ಇದಾದ ಬಳಿಕ ಕೆಲ ಕಾಲ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇಬ್ಬರು ಒಬ್ಬೊರಿಗೊಬ್ಬರು ನಿಂದಿಸಿಕೊಂಡಿದ್ದಾರೆ. ಇಷ್ಟಕ್ಕೆ ಕುಪಿತಗೊಂಡ ಆ ವ್ಯಕ್ತಿ ಅಲ್ಲೆ ಪಕ್ಕದಲ್ಲಿದ್ದ ಬಿಯರ್​  ಬಾಟಲ್​ ತೆಗೆದುಕೊಂಡು ಕಿರಿಕ್​ ಕೀರ್ತಿ ತಲೆ(Head)ಗೆ ಹೊಡೆದಿದ್ದಾನೆ. ಇದರಿಂದ ಗಾಯಗೊಂಡ ಕಿರಿಕ್​ ಕೀರ್ತಿ ಅವರನ್ನು ಖಾಸಗಿ ಆಸ್ಪತ್ರೆ(Hospital)ಗೆ ದಾಖಲಿಸಲಾಗಿದೆ. ಈ ಬಗ್ಗೆ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಫೋಟೊ ವಿಚಾರಕ್ಕೆ ನಡೀತು ಮಾರಾಮಾರಿ!

ಕಿರಿಕ್​ ಕೀರ್ತಿ ಸದಾಶಿವನಗರ ಹ್ಯಾಮರ್ಡ್​ ಪಬ್​ಗೆ ತಡರಾತ್ರಿ ತೆರಳಿದ್ದಾರೆ. ಇದೇ ವೇಳೆ ಅಲ್ಲಿದ್ದ ವ್ಯಕ್ತಿಯೊಬ್ಬ ಮದ್ಯಪಾನ ಮಾಡುತ್ತಿದ್ದರಂತೆ. ಕಿರಿಕ್​ ಕೀರ್ತಿ ಅವರಿಗೆ ತಿಳಿಯದ ಹಾಗೇ ಅವರ ಫೋಟೋವನ್ನು ತಮ್ಮ ಮೊಬೈಲ್​ನಿಂದ ಸೆರೆ ಹಿಡಿದಿದ್ದಾನೆ. ಇದನ್ನು ಗಮನಿಸಿದ ಕಿರಿಕ್​ ಕೀರ್ತಿ ಯಾಕೆ ನನ್ನ ಪರ್ಮಿಷನ್​ ಇಲ್ಲದೇ ಫೋಟೋ ತೆಗಿತೀರಾ ಎಂದು ಕೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಆ ವ್ಯಕ್ತಿ ಏರುಧ್ವನಿಯಲ್ಲಿ ಮಾತನಾಡಿದ್ದಾನ. ನಿನಗೆ ನೀನು ದೊಡ್ಡ ಸೆಲೆಬ್ರಿಟಿ ಅಂತ ಕೊಬ್ಬು ಬಂದಿದ್ಯಾ ಎಂದು ಕೇಳಿದ್ದಾನೆ. ಈ ಮಾತನ್ನು ಕೇಳಿಸಿಕೊಂಡ ಕಿರಿಕ್​ ಕೀರ್ತಿ ಕೂಡ ಕೋಪದಿಂದ ನಿಂದಿಸಿದ್ದಾರೆ. ಇದೇ ವೇಳೆ ಅಪರಿಚಿತ ವ್ಯಕ್ತಿ ಪಕ್ಕದಲ್ಲೇ ಇದ್ದ ಬಿಯರ್​​ ಬಾಟಲ್​ನಿಂದ ಕಿರಿಕ್​ ಕೀರ್ತಿ ತಲೆಗೆ ಹೊಡೆದಿದ್ದಾನೆ.

ಇದನ್ನು ಓದಿ : ಹೀರೋ ಆಗೋಕೆ 20 ಕೋಟಿ ದುಡ್ಡು ಕೊಟ್ಟು ಬಂದಿದ್ರಾ ರಣ್ವೀರ್ ಸಿಂಗ್? ಗಂಭೀರ ಆರೋಪ

ಖಾಸಗಿ ಆಸ್ಪತ್ರೆಗೆ ಕಿರಿಕ್​ ಕೀರ್ತಿ ದಾಖಲು

ಗಲಾಟೆಯಾಗುತ್ತಿದ್ದಂತೆ ಅಲ್ಲಿದ್ದವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇತ್ತ ಹಲ್ಲೆ ನಡೆಸಿ ವ್ಯಕ್ತಿ ಪರಾರಿಯಾಗಿದ್ದಾನೆ. ಇನ್ನೂ ಹಲ್ಲೆಯಿಂದ ಗಾಯಗೊಂಡ ಕಿರಿಕ್​ ಕೀರ್ತಿ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಮುಂದುವರೆದಿದೆ ಎಂದು ಹೇಳಲಾಗುತ್ತಿದೆ.  ಪೊಲೀಸರು ಸ್ಥಳಕ್ಕೆ ಆಗಮಿಸಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಬಳಿಕ ಸದಾಶಿವನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೂ ಹಲ್ಲೆ ನಡೆಸಿದ ವ್ಯಕ್ತಿಗಾಗಿ ಹುಡುಕುತ್ತಿದ್ದಾರೆ. ಪಬ್​ನ ಸಿಸಿಟಿವಿ ಕೂಡ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನು ಓದಿ : ಇಂದಿನಿಂದ ರಾಜ್ಯಾದ್ಯಂತ `ಮದಗಜ‘ನ ಅಬ್ಬರ: 800 ಚಿತ್ರಮಂದಿರಗಳಲ್ಲಿ ಶ್ರೀ ಮುರುಳಿ ಸಿನಿಮಾ ರಿಲೀಸ್!

2018ರಲ್ಲೂ ಕಿರಿಕ್​ ಕೀರ್ತಿ ಮೇಲೆ ಹಲ್ಲೆ

ಬಿಗ್ ಬಾಸ್ ರನ್ನರ್ ಅಪ್ ಕಿರಿಕ್ ಕೀರ್ತಿ ಮೇಲೆ ಹಲ್ಲೆಯಾಗಿರುವುದು ಇದೆ ಮೊದಲಲ್ಲ. 2018 ಮಾರ್ಚ್​ 18ರ ರಾತ್ರಿ  10 ಗಂಟೆ ಸುಮಾರಿಗೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಕ್ಯಾಂಪಸ್ ಸಮೀಪ ಕಿರಿಕ್​ ಕೀರ್ತಿ ಮೇಲೆ ಹಲ್ಲೆಯಾಗಿತ್ತು. ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ  ಕೀರ್ತಿ, ಜ್ಞಾನಭಾರತಿ ಕ್ಯಾಂಪಸ್ ರಸ್ತೆಯಲ್ಲಿ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದ ಬೈಕ್ ಗೆ ತಮ್ಮ ಕಾರಿನ  ಹಾರನ್ ಹೊಡೆದಿದ್ದಾರೆ. ಈ ವೇಳೆ ಪಾನಮತ್ತರಾಗಿದ್ದ ಇಬ್ಬರು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾ ಕೀರ್ತಿ ಮತ್ತು ಅವರ ಗೆಳೆಯ ಮಂಜುನಾಥ್ ಎಂಬವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಸ್ಥಳದಲ್ಲಿ ನೆರೆದ ಸಾರ್ವಜನಿಕರು ಪಾನಮತ್ತರಾಗಿದ್ದ ಇಬ್ಬರು ಹಲ್ಲೆಕೋರರನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದರು.
Published by:Vasudeva M
First published: